Tuesday, December 16, 2014

Daily Crime Report: 16-12-2014

ದಿನಾಂಕ 16.12.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

8

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-12-2014  ರಂದು ಪಿರ್ಯಾದಿದಾರರಾದ ಶ್ರೀ ಪುರುಷೋತ್ತಮ ರವರು ತನ್ನ ಪರಿಚಯದ ಪ್ರಸನ್ನ ಕುಟಿನೊ ಎಂಬುವರು ತನ್ನ  ಬಾಬ್ತು ಕೆಎ-19- ಹೆಚ್ – 4358  ಬೈಕಿನಲ್ಲಿ ಸವಾರರಾಗಿ ಪಿರ್ಯಾದಿದಾರರು ಸಹ ಸವಾರರಾಗಿ ಗಣೇಶಪುರ ಕೈ ಕಂಬದಿಂದ ಕೃಷ್ಣಾಪುರ ರಸ್ತೆಯಲ್ಲಿ ಚಲಾಯಿಸಿಕೊಂಡು ಸಂಜೆ 05-30 ಗಂಟೆಗೆ ನಿತ್ಯಾನಂದ ಭಜನಾ ಮಂದಿರ ಬಳಿ ರಸ್ತೆಗೆ ಅಳವಡಿಸಿದ ಹಂಪ್ಸ್   ಮೇಲೆ  ಒಮ್ಮಲೇ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿದ ಪರಿಣಾಮ ಹಿಂದೆ ಕುಳಿತ ಪಿರ್ಯಾದಿದಾರರು ತನ್ನ ನಿಯಂತ್ರಣ ತಪ್ಪಿ ಬೈಕಿನಿಂದ ಜಾರಿ ರಸ್ತೆಗೆ ಬಿದ್ದ ಪರಿಣಾಮ ಎಡ ಕಾಲಿನ ಮೂಳೆ ಮುರಿತದ ರಕ್ತ ಗಾಯವಾಗಿ ಬಾಯಿಯಲ್ಲಿನ ಮುಂದಿನ ಹಲ್ಲು (ಬಾಚೆ ಹಲ್ಲು) ಬಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರು ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿಯಾಧಿದಾರರಾದ ಶ್ರೀಮತಿ ನಗವೇಣಿ ಎಂಬವರ ತಾಯಿ ಶ್ರೀಮತಿ ಕಮಲ ಪ್ರಾಯ 85 ವರ್ಷ ಎಂಬವರು ದಿನಾಂಕ 12-12-2014 ರಂದು ಬೆಳಿಗ್ಗೆ 09:00 ಗಂಟೆಗೆ ಪಿರ್ಯಾಧಿದಾರರ ಮನೆಯಾದ ಮಂಗಳೂರು ನಗರದ ಅಶೋಕನಗರ, ಸುಂಕದಕಟ್ಟೆಯ ಸುಷ್ಮ ನಿಲಯ ಎಂಬಲ್ಲಿಂದ ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

 

3.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ರಾಘವೇಂದ್ರ ಹೊಳ್ಳ ರವರು ಮಂಗಳೂರು ವಿಶೇಷ ಆರ್ಥಿಕ ವಲಯದ ಆಡಳಿತ ವ್ಯವಸ್ಥಾಪಕರಾಗಿದ್ದು, ತೋಕೂರು ಹಾಗೂ ಆಸುಪಾಸಿನ ಗ್ರಾಮಗಳಲ್ಲಿ ಜಮೀನು  ಭೂಸ್ವಾಧೀನಗೊಂಡು ಅದನ್ಹು ಎಂಎಸ್ಇಝೆಡ್ಗೆ ಹಸ್ತಾಂತರಿಸಿದ್ದು ಇದರಲ್ಲಿ  ಭಾರತ ಸರಕಾರಕ್ಕೆ ಸೇರಿದ ISPRL, OMPL  ಮತ್ತು JBF ಹಾಗೂ ಇತರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು ಇಲ್ಲಿ ಪಿರ್ಯಾದಿದಾರರು ಕಾಮಗಾರಿಗಳನ್ನು ನಡೆಸುತ್ತಿದ್ದು, ದಿನಾಂಕ. 15-12-2014 ರಂದು ತೋಕೂರು ಗ್ರಾಮದ MRPL (III Phase) ಗೇಟಿನ  ಹತ್ತಿರ  ಕಾಮಗಾರಿ ನಡೆಯುತ್ತಿದ್ದ ವೇಳೆ ಸಮಯ ಸುಮಾರು ಬೆಳಿಗ್ಗೆ 11-30 ಗಂಟೆಗೆ ಆರೋಪಿಗಳಾದ ಬಾವ ಯಾನೆ ಮುಡಿಬಾವ, ಫಕ್ರುದ್ದೀನ್ ಬಿನ್ ಅಹಮ್ಮದ್ ಬ್ಯಾರಿ HPCL, ಹಸನ್ ಶರೀಫ್, ವಿಜಯಾನಂದ ರಾವ್ ಮತ್ತು ಇತರ 30 ಜನರ ಗುಂಪು ಅಕ್ರಮ ಕೂಟ ಸೇರಿ, ಸಮಾನ ಉದ್ದೇಶಿತರಾಗಿ ದೊಣ್ಣೆಗಳೊಂದಿಗೆ ಬಂದು ಕೆಲಸ ಕಾರ್ಯ ನಡೆಯುವ ಸ್ಥಳಕ್ಕೆ  ಅಕ್ರಮ ಪ್ರವೇಶ ಮಾಡಿ ಕೆಲಸ ಕಾರ್ಯಗಳನ್ನು ತಡೆ ಉಂಟು ಮಾಡಿರುವುದಲ್ಲದೇ ಕಾರ್ಮಿಕರಿಗೆ  ಕೆಲಸ ಮಾಡಿದ್ದಲ್ಲಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ನೀಡಿರುತ್ತಾರೆ.

 

4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-12-2014 ರಂದು ಸಂಜೆ ಸುಮಾರು 6-00 ಗಂಟೆ ಸಮಯಕ್ಕೆ ಮಂಗಳೂರು ನಗರದ ನಂತೂರು ಜಂಕ್ಷನ್ ಬಳಿ ಪಿರ್ಯಾದುದಾರರಾದ ಶ್ರೀ ಶೈಲೇಶ್ ಅಡಕ ರವರು ಸರಕಾರಿ ಕಾರು ನಂ. ಕೆಎ-50-ಜಿ.-1177 ನೇದನ್ನು ಕೆ.ಪಿ.ಟಿ ಕಡೆಯಿಂದ ಬಂಟ್ವಾಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕೆಎ-19-ಬಿ-5067 ನಂಬ್ರದ ಲಾರಿಯನ್ನು ಅದರ ಚಾಲಕ ಕೆ.ಪಿ.ಟಿ ಕಡೆಯಿಂದ ನಂತೂರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಢು ಬಂದು ಫಿರ್ಯಾದುದಾರರು ಚಲಾಯಿಸುತ್ತಿದ್ದ ಕೆಎ-50--1177 ನಂಬ್ರದ ಕಾರಿಗೆ ಬಲಬದಿಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರ ಕಾರಿನ ಬಲಭಾಗದ ಎದುರಿನ ಬಾಗಿಲು ಮತ್ತು ಬಲಸೈಡ್ ಮಿರರ್ ಹಾಗೂ ಬಲಬದಿ ಫುಟ್ ರೆಸ್ಟ್ ಇತ್ಯಾದಿ ಜಖಂಗೊಂಡಿರುತ್ತದೆ.

 

5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-12-2014 ರಂದು ಮದ್ಯಾಹ್ನ ಸುಮಾರು 2-30 ಗಂಟೆ ಸಮಯಕ್ಕೆ ಮಂಗಳೂರು ನಗರದ ಮಲ್ಲಿಕಟ್ಟೆ ಲಯನ್ಸ್ ಕ್ಲಬ್ ಎದುರುಗಡೆ ರಸ್ತೆಯಲ್ಲಿ ಪಿರ್ಯಾದುದಾರರಾದ ಶ್ರೀ ಪ್ರಕಾಶ್ ಶೆಟ್ಟಿ ರವರು ಕೆಎ-19-ಎಂ.-2194 ನಂಬ್ರದ ಕಾರನ್ನು ನಂತೂರು ಕಡೆಯಿಂದ ಮಲ್ಲಿಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮಲ್ಲಿಕಟ್ಟೆ ಬಸ್ಸು ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎ-19-ಎಎ-7141 ನಂಬ್ರದ ಬಸ್ಸನ್ನು ಅದರ ಚಾಲಕ ನಿರ್ಲಕ್ಷತನದಿಂದ ಒಮ್ಮೆಲೇ ಏಕಾಏಕಿ ರಸ್ತೆಯ ಬಲಭಾಗಕ್ಕೆ ಚಲಾಯಿಸಿ ಪಿರ್ಯಾದುದಾರರ ಕಾರಿನ ಎಡಬದಿಗೆ ಢಿಕ್ಕಿಪಡಿಸಿದರ ಪರಿಣಾಮ ಕಾರಿನ ಎಡಬದಿ ಸಂಪೂರ್ಣ ಜಖಂಗೊಂಡಿರುತ್ತದೆ.

 

6.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15/12/2014 ರಂದು ಸಮಯ ಸುಮಾರು ಬೇಳಗ್ಗೆ 11:30 ಗಂಟೆಗೆ ಪಿರ್ಯಾದುದಾರರಾದ ಶ್ರೀ ರಫೀಕ್ ಅಹಮ್ಮದ್ ರವರು ಬೆಂದೂರವೆಲ್ ತೆರೆಸಾ ಶಾಲೆಯ ಬಳಿ ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಕೆ 19 ಡಿ 3335 ನಂಬ್ರದ ಬಸ್ಸನ್ನು ಅದರ ಚಾಲಕ ಮಲ್ಲಕಟ್ಟೆ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾದರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದುದಾರರು ಕಾಂಕ್ರಿಟ್ ರಸ್ತೆಗೆ ಬಿದ್ದು ತಲೆಗೆ ರಕ್ತ ಗಾಯ ಹಾಗೂ ಎಡ ಕೈ ಭುಜ ಕ್ಕೆ ಮತ್ತು ಕುತ್ತಿಗೆಗೆ ಗುದ್ದಿದ ನೋವು ಉಂಟಾಗಿ ಗಾಯಾಳು ಎಸ್ ಸಿ ಎಸ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

 

7.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14/12/2014 ರಂದು ಮದ್ಯಾಹ್ನ ಸುಮಾರು 15:20 ಗಂಟೆಗೆ ಮಂಗಳೂರು ನಗರದ ನಂತೂರು ಬಳಿ ಕಾಮಧೇನು ಗ್ಯಾಸನ ಎದುರು ಫಿರ್ಯಾದುದಾರರಾದ ಶ್ರೀ ಹನುಮಂತ ರವರು ಕೆಎ-19-ಎಸ್-633 ನಂಬ್ರದ ಸ್ಕೂಟರ್‌‌‌‌ನಲ್ಲಿ ತನ್ನ ಪತ್ನಿ ಹೇಮಾವತಿ ಮತ್ತು ಮಗ ರಾಜುನನ್ನು ಕುಳ್ಳಿರಿಸಿಕೊಂಡು ಹಂಪನಕಟ್ಟೆ ಕಡೆಯಿಂದ ವಾಮಂಜೂರು ಕಡೆಗೆ ಹೋಗುತ್ತಿದ್ದಾಗ ಮಲ್ಲಿಕಟ್ಟೆ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಸ್ಕೂಟರನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದುದಾರರ ಬಲಕಾಲಿನ ಮೊಣಗಂಟಿಗೆ ಎಡಕೈ ತಟ್ಟಿಗೆ, ಮುಖಕ್ಕೆ ತರಚಿದ ಗಾಯವಾಗಿದ್ದು ಹಾಗೂ ಫಿರ್ಯಾದುದಾರರ ಹೆಂಡತಿ ಹೆಮಾವತಿರವರಿಗೆ ಎಡ ಭುಜ ಹಾಗೂ ಬಲಭುಜಕ್ಕೆ ಚರ್ಮ ಕಿತ್ತು ಹೋದ ಗಾಯ ಮತ್ತು ತಲೆಗೆ ರಕ್ತ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ನೋವು ಉಂಟಾಗಿರುತ್ತದೆ, ಫಿರ್ಯಾದುದಾರರ ಮಗ ರಾಜು ಎಂಬಾತನಿಗೆ  ಮುಖಕ್ಕೆ, ಬೆನ್ನಿಗೆ, ತಲೆಗೆ, ಕೈ ಕಾಲುಗಳಿಗೆ ರಕ್ತಗಾಯವಾಗಿರುತ್ತದೆ.  ಅಪಘಾತಪಡಿಸಿದ ಬಳಿಕ ಆರೋಪಿಯು ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ.

 

8.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15/12/2014 ರಂದು 10-15 ಗಂಟೆಗೆ ಫಿರ್ಯಾಧಿರಾರರಾದ ಶ್ರೀ ಅಬ್ದುಲ್ ಹಮೀದ್ ರವರು ಅವರ ಬಾಬ್ತು KA-19-D-4340 ನೇ ಟಾಟಾ ಏಸ್ಟೆಂಪೋವನ್ನು ಮೂಡಬಿದ್ರೆಯಿಂದ ಮಾರೂರು ಕಡೆಗೆ ಪ್ರಾಂತ್ಯ ಗ್ರಾಮದ ಕೋರ್ಟ್ ನ ಬಳಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಹಿಂದಿನಿಂದ KA-19-C-6626 ನೇ ಟೆಂಪೋವನ್ನು ಅದರ ಚಾಲಕ ಜಲೀಲ್ಎಂಬಾತನು ಅತೀವೇಗ ಹಾಗೂ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಫಿರ್ಯಾದಿಯ ಟೆಂಪೋವನ್ನು ಓವರ್ ಟೇಕ್ ಮಾಡಿ ರಸ್ತೆಯ ಬಲಬದಿಗೆ ಚಲಾಯಿಸಿ ಎದುರಿನಿಂದ ಮೂಡಬಿದ್ರಿ ಕಡೆಗೆ ಬರುತ್ತಿದ್ದ ಕೆಎ-19-ಈಎಂ-2470ನೇ ಮೋಟಾರ್ಸೈಕಲಿಗೆ ಢಿಕ್ಕಿ ಮಾಡಿ ನಂತರ ಒಮ್ಮೆಲೇ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿ ಫಿರ್ಯಾದಿದಾರರ ಕೆಎ-19-ಡಿ-4340ನೇ ಟಾಟಾ ಏಸ್ ಎದುರು ಬಲ ಬದಿಗೆ ಢಿಕ್ಕಿ ಮಾಡಿ ಸ್ಥಳದಿಂದ ಪರಾರಿಯಾಗಿದ್ದು ಅಪಘಾತದಿಂದ ಯಾರಿಗೂ ಗಾಯವಾಗಿರುವುದಿಲ್ಲ.

 

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-12-2014 ರಂದು ಪಿರ್ಯಾದುದಾರರಾದ ಶ್ರೀ ಯೋಗೀಶ್ ರವರು ಪಾಸ್ಪೊರ್ಟ್ಮಾಡಲು ಪಯ್ಯನ್ನೂರಿಗೆ ಹೋಗಿ ವಾಪಾಸು ಬಂದ್ಯೋಡಿಗೆ ಬಂದು ತನ್ನ ಬಾಬ್ತು ಕೆಎಲ್‌-14-ಪಿ-6495 ನೇದರಲ್ಲಿ ಸಹಸವಾರ ಪುಷ್ಪರಾಜ್ನೊಂದಿಗೆ ಮಂಗಳೂರಿಗೆ ಬರುತ್ತಿರುವಾಗ ಮದ್ಯಾಹ್ನ 01-45 ಗಂಟೆಯ ವೇಳೆಗೆ ಕೊಲ್ಯ ನಾರಾಯಣ ಗುರು ಮಂದಿರದ ಬಳಿ ಕೆಎ-19-ಇಡಿ-1173ನೇ ಮೋಟಾರ್ಸೈಕಲ್ಸವಾರನು ಪಿರ್ಯಾದುದಾರರ ಮೊಟಾರ್ಸೈಕಲ್ಗೆ ಅತೀ ವೇಗದಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ಸೈಕಲ್ಸಮೇತ ರಸ್ತೆಗೆ ಬಿದ್ದು ಹಣೆ, ಮೂಗು, ಮೇಲ್ತುಟಿ, ಬಲ ಹೆಬ್ಬೆರಳಿಗೆ ರಕ್ತಗಾಯವಾಗಿದ್ದು ಅಪಘಾತಕ್ಕೆ ಕೆಎ-19-ಇಡಿ-1173ನೇ ಮೊಟಾರ್ಸೈಕಲ್ಸವಾರ ಆದರ್ಶ ಎಂಬುವವನ ಅತೀವೇಗ ಹಾಗೂ ಅಜಾಗರೂಕತರೆಯಿಂದ ಮೊಟಾರ್ಸೈಕಲ್ಚಲಾಯಿಸಿದ್ದೆ ಕಾರಣವಾಗಿದೆ.

 

10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-12-2014 ರಂದು ಪಿರ್ಯಾದುದಾರರಾದ ಶ್ರೀಮತಿ ತೆರಜಾ ಡಿ'ಸೋಜಾ ರವರು ಹೋಲಿಹಿಲ್ಚರ್ಚ್ಗೆ ಹೋಗಿ ವಾಪಾಸು ಸೊಸೆ ಅನಿತಾರೊಂದಿಗೆ ಮನೆಗೆ ಬರುತ್ತಿದ್ದಾಗ ಪಂಡಿತ್ಹೌಸ್ಎಂಬಲ್ಲಿ ಸಮಯ ಸುಮಾರು ರಾತ್ರಿ 07-30 ಗಂಟೆಗೆ ಬಸ್ಸಿನಿಂದ ಇಳಿದು ನಡೆದುಕೊಂಡು ರಸ್ತೆಯ ಎಡಬದಿಯಲ್ಲಿ ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ಕುತ್ತಾರ್ಕಡೆಯಿಂದ ಓರ್ವ ಮೋಟಾರ್ಸೈಕಲ್ಸವಾರನು ಅವನ ಬಾಬ್ತು ಮೊಟಾರ್ಸೈಕಲ್ನಂಬ್ರ ಕೆಎ-19-ವಿ-2185ನೇ ದನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಎಡಕೆನ್ನೆಗೆ ರಕ್ತಗಾಯ, ಎಡಕೈ, ತಲೆಗೆ ಗುದ್ದಿದ, ಮೈಗೆ ಗುದ್ದಿದ ಗಾಯವಾಗಿರುತ್ತದೆ ನಂತರ ಚಿಕಿತ್ಸೆಯ ಬಗ್ಗೆ ಸೊಸೆ ಅನಿತಾರವರು ನೇತಾಜಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ನಂತರ ಯೆನೆಪೊಯಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಅಪಘಾತಕ್ಕೆ ಕೆಎ-19-ವಿ-2185 ನೇದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತನದಿಂದ ಚಲಾಯಿಸಿದ್ದೆ ಕಾರಣವಾಗಿರುತ್ತದೆ.

No comments:

Post a Comment