Monday, January 20, 2014

Daily Crime Reports 18-01-2014

ದೈನಂದಿನ ಅಪರಾದ ವರದಿ.
ದಿನಾಂಕ 18.01.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
4
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
5
ವಂಚನೆ ಪ್ರಕರಣ         :
:
1
ಮನುಷ್ಯ ಕಾಣೆ ಪ್ರಕರಣ
:
2
ಇತರ ಪ್ರಕರಣ
:
3





























1.   ಮಂಗಳೂರು ಪೂರ್ವ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ಪಿರ್ಯಾದುದಾರರಾದ ಮೇಘಾರಾಣಿ ರವರು ಮುಂಡಾಲ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ದಿನಾಂಕ 17-01-2014 ರಂದು ಸಂಜೆ 6.15 ಗಂಟೆಗೆ ಪಿರ್ಯಾದುದಾರರು ಕೆಲಸ ಮುಗಿಸಿ ಮನೆಗೆ ಬರುವಾಗ ನೆರೆಮನೆಯ ಜುಲಿಯೆಟ್ ಎಂಬಾಕೆಯ ಮಗಳು ಪಿರ್ಯಾದುದಾರರ ತಾಯಿ ಮನೆಯ ಅಂಗಳದಲ್ಲಿ ನಿಂತಿರುವಾಗ ಅವಹೇಳನ ಮಾಡಿದ್ದು, ಅದಕ್ಕೆ ಪಿರ್ಯಾದಿಯ ತಾಯಿ ಸಿಟ್ಟುಗೊಂಡು ಬೈದಾಗ, ಜೂಲಿಯೆಟ್ ಎಂಬವಳು ಬಂದು ಪಿರ್ಯಾದಿ ತಾಯಿಗೆ ಪುನಃ ಅವಹೇಳನಕಾರಿ ಮಾತುಗಳನ್ನು ಆಡುತ್ತಿರುವಾಗ ಅಲ್ಲಗೆ ಹೋದ ಪಿರ್ಯಾದಿಗೆ ಜಾತಿ ನಿಂದನೆ ಮಾಡಿ ಅವಹೇಳನ ಮಾಡಿದನ್ನು  ವಿಚಾರಿಸಲು ಹೋದ ಪಿರ್ಯಾದಿಯನ್ನು ಕರೆತರಲು ಪಿರ್ಯಾದಿಯ  ತಾಯಿ ಬಂದಾಗ ಪಿರ್ಯಾದಿಯ ತಾಯಿಯ ಮೇಲೆ ಹಲ್ಲೆ ಮಾಡಿರುತ್ತಾರೆ.

2. ಕಾವೂರು ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ಫಿರ್ಯಾದಿದಾರರಾದ ಶ್ರೀ ಗಿರೀಶ್ ಸಾಲ್ಯಾನ್ ಎಂಬವರ ಭಾವ ಶೈಲೇಶ್ ಎಂಬವರು ದಿನಾಂಕ 16-01-2014 ರಂದು ಸಂಜೆ 07-45 ಗಂಟೆಗೆ ತನ್ನ ಮನೆಯಾದ ಕಾವೂರುಕಟ್ಟೆ ಎಂಬಲ್ಲಿಂದ ಹೊರಗೆ ಹೋಗಿ ಬರುತ್ತೇನೆಂದು ತನ್ನ ತಂದೆಯಲ್ಲಿ ಹೇಳಿ ಹೋದವರು ಈ ವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

3. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ದಿನಾಂಕ: 17.01.2014 ರಂದು ಪಿರ್ಯಾದುದಾರರಾದ ಕೆ. ಪ್ರಭಾಕರ ರವರು ತಮ್ಮ ಬಾಬ್ತು KA-19-EG-2657ನೇ ನಂಬ್ರದ ದ್ವಿಚಕ್ರ ವಾಹನವನ್ನು ಮಂಗಳೂರು ನಗರದ ಕೋಡಿಕಲ್ ಕಡೆಯಿಂದ ಉರ್ವಾ ಸ್ಟೋರ್ ಮುಖಾಂತರ ವಿ.ಟಿ ರಸ್ತೆಯಲ್ಲಿರುವ ತಮ್ಮ ಆಫೀಸ್ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸುಮಾರು 16:35 ಗಂಟೆ ಸಮಯಕ್ಕೆ ಚಿಲಿಂಬಿ ಶಾರದ ವಿದ್ಯಾ ನಿಕೇತನ ಬಳಿ ತಲುಪುತ್ತಿದ್ದಂತೆ ಪಿರ್ಯಾದುದಾರರ ಹಿಂದುಗಡೆಯಿಂದ ಅಂದರೆ ಉರ್ವಾ ಸ್ಟೋರ್ ಕಡೆಯಿಂದ ಚಿಲಿಂಬಿ ಕಡೆಗೆ KA-19-MD-6354ನೇ ನಂಬ್ರದ ಕಾರನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಒಮ್ಮೇಲೆ ಎಡ ರಸ್ತೆಗೆ ಚಲಾಯಿಸಿದ ಪರಿಣಾಮ ಪಿರ್ಯಾದುದಾರರು ಒಮ್ಮೇಲೆ ದ್ವಿಚಕ್ರ ವಾಹನಕ್ಕೆ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಅವರ ಎಡ ಬದಿಯ ಭುಜದ ಬಳಿ ಮೂಳೆ ಮುರಿತದ ಗಾಯ ಹಾಗೂ ಎಡಕಾಲಿನ ಮೊಣಗಂಟಿಗೆ ಗುದ್ದಿ ನಮೂನೆಯ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ನಗರದ ವಿಜಯ ಕ್ಲಿನಿಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದು.

4. ಮಂಗಳೂರು ಪೂರ್ವ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ದಿನಾಂಕ 17-01-2014 ರಂದು ಸಮಯ ಸುಮಾರು 18-30 ಗಂಟೆಗೆ ಫಿರ್ಯಾದಿದಾರರಾದ ಜೂಲಿಯಟ್ ಕಾರ್ಲ್ ರವರು ತನ್ನ ಮನೆಯಲ್ಲಿರುವ ಸಮಯ ನೆರೆಮನೆಯ ಪ್ರಮೀಳಾ ದೇವಿ, ಅವರ ಗಂಡ ದೇವದಾಸ ಮತ್ತು ಮೇಘರಾಣಿ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದುದಾರರ ಮನೆಯ ಒಳಗೆ ಪ್ರವೇಶಿಸಿ ಬಂದು ಮರದ ಸೊಂಟೆ ಮತ್ತು ಕೈಯಿಂದ ಫಿರ್ಯಾದುದಾರರ ಎದೆಗೆ, ಹೊಟ್ಟೆಗೆ ಮತ್ತು ತಲೆಗೆ ಹೊಡೆದಿರುವುದಲ್ಲದೇ ಜೀವ ಬೆದರಿಕೆಯನ್ನು ಹಾಕಿರುತ್ತಾರೆ. ಈ ಹಿಂದೆ ನಡೆದ ಜಗಳದ ಹಳೇ ದ್ವೇಷದಿಂದ ಈ ಹಲ್ಲೆ ನಡೆಸಿರುತ್ತಾರೆ.

5. ಮಂಗಳೂರು ಪೂರ್ವ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ದಿನಾಂಕ:18-01-2014 ರಂದು ಪಿರ್ಯಾದಿದಾರರಾದ ಶ್ರೀ ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶ್ರೀ ವೆಲೆಂಟೈನ್ ಡಿ'ಸೋಜಾ, ರವರಿಗೆ ಮಂಗಳೂರು ನಗರದ  ಬಲ್ಮಠ  ಬಳಿಯಿರುವ ಶಾಂತಿ ಚರ್ಚ್ ನ  ಹತ್ತಿರ ಇರುವ ರೋಯಲ್ ಅಸ್ಕೋಟ್ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಲ್ಲಿರುವ  ರೂಮ್ ನಂಬ್ರ 306 ರಲ್ಲಿ ಹಲವಾರು ಜನರು  ಅಂದರ ಬಾಹರ್ ಎಂಬ  ಜೂಜಾಟ ವನ್ನು ಆಡುತ್ತಿದ್ದಾರೆಂದು ಖಚಿತ  ವರ್ತಮಾನದ ಬಂದ ಮೇರೆಗೆ ಸಿ.ಸಿ.ಬಿ ಘಟಕದ ಪೊಲೀಸ್ ಉಪನಿರಿಕ್ಷಕರು ಶ್ಯಾಂ ಸುಂದರ್ ಹೆಚ್.ಎಂ,   ಸಿಬ್ಬಂದಿಗಳೊಂದಿಗೆ ರಾತ್ರಿ 8.00 ಗಂಟೆಗೆ ದಾಳಿ ನಡೆಸಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಅದೃಷ್ಟದ ಜುಗಾರಿ ಆಟದಲ್ಲಿ ನಿರತರಾದ 15  ಜನರು , ಅಮಾನತ್ತು ಪಡಿಸಿದ ನಗದು ಹಣ 14,390 ರೂಪಾಯಿ, ಅದೃಷ್ಟದ ಜುಗಾರಿ ಆಟಕ್ಕೆ ಸಂಬಂದಪಟ್ಟ ಸೊತ್ತುಗಳ ಮೇಲೆ ಕ್ರ. ಕೈಗೊಂಡಿದ್ದಾಗಿದೆ.


6. ಮಂಗಳೂರು ಸಂಚಾರ ಪೂರ್ವ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ದಿನಾಂಕ 17-01-2014ರಂದು ಸಮಯ ಸುಮಾರು 14.00ಗಂಟೆಗೆ ಪಿರ್ಯಾದುದಾರರಾದ ನಾಗಪ್ಪ ರವರು ಯು ಪಿ ಮಲ್ಯ ರಸ್ತೆಯನ್ನು ದಾಟಿ ನೆಹರು ಮೈದಾನದ ಕಡೆಗೆ ಹೋಗಲು ರಸ್ತೆ ದಾಟುತ್ತಿರುವಾಗ ಹಂಪನಕಟ್ಟೆ ಕಡೆಯಿಂದ ಕಾರು ನಂಬ್ರ KA 19-MF-1118ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಪಿರ್ಯಾದುದಾರರ ಬಾಯಿಗೆ ಮತ್ತು ಮುಖಕ್ಕೆ ರಕ್ತಗಾಯವಾಗಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.

7. ಮೂಡಬಿದ್ರೆ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ಪಿರ್ಯಾದಿದಾರರಾದ ಮನೋಜ್ ಕುಮಾರ್ ರವರ ತಮ್ಮ, 14 ವರ್ಷ ಪ್ರಾಯದ ಹರ್ಷ ಎಂಬವನು, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 8 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕೀರ್ತಿ ನಗರದ ಹಡುಗರ ಹಾಸ್ಟೆಲ್ ನಲ್ಲಿ ಉಳಕೊಂಡಿದ್ದವನು, ದಿನಾಂಕ 14.01.2014 ರಂದು ಸಂಜೆ ಸುಮಾರು 16:15 ಗಂಟೆಗೆ ಮೂಡಬಿದ್ರೆ ಸ್ವರಾಜ್ ಮೈದಾನಕ್ಕೆ ಕ್ರೀಡಾಭ್ಯಾಸ ನಿಮಿತ್ತ ಹೋದವನು, ಮರಳಿ ಹಾಸ್ಟೇಲ್ ಗೆ ಬರದೇ ಕಾಣೆಯಾಗಿದ್ದು, ಬೆಂಗಳೂರಿಗೆ ಬರಬಹುದೆಂದು ಪಿರ್ಯಾದಿದಾರರು ಬೆಂಗಳೂರಿನಲ್ಲಿ ಕಾದು ಬರದೇ ಕಾಣೆಯಾಗಿರುತ್ತಾನೆ. ಕಾಣೆಯಾದ ಹುಡುಗನ  ಹರ್ಷ ಎಂಬವನ ಚಹರೆ : ಹೆಸರು: ಹರ್ಷ, ಪ್ರಾಯ: 14 ವರ್ಷಕೋಲು ಮುಖ, ಗೋಧಿ ಮೈಬಣ್ಣ, ಗಿಡ್ಡ ತಲೆ ಕೂದಲು, ಕೆಂಪು ಟಿ ಶರ್ಟ್ಕಪ್ಪು  ಸ್ಪೋರ್ಟ್ಸ್ ಪ್ಯಾಂಟ್ ಧರಿಸಿದ್ದು, ಕಪ್ಪು ಶೂಗಳನ್ನು ಧರಿಸಿರುತ್ತಾನೆಕನ್ನಡ, ತೆಲುಗು, ಇಂಗ್ಲೀಷ್ ಭಾಷೆಗಳನ್ನು ಮಾತಾಡುತ್ತಾನೆ.

8. ಪಣಂಬೂರು ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ಪಿರ್ಯಾದಿದಾರರಾದ ಮಹಮ್ಮದ್ ಆಸೀಫ್  ಹಾಗೂ ಅವರ ಗೆಳೆಯ ಇಕ್ಬಾಲ್ @ ಇಕ್ಕೂ ರವರು ತಾರೀಖು 16-01-2014 ರಂದು ಸಂಜೆ 5-00 ಗಂಟೆಗೆ ಕಾಪುವಿಗೆ ಹೋಗಿ ನಂತರ ವಾಪಾಸು ಬೈಕಂಪಾಡಿಗೆ ಬಂದು ರಾತ್ರಿಯಾದ ಕಾರಣ ನಡೆದುಕೊಂಡು ಕಸಬಾ ಬೆಂಗ್ರೆಗೆ ಹೋಗುತ್ತಿದ್ದು ಆಯಾಸ ಆದ ಕಾರಣ ಅವರಿಬ್ಬರು ಪಣಂಬೂರು ವಿಷ್ಣು ಪೆಟ್ರೋಲ್ ಬಂಕಿನ ಬಳಿ ಸರ್ವೀಸ್ ರಸ್ತೆಯಲ್ಲಿ ಮುಂಜಾನೆ ಸಮಯ 04-30 ರ ವೇಳೆಗೆ ಬಂದು ನಿಂತಿದ್ದಾಗ ಅವರಿದ್ದಲ್ಲಿಗೆ 4-5 ಜನರು ಬಂದು ವಿಷ್ಣು ಪೆಟ್ರೋಲ್ ಬಂಕಿನ ಎಡ ಬದಿ ಇರುವ ಟ್ರಾನ್ಸ್ ಪೋರ್ಟ್ ಯಾರ್ಡಿಗೆ ಎಳೆದುಕೊಂಡು ಹೋಗಿ ಒಬ್ಬನು ಕಬ್ಬಿಣ ರಾಡಿನಿಂದ ಮತ್ತು ಇತರರು ಕೈಯಿಂದ ಪಿರ್ಯಾದಿದಾರರ ಎದೆಗೆ ಕೆನ್ನೆಗೆ ಹೊಡೆದು ಹಲ್ಲೆಗೊಳಿಸಿ ನೆಲಕ್ಕೆ ದೂಡಿಹಾಕಿ ಕಾಲಿನಿಂದ ಎದೆಗೆ ತುಳಿದಿದ್ದು ಮಾತ್ರ ವಲ್ಲದೆ ಅವರ ಜೊತೆ ಇದ್ದ ಇಕ್ಬಾಲ್ ರವರಿಗೆ ಅದೇ ಕಬ್ಬಿಣದ ರಾಡಿನಿಂದ ಬಲ ಕಾಲಿನ ಮೊಣ ಗಂಟಿಗೆ, ಎಡ ಕಾಲಿನ ಮೊಣ ಗಂಟಿಗೆ ಎರಡು ಕಾಲಿನ ಅಡಿ ಭಾಗಕ್ಕೆ ಬುಜಕ್ಕೆ ಹಾಗೂ ಬಲ ಕಣ್ಣಿನ ಬಳಿ ಹಣೆಗೆ ಹುಬ್ಬಿನ ಬಳಿ ಕೂಡಾ ಹೊಡೆದು ರಕ್ತ ಗಾಯಗೊಳಿಸಿರುವುದು ಮಾತ್ರ ವಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆ.

9. ಮಂಗಳೂರು ಸಂಚಾರ ಪೂರ್ವ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ದಿನಾಂಕ 17-01-2014 ರಂದು ಸಮಯ ಸುಮಾರು 6.30ಗಂಟೆಗೆ ಪಿರ್ಯಾದುದಾರರಾದ ಚಂದ್ರಹಾಸ ರವರು ಮಂಗಳಾದೇವಿ ಕಡೆಯಿಂದ ರೈಲ್ವೆ ಬ್ರಿಡ್ಜ್ ಕಡೆಗೆ ನಡೆದುಕೊಂಡು ಬರುತಿರುವಾಗ ಪಾಂಡೇಶ್ವರದ ಶ್ರೀನಿವಾಸ ಕಾಲೇಜು ತಲುಪುವಾಗ ಪಾಂಡೇಶ್ವರ ಕಡೆಯಿಂದ ಸ್ಯಾಂಟ್ರೊ ಕಾರು ನಂಬ್ರ KA 19 Z-8180ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಕಾಂಕ್ರಿಟ್ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದುದಾರ ಸೊಂಟಕ್ಕೆ ತೀವ್ರ ಸ್ವರೂಪದ ಗಾಯವುಂಟಾಗಿ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.

10. ಉಳ್ಳಾಲ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ದಿನಾಂಕ 18-01-2014 ರಂದು ಪಿರ್ಯಾದಿದಾರರಾದ ಶ್ರೀ. ಪವನ್ ನಜ್ಜೂರು, ಸಹಾಯಕ ಪೊಲೀಸ್ ಆಯುಕ್ತರು, ದಕ್ಷಿಣ ಉಪ ವಿಭಾಗ, ಮಂಗಳೂರು ನಗರ ರವರು ಕಛೇರಿಯಲ್ಲಿರುವ ಸಮಯ ಸುಮಾರು 16:00 ಗಂಟೆಗೆ ಮಂಗಳೂರು ತಾಲೂಕು ಉಳ್ಳಾಲ ಠಾಣಾ ವ್ಯಾಪ್ತಿಯ ಯೇನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಬಳಿಯಲ್ಲಿರುವ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಓರ್ವ ವ್ಯಕ್ತಿಯು ನಿಷೇಧಿತ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾನೆ ಎಂಬುದಾಗಿ ದೊರೆತ ಖಚಿತ ಮಾಹಿತಿಯಂತೆ ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಉಪನಿರೀಕ್ಷಕರ ತಂಡವನ್ನು ಪಂಚಾಯತುದಾರರ ಜೊತೆಯಲ್ಲಿ ಕರೆದುಕೊಂಡು ಸ್ಥಳಕ್ಕೆ ತಲುಪಿ ಗಾಂಜಾ ಮಾರಾಟ ಮಾಡುತ್ತಿದ್ದ ಹಫೀಜ್ (28) ತಂದೆ: ದಿ|| ಇಸ್ಮಾಯಿಲ್ ವಾಸ: ತೌಡುಗೋಳಿ ಕ್ರಾಸ್, ನರಿಂಗಾನ ಪಂಚಾಯತು ಹಿಂದುಗಡೆ, ನರಿಂಗಾನ ಗ್ರಾಮ ಮತ್ತು ಪೋಸ್ಟ್‌, ಮಂಗಳೂರು ತಾಲೂಕು ಎಂಬವರನ್ನು ದಸ್ತಗಿರಿ ಮಾಡಿ ರೂ. 2,500/- ಮೌಲ್ಯದ 200 ಗ್ರಾಂ ಗಾಂಜಾ, 2 ಮೊಬೈಲ್ ಹಾಗೂ ನಗದು ಹಣ ರೂ. 1510/- ಸ್ವಾಧೀನಪಡಿಸಿಕೊಂಡಿದ್ದಾಗಿದೆ.

11. ಮಂಗಳೂರು ದಕ್ಷಿಣ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ಪಿರ್ಯಾದಿದಾರರಾದ ಶ್ರೀ ವರುಣ ಕುಮಾರ್  ರೈ ಎಂಬವರು ಅಭಿಷ್ ಪರ್ಲ್ ಎಂಬ ಬಿಲ್ಡಿಂಗ್ ಕಂಪೆನಿಯಲ್ಲಿ ಪ್ರೊಜೆಕ್ಟ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದುದಿನಾಂಕ 18-01-2014 ರಂದು ಬೆಳಿಗ್ಗೆ 8-30 ಗಂಟೆಗೆ ಮಂಗಳೂರು ಅತ್ತಾವರದ ಅಭಿಷ್ ಬಿಲ್ಡಿಂಗ್ ಕಂಪೆನಿಯಲ್ಲಿ ಕೆಲಸದಲ್ಲಿರುವ ಸಮಯ, ಪಿರ್ಯಾದಿದಾರರ ಪರಿಚಯದ ಒಲ್ವರ್ ಬಿಲ್ಡಿಂಗ್ ನಲ್ಲಿ  ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಮಹಮ್ಮದ್ ಎಂಬವರು ತನ್ನ ಜೊತೆ ಇತರ 4 ಮಂದಿಯನ್ನು ಕರೆದುಕೊಂಡು ಬಂದು, ಪಿರ್ಯಾದಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದುಜೊತೆಯಲ್ಲಿದ್ದ ಇತರ 4 ಮಂದಿಯೊಂದಿಗೆ ಕೈಯಿಂದ ಹೊಡೆದು ತರಚಿದ ರಕ್ತಗಾಯಗೊಳಿಸಿದ್ದಲ್ಲದೇಮಹಮ್ಮದ್ ರವರು ಅಲ್ಲೇ ಇದ್ದ  ಒಂದು ಕಬ್ಬಿಣದ ಸರಳಿನಿಂದ ಪಿರ್ಯಾದಿದಾರರ ಬಲ ಕಾಲಿಗೆ ಬಲವಾಗಿ ಹೊಡೆದು ರಕ್ತಗಾಯಗೊಳಿಸಿ, ಜೀವ ಬೆದರಿಕೆ ನೀಡಿರುವುದಾಗಿದೆ.

12. ಪಣಂಬೂರು ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ಪಿರ್ಯಾದಿದಾರರಾದ ಪ್ರಭಾಕರ ಡಿ. ಕಾಮತ್ ರವರ ಪ್ರೈಮಸಿ ಇಂಡಸ್ಟ್ರೀ ಸ್ ಲಿ.ಗೆ ಆರೋಪಿತರ ಕಂಪೆನಿಯಂದ ರಿಪೈನ್ಡ್ ಪೆರಾಪಿನ್ ವ್ಯಾಕ್ಸ್ 125 ಮೆಟ್ರಿಕ್ ಟನ್ ಶಿಪ್ ಕ್ಯಾರಿಯರ್ ಮೂಲಕ ಸರಬರಾಜು ಮಾಡಲು ಇಂಪ್ಲೈಡ್  ಒಪ್ಪಂದ ಮಾಡಿಕೊಂಡಿದ್ದು ಅದರಂತೆ ಆರೋಪಿತರುಗಳು ಪಿರ್ಯಾದಿದಾರರ ಬೇಡಿಕೆಯಂತೆ ದಿನಾಂಕ 10-8-2013 ರಂದು 5 ಕಂಟೈನರ್ ಗಳಲ್ಲಿ ಪ್ರೊಡಕ್ಟ್ ಗಳನ್ನು ಆರೋಪಿತರ ಕಂಪೆನಿಯಂದ ಶಿಪ್ ಮೂಲಕ ಕಳುಹಿಸಿಕೊಟ್ಟಿದ್ದು ಅದನ್ನು ದಿನಾಂಕ 13-01-2014 ರಂದು ಮಂಗಳೂರು ನವಮಂಗಳೂರು ಬಂದರು ಪೋರ್ಟ್ ಗೆ ಶಿಪ್ ತಲುಪಿಸಿದ್ದು, ಪಿರ್ಯಾದಿದಾರರು ಈ ಕಂಟೈನರ್ ಗಳ ಪೈಕಿ 2 ನ್ನು ಪೋರ್ಟ್ ನಿಂದ ಸ್ವೀಕರಿಸಿಕೊಂಡು ಪಿರ್ಯಾದಿದಾರರ ಕಂಪೆನಿಯ ಬೈಕಂಪಾಡಿ ಯಾರ್ಡ್ ಗೆ ಸಾಗಿಸಿ ಅಲ್ಲಿ ತೆರೆದು ನೋಡಿದಾಗ ಪಿರ್ಯಾದಿದಾರರ ಕಂಪೆನಿಗೆ ಬರಬೇಕಾದ ವ್ಯಾಕ್ಸ್ ಪ್ರೋಡಕ್ಟ್ ಕಂಟೈನರ್ ನಲ್ಲಿ ಇಲ್ಲದೇ ಇದ್ದು ಅದರಲ್ಲಿ ಬೇರೆ ಪೌಡರ್ ರೀತಿಯ ಪ್ರೊಡಕ್ಟ್ ತುಂಬಿದ್ದುದು ಪತ್ತೆಯಾಗಿರುತ್ತದೆ. ಪಿರ್ಯಾದಿದಾರರು ಆರೋಪಿತರ ಕಂಪೆನಿಗೆ ಆರ್ಡರ್ ಮಾಡಿದ 125  ಮೆಟ್ರಿಕ್ ಟನ್ ವ್ಯಾಕ್ಸ್ ನ ಮೊತ್ತ 1 ಕೋಟಿ 8 ಲಕ್ಷದ 28 ಸಾವಿರದ 687 ರೂ 60 ಪೈಸೆ ಹಣವನ್ನು ಆರೋಪಿತರ ಕಂಪೆನಿಯವರು ಪಡೆದುಕೊಂಡು ಪಿರ್ಯಾದಿದಾರರಿಗೆ ನಂಬಿಕೆದ್ರೋಹ ವೆಸಗಿ ಮೋಸ ಮಾಡಿರುವುದಾಗಿದೆ.

13. ಮಂಗಳೂರು ದಕ್ಷಿಣ ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ಪಿರ್ಯಾದಿದಾರರಾದ ಶ್ರೀ ಹೆಚ್.ಮಹಮ್ಮದ್ ಸಾಹೇಬ್ ಎಂಬವರು ಮಂಗಳೂರು ನಗರದ  ಅಭಿಷ್ ಬಿಲ್ಡರ್ಸ್ ಕಂಪೆನಿಯಲ್ಲಿ ಪ್ರಾಜೆಕ್ಟ್ ಮೆನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 18-01-2014 ರಂದು ಬೆಳಿಗ್ಗೆ ಸುಮಾರು 08-45 ಗಂಟೆಯ ಸಮಯಕ್ಕೆ  ಮಂಗಳೂರಿನ ಅತ್ತಾವರದ ಅಭಿಷ್ ಪರ್ಲ್ ಅಪಾರ್ಟ್ ಮೆಂಟ್ ಸೈಟ್ ನಲ್ಲಿ ಕೆಲಸಗಾರರಿಗೆ ಕೆಲಸವನ್ನು ಗೊತ್ತು ಮಾಡಿ ಸ್ಟೋರ್ ನ ಹತ್ತಿರ ಹೋಗಿದ್ದ ಸಮಯ, ಎಂಪಾರ್ ಕನ್ಸ್ ಸ್ಟ್ರಕ್ಷನ್ ನ ಪ್ರೊಜೆಕ್ಟ್ ಲೀಡರ್ ವರುಣ್  ಎಂಬವರು ಪಿರ್ಯಾದಿದಾರರ ಕೆಲಸಗಾರರು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು ಕೆಲಸ ಮಾಡದಂತೆ ಅಡ್ಡಿ ಪಡಿಸುತ್ತಿರುವುದಾಗಿ , ಕೆಲಸಗಾರರು ಪಿರ್ಯಾದಿದಾರರಿಗೆ  ಪೋನ್ ಕರೆ ಮಾಡಿ ತಿಳಿಸಿದ ಮೇರೆಗೆ, ಪಿರ್ಯಾದಿದಾರರು ಸದ್ರಿ ಸ್ಥಳಕ್ಕೆ ಹೋಗಿ ವಿಚಾರಿಸಿದಾಗ, ವರುಣ್  ಮತ್ತು ಪಿರ್ಯಾದಿದಾರರ  ನಡುವೆ ವಾಗ್ವಾದವಾಗಿ, ವರುಣ್  ರವರು "ನೀವು ಇಲ್ಲಿಂದ ಹೋಗಿ ನನಗೆ ಕೆಲಸ ಮಾಡಿಸಲು ಗೊತ್ತು" ಎಂದು ಹೇಳಿ ಪಿರ್ಯಾದಿದಾರರನ್ನು ದೂಡಿದ್ದಲ್ಲದೇ, ಅವಾಚ್ಯ ಶಬ್ದದಿಂದ ಬೈದು ನಿಂದಿಸಿರುತ್ತಾರೆ. ಪಿರ್ಯಾದಿದಾರರು ಕೆಲಸಗಾರರಿಗೆ ಕೆಲಸ ಮಾಡಲು ಅವಕಾಶ ಕೊಡಿ , ನೀವು ಯಾಕೆ ಹೀಗೆ ಮಾಡುತ್ತೀರಿ ಎಂದು ವಿನಂತಿಸಿಕೊಂಡು, ಕೆಲಸ ಮಾಡಲು  ಒಳಗಡೆ ಹೋದಾಗ, ವರುಣ್ ಹಾಗೂ ಉತ್ತಮ್ ಎಂಬ ಸಬ್ ಕಂಟ್ರಾಕ್ಟರ್ ಹಾಗೂ ಇತರ ಕೆಲಸಗಾರರು  ಸೇರಿ ಪಿರ್ಯಾದಿದಾರರ ಮೇಲೆ ಹಲ್ಲೆ ನಡೆಸಿ, ಇವರುಗಳಲ್ಲಿ ಒಬ್ಬಾತ ಕಬ್ಬಿಣದ ಚವಲ್ ನಿಂದ ಪಿರ್ಯಾದಿದಾರರ ತಲೆಯ ಎಡ ಭಾಗಕ್ಕೆ ಹೊಡೆದನು. ಪಿರ್ಯಾದಿದಾರರು ಕೆಳಗಡೆ ಬಿದ್ದಾಗ, ಆರೋಪಿ ವರುಣ್ ಎಂಬಾತನು ಬೂಟು ಕಾಲಿನಿಂದ ಪಿರ್ಯಾದಿದಾರರ ಎದೆಗೆ, ಮುಖಕ್ಕೆ ತುಳಿದುದ್ದಲ್ಲದೇ, ಇತರರೊಂದಿಗೆ ಸೇರಿಕೊಂಡು ಪಿರ್ಯಾದಿದಾರರಿಗೆ ಹೊಡೆದು ಜೀವ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರು ಜ್ಞಾನತಪ್ಪಿ ಬಿದ್ದವರನ್ನು ಸುಪರ್ ವೈಸರ್ ಗಳಾದ ತನ್ವೀರ್ ಮತ್ತು ಸಬ್ ಕಂಟ್ರಾಕ್ಟರ್ ಅನ್ಸಾರಿ ರಾಜರವರು ಚಿಕಿತ್ಸೆಯ ಬಗ್ಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.


14. ಪಣಂಬೂರು ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಪ್ರಕರಣ  : ದಿನಾಂಕ 18-01-2014 ರಂದು ಬೆಳಿಗ್ಗೆ ಸಮಯ ಸುಮಾರು 05-00 ಗಂಟೆಗೆ ಎನ್ ಎಮ್ ಪಿ ಟಿ ಯಾರ್ಡಿನ ಒಳಗೆ ಕೆಎ 43- ಬಿ-3606 ನಂಬ್ರದ ಟಿಂಬರ್ ಲಾರಿಯಲ್ಲಿ ಕಲ್ಲಿದ್ದಲನ್ನು ಡೆಲ್ಟಾ ಕಂಪೆನಿಗೆ ತಲುಪಿಸಲು ಹೋಗುವ ಸಂದರ್ಭದಲ್ಲಿ ಕೆ ಕೆ ಗೇಟ್ ಬಳಿಗೆ ಹೊಗುವಾಗ ಕೆ ಎ -19 ಎಎ 2415 ನೆ ಟಿಪ್ಪರನ್ನು ಅದರ ಚಾಲಕನು ಎನ್ ಎಮ್ ಪಿ ಟಿ ಯಾರ್ಡಿನ ಕೂಡು ರಸ್ತೆ ಬಳಿ ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಕೆಎಲ್ -43 ಬಿ 3606 ನೇ  ನಂಬ್ರದ ಟಿಪ್ಪರ್ ನ ಮುಂಭಾಗಕ್ಕೆ  ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಕೆಎಲ್ -43 ಬಿ -3606 ನಂಬ್ರದ ಟಿಪ್ಪರ್ ಲಾರಿಯ ಮುಂಭಾಗ ಮತ್ತು ತಾನೂ ಚಲಾಯಿಸಿಕೊಂಡು ಬಂದಿದ್ದ  ಕೆಎ-19 ಎಎ-2415 ನೆ  ಟಿಪ್ಪರಿನ ಡಿಸೇಲ್ ಟ್ಯಾಂಕ್ ಸ್ಪೋಟಗೊಂಡು ಸದ್ರಿ ಟಿಪ್ಪರ್ ಗೆ ಬೆಂಕಿ ಹತ್ತಿಕೊಂಡು ಸಂಪೂರ್ಣ ಜಖಂಗೊಂಡಿದ್ದು ಈ ಅಪಘಾತದಿಂದ ಯಾರಿಗೂ ಯಾವುದೇ ರೀತಿಯ ಗಾಯವಾಗಿರುವುದಿಲ್ಲ.

No comments:

Post a Comment