Thursday, July 31, 2014

Daily Crime Reports 31-07-2014

ದೈನಂದಿನ ಅಪರಾದ ವರದಿ.

ದಿನಾಂಕ 31.07.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30/7/2014 ರಂದು ಸಂಜೆ 16.00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ದೇವಿಪ್ರಸಾದ್ ರವರು ಮಂಗಳೂರು ನಗರದ ಉರ್ವಾಸ್ಟೋರ್ ಬಳಿಯ  "ವಿಶನ್ ವರ್ಲ್ಡ್"  ಶಾಪ್ ಎದುರುಗಡೆ ನಿಂತಿರುವ ಸಮಯ ಲೇಡಿಹಿಲ್ ಕಡೆಯಿಂದ ಕೊಟ್ಟಾರ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA 19 EB 7138 ನೇ ಮೋಟಾರ್ ಸೈಕಲಿಗೆ ಅದರ ಹಿಂಬದಿಯಿಂದ ಅಂದರೆ ಲೇಡಿಹಿಲ್ ಕಡೆಯಿಂದ ಕಾಂಕ್ರೀಟು ಮಿಕ್ಷರ್ ವಾಹನ ನಂ: KA 19 AA 342 ನೇದರ ಚಾಲಕನು ಅತೀ ವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲಿನ ಹಿಂದುಗಡೆ ಕುಳಿತ್ತಿದ್ದ ಸಹಸವಾರಳು ಕಾಂಕ್ರೀಟು ರಸ್ತೆಗೆ ಬಿದ್ದು ಅವರ ಹೊಟ್ಟೆಯ ಕೆಳಭಾಗದ ಮೇಲೆ ಮಿಕ್ಷರ್ ವಾಹನದ ಹಿಂಬಾಗದ ಎಡಗಡೆಯ ಚಕ್ರವು ಹಾದು ಹೋಗಿ ಗಂಭೀರ ಗಾಯಗೊಂಡವರನ್ನು ಅದೇ ಮೋಟಾರು ಸೈಕಲ್ ಸವಾರ ಆಟೋ ರಿಕ್ಷಾ ಒಂದರಲ್ಲಿ .ಜೆ ಆಸ್ಪತ್ರಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋದಲ್ಲಿ ಗಾಯಾಳು ಆಸ್ಪತ್ರೆಗೆ ತಲುಪುವಾಗ ಮರಣ ಹೊಂದಿರುವುದಾಗಿದೆ.

 

2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30.07.2014 ರಂದು ಫಿರ್ಯಾದಿದಾರರಾದ ಶ್ರೀ ಅಶ್ರಫ್ ರವರು ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ಮಂಜನಾಡಿ ಜಂಕ್ಷನ್ನಿಂದ ಆಟೋ ರಿಕ್ಷಾ ನಂಬ್ರ ಕೆಎ-19ಎಎ-4752 ನೇಯದರಲ್ಲಿ ಪ್ರಯಾಣಿಕನಾಗಿ ತನ್ನ ಮನೆಗೆ ಹೋಗುತ್ತಿರುವಾಗ ಮದ್ಯಾಹ್ನ 12:30 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ, ಕಲ್ಲರಕೋಡಿ ಶಾಲೆಯ ಬಳಿ ತಲುಪುತ್ತಿದ್ದಂತೆಯೇ ಆಟೋರಿಕ್ಷಾವನ್ನು ಅದರ ಚಾಲಕ ಮುನೀರ್ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ ಬ್ರೆಕ್ಹಾಕಿದ ಪರಿಣಾಮ ಆಟೋರಿಕ್ಷಾವು ಎಡ ಮಗುಲಾಗಿ ಮಗುಚಿ ಬಿದ್ದು, ಫಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಫಿರ್ಯಾದಿದಾರರ ಎಡಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಫಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

 

3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀಮತಿ ನೀಲಮ್ಮರವರು ದಿನಾಂಕ 30-07-2014 ರಂದು ಬೆಳಿಗ್ಗೆ ತನ್ನ ಮನೆಯ ಪಕ್ಕದಲ್ಲಿರುವ ತನ್ನ ಅಣ್ಣನ ಮಗಳು ಅನ್ನಪೂರ್ಣ@ ಮಂಜುಳ ಮನೆಯ ಕಡೆ ಗಮನ ಹರಿಸಿದಾ ಅನ್ನಪೋರ್ಣ@ ಮಂಜುಳಾ ಮನೆಯ ಬಾಗಿಲು ಹಾಕಿರುವುದನ್ನು ಕಂಡು ಮನೆಗೆ ಬಂದು ಬಾಗಿಲನ್ನು ಬಡಿದಾಗ ಯಾರೂ ಬಾಗಿಲನ್ನು ತೆರಯದೇ ಇದ್ದು ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿರುವುದು ಕಂಡು ಬಂದಿದ್ದು, ಪಿರ್ಯಾದುದಾರರು ಬಾಗಿಲು ಚಿಲಕ ತೆಗೆದು ಮನೆಯೊಳಗೆ ಹೋಗಿ ನೋಡಿದಾಗ ಮನೆಯ ಒಳಗೆ ಅನ್ನಪೂರ್ಣ @ ಮಂಜುಳಾಳು ಮಲಗಿದ್ದ ಸ್ಥಿತಿಯಲ್ಲಿದ್ದು ಅವಳ ಮೂಗಿನಿಂದ ರಕ್ತ ಮತ್ತು ಬಿಳಿಯ ನೊರೆ ಬರುತ್ತಿದ್ದು ಅವಳು ಮೃತಪಟ್ಟಿದ್ದಳು, ಅನ್ನಪೂರ್ಣ@ ಮಂಜುಳಾಳನ್ನು ಅವಳ ಶೀಲದ ಬಗ್ಗೆ ಶಂಕೆಯಿಂದ ಅವಳ ಗಂಡ ಫಕೀರಯ್ಯ ದಿನಾಂಕ 29-07-2014 ರಂದು ರಾತ್ರಿ 9-30 ಗಂಟೆಯಿಂದ ದಿನಾಂಕ 30-07-2014 ರಂದು ಬೆಳಿಗ್ಗೆ 07-45 ಗಂಟೆ ಮದ್ಯೆ ಕುತ್ತಿಗೆ ಹಿಸುಕಿ ಅಥವಾ ತಲೆ ದಿಂಬಿನಿಂದ ಒತ್ತಿ ಕೊಲೆ ಮಾಡಿರುವುದಾಗಿದೆ.

 

4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-07-2014 ರಂದು ಇಸ್ಪಿಟ್ ಜುಗಾರಿ ಆಟದ ಬಗ್ಗೆ ಮುಲ್ಕಿ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ರವರಿಗೆ ದೊರೆತ ಖಚಿತ ಮಾಹಿತಿಯಂತೆ ಠಾಣಾ ಪಿ.ಎಸ್. ಮತ್ತು ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಆಂಜನೇಯ ಗುಡಿಯ ಬಳಿ ಶ್ರೀ ಮಣಿಕಂಠ ಮತ್ತು ಶ್ರೀ ಭಾಗ್ಯವಂತಿ ಹೋಟೆಲ್ಕಟ್ಟಡದ ಮುಂಭಾಗದಲ್ಲಿ ಹೊರಗಡೆ ಇರುವ ತೆರೆದ ಸ್ಥಳಕ್ಕೆ 16-00 ಗಂಟೆಗೆ ಧಾಳಿ ಮಾಡಿ ಹಣವನ್ನು ಪಣವಾಗಿಟ್ಟು ಇಸ್ಪಿಟು ಎಲೆಗಳಿಂದ "ಅಂದರ್ ಬಾಹರ್" ಎಂಬ ಜುಗಾರಿ ಆಟವಾಡುತ್ತಿದ್ದ ಸಿದ್ದರಾಮ, ಸಂಗಪ್ಪ, ರಾಜಕುಮಾರ, ಲವಕುಮಾರ್, ಪರಶುರಾಮ ಎಂಬ ಆರೋಪಿಗಳನ್ನು ದಸ್ತಗಿರಿ ಮಾಡಿ, ಆಟಕ್ಕೆ ಉಪಯೋಗಿಸಿದ ನಗದು ಹಣ ರೂ 5,490/-, 52 ಇಸ್ಪಿಟ್ ಎಲೆಗಳು, ಮತ್ತು ನೆಲಕ್ಕೆ ಹಾಸಿದ 2 ಹಳೇಯ ಪೇಪರ್ ಗಳನ್ನು ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

 

5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಿನ್ಸೆಂಟ್ ಡಿ'ಮೆಲ್ಲೋ ರವರು ತನ್ನ  ತಮ್ಮನ ಮನೆಯಲ್ಲಿ  ಒಣಗಿಸಿ ಅದರ ಸಿಪ್ಪೆಯನ್ನು ಸುಳಿದು ತಲಾ 60 ಕೆಜಿ ಯಂತೆ ಒಂದೊಂದು ಗೋಣೆಯಲ್ಲಿ ತುಂಬಿಸಿ ಒಟ್ಟು 14 ಗೋಣಿ ಅಡಿಕೆಯನ್ನು ನನ್ನ ಮೆನೆಯ ಸಮೀಪ ಇರುವ  ನನ್ನ ತಮ್ಮ ಮೈಕಲ್ ಡಿಮೆಲ್ಲೋ ಎಂಬವನ ಟ್ಯಾರೀಸ್ ಮನೆಯ ಕೋಣೆಯಲ್ಲಿ ಭಧ್ರಪಡಿಸಿ ಇಟ್ಟಿದ್ದು, ದಿನಾಂಕ 29.07.2014  ರಾತ್ರಿ  ಸಮಯ  ಯಾರೋ  ಕಳ್ಳರು  ಮನೆಯ  ಎದುರಿನ ಬೀಗವನ್ನು  ಮುರಿದು  ಒಳ ಪ್ರವೇಶಿಸಿ  ಕೋಣೆಯಲ್ಲಿಟ್ಟಿದ್ದ 14 ಅಡಿಕೆ ಚೀಲಗಳ ಪೈಕಿ 8 ಅಡಿಕೆ ಚೀಲಗಳನ್ನು  ಹಾಗೂ  ಮನೆಯ  ಹಾಲ್ ಶೊಕೇಶ್  ನಲ್ಲಿ  ಇಟ್ಟಿದ್ದ .ಎಲ್. ಜಿ ಕಂಪನಿಯ ಡಿವಿಡಿ ಟಿ.ವಿ., ಅದರ ಪಕ್ಕದಲ್ಲಿದ್ದ ಸ್ಯಾನೀಯೋ ಕಂಪನಿಯ ಡಕ್ ಹಾಗೂ ಎರಡು ಸ್ಪೀಕರ್‌‌ರ್ಗಳನ್ನು  ಕಳವು  ಮಾಡಿಕೊಂಡಿ ಹೋಗಿದ್ದು  ಕಳವು  ಮಾಡಿದ ಸೊತ್ತಿನ  ಒಟ್ಟು  ಮೌಲ್ಯ  157000/-  ಆಗಬಹುದು.

 

6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28.07.2014 ರಂದು 18.15 ಗಂಟೆ ಸಮಯಕ್ಕೆ ಆರೋಪಿ ಸುಧಾಕರ ತನ್ನ ರಿಕ್ಷಾ KA.20. A.6461 ನ್ನು ಮೂಡಬಿದ್ರೆ ಪೇಟೆಯಿಂದ ಮಹಾವೀರ ಕಾಲೇಜು ಕಡೆಗೆ ಚಾಲಾಯಿಸುತ್ತಾ ಮಂಗಳೂರು ತಾಲೂಕು ಪ್ರಾಂತ್ಯ ಗ್ರಾಮದ ಮಹಾವೀರ ಕಾಲೇಜ್ ಬಳಿ ರಿಕ್ಷಾವನ್ನು ಅತೀವೇಗ, ನಿರ್ಲಕ್ಷತನದಿಂದ ಯಾವುದೇ ಸೂಚನೆ ನೀಡದೆ ಒಮ್ಮೆಲೇ ರಸ್ತೆಯ ಬಲಕ್ಕೆ ಅಂದರೆ ಮಹಾವೀರ ಕಾಲೇಜು ಕಡೆಗೆ ಚಾಲಾಯಿಸಿದ ಪರಿಣಾಮ ಫಿರ್ಯಾದಿದಾರರಾದ ಶ್ರೀ ಅಬ್ದುಲ್ ರಹಿಮಾನ್ ರವರು ಹಿಂಬದಿ ಕೂತು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಂಬ್ರ: KA.19.KB.9570  ರಿಕ್ಷಾಕ್ಕೆ ಡಿಕ್ಕಿ ಹೊಡೆದು ಅಡ್ಡ ಬಿದ್ದ ಪರಿಣಾಮ , ಫಿರ್ಯಾದಿದಾರರು ಕೂಡಾ ರಸ್ತೆಗೆ ಬಿದ್ದು, ಗಾಯಗೊಂಡಿರುತ್ತಾರೆ.

 

7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:27-10-2007 ರಂದು ನವೀನ್ ತೆಲ್ಲಾ ಎಬೆನೆಝರ್ ಎಂಬವನು ತಾನು ಪ್ರೊಟೆಸ್ಟೆಂಟ್  ಕ್ರಿಶ್ಚಿಯನ್ ಜಾತಿಯ ಅವಿವಾಹಿತ ನಾಗಿದ್ದು, ಶಾದಿ ಡಾಟ್ಕಾಂ ಎಂಬ ವಿವಾಹ ಬಂಧ ನೆಟ್ ಮೂಲಕ ಪಿರ್ಯಾದಿದಾರರಾದ ಶ್ರೀಮತಿ ಜ್ಯೋತಿ ತೆರೆಸಾ ಪಿಂಟೋ ರವರ  ಪ್ರೊಫೈಲ್ ಗೆ  ತನ್ನನ್ನು ವಿವಾಹವಾಗುವಂತೆ  ಕೋರಿಕೆಯ ಸಂದೇಶವನ್ನು ಕಳುಹಿಸಿದ್ದು, ಅದರಂತೆ ತಾನು ಪ್ರೊಟೆಸ್ಟೆಂಟ್  ಕ್ರಿಶ್ಚಿಯನ್ ಜಾತಿಯವನು ಎಂಬುದಾಗಿ ಅದರಲ್ಲೂ ತಾನು ತನ್ನ ಸ್ವಂತ ನಿರ್ಣಯದಿಂದ ತಾನು ರೋಮನ್ ಕ್ಯಾಥೋಲಿಕ್ ಜಾತಿಗೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂಬುದಾಗಿ ಪ್ರಮಾಣೀಕರಿಸಿ ನೋಟರಿ ಅಫಿದಾವಿತ್ ಮಾಡಿಸಿ, ಸದ್ರಿ ಅಫಿದಾವಿತನ್ನು ಮಂಗಳೂರು ನಗರ  ಮಿಲಾಗ್ರೀಸ್ ಚರ್ಚ್ ನಲ್ಲಿ ಕೊಟ್ಟು, ತಾನು ಪ್ರೊಟೆಸ್ಟೆಂಟ್  ಕ್ರಿಶ್ಚಿಯನ್  ಎಂಬುದಾಗಿ ಪಿರ್ಯಾದುದಾರರನ್ನು ಹಾಗೂ ಮನೆಯವರನ್ನು ನಂಬಿಸಿ, ದಿನಾಂಕ:18-07-2009 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ನೋಟರಿ ವಕೀಲರ ಮುಂದೆ ಕ್ರಿಶ್ಚಿಯನ್ ಮ್ಯಾರೇಜ್ ಆಕ್ಟ್ ಪ್ರಕಾರ ರಿಜಿಸ್ಟರ್ ವಿವಾಹವಾಗಿರುತ್ತಾರೆ.  ನಂತರ ದಿನಾಂಕ:02-08-2010 ರಲ್ಲಿ ಮಂಗಳೂರು ನಗರದ ಮಿಲಾಗ್ರೀಸ್ ಚರ್ಚ್ ನಲ್ಲಿ  ವಿವಾಹವಾಗಿರುತ್ತಾರೆ. ಇತ್ತೀಚೆಗೆ ಆರೋಪಿತನು "ನಾನು ಕ್ರಿಶ್ಚಿಯನ್ ಅಲ್ಲ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯದವನು" ಎಂಬುದಾಗಿ ಒಪ್ಪಿಕೊಂಡಿದ್ದು, ಮಂಡಲ ಪ್ರಧಾನರು, ಗೋಲ್ಕೊಂಡ ರೆವೆನ್ಯೂ ಅಧಿಕಾರಿ ಇವರು ನೀಡಿದ ಜಾತಿ ಪ್ರಮಾಣಪತ್ರದಿಂದ ಇದು ಪ್ರಮಾಣಿಕೃತವಾಗಿರುತ್ತದೆ. ಆದ್ದರಿಂದ ಆರೋಪಿತನು ತಾನು ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದರೂ ತಾನು ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಎಂಬುದಾಗಿ ಸುಳ್ಳು ಜಾಹೀರಾತನ್ನು ಶಾದಿ ಡಾಟ್ ಕಾಂ ಎಂಬ ವಿವಾಹ ಬಂಧ ಮಾಡುವ ಸಂಸ್ಥೆಯಲ್ಲಿ ನೀಡಿ, ಫಿರ್ಯಾದುದಾರರನ್ನು ಆರೋಪಿತನು ನಂಬಿಸಿ, ಮೋಸ ಮಾಡಿ ವಿವಾಹವಾಗಿರುವುದಾಗಿದೆ.

 

8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29-07-2014 ರಂದು ಸಂಜೆ 3-30 ಗಂಟೆಯಿಂದ ದಿನಾಂಕ: 30-07-2014 ರಂದು 00.30 ಗಂಟೆಯ ಮಧ್ಯಾವಧಿಯಲ್ಲಿ ಮಂಗಳೂರು ತಾಲೂಕಿನ, ಬಜಪೆ ಪೊಲೀಸ್ ಠಾಣಾ ಸರಹದ್ದಾದ, ಬಡಗುಳಿಪಾಡಿ ಗ್ರಾಮದ , ಕೈಕಂಬ ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀ ಇಸ್ಮಾಯಿಲ್ ರವರ ಬಾಗಿಲು ಹಾಕಿ ಬೀಗ ಹಾಕಿದ ಮನೆಯ ಎದುರಿನ ಬಾಗಿಲನ್ನು ಮುರಿದು ಯಾರೋ ಕಳ್ಳರು ಮನೆಯೊಳಗೆ ನುಗ್ಗಿ ಸುಮಾರು 2,40,000/- ಬೆಲೆಯ ವಜ್ರದ ದೊಡ್ಡ ನೆಕ್ಲೇಸ್ ಮತ್ತು 28 ಗ್ರಾಂ. ತೂಕದ ಬಂಗಾರದ ನೆಕ್ಲೆಸ್ ಮತ್ತು 6 ಗ್ರಾಂ ತೂಕದ ಬಂಗಾರದ ಬ್ರೇಸ್ ಲೆಡ್  ಮತ್ತು ನಗದು ಹಣ 5000/- ಅಂದರೆ ಒಟ್ಟು 3,30,000/- ರೂ. ಬೆಲೆಯ ವಜ್ರ ಮತ್ತು ಬಂಗಾರದ ಒಡವೆಗಳನ್ನು ಹಾಗೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

9.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ(ಕಾ&ಸು) ರಾದ ಶ್ರೀ ಕುಮಾರೇಶನ್ ರವರಿಗೆ ದಿನಾಂಕ 30-07-2014 ರಂದು ಕಾಟಿಪಳ್ಳ ಗ್ರಾಮದ ನೈತಂಗಡಿ ಬಳಿಯ ಮೀನು ಮಾರುಕಟ್ಟೆ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ  ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ 10-50 ಗಂಟೆಗೆ ದಾಳಿ ಮಾಡಿ ಸುರೇಶ್ ಪೂಜಾರಿ, ಹರೀಶ್, ಮಂಜುನಾಥ, ಬಶೀರ್, ಆರ್. ಕುಮಾರ್, ಬಾಬು, ಹೆನ್ರಿ ಫೇರಾವೋ ಎಂಬವರನ್ನು ಹಾಗೂ 2750/- ರೂಪಾಯಿ ಹಣವನ್ನು, 52 ಇಸ್ಪಿಟ್ ಎಲೆಗಳನ್ನು, 1 ಪೇಪರ್ ನ್ನು ಮಹಜರು ಮೂಲಕ ಸ್ವಾಧೀನ ಪಡಿಸಿ ಆರೋಪಿಗಳ ವಿರುದ್ದ  ಕ್ರಮ ಕೈಗೊಂಡಿರುವುದಾಗಿದೆ.

 

10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-07-2014 ರಂದು ಪಿರ್ಯಾದುದಾರರಾದ ಶ್ರೀ ಅಬೂಬಕ್ಕರ್ ರವರು, ಅಬ್ದುಲ್ಲತೀಫ್ಎಂಬವರು ಚಲಾಯಿಸುತ್ತಿದ್ದ ಕೆಎಲ್‌ 14 ಎಲ್‌ 566 ನೇ ಕಾರಿನಲ್ಲಿ ಮಳಲಿಯಿಂದ ಮಂಜೇಶ್ವರ ಕಡೆಗೆ ಪ್ರಯಾಣಿಸುತ್ತಿದ್ದು. ಚಾಲಕ ಆಬ್ದುಲ್ ಲತೀಫ್ಕಾರನ್ನು ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸುತ್ತಿದ್ದು, ಕೊಂಡಾಣ ದ್ವಾರದ ಬಳಿ ಮಧ್ಯಾಹ್ನ 2-30 ಗಂಟೆಗೆ ತಲುಪುತ್ತಿದ್ದಂತೆ ಕಾರು ಒಮ್ಮೆಲೇ ಬಲಕ್ಕೆ ತಿರುಗಿ ಒಂದು ಕಾಂಪೌಂಡಿನ ಗೋಡೆಗೆ ಡಿಕ್ಕಿ ಹೊಡೆಯಿತು. ಇದರಿಂದ ಕಾರು  ಸಂಪೂರ್ಣ ಜಖಂಗೊಂಡಿರುತ್ತದೆ. ಅಲ್ಲದೇ ಪಿರ್ಯಾದುದರರ ಬಲಕೈಗೆ ಮತ್ತು ಬಲಭುಜಕ್ಕೆ ಗಾಯವಾಗಿರುತ್ತದೆ.

 

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.07.2014 ರಂದು ಸಂಜೆ 6.30 ಗಂಟೆಗೆ ಕೆಲ್ರಾಯಿ ಟೌನ್ಶಿಪ್‌‌‌‌ ಬೊಂಡಂತಿಲ ಎಂಬಲ್ಲಿಂದ  ಪಿರ್ಯಾದಿದಾರರಾದ ಶ್ರೀ ಭೋಳಾ ರವರ ಮಗ ಸತೀಶ್‌‌ ಚಂದ್ರ ಎಂಬಾತನು ಕ್ಲಿನಿಕ್ನಿಂದ ಔಷದಿ ತರಲೆಂದು ಹೋದವನು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾನೆ ಆತನ ಪತ್ತೆಯ ಬಗ್ಗೆ ನೆರೆಕರೆಯವರಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುದಿಲ್ಲ ಕಾಣೆಯಾದ ಸತೀಶ್‌‌ ಚಂದ್ರನ ಚಹರೆ    : ಸತೀಶ್‌‌ ಚಂದ್ರ, ವಯಸ್ಸು : 20, ಎತ್ತರ : 5' 2 , ಬಣ್ಣ: ಗೋದಿ ಮೈಬಣ್ಣ, ಮೈಕಟ್ಟು : ಸಾಧಾರಣ ಮೈಕಟ್ಟು, ಭಾಷೆ: ಹಿಂದಿ, ಕನ್ನಡ, ಇಂಗ್ಲೀಷ್‌‌, ಉಡುಪು: ಬಿಳಿ ಉದ್ದ ತೋಳಿನ ಶರ್ಟ್ಮತ್ತು ನೀಲಿ ಬಣ್ಣದ ಜೀನ್ಸ್‌‌ ಪ್ಯಾಂಟ್‌‌ ಧರಿಸಿರುತ್ತಾನೆ.