Thursday, December 11, 2014

Daily Crime Report : 11-12-2014

ದಿನಾಂಕ 11.12.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

3

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಶಮಾ ರೋಶನ್ ರವರಿಗೆ ಆರೋಪಿ ಶಮೀರ್ ಶೇಕ್ ರೊಂದಿಗೆ ದಿನಾಂಕ 05-06-2010 ರಂದು ಬೋಳಾರದ ಶಾದಿಮಹಲ್ ನಲ್ಲಿ ಮದುವೆಯಾಗಿದ್ದು, ಮದುವೆಯ ಸಮಯ ಪಿರ್ಯಾದಿಗೆ 20 ಪವನ್ ಚಿನ್ನ ಹಾಕಿ, ವರನ ಕಡೆಯವರ ಬೇಡಿಕೆಯಂತೆ 4 ಚಿನ್ನದ ಉಂಗುರ, 15.000 ಬೆಲೆಬಾಳುವ ವಿದೇಶ ಟೀಸೋರ್ಟ್ ವಾಚನ್ನು ಹಾಗೂ ಇತರೇ ಸಾಮಾಗ್ರಿಗಳನ್ನು ಕೊಟ್ಟು, ಮದುವೆಯ ಸಂಪೂರ್ಣ ಖರ್ಚನ್ನು ಪಿರ್ಯಾದಿದಾರರ ತಂದೆಯವರೇ ಭರಿಸಿರುತ್ತಾರೆ. ನಂತರ ಗಂಡನೊಂದಿಗೆ ಮೂಡಬಿದ್ರೆಯ ಅಲಂಗಾರು ಪುತ್ತಿಗೆಯಲ್ಲಿ ವಾಸವಾಗಿದ್ದು,  ಸಮಯ ಪಿರ್ಯಾದಿದಾರರಿಗೆ ನೀನು ತಂದ ಚಿನ್ನ ಸಾಲದು, ನನ್ನ ಮಗನಿಗೆ 100 ಪವನ್ ಚಿನ್ನ ಕೊಟ್ಟು ಮದುವೆ ಮಾಡುವವರಿದ್ದಾರೆ ನೀನು ಇನ್ನೂ 50 ಪವನ್ ಅಥವಾ 3 ಲಕ್ಷ ಹಣವನ್ನು ತರಬೇಕೆಂದು ಪಿರ್ಯಾದಿಯ ಗಂಡ, ಅತ್ತೆ, ಮಾವ, ಮತ್ತು ನಾದಿನಿ ಬೈದು ಮಾನಸಿಕ ಹಿಂಸೆ ನೀಡುತ್ತಿದ್ದರು. ಅಲ್ಲದೇ ಪಿರ್ಯಾದಿದಾರರ ಗಂಡ ಪಿರ್ಯಾದಿದಾರರಿಗೆ ಗೊತ್ತಿಲ್ಲದೆ ಹದಿನೆಂಟುವರೆ ಪವನ್ ಚಿನ್ನವನ್ನು ಮಾರಿರುತ್ತಾರೆ. ನಂತರ ಲ್ಯಾಂಡ್ ಲಿಂಕ್ಸ್ ನಲ್ಲಿ ಮನೆ ಮಾಡಿ, ಅಲ್ಲಿಯೂ ಮಾನಸಿಕ ಹಿಂಸೆ ನೀಡಿ ಪಿರ್ಯಾದಿದಾರರನ್ನು ಮನೆಯಿಂದ ಹೊರಹಾಕಿದ್ದಲ್ಲದೆ ದಿನಾಂಕ 10-11-2014 ರಂದು  ಸಂಜೆ 4.00 ಗಂಟೆಗೆ  ಬಲ್ಮಠದ ಡಿ.ಎಡ್ ಕಾಲೇಜಿನ ಬಳಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನ ತಂದೆ -ತಾಯಿಗೆ ಕೊಂದು ಹಾಕುತ್ತೆನೆಂದು ಜೀವ ಬೆದರಿಕೆ ಹಾಕಿರುತ್ತಾರೆ.

 

2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-12-14ರಂದು ಪಿರ್ಯಾಧಿದಾರರಾದ ಬಜಪೆ ಪೊಲೀಸು ಠಾಣಾ ಮಹಿಳಾ ಪೊಲೀಸು ಕಾನ್ಸ್ ಟೇಬಲ್ -780 ಆದ ವಿನುತಾರವರು ಬಜಪೆ ಠಾಣೆಯಲ್ಲಿ ಕರ್ತವ್ಯವನ್ನು ಮುಗಿಸಿ ಠಾಣೆಯಿಂದ ಸಂಜೆ 5:30 ಗಂಟೆಗೆ ಮನೆ ಕೆಡೆಗೆ ತನ್ನ ಬಾಬ್ತು ಕೆಎ-19-ಇಹೆಚ್-4028ನೆ ನಂಬ್ರದ ಆಕ್ಟಿವಾ ಹೊಂಡಾ ದ್ವಿ-ಚಕ್ರ ವಾಹನದಲ್ಲಿ ಹೊರಟು ಬಜ್ಪೆ- ಮೂಲ್ಕಿ ರಸ್ತೆಯಲ್ಲಿ ಬರುತ್ತಾ ಸಂಜೆ ಸುಮಾರು 6:15 ಗಂಟೆಗೆ ಎಸ್ ಕೋಡಿಯಿಂದ ಸ್ವಲ್ಪ ಮುಂದಕ್ಕೆ ತಲುಪಿದಾಗ ಅವರ ಹಿಂದಿನಿಂದ ಅಂದರೆ ಕಿನ್ನಿಗೋಳಿ ಕಡೆಯಿಂದ ಮೂಲ್ಕಿ ಕಡೆಗೆ ಈಚರ್ ವಾಹನವೊಂದನ್ನು ಅದರ ಚಾಲಕ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಅವರ ವಾಹನ ಬಲಗಡೆಯ ಹ್ಯಾಂಡಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾಧಿದಾರರು ದ್ವಿ ಚಕ್ರ ಸಮೇತ ರಸ್ತೆಗೆ ಬಿದ್ದು, ಮುಖ, ತುಟಿ, ಎರಡೂ ಕೈಗಳಿಗೂ, ಎರಡೂ ಕಾಲುಗಳಿಗೂ, ಕಣ್ಣಿಗೆ ಗುದ್ದಿದ ಹಾಗು ರಕ್ತ ಗಾಯವಾಗಿರುತ್ತದೆ. ಅಪಘಾತ ಪಡಿಸಿದ ವಾಹನ ಚಾಲಕನು ವಾಹನವನ್ನು ನಿಲ್ಲಿಸದೇ ಅಲ್ಲಿಂದ ಎಕಾಎಕಿ ಪರಾರಿಯಾಗಿರುತ್ತಾನೆಂದು ಪಿರ್ಯಾಧಿದಾರರು ಚಿಕಿತ್ಸೆಗಾಗಿ ಮಾರ್ಗದಲ್ಲಿ ಬಂದ ಒಂದು ರಿಕ್ಷಾದಲ್ಲಿ ಚಿಕಿತ್ಸೆಗಾಗಿ ಮೂಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

3.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಾಘವೇಂದ್ರ ಹೊಳ್ಳ ಇವರು ಮಂಗಳೂರು ವಿಶೇಷ ಆರ್ಥಿಕ ವಲಯ ಇದರ ಆಢಳಿತ ವ್ಯವಸ್ಥಾಪಕರಾಗಿದ್ದು  ದಿನಾಂಕ 10-12-2014 ರಂದು  ಬೆಳಿಗ್ಗೆ 11-00 ಗಂಟೆಗೆ ಎಸ್ ಝೆಡ್ ಇದರ ಕಾಮಗಾರಿ ತೋಕೂರು ಬಳಿ ನಡೆಯುವ ವೇಳೆ ಸದ್ರಿ ಸ್ಥಳಕ್ಕೆ ಆರೋಪಿಗಳು ಅಕ್ರಮ ಪ್ರವೇಶ ಮಾಡಿ ಕೆಲಸ ಕಾರ್ಯವನ್ನು ಸ್ಥಗಿತಗೊಳಿಸುವಂತೆ ತಡೆದು ಕಾರ್ಮಿಕರಿಗೆ  ಕೆಲಸ ಮಾಡಿದ್ದಲ್ಲಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂದು ಜೀವಬೆದರಿಕೆ ಒಡ್ಡಿರುವುದಲ್ಲದೇ ಸದ್ರಿ ಎಸ್ ಝೆಡ್ ಗೆ ಸಂಬಂಧಿಸಿದ ಜಾಗದಲ್ಲಿ ಅಕ್ರಮವಾಗಿ ತಾತ್ಕಾಲಿಕ ಶೆಡ್ ನಿರ್ಮಿಸಿರುವುದಾಗಿದೆ.

 

4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಹುಸೈನ್ ಕುಂಞ ರವರು ಮರವನ್ನು ಗುತ್ತಿಗೆ ಆಧಾರದಲ್ಲಿ ಸಾಗಾಟ ಮಾಡುವ ವ್ಯವಹಾರ ಮಾಡುತ್ತಿದ್ದು, ಅದರಂತೆ ದಿನಾಂಕ 09.12.2014 ರಂದು ರಾತ್ರಿ ಕಡಬ ಸುಂಕದಕಟ್ಟೆಯಿಂದ ಲಾರಿ ನಂಬ್ರ ಕೆಎಲ್‌-59-7561ನೇಯದರಲ್ಲಿ ಲಾರಿ ಚಾಲಕ ಜೋಷಿ ಮತ್ತು ಕ್ಲೀನರ್ಸಂಶುದ್ದೀನ್ಎಂಬವರು ರಬ್ಬರ್ಮರವನ್ನು ಲಾರಿಯಲ್ಲಿ ತುಂಬಿಸಿ ನೆತ್ತಿಲಪದವಿಗೆ ಹೋಗುತ್ತಿರುವಾಗ ರಾತ್ರಿ 02:30 ಗಂಟೆಗೆ ಬಂಟ್ವಾಳ ತಾಲೂಕು, ಕೈರಂಗಳ ಗ್ರಾಮದ ಮೊಂಟುಗೋಳಿ ಎಂಬಲ್ಲಿಗೆ ತಲುಪುತ್ತಿದ್ದಂತಯೇ ಮೋಟಾರ್ಸೈಕಲಿನಲ್ಲಿದ್ದ ಇಬ್ಬರು ಯುವಕರು ಲಾರಿಯನ್ನು ನಿಲ್ಲಿಸಿ, ಅವರಲ್ಲಿ ಓರ್ವ ಯುವಕನು ಚಾಲಕ ಜೋಷಿರವರ ಕುತ್ತಿಗೆಗೆ ಚೂರಿಯನ್ನು ಹಿಡಿದು ಬೆದರಿಸಿ ಇನ್ನಿಬ್ಬರು ಯುವಕರು ಜೋಷಿಯವರ ಕಿಸೆಯಲ್ಲಿದ್ದ ರೂ. 8,200/- ಅನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ. ಸದ್ರಿ ಯುವಕರು 4 ಜನರಿದ್ದು ಸುಮಾರು 25-30 ಪ್ರಾಯದವರಾಗಿರುತ್ತಾರೆ. ಘಟನೆಯಿಂದ ಲಾರಿ ಚಾಲಕ ಜೋಷಿರವರು ಹೆದರಿಕೊಂಡಿದ್ದು, ತನಗೆ ಹುಷಾರಿಲ್ಲವೆಂದು ತಿಳಿಸಿ ಹೋಗಿದ್ದು ಬಳಿಕ ಫಿರ್ಯಾದಿದಾರರಿಗೆ ತಿಳಿಸಿ ತಡವಾಗಿ ದೂರು ನೀಡಿರುವುದಾಗಿದೆ.

 

5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಕಮಲಮ್ಮ ರವರ ಮಗಳು ದ್ರಾಕ್ಷಾಯಿಣಿ(16), ಹಾಗೂ ಪಿರ್ಯಾದಿದಾರರ ತಂಗಿ ಶಂಕರಮ್ಮಳ ಮಗಳಾದ ಕಾವೇರಿ( 16) ಎಂಬವರು ದಿನಾಂಕ 30-11-2014 ರಂದು ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಕೆ ಎಸ್ ರಾವ್ ನಗರದಲ್ಲಿ ನಡೆಯುವ ಸಂತೆಗೆಂದು ಬಂದಿದ್ದವರು ಸಂಜೆ 04:30 ವೇಳೆಗೆ  ಜೊತೆಯಲ್ಲಿದ್ದ ಪಿರ್ಯಾದಿದಾರರಲ್ಲಿ ಈಗ ಬರುತ್ತೇವೆ ಎಂದು ಹೇಳಿ ಹೋದವರು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದು, ನೆರೆಮನೆಯ ರುದ್ರಪ್ಪ ಹಾಗೂ ಬಸವರಾಜ್ ರವರೊಂದಿಗೆ ಹೋಗಿರುವ ಸಂಶಯವಿರುವುದಾಗಿದೆ.

 

6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09.12.2014 ರಂದು  ರಾತ್ರಿ  9:00  ಗಂಟೆಗೆ ಮಂಗಳೂರು ತಾಲೂಕು  ಶಿರ್ತಾಡಿಯ  ಕೋಳಿ  ಅಂಗಡಿಯ ಮಾಲಿಕರಲ್ಲಿ  ಪಿರ್ಯಾದಿದಾರರಾದ ಶ್ರೀ ಇಸ್ಮಾಯಿಲ್ ರವರು ಮಾತನಾಡುತ್ತಿದ್ದಾಗ,  ವಾಲ್ಪಾಡಿ  ಅಮಣಿ ಎಂಬಲ್ಲಿಯ  ಸುಭಾಷ್  ಜೈನ್ಎಂಬವರು  ಫಿರ್ಯಾದಿದಾರರ  ಬಳಿ  ಬಂದು  ತಡೆದು  ನಿಲ್ಲಿಸಿ  ಅವಾಚ್ಯ ಶಬ್ದದಿಂದ ಬೈದು ಕೈಯಿಂದ ಕೆನ್ನೆಗೆ ಹೊಡೆದಿರುತ್ತಾರೆ ಆಗ  ಯಾಕೆ  ಬಯ್ಯುತ್ತೀರಿ, ಎಂದು  ಪಿರ್ಯಾದಿದಾರರು  ಹೇಳಿ  ಹೊರಡಲು  ಅನುವಾದಾಗ ಪುನಃ ಪಿರ್ಯಾದಿಯನ್ನು  ಆರೋಪಿ  ಸುಭಾಷ್  ಜೈನ್ ತಡೆದು  ನಿಲ್ಲಿಸಿ  ಜೀವ  ಬೆದರಿಕೆ ಹಾಕಿರುವುದಾಗಿದೆ.

 

7.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 10-12-2014 ರಂದು ಕಳವಾರು ಗ್ರಾಮದ ಕಳವಾರು ಕಾರಿಡಾರ್ ರಸ್ತೆಯ ಬಳಿಯಲ್ಲಿ ಪಿರ್ಯಾದಿದಾರರಾದ ಮಂಗಳೂರು ವಿಶೇಷ ಆರ್ಥಿಕ ವಲಯ ಇದರ ಆಢಳಿತ ವ್ಯವಸ್ಥಾಪಕರಾದ ಶ್ರೀ ರಾಘವೇಂದ್ರ ಹೊಳ್ಳ ರವರಿಗೆ ಸಂಬಂಧಪಟ್ಟ ಜಮೀನಿನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವ ಸಮಯ ಬೆಳಿಗ್ಗೆ ಸುಮಾರು 11-00 ಗಂಟೆ ಸಮಯಕ್ಕೆ ಆರೋಪಿಗಳಾದ ಬಿ.ಎಸ್. ಹುಸೈನ್, ಶರೀಫ್, ಬಾವ ಯಾನೆ ಮುಡಿ, ವಿಜಯಾನಂದ ರಾವ್ ಹಾಗೂ ಇತರ 20 ಜನರ ತಂಡ ಪಿರ್ಯಾದಿದಾರರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕೆಸಲ ಕಾರ್ಯವನ್ನು ಸ್ಥಗಿತಗೊಳಿಸಿ ಕಾರ್ಮಿಕರಿಗೆ ಕೆಲಸ ಮಾಡಿದ್ದಲ್ಲಿ ಸುಮ್ಮನೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ, ಅಲ್ಲದೇ ಕಳವಾರು ಬೆಂಕಿನಾಥೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ರಿಪೇರಿ ಮತ್ತು ತಡೆಗೋಡೆ ನಿರ್ಮಾಣ ಕಾರ್ಯವನ್ನು ಕೂಡ ಸ್ಥಗಿತಗೊಳಿಸಿರುತ್ತಾರೆ.

 

8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಹರಿಪ್ರಸಾದ್  ಶೆಟ್ಟಿಯವರು ದಿನಾಂಕ: 07-12-2014 ರಂದು ಕೈಕಂಬ ಕಡೆಯಿಂದ ಬೆಳ್ಳೂರು ಗುತ್ತು ಎಂಬಲ್ಲಿಗೆ ತನ್ನ ಬಾಬ್ತು ಮೋಟಾರು ಸೈಕಲ್ ನಂ: ಕೆಎ 19 ಇಕೆ 4827 ನೇದ್ದನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಂಜೆ 5-00 ಗಂಟೆ ಸಮಯಕ್ಕೆ ಅವರ ಎದುರಿನಿಂದ  ಅಂದರೆ ಬೆಳ್ಳೂರು ಕಡೆಯಿಂದ ನೂಯಿ ಕಡೆಗೆ ಡಿಯೋ ಸ್ಕೂಟರ್ ನಂ: ಕೆಎ 19 ಎಎ 2703 ನೇದ್ದನ್ನು ಅದರ  ಸವಾರ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂಧು ಮಂಗಳೂರು ತಾಲೂಕಿನ, ಅಡ್ಡೂರು ಗ್ರಾಮದ ಬೆಳ್ಳೂರು ಗುತ್ತು ಎಂಬಲ್ಲಿ ಫಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಎಡಕಾಲಿನ ಪಾದದ ಮೂಳೆ ಮುರಿತವಾಗಿದ್ದು, ಎಡಕೈ ಮತ್ತು ಮುಖಕ್ಕೆ ತರಚಿದ ಗಾಯವಾಗಿರುತ್ತದೆ.  ಫಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.  ಡಿಯೋ ಸ್ಕೂಟರ್ ಸವಾರರು ಬಗ್ಗೆ ಖರ್ಚಿನ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದು, ಈವರೆಗೆ ನೀಡದೇ ಇರುವುದರಿಂದ  ಪ್ರಕರಣ ದಾಖಲಿಸಲು ತಡವಾಗಿರುತ್ತದೆ.

 

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-12-2014 ರಂದು 09-30 ಗಂಟೆ ಸಮಯ ಆರೋಪಿಯು ತನ್ನ ಸ್ಕೂಟರ್ ಕೆಎ.19.ಇಬಿ. 1935 ರಲ್ಲಿ ಶ್ರೀಮತಿ ಇಂದಿರಾ ಎಂಬವರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಕುಂಪಲ ಬೈಪಾಸ್ ರಸ್ತೆಯಲ್ಲಿ ತನ್ನ ಸ್ಕೂಟರ್ನ್ನು ಅತೀ ವೇಗ ಮತ್ತು ಅಜಾಗಾರೂಕತೆಯಿಂದ ಚಲಾಯಿಸಿ ಕುಂಪಲ ಬೈಪಾಸ್ನೂರಾನಿ ಯತೀಮ್ ಖಾನದ ಬಳಿ ನಾಯಿಯೊಂದು ಅಡ್ಡ ಬಂದುದರಿಂದ ಒಮ್ಮೆಲೇ ಬ್ರೇಕ್ ಹಿಡಿದುದರಿಂದ ಸಹಸವಾರರಾದ ಶ್ರೀಮತಿ ಇಂದಿರಾ ರವರು ರಸ್ತೆಗೆ ಬಿದ್ದು, ಕಾಲಿಗೆ ತೀವೃ ಗಾಯಗೊಂಡು ಪ್ರಜ್ಞಾಹೀನರಾಗಿರುತ್ತಾರೆ.

 

10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-12-2014 ರಂದು ರಾತ್ರಿ ಸುಮಾರು 8-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಹಸನಬ್ಬಾ ರವರು ಮನೆಯಲ್ಲಿ ಇಲ್ಲದ ಸಮಯ ರಫೀಕ್‌‌ ಎಂಬುವವರು ಫಿರ್ಯಾದಿದಾರರ ಮನೆಗೆ ನುಗ್ಗಿ ಬಾಗಿಲು ಮೆಟ್ಟಿ ಫಿರ್ಯಾದಿದಾರರ ಹೆಂಡತಿ ಹಾಗೂ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈದದಲ್ಲದೆ ಫಿರ್ಯಾದಿದಾರರು ತಕ್ಷಣ ಮನೆಗೆ ಹೋದಾಗ ಆರೋಪಿ ರಫೀಕ್‌‌ ಫಿರ್ಯಾದಿದಾರರ ಎದೆಗೆ ತಲೆಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು, ಕೊಲ್ಲದೆ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿರುವುದಾಗಿದೆ.

No comments:

Post a Comment