Friday, December 26, 2014

Daily Crime Reports 26.12.2014 :

ದಿನಾಂಕ 26.12.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 24.12.2014 ರಂದು  ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀ ವಿನ್ಸೆಂಟ್ ಮಡ್ತಾ ರವರು ತಮ್ಮ ಬಾಬ್ತು ಸ್ಕೂಟರ್ನಂಬ್ರ ಕೆ.-19-.-9941 ನೇದನ್ನು ಚಲಾಯಿಸುತ್ತಾ ಸಮಯ ಬೆಳಿಗ್ಗೆ 10:00 ಗಂಟೆಗೆ ಮಂಗಳೂರು ನಗರದ ಕಾಪಿಕಾಡ್‌ 3ನೇ ಕ್ರಾಸ್ತಲುಪಿದಾಗ, ಅವರ ಮುಂದುಗಡೆ ಬಸ್ಸೊಂದು ನಿಂತುಕೊಂಡಿದ್ದರಿಂದ, ಪಿರ್ಯಾದಿದಾರರು ಸ್ಕೂಟರನ್ನು ಬಲ ಬದಿಗೆ ಚಲಾಯಿಸಿದಾಗ, ಅವರ ಹಿಂದುಗಡೆಯಿಂದ ಅಂದರೆ ಕೊಟ್ಟಾರ ಕ್ರಾಸ್ಕಡೆಯಿಂದ ಕೆ.ಎಸ್‌.ಆರ್‌.ಟಿ.ಸಿ ಜಂಕ್ಷನ್ಕಡೆಗೆ  ಕಾರು ನಂಬ್ರ ಕೆ.-19-ಎಂ.-1441 ನೇದನ್ನು ಅದರ ಚಾಲಕ ಅತೀವೇಗ  ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು  ಪಿರ್ಯಾದಿದಾರರ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರು ಸ್ಕೂಟರ್ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಹಣೆಯ, ಬಲಬದಿಗೆ, ಮೂಗಿಗೆ, ಬಲಕೈಗೆ  ಗಾಯ ಉಂಟಾದವರನ್ನು, ಕಾರಿನ ಚಾಲಕರು ಚಿಕಿತ್ಸೆಯ ಬಗ್ಗೆ  .ಜೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-12-2014 ರಂದು ಸಂಜೆ ವೇಳೆಗೆ ಪಿರ್ಯಾದಿದಾರರಾದ ಶ್ರೀ ಪವನ್ ರವರು ಕೆಲಸ ಮುಗಿಸಿ ಕಾವೂರಿಗೆ ಹೋಗಲು ಮಂಗಳೂರು ನಗರದ ಸ್ಟೇಟ್ಬ್ಯಾಂಕ್ಎಂಬಲ್ಲಿ ನಿಲ್ಲಿಸಿದ್ದ ರೂಟ್ನಂಬ್ರ 13(ಬಿ) ಬಸ್ನಂಬ್ರ ಕೆ.-19-ಬಿ-8931 ನೇದಕ್ಕೆ ಹತ್ತುತ್ತಿದ್ದಂತೆ, ಸದ್ರಿ ಬಸ್ನ ಚಾಲಕರು ಬಸ್ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಒಮ್ಮೆಲೆ ಚಲಾಯಿಸಿದ್ದು, ಪರಿಣಾಮ ಪಿರ್ಯಾದಿದಾರರು ಅಲ್ಲಿಯೇ ನಿಂತಿದ್ದ ಬಸ್ಗೆ ತಾಗಿ ರಸ್ತೆಗೆ ಬಿದ್ದು, ಎದೆಗೆ ಮತ್ತು ಬೆನ್ನಿಗೆ ಗುದ್ದಿದ ನಮೂನೆಯ ಗಾಯವಾದ್ದವರನ್ನು ಚಿಕಿತ್ಸೆಯ ಬಗ್ಗೆ  ವೆನ್ಲಾಕ್  ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಹೊರ-ರೋಗಿಯಾಗಿ ಚಿಕಿತ್ಸೆ ಪಡೆದು ನಂತರ  .ಜೆ. ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-12-2014 ರಂದು ರಾತ್ರಿ ಪಿರ್ಯಾದಿದಾರರಾದ ಶ್ರೀ ಸಚಿನ್ ರವರು ತಮ್ಮ ಬಾಬ್ತು ಸ್ಕೂಟರ್ನಂಬ್ರ ಕೆ.-19-.ಜೆ-8058 ನೇದರಲ್ಲಿ ಹೆಂಡತಿ ಶ್ರೀಮತಿ ಸಂಗೀತಾರವರನ್ನು ಕುಳ್ಳಿರಿಸಿಕೊಂಡು ಮನೆಗೆ ಬರಲು ಗಾಂಧಿನಗರ ಕಡೆಯಿಂದಾಗಿ ನೆಹರೂ ಅವೆನ್ಯೂ ರಸ್ತೆಯಲ್ಲಿ ಬರುತ್ತಾ ಗಾಂಧಿಪಾರ್ಕ್ಬಳಿಗೆ ಸಮಯ ರಾತ್ರಿ 8:45 ಗಂಟೆಗೆ ತಲುಪಿದಾಗ, ಗೋಕರ್ಣ ಕಾಲೇಜು ಕಡೆಯಿಂದ ಮೋಟಾರು ಸೈಕಲ್ನಂಬ್ರ ಕೆ.ಎಲ್‌-13-ಸಿ-8273 ನೇದನ್ನು ಅದರ ಸವಾರನುಹಿಂಬದಿ ಸಹ ಸವಾರನನ್ನು ಕುಳ್ಳಿರಿಸಿಕೊಂಡು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಹೆಂಡತಿಯು ಸ್ಕೂಟರ್ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಎಡ ಕೈಯ ಮೊಣಗಂಟಿಗೆ, ಬೆನ್ನಿಗೆ ಗಾಯ ಹಾಗೂ ಹೆಂಡತಿ ಸಂಗೀತಾಳ ತಲೆಗೆ, ಎರಡೂ ಕೈಗಳಿಗೆ, ಬಲಕಾಲಿಗೆ, ಬೆನ್ನಿಗೆ ಗಾಯವಾದ್ದವರನ್ನು ಚಿಕಿತ್ಸೆಯ ಬಗ್ಗೆ  ಯೆನೆಪೋಯಾ  ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಅಪಘಾತ ಉಂಟು ಮಾಡಿದ ಮೋಟಾರು ಸೈಕಲ್ಸವಾರ ಹಾಗೂ ಸಹಸವಾರರಿಗೂ ಗಾಯಗಳಾಗಿರುತ್ತದೆ.

 

4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24.12.2014 ರ ರಾತ್ರಿ 8:00 ಗಂಟೆಯಿಂದ ದಿನಾಂಕ 25.12.2014ರ ಬೆಳಿಗ್ಗೆ 5:30 ಗಂಟೆಯ ಮಧ್ಯೆ ಮಂಗಳೂರು ತಾಲೂಕು, ಮಂಜನಾಡಿ ಗ್ರಾಮದ ನಾಟೆಕಲ್ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ನೌಷಾದ್ ರವರ ಬಾಬ್ತು ಹಾಲಿನ ಬೂತ್ನ ಬಾಗಿಲನ್ನು ಯಾರೋ ಕಳ್ಳರು ತೆರೆದು ಒಳ ಪ್ರವೇಶಿಸಿ ಕ್ಯಾಶ್ಬ್ಯಾಗ್ನಲ್ಲಿದ್ದ ಸುಮಾರು ರೂ. 12,000/- ವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

5.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಥೋಮಸ್ ಡಿ'ಸೋಜಾ ರವರು ತನ್ನ ಬಾಬ್ತು ಹಿರೋ ಹೋಂಡಾ ಸ್ಪ್ಲೆಂಡರ್ಮೋಟಾರ್ಸೈಕಲ್ನಂಬ್ರ ಕೆಎ-20ಎಸ್‌-1999 ನ್ನು ದಿನಾಂಕ 24.12.2014 ರಂದು ಸಂಜೆ ಸುಮಾರು 06:30 ಗಂಟೆಗೆ ಬಂಟ್ವಾಳ ತಾಲೂಕು, ಬಾಳೆಪುಣಿ ಗ್ರಾಮದ, ಮುಡಿಪು ಜೋಸೆಫ್ವಾಝ್ಚರ್ಚಿನ ಕಂಪೌಂಡಿನ ಹೊಗಡೆ ನಿಲ್ಲಿಸಿದ್ದು, ರಾತ್ರಿ 9:30 ಗಂಟೆ ಬಂದು ನೋಡಿದಾಗ ಸದ್ರಿ ಮೋಟಾರ್ಸೈಕಲ್ಕಾಣೆಯಾಗಿದ್ದು, ಸದ್ರಿ ಮೋಟಾರ್ಸೈಕಲನ್ನು ಯಾರೋ ಕಳ್ಳರು ದಿನಾಂಕ 24.12.2014 ರಂದು 18:30 ಗಂಟೆಯಿಂದ 21:30 ಗಂಟೆಯ ಮಧ್ಯೆ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಮೋಟಾರ್ಸೈಕಲಿನ ಅಂದಾಜು ಮೌಲ್ಯ ರೂ 8,000/- ಆಗಬಹುದು.

 

6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:25.12.2014 ರಂದು ಪಿರ್ಯಾದಿದಾರರಾದ ಶ್ರೀ ಗಿರೀಶ್ ಅಮೀನ್ ಎಂಬುವರು  ಮೇರಿಹಿಲ್ನಲ್ಲಿರುವ ತನ್ನ ಬಾಬ್ತು ಅಂಗಡಿಯಿಂದ ವಿಕಾಸ ಕಾಲೇಜ್ಕಡೆಗೆ ಕೆಎ-19 ಸಿ-5995 ನೇ ಬಾಡಿಗೆ ಆಟೋ ರಿಕ್ಷದಲ್ಲಿ ಪ್ರಯಾಣಿಸುತ್ತಾ ಮಧ್ಯಾಹ್ನ ಸುಮಾರು  3;30 ಗಂಟೆಗೆ ಮಹಾಲಸ ವೈಭವ್ ಎಂಬ ಪ್ಲಾಟಿನ ಬಳಿ  ತಲುಪಿದಾಗ  ಹಿಂದಿನಿಂದ ಅಂದರೆ ಮೇರಿಹಿಲ್ಜಂಕ್ಷನ್ಕಡೆಯಿಂದ ವಿಕಾಸ್ಕಾಲೇಜ್ಕಡೆಗೆ ಕೆಎ-19 ಎಮ್ಡಿ-2140 ನೇ ಕಾರನ್ನು ಅದರ ಚಾಲಕರಾದ ಮೊಹಮ್ಮದ್ ಸುಹೈಲ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು  ಪ್ರಯಾಣಿಸುತ್ತಿದ್ದ ಆಟೋ ರಿಕ್ಷದ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕಾಲಿನ ಪಾದದ ಮೇಲ್ಭಾಗ ರಕ್ತಗಾಯ, ಹಾಗೂ  ಮೊಣಗಂಟಿಗೆ ತರಚಿದ ಗಾಯ ಅಲ್ಲದೇ ಬಲಕಾಲಿನ ಮೊಣಗಂಟಿಗೂ ಮತ್ತು ಬಲಕಾಲಿನ ಪಾದದ ಮೇಲ್ಭಾಗಕ್ಕೆ  ತರಚಿದ ಗಾಯವಾಗಿದ್ದು ಅಲ್ಲದೇ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ರಿಕ್ಷಾದ ಚಾಲಕರಾದ ಮೋಹನ್ಎಂಬವರ ಎಡಕೈಗೆ ಗುದ್ದಿದ ನೋವು ಉಂಟಾಗಿರುವುದಾಗಿದೆ.

 

No comments:

Post a Comment