Tuesday, April 7, 2015

Daily Crime Reports : 07-04-2015

ದೈನಂದಿನ ಅಪರಾದ ವರದಿ.

ದಿನಾಂಕ 07.04.201510:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದಿದಾರರಾದ ಶ್ರೀ ಹರೀಶ್ ಪುತ್ರನ್ ರವರ ಮೊಬೈಲ್ ದೂರವಾಣಿಗೆ ದಿನಾಂಕ 29-01-2015 ರಂದು ರಾತ್ರಿ 9-36 ಗಂಟೆಯಿಂದ ತಾ 06-04-2015 ರಂದು ಮದ್ಯಾಹ್ನ 12-59 ಗಂಟೆಯವರೆಗೆ ಬೇರೆ ಬೇರೆ ಸಮಯದಲ್ಲಿ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಇಂಟರ್ ನೆಟ್ ನಂಬ್ರಗಳಿಂದ ಬೆದರಿಕೆ ಕರೆ ಮಾಡಿ 5 ಕೋಟಿ ರೂ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದು ಅಲ್ಲದೆ ಹಣ ಕೊಡಲು ತಪ್ಪಿದಲ್ಲಿ ಪಿರ್ಯಾದಿದಾರರನ್ನು ಹಾಗೂ ಪಿರ್ಯಾದಿದಾರರ ಕುಟುಂಬದವರನ್ನು  ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ವಿಚಾರವಾಗಿ ರವಿ ಪೂಜಾರಿಯ ಏಜೆಂಟರಾಗಿ ಧನಂಜಯ್ ಕೋಟ್ಯಾನ್ ಮಟ್ಟು, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಮತ್ತು ಸುಬ್ರಹ್ಮಣ್ಯ ಶೆಣೈ ಮೊಯಿಲೊಟ್ಟು ಇವರುಗಳು ಪಿರ್ಯಾದಿದಾರರ ಮಾಹಿತಿ ನೀಡಿ ಹಣ ವಸೂಲಿ ಮಾಡಲು ಸಹಕರಿಸುತ್ತಿರುವುದಾಗಿ ಗುಮಾನಿ ಇರುತ್ತದೆ.

 

2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದಿದಾರರಾದ ಪ್ರವೀಣ್ ನನ ಅಕ್ಕ ನವರು ಸುಮಾರು 25 ವರ್ಷದಿಂದ ಬೊಂಬಾಯಿಯಲ್ಲಿದ್ದು, ತಮ್ಮ ಪ್ರವೀಣ್ನಿಗೆ ಮದುವೆ ಮಾಡುವ ಬಗ್ಗ ಹುಡುಗಿ ನಿಶ್ವಯವಾಗಿದ್ದು, ಮದುವೆಯು ದಿನಾಂಕ: 30-4-2015ರಂದು ಬೆಳ್ತಂಗಡಿಯಲ್ಲಿ ನಡೆಯಲಿದ್ದು. .  ಹೀಗಿರುತ್ತಾ ದಿನಾಂಕ: 03-04-2015ರಂದು ಪಿರ್ಯಾದಿಯವರ ತಮ್ಮನು ಮಟ್ರಾಂಡಿ ಮನೆಯಲ್ಲಿ ಮದುವೆಯ ಕಾರ್ಯದ ಬಗ್ಗೆ ಕೆಲವೊಂದು ಅಗತ್ಯ ಕೆಲಸಗಳನ್ನು ಮಾಡುತ್ತಿದ್ದವನು ದಿನ ಸಂಜೆ ಸುಮಾರು 4-00 ಗಂಟೆಗೆ ಮನೆಗೆ ಪಂಪ್ನ್ನು ತರುತ್ತೇನೆ ಎಂಬುದಾಗಿ  ಹೋದವನು  ಮರಳಿ  ಮನೆಗೂ  ಬಾರದೇ  ಸಂಬಂದಿಕರೆ ಮನೆಗೂ  ಹೋಗದೇ  ಕಾಣೆಯಗಿರುತ್ತಾನೆ. ಕಾಣೆಯಾದವರ ಚಹರೆ ಗುರುತುಗಳು : ಹೆಸರು: ಪ್ರವೀಣ್, ಪ್ರಾಯ: 34 ವರ್ಷ, ಮೊಬೈಲ್ನಂಬ್ರ:             9902178052, ಎತ್ತರ: 6 ಫೀಟ್‌, ಎಣ್ಣೆ ಕಪ್ಪು ಮೈಬಣ್ಣ. ಕಪ್ಪು ತಲೆಕೂದಲು. ಬಲ ಬದಿಗೆ  ತಲೆ ಬಾಚುತ್ತಾನೆ. ಧರಿಸಿರುವ ಬಟ್ಟೆ ಬರೆಗಳು:          ಚುಕ್ಕೆಯಿರುವ ಬಿಳಿಯ ಅಂಗಿ, ಸಾಧಾರಣ ಕಪ್ಪು ಬಣ್ಣದ ಪ್ಯಾಂಟ್‌, ತಿಳಿದಿರುವ ಭಾಷೆ ತುಳು, ಕನ್ನಡ,   ವಿದ್ಯಾಭ್ಯಾಸ. 7ನೇ ತರಗತಿ ವಿದ್ಯಾಭ್ಯಾಸ.

 

3.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ: 05-04-20105 ರಂದು ಪಿರ್ಯಾಧಿದಾರರಾದ ಶ್ರೀ ಫಕ್ರುದ್ದೀನ್ ರವರು ತನ್ನ ಬಾಬ್ತು ಕೆಎ-19-ಈಕೆ-6175 ನೇಯದರಲ್ಲಿ ತನ್ನ ಮಗಳು ರುಮೀಜಾ ಮಿಲ್ಲತ್. ರವರೊಂದಿಗೆ  ಸುರತ್ಕಲ್ ನಿಂದ ಮುಕ್ಕ  ಶ್ರೀನಿವಾಸ್ ಆಸ್ಪತ್ರೆಗೆ ಹೋಗುವರೇ ಮುಕ್ಕ ಜಂಕ್ಷನ್ ನಲ್ಲಿ ಡಿವೈಡರನ ಕೊನೆಯಲ್ಲಿ. ಬಲಕ್ಕೆ ತಿರಿಗಿಸುವರೇ ಸೂಚನೆ ನೀಡಿ ಇಂಡಿಕೇಟರ್ ಹಾಕಿದ್ದರೂ. ಹಿಂದುಗಡೆಯಿಂದ ಅಂದರೇ  ಸುರತ್ಕಲ್ ಕಡೆಯಿಂದ ಮುಲ್ಕಿ ಕಡೆಗೆ  ರಾ ಹೆ. 66 ರಲ್ಲಿ ಅಪಾಧಿತ ಕಾರು ಚಾಲಕ ಮಹಮ್ಮದ್ ರಿಯಾಜ್ ಎಂಬವರು ತನ್ನ ಬಾಬ್ತು ಕಾರು ನಂಬ್ರ ಕೆಎ- 19- ಎಮ್ ಡಿ- 5244  ನೇಯದನ್ನು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಬಲಗಡೆಗೆ ತಿರುಗುತ್ತಿದ್ದ   ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ  ವಾಹನ ಸಮೇತ  ರಸ್ತೆಗೆ ಬಿದ್ದು  ಯಾವುದೇ ಗಾಯವಿಲ್ಲದೆ ಪಿರ್ಯಾಧಿದಾರರು ಪಾರಾಗಿದ್ದು. ಹಿಂದುಗಡೆಗೆ ಕುಳ್ಳಿತ್ತಿದ್ದ  ರುಮೀಜಾ  ಮಿಲ್ಲತ್  ರವರಿಗೆ ಹಣೆಗೆ ಮತ್ತು ಬಲ ಭುಜಕ್ಕೆ. ಕಿಬ್ಬೋಟ್ಟೆ , ಬಲಗಾಲಿಗೆ. ಗಂಭೀರ ಸ್ವರೂಪದ . ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು  ಯೆನೋಪೊಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

4.ಉಳ್ಳಾಲ  ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 06-04-2015 ರಂದು ರಾತ್ರಿ ಸುಮಾರು 07-30 ಗಂಟೆಗೆ ಪಿರ್ಯಾದುದಾರರಾದ ಶ್ರೀ ಸೈಯದ್ ಮುಸ್ತಾಫಾ ರವರು ಮನೆಯಿಂದ ಅಂಗಡಿಗೆ ನಡೆದುಕೊಂಡು ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ಮಾರ್ಗತಲೆ ಮಸೀದಿಯ ಬಳಿಗೆ ತಲುಪುವಷ್ಟರಲ್ಲಿ  ಪಿರ್ಯಾದುದಾರರಿಗೆ ಪರಿಚಯದ ಮಿಶ್ಬಾ ಎಂಬಾತನು ಬೇಟಿಯಾಗಿದ್ದು ನಂತರ ನಿನ್ನೆ ಯಾಕೆ ಎಲ್ಲರಿಗೂ ವಿನಾಃ ಕಾರಣ ಬೈದು ತೊಂದರೆ ನೀಡಿರುತ್ತೀಯಾ ಎಂದು ಪಿರ್ಯಾದುದಾರರು ಅವನಲ್ಲಿ ವಿಚಾರಿಸಿದ್ದು ನಂತರ ಆತನು ನಿನಗೆ ಏಕೆ ಎಂದು ಅವಾಚ್ಯ ಶಬ್ದಗಳಿಂದ ಬೈದನು ಅದೇ ಸಮಯಕ್ಕೆ ಅಲ್ಲಿಯೇ ಸಮೀಪದಲ್ಲಿದ್ದ ರಜಾಕ್‌, ಸಾಹುಲ್‌, ಇರ್ಫಾನ್‌, ರಿಯಾಜ್‌ @ ಮುನ್ನ ಅಜಾರ್ಅಸ್ಪಕ್ರವರು ಪಿರ್ಯಾದುದಾರರನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನಂತರ ಮಿಶ್ಬಾ ಎಂಬಾತನು ಆತನ ಕೈಯಲ್ಲಿದ್ದ ಸೋಡಾ ಬಾಟಲಿಯಿಂದ ಪಿರ್ಯಾದುದಾರರ ತುಟಿಗೆ ಹೊಡೆದು ನಂತರ ಉಳಿದವರೆಲ್ಲ ಮೈಕೈಗೆ ಗುದ್ದಿ ಗಾಯಗೊಳಿಸಿ ನಂತರ ಬೊಬ್ಬೆ ಹೊಡೆದಾಗ ಪಿರ್ಯಾದುದಾರರ ತಮ್ಮ ಸೈಯದ್ಸಮದ್ನು ಅಲ್ಲಿಗೆ ಬಂದಿದ್ದು ಅವನನ್ನು ಸಾಹುಲ್ಎಂಬಾತನು ಆತನ ಮೊಣಕಾಲಿನಿಂದ ಒಂದೇ ಸಮನೇ ಎಡಕಣ್ಣಿಗೆ ಗುದ್ದಿದನು ನಂತರ ಅಜಾರ್ಇರ್ಫಾನ್‌, ಅಸ್ಪಕ್ಮತ್ತಿತರರು ಕೂಡಾ ಕೈಗಳಿಂದ ಹೊಡೆದು ಗುದ್ದಿ, ತುಳಿದು ನೋವುಂಟು ಮಾಡಿದರು ನಂತರ ಅಲ್ಲಿಗೆ ಪಿರ್ಯಾದುದಾರರ  ಪರಿಚಯದ ಫಾರೂಕ್‌, ಶಾಖೀರ್ಮತ್ತಿತರರು ಓಡಿಕೊಂಡು ಬರುವುದನ್ನು ಕಂಡ ಮಿಶ್ಬಾ ಮತ್ತಿತರರು ಈಗ ನೀವು ಬಚಾವು ಆಗಿದ್ದೀರಿ, ಮುಂದಕ್ಕೆ ನಿಮ್ಮಿಬ್ಬರನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಬೆದರಿಸಿ ಅವರ ಕೈಯಲ್ಲಿದ್ದ ಬಾಟಲಿಗಳನ್ನು ಬೀಸಾಡಿ ಅಲ್ಲಿಂದ ಓಡಿ ಹೋಗಿರುತ್ತಾರೆ ನಂತರ ಅಲ್ಲಿದ್ದವರು ಪಿರ್ಯಾದಿದಾರರನ್ನು ತೊಕ್ಕೊಟ್ಟುವಿನ ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಘಟನೆ ನಡೆಯುವಾಗ ರಾತ್ರಿ 07-30 ಗಂಟೆ ಆಗಬಹುದು ಪಿರ್ಯಾದುದಾರರನ್ನು ಹಾಗೂ ಅವರ ತಮ್ಮ ಸಯ್ಯದ್‌‌ ಸವದ್ನನ್ನು ಕೊಲೆ ಮಾಡುವ ಉದ್ದೇಶದಿಂದ ರೀತಿ ಹಲ್ಲೆ ಮಾಡಿರುವುದಾಗಿದೆ.