Wednesday, December 31, 2014

Daily Crime Report : 31-12-2014

ದಿನಾಂಕ 31.12.201412:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

6

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-12-14ರಂದು ಪ್ರಕರಣದ ಪಿರ್ಯಾಧಿದಾರರಾದ ಶ್ರೀ ಗಣೇಶ್ ಪೂಜಾರಿ ರವರು ಬೆಳಿಗ್ಗೆ ಮನೆಯಿಂದ ಬಪ್ಪನಾಡಿಗೆ ಹೋಗುವರೇ ಮೋಟಾರು ಸೈಕಲು ನಂಬ್ರ  ಕೆಎ-19-ಇಜೆ-6368ನೇದರಲ್ಲಿ ಹೊರಟು ಮೂಲ್ಕಿ ಜಂಕ್ಷನ್ ಗೆ ತಲುಪಿದಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆಎ-20-ಬಿ-1947 ನಂಬ್ರದ ಟ್ಯಾಂಕರನ್ನು ಅದರ ಚಾಲಕ ಕೇಶನ ನಾಯಕ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದ್ರಿಯವರು ರಸ್ತೆಗೆ ಬಿದ್ದು, ಬಲ ಕಾಲಿಗೆ  ಮೂಳೆ ಮುರಿತದ ಗಾಯವಾಗಿ ಬಲ ಕೈಗೆ ತರಚಿದ ಗಾಯವಾಗಿದ್ದು, ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ರುತ್ತಾರೆ.

 

2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಘುರಾಮ ರಾವ್ ಕೆ. ರವರು ಅವರ ಹೆಂಡತಿ ಬಾಬ್ತು ಕಾರು ನಂಬ್ರ ಕೆ. 19 ಎಂ. 6731 ನೇದರಲ್ಲಿ ದಿನಾಂಕ 30-12-2014 ರಂದು ಬೆಳಿಗ್ಗೆ 08-15 ಗಂಟೆಗೆ ದೇರೆಬೈಲು ಅವರ ಮನೆಯಿಂದ ಅದ್ಯಪಾಡಿ ಕಡೆಗೆ ಹೊಗುತ್ತಿದ್ದಾಗ ಬೆಳಿಗ್ಗೆ 8-30 ಗಂಟೆ ಸಮಯಕ್ಕೆ ಮರವೂರು ಸೇತುವೆ ಬಳಿ ತಲುಪುತ್ತಿದ್ದಂತೆ ಎದುರಿನಿಂದ ಕೆ.. 20 ಪಿ. 7453 ನೇ ಮಾರುತಿ ಶಿಫ್ಟ್ ಕಾರು ಚಾಲಕ ಸದ್ರಿ ಕಾರನ್ನು ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿ ಚಾಲಾಯಿಸುತ್ತಿದ್ದ ವಾಹನಕ್ಕೆ ಎದುರಿನಿಂದ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರ ವಾಹನ ಜಖಂಗೊಂಡು ಪಿರ್ಯಾದಿದಾರರಿಗೆ ತೀರ್ವ ತರಹದ ಗಾಯವಾಗಿರುವುದಾಗಿ, ಬಗ್ಗೆ ಮಂಗಳಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29.12.2014 ರಂದು ಪಿರ್ಯಾದಿದಾರರಾದ ಶ್ರೀ ಮಹೇಶ್ ರವರು ಮಂಗಳೂರು ನಗರದ  ಸರ್ವಿಸ್ ಬಸ್ಸು ನಿಲ್ದಾಣದಿಂದ  ಹಂಪನಕಟ್ಟೆ ಕಡೆಗೆ ಹೋಗುವ ಮುಖ್ಯ ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವ ಸಮಯ  ಮಧ್ಯಾಹ್ನ 15.30 ಗಂಟೆ ಸಮಯಕ್ಕೆ ಆರೋಪಿ ನಂಬ್ರ ತಿಳಿಯದ ಬಸ್ಸನ್ನು ಅದರ ಚಾಲಕ  ಸಾರ್ವಜನಿಕ ಕಾಂಕ್ರೀಟು ರಸ್ತೆಯಾದ  ರಾವ್ & ರಾವ್ -  ಹಂಪನಕಟ್ಟೆ ರಸ್ತೆಯಲ್ಲಿ   ತೀರಾ ಎಡ ಬದಿಯಲ್ಲಿ ಅತೀವೇಗ ಹಾಗೂ ಅಜಾಗರುಕತೆಯಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಲ ಕಾಲಿನ ಪಾದದ ಮೇಲೆ ಚಲಾಯಿಸಿಕೊಂಡು ಹೋದ ಪರಿಣಾಮ  ಗಂಭೀರ  ತರಹದ ಗಾಯವಾಗಿ  ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.  ಅಪಘಾತ ನಡೆದ ಬಳಿಕ ಆರೋಪಿ ಬಸ್ಸು ಚಾಲಕ  ಬಸ್ಸು ಸಮೇತ  ಸ್ಥಳದಿಂದ ಪರಾರಿಯಾಗಿರುವುದಾಗಿದೆ.

 

4.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-12-2014 ರಂದು ಪಿರ್ಯಾದುದಾರರಾದ ಶ್ರೀ ನಿತಿನ್ ಕುಲಾಲ್ ರವರು ರಾತ್ರಿ ಕೊಟ್ಟಾರ ಚೌಕಿ ಜಲ್ಲಿಗುಡ್ಡೆಯಲ್ಲಿರುವ ತನ್ನ ಸ್ನೇಹಿತ ಸಂತೋಷನ ಮದುವೆ ಕಾರ್ಯಕ್ರಮದ ಬಗ್ಗೆ ಹೋಗಿ ಕಾರ್ಯಕ್ರಮ ಮುಗಿಸಿ ತನ್ನ ಮನೆಗೆ ಹೋಗುವರೆ ಕೊಟ್ಟಾರಚೌಕಿ ಕಡೆಗೆ ನಡೆದುಕೊಂಡು ಬರುತ್ತಾ, ರಾತ್ರಿ ಸುಮಾರು 10-30 ಗಂಟೆಗೆ ಕೊಟ್ಟಾರಚೌಕಿಯ ಬಜಾಜ್ ಶೋರೂಮ್ನ ಬಳಿ ತಲುಪುತ್ತಿದ್ದಂತೆಯೇ ಪಿರ್ಯಾದುದಾರರ ಪರಿಚಯದ ಮಿಥುನ್, ರೀತು ನೆಕ್ಕಿಲಗುಡ್ಡೆ, ರಕ್ಷಿತ್ ಚಿಲಿಂಬಿ, ಲತೇಶ್ ಚಿಲಿಂಬಿ ರವರು ಮೋಟಾರು ಸೈಕಲ್ ನಲ್ಲಿ ಬಂದು ಫಿರ್ಯಾಧುದಾರರನ್ನು ತಡೆದು ನಿಲ್ಲಿಸಿ, ಅವರ ಕೈಯಲ್ಲಿದ್ದ ಬಿಯರ್ ಬಾಟ್ಲಿಯಿಂದ ಫಿರ್ಯಾಧುದಾರರಿಗೆ ಹೊಡೆದಿದ್ದಲ್ಲದೆ, ಅವರೆಲ್ಲಾ ಸೇರಿ ಕೈಯಿಂದ ಹೊಡೆದು, ಕಾಲಿನಿಂದ ತುಳಿದ ಪರಿಣಾಮ ಫಿರ್ಯಾಧುದಾರರ ತಲೆಗೆ, ಬಲಕಣ್ಣಿನ ಮೇಲೆ ಹಣೆಯಲ್ಲಿ, ಎಡಮೂಗಿಗೆ, ಎಡಕಿವಿಗೆ, ಎಡಕೆನ್ನೆಯ ಬಳಿ, ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ .ಜೆ.ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24-12-2014 ರಂದು ರಾತ್ರಿ ಸಮಯ ಸುಮಾರು 22-00 ಗಂಟೆಗೆ ಪಿರ್ಯಾದಿದಾರರಾದ ಸುಭಾಷ್ ಚಂದ್ರ ಪುರಾಣೀಕ್ ರವರು ಮಂಗಳೂರು ನಗರದ ಕದ್ರಿ ರಸ್ತೆಯಲ್ಲಿರುವ ಕೆ.ಎನ್.ಎಸ್ ಅಡಿಗ ಸ್ಮಾರಕ ಭವನದಲ್ಲಿರುವ ತನ್ನ ವಾಸದ ಫ್ಲಾಟ್ ನಂಬ್ರ; 101ನೇ ಫ್ಲಾಟ್ ಗೆ ಬೀಗ ಹಾಕಿ ಬೆಂಗಳೂರು ಮುಖಾಂತರ ಮಂತ್ರಾಲಯಕ್ಕೆ ತೆರಳಿದ್ದು, ದಿನಾಂಕ: 28-12-2014ರಂದು ಮಧ್ಯಾಹ್ನ ಸಮಯ ಸುಮಾರು 13-30 ಗಂಟೆಗೆ ತಾನು ಮಂತ್ರಾಲಯದಲ್ಲಿದ್ದ ಸಮಯ ತಮ್ಮ ಅಪಾರ್ಟಮೆಂಟಿನ ವಾಚ್ ಮ್ಯಾನ್ ರವಿ ಎಂಬವರು ಕರೆ ಮಾಡಿ ನಮ್ಮ ಮನೆಯ ಎದುರಿನ ಬಾಗಿಲು ತೆರದುಕೊಂಡಿರುವ ಬಗ್ಗೆ ತಿಳಿಸಿದ್ದು, ದಿನಾಂಕ: 29-12-2014 ಮಂತ್ರಾಲಯದಿಂದ ವಾಪಾಸಾಗಿದ್ದು, ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ಮನೆಯ ಬಾಗಿಲಿನ ಇನ್ನರ್ ಲಾಕ್ ನ್ನು ಮುರಿದು ತೆರೆದು ಒಳಪ್ರವೇಶಿಸಿರುವುದನ್ನು ಕಂಡು ಮನೆಯೊಳಗೆ ಪ್ರವೇಶಿಸಿ ಪರಿಶೀಲಿಸಿ ನೋಡಲಾಗಿ ಒಳಪ್ರವೇಶಿಸಿದ ಕಳ್ಳರು ಮನೆಯ ಒಳಗಿದ್ದ ಕಪಾಟನ್ನು ಕೂಡಾ ಮೀಟಿ ತೆರೆದು ಅದರೊಳಗಿದ್ದ ಸುಮಾರು 11 ಗ್ರಾಂ ತೂಕದ ಚಿನ್ನಾಭರಣ, ಸುಮಾರು 45,000/-ರೂ ಬೆಲೆ ಬಾಳುವ ಬೆಳ್ಳಿಯ ಸಾಮಾಗ್ರಿಗಳು ಹಾಗೂ ನಗದು ಹಣ ರೂ.8,000/- ಹೀಗೆ ಒಟ್ಟು 87,000/- ರೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಪಿರ್ಯಾದಿದಾರರು ಸದ್ರಿ ಕಳ್ಳತನ ನಡೆದ ಸಮಯ ಮಂತ್ರಾಲಯಕ್ಕೆ ತೆರಳಿದ್ದು, ದಿನಾಂಕ: 29-12-2014ರಂದು ಮನೆಗೆ ವಾಪಾಸಾಗಿದ್ದು ಕಳವಾದ ಸೊತ್ತುಗಳನ್ನು ತನ್ನ ಪತ್ನಿಯಲ್ಲಿ ಚರ್ಚಿಸಿ ಖಚಿತಪಡಿಸಿಕೊಂಡು ಠಾಣೆಗೆ ಬಂದು ದೂರು ನೀಡಿರುವುದಾಗಿದೆ.

 

6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.12.2014 ರಂದು 15.30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸುಮಾ ರವರು, ಮಕ್ಕಳು ಹಾಗೂ ಇತರರೊಂದಿಗೆ ಕಾರ್ಕಳದಿಂದ ಬೆಳ್ತಂಗಡಿಗೆ ಕಾರ್ಯಕ್ರಮ ಮುಗಿಸಿಕೊಂಡು ಓಮ್ನಿ ಕಾರು ನಂಬ್ರ: KA-21N-3272  ರಲ್ಲಿ ಬರುತ್ತಾ, ನೆಲ್ಲಿಕ್ಕಾರು ಚರ್ಚ್ ನಿಂದ ಸ್ವಲ್ಪ ಮುಂದೆ ಹೋಗುತ್ತಿರುವ ಸಮಯ ಕಾರ್ಕಳ ಕಡೆಯಿಂದ ಹೊಸ್ಮಾರು ಕಡೆಗೆ ಬರುತ್ತಿದ್ದ ತುಫಾನ್ ಜೀಪು ನಂಬ್ರ: KA-20 C-5939 ನೇ ದರ ಚಾಲಕ ಮಧುಕುಮಾರ್ ಎಂಬವರು ವಾಹನವನ್ನು ಅತೀವೇಗ ಹಾಗೂ ನಿರ್ಲಕ್ಷ ತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸಂಚರಿಸುತ್ತಿದ್ದ ಓಮ್ನಿ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ ಎಡಕೋಲುಕಾಲಿಗೆ ಗಾಯವಾಗಿದ್ದು, ಪಿರ್ಯಾದಿಯ ಮಗಳು ಸುಶ್ಮಿತಾಳಿಗೆ ತಲೆಗೆ ಗುದ್ದಿದ ಗಾಯ , ಪಿರ್ಯಾದಿಯ ಮಗ ಸುಮಂತ್ ಎಂಬವನಿಗೆ ಎಡಕಾಲಿನ ತೊಡೆಗೆ ಗುದ್ದಿದ ಗಾಯವಾಗಿದ್ದು, ಅಲ್ಲದೆ ಪಿರ್ಯಾದಿದಾರರ ತಂದೆ ಮತ್ತು ಮಾವನಿಗೆ ಕೂಡಾ ಗುದ್ದಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಸುಮಂತ್ ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.

 

7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22.12.2014 ರಂದು 9.15 ಗಂಟೆಗೆ ಮಂಗಳೂರು ತಾಲೂಕು ಪಡುಕೋಣಾಜೆ ಗ್ರಾಮದ ಸೇನರ ಅಂಗಡಿ ಬಳಿಯಲ್ಲಿ ಆರೋಪಿ ಅಶೋಕ್ ಕುಮಾರನು ಮೂಡಬಿದ್ರೆಯಿಂದ ಶಿರ್ತಾಡಿ ಕಡೆಗೆ KA-19-EM-6631 ನೇ ಸ್ಕೋಟರ್  ನಲ್ಲಿ ಸುಜಯ ಎಂಬಾಕೆಯನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಸ್ಕೂಡರ್ ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು  ಸಹ ಸವಾರಳಾದ ಶ್ರೀಮತಿ ಸುಜಯರವರ ತಲೆಗೆ ಗುದ್ದಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ತಂದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

8.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಚಂದ್ರಹಾಸ್ ರವರು ಕೂಲಿಕೆಲಸ ಮಾಡಿಕೊಂಡಿದ್ದು, ದಿನಾಂಕ 26-12-2014 ರಂದು ಮಂಗಳೂರಿನ ಜ್ಯೋತಿ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ತನ್ನ ಅಣ್ಣನನ್ನು ನೋಡಲು ಬಂದಿದ್ದು, ಬಳಿಕ ಅದೇ ದಿನ ಮಧ್ಯಾಹ್ನ ಸುಮಾರು 2:00 ಗಂಟೆಗೆ ತನ್ನ ಕೆಎಲ್-59-ಬಿ-2163 ನೇ ಬಜಾಜ್ ಪಲ್ಸರ್ ಮೋಟಾರ್ ಸೈಕಲನ್ನು  ಮಂಗಳೂರಿನ ಜ್ಯೋತಿ ಕೆಎಂಸಿ ಆಸ್ಪತ್ರೆಯ ಹೊರವಲಯದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದು, ಬಳಿಕ ದಿನಾಂಕ 29-12-2014 ರಂದು ಬೆಳಿಗ್ಗೆ 9:00 ಗಂಟೆಗೆ ತನ್ನ ಮೋಟಾರ್ ಸೈಕಲ್ ಪಾರ್ಕು ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ ತನ್ನ ಕೆಎಲ್-59-ಬಿ-2163 ನೇ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ಸ್ಥಳದಲ್ಲಿ ಇಲ್ಲದೇ ಇದ್ದು, ಬಳಿಕ ಸುತ್ತಮುತ್ತಲು ಹುಡುಕಾಡಿದಲ್ಲಿ ಎಲ್ಲಿಯೂ ಕಂಡುಬಂದಿರುವುದಿಲ್ಲ. ತನ್ನ ಬೈಕನ್ನು ಯಾರೋ ಕಳ್ಳರು ದಿನಾಂಕ 26-12-2014 ರಂದು ಮಧ್ಯಾಹ್ನ ಸುಮಾರು 2:00 ಗಂಟೆಯಿಂದ ದಿನಾಂಕ 29-12-2014 ರಂದು ಬೆಳಿಗ್ಗೆ 9:00 ಗಂಟೆ ಮಧ್ಯೆ ಕಳವು ಮಾಡಿದ್ದು, ಕಳವಾದ ಮೋಟಾರ್ ಸೈಕಲಿನ ಅಂದಾಜು ಮೌಲ್ಯ ರೂ.45,000/- ಆಗಿರುತ್ತದೆ.  ಕಳವಾದ ಮೋಟಾರ್ ಸೈಕಲಿನ ವಿವರ : REG NO: KL 59-B-2163, CHASSIS NO MD2DHDH2ZSCD25457, ENGINE NO. DHGBSD21034

 

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಯಾರೋ ಅಪರಿಚಿತ ಆರೋಪಿಯು ಪಿರ್ಯಾದಿದಾರರಾದ ಶ್ರೀ ರಾಘವ ಎಸ್. ಉಚ್ಚಿಲ್ ರವರ ಹೆಸರಿನ IDಯಲ್ಲಿ ಫೇಸ್ ಬುಕ್ ಅಕೌಂಟ್ನ್ನು ತೆರೆದು 2014 ಜೂನ್ ತಿಂಗಳಿನಿಂದ 25-11-2014 ಮಧ್ಯೆ ಫಿರ್ಯಾದಿದಾರ ವಿರುದ್ಧ ಹಾಗೂ ಫಿರ್ಯಾದಿದಾರರು ಕುಟುಂಬದ ಸದಸ್ಯರ ವಿರುದ್ಧ ಮಾನಹಾನಿಕರವಾದ ಸಂದೇಶಗಳನ್ನು ಬರೆದು ಅಂತರ್ ಜಾಲದಲ್ಲಿ ಫಿರ್ಯಾದಿದಾರರ ಸೊಸೆಯಂದಿರ, ಮಕ್ಕಳ, ಚಿಕ್ಕಮ್ಮನ ಮಗ ಅಶೋಕನ  ಹಾಗೂ ಊರಿನ ನವೀನ್ ಉಚ್ಚಿಲ್, ಸುರೇಶ್ ಉಚ್ಚಿಲ ಮುಂತಾದವರ ಫೇಸ್ ಬುಕ್ ಅಕೌಂಟ್ಗೆ ಹರಿಯಬಿಟ್ಟು ಫಿರ್ಯಾದಿದಾರರ ಮತ್ತು ಕುಟುಂಬದವರ ಮಾನ ಹರಣ ಮಾಡಿರುತ್ತಾರೆ.

 

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30.12.2014 ರಂದು ಸಂಜೆ ಸುಮಾರು 1.45 ಗಂಟೆ ಸಮಯಕ್ಕೆ ಮಂಗಳೂರು ನಗರದ ಉಜ್ಜೋಡಿ ಎಂಬಲ್ಲಿರುವ ಮಹಾಕಾಳಿ ದೇವಸ್ಥಾನದ ಮುಂಭಾಗ ಪಿರ್ಯಾದಿದಾರರಾದ ಶ್ರೀ ರಂಜಿತ್‌‌ ಎಂಬವರು ಅವರು ದುಡಿಯುತ್ತಿರುವ ಸಿಟಿ ಬಸ್ಸ್‌‌ ರೂಟ್‌‌ ನಂಬ್ರ: 42 ಕೆಎ-19-ಡಿ-1818 ರಲ್ಲಿ ನಿರ್ವಾಹಕರಾಗಿ ಕರ್ತವ್ಯದಲ್ಲಿರುತ್ತಾ ಪ್ರಯಾಣಿಕರನ್ನು ಇಳಿಸಿ ಹತ್ತಿಸುವುದಕ್ಕೆ ಬಸ್ಸನ್ನು ನಿಲ್ಲಿಸುತ್ತಿದ್ದಂತೆ ಅದರ ಹಿಂಭಾಗದಿಂದ ಮೋಟಾರ್‌‌ ಕೆಎ-19-ಇಜಿ-2559 ಸವಾರ ಲತೀಶ್‌‌ ಕುಮಾರ್‌‌ ಎಂಬವರು ತನ್ನ ಬಾಬ್ತು ಮೋಟಾರ್‌‌ ಬೈಕನ್ನು ನಿಲ್ಲಿಸುತ್ತಿದ್ದಂತೆ ಪಂಪ್ವೆಲ್‌‌ ಕಡೆಯಿಂದ ಟಿಪ್ಪರ್‌‌ ವಾಹನ ಕೆಎ-20-ಬಿ 8951 ನ್ನು ಅದರ ಚಾಲಕ ಅತೀ ವೇಗ ಯಾ ದುಡುಕುತನದಿಂದ ಚಲಾಯಿಸಿ ಮೋಟಾರ್‌‌ ಬೈಕ್‌‌ಗೆ ಡಿಕ್ಕಿಹೊಡೆದುದರ ಪರಿಣಾಮ ಮೋಟಾರ್‌‌ಬೈಕ್‌‌ ಮುಂದೆ ನಿಂತಿದ್ದ ಬಸ್ಸು ಕೆಎ-19-ಡಿ-1818 ಹಿಂಭಾಗಕ್ಕೆ ಅಪ್ಪಳಿಸಿ ಮೋಟಾರ್‌‌ಬೈಕ್‌‌ ಸವಾರ ಮಧ್ಯದಲ್ಲಿ ಸಿಲುಕಿಕೊಂಡು ಸೊಂಟದಿಂದ ತಲೆಯ ತನಕ ಗಂಭೀರ ಸ್ವರೂಪದ ರಕ್ತಗಾಯವಾದವರನ್ನು ಪಕ್ಕ ಸಮೀಪದ ಇಂಡಿಯಾನಾ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋದರು ಚಿಕಿತ್ಸೆಯು ಫಲಕಾರಿಯಾಗದೇ ಮಧ್ಯಾಹ್ನ 3 ಗಂಟೆಗೆ ಮೋಟಾರ್‌‌‌ ಸೈಕಲ್‌‌‌ ಸವಾರ ಲತೀಶ್‌‌ ಕುಮಾರ್‌‌ ಮೃತಪಟ್ಟದ್ದಲ್ಲದೆ ಡಿಕ್ಕಿಹೊಡೆದ ಟಿಪ್ಪರ್‌‌ಲಾರಿಯ ಚಾಲಕ ಅಪಘಾತವಾದ ಕೂಡಲೇ ವಾಹನದಿಂದ ಇಳಿದು ಪರಾರಿಯಾಗಿರುವುದಾಗಿದೆ.

No comments:

Post a Comment