Tuesday, December 9, 2014

Daily Crime Report 09-12-2014

ದಿನಾಂಕ 09.12.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ-9-01-2008 ರಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಸಬೀತಾ ಪೊನೆಸ್ಕೋ ರವರಿಗೆ ಜೆಪ್ಪು ಚರ್ಚ್ ಹಾಲ್ ನಲ್ಲಿ ಆರೋಪಿ ಸತೀಷ್ ಪೊನೆಸ್ಕೋ ಎಂಬವರೊಂದಿಗೆ ವಿವಾಹವಾಗಿ ಗಂಡನ ಮನೆಯಲ್ಲಿ ವಾಸವಾಗಿದ್ದರು. ಬಳಿಕ ಇವರಿಬ್ಬರ ನಡುವೆ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತಿದ್ದು ಆರೋಪಿಯು 3 ವರ್ಷದ ಹಿಂದೆ ಡೈವೂರ್ಸ್ ಗೆ  ಅರ್ಜಿ ಹಾಕಿದ್ದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ದಿನಾಂಕ-08-12-14 ರಂದು ಬೆಳಿಗ್ಗೆ 7-30 ಗಂಟೆಗೆ ಆರೋಪಿಯು ಬಂದು ನೀನು ಯಾಕೆ ಕಿಟಿಕಿ ಬಡಿದದ್ದು,  ನೀನು ಇಲ್ಲಿರಬೇಡ ಹೋಗು ಎಂದು ಹೇಳಿ ಕೈಯಿಂದ ಕೆನ್ನೆಗೆ ಹೊಡೆದು ಕಾಲಿನಿಂದ ಸೊಂಟಕ್ಕೆ ತುಳಿದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಕುತ್ತಿಗೆ ಹಿಡಿದಾಗ ಪಿರ್ಯಾದಿಯು ಬೊಬ್ಬೆ ಹಾಕಿದರು  ಅಷರಲ್ಲಿ ಪಿರ್ಯಾದಿದಾರರ ಅತ್ತೆ ರೋಜಿ, ಗಂಡನ ಅಣ್ಣ ಪ್ರಾಂಕಿ ಹಾಗೂ ಅವರ ಹೆಂಡತಿ ಕ್ರಿಸ್ಟಿನ್ ಮನೆಯೊಳಗೆ ಬಂದು ಅವಾಚ್ಯವಾಗಿ ನಿಂದಿಸಿ ಬೈದಿದ್ದು ಪಿರ್ಯಾದಿಯ ಗಂಡ ನೀನು ಇಲ್ಲೇ ಸಾಯಿ ಎಂದು ಹೊರಗಿನಿಂದ ಬಾಗಿಲು ಹಾಕಿ ಹೋಗಿದ್ದು ನಂತರ ನೆರೆಕರೆಯವರು ಬಾಗಿಲು ತೆಗೆದಿರುವುದಾಗಿದೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 07.10.2014 ರಂದು ಸಂಜೆ ಪಿರ್ಯಾದಿದಾರರಾದ ಶ್ರೀ ಸುಭಾಷ್ ಕಿಣಿ ಕೆ. ರವರು ಅವರ ತಾಯಿಯವರಾದ ಶ್ರೀಮತಿ ಸುನಿತಾ ಕಿಣಿ ರವರೊಂದಿಗೆ ಮಂಗಳೂರು ನಗರದ ಸಿಟಿ ಸೆಂಟರ್ಮಾಲ್ನಲ್ಲಿ ಸಾಮಾನು ಖರೀದಿಸಿ  ವಾಪಾಸು ಮನೆಗೆ ಹೋಗುವರೇ ತಾಯಿಯ ಜೊತೆಯಲ್ಲಿ ಸಿಟಿ ಸೆಂಟರ್ಮಾಲ್ ಹೊರಗಡೆ ನವಭಾರತ್‌-ಹಂಪನ್ಕಟ್ಟೆ ಸಾರ್ವಜನಿಕ ರಸ್ತೆ ದಾಟುವರೇ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಸಮಯ ರಾತ್ರಿ 9:30 ಗಂಟೆಗೆ ನವಭಾರತ್ ಕಡೆಯಿಂದ ಹಂಪನ್ಕಟ್ಟೆ ಕಡೆಗೆ ಸ್ಕೂಟರ್ಒಂದನ್ನು ಅದರ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಜೊತೆಯಲ್ಲಿದ್ದ ಅವರ ತಾಯಿ ಶ್ರೀಮತಿ ಸುನಿತಾ ಕಿಣಯವರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾಂಕ್ರೀಟ್ರಸ್ತೆಗೆ ಬಿದ್ದ ಸುನಿತಾ ಕಿಣಿಯವರ ಎಡಕಾಲಿನ ತೊಡೆಯಲ್ಲಿ ಗುದ್ದಿದ ಮೂಳೆ ಮುರಿತದ ಗಾಯವಾದ್ದವರನ್ನು  ಚಿಕಿತ್ಸೆ ಬಗ್ಗೆ ನಗರದ ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಪ್ರಕರಣದಲ್ಲಿ ಅಪಘಾತವುಂಟು ಮಾಡಿದ ಸ್ಕೂಟರ್ ಸವಾರನು ಅಪಘಾತದ ಬಳಿಕ ತನ್ನ ಸ್ಕೂಟರ್ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ಅಪಘಾತದ ಗಡಿಬಿಡಿಯಲ್ಲಿ ಸ್ಕೂಟರ್ ನಂಬ್ರ ನೋಡಲಾಗಿರುವುದಿಲ್ಲ.

 

3.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಸುನೀಲ್ ವಂಜೆ ರವರು ಗೋಲ್ಡ್ಪಿಂಚ್ ಹೋಟೇಲಿನ ಮೇಲಿನ ಮಹಡಿಯಲ್ಲಿರುವ ENVOY MORTGAGE ನಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸಮಾಡಿಕೊಂಡಿದ್ದು, ಬೆಸೆಂಟ್ಜಂಕ್ಷನ್ ನಲ್ಲಿರುವ ಮಾಝಾ ಎಂಬ ಹೆಸರಿನ ಹಾಸ್ಟೇಲ್ನಲ್ಲಿ ಉಳಕೊಂಡಿರುವುದಾಗಿದೆ. ದಿನಾಂಕ 07-12-2014 ರಂದು ಪಿರ್ಯಾದುದಾರರ ರೂಮಿನಲ್ಲಿ ಅಭಿಜಿತ್ ಕುಮಾರ್ ಪಾಂಡೆ ಎಂಬವರು ಹೊಸತಾಗಿ ಬಂದು ಸೇರಿದ್ದು, ದಿನಾಂಕ 07-12-2014 ರಂದು ಮಧ್ಯಾಹ್ನ 1-30  ಗಂಟೆಗೆ ಪಿರ್ಯಾದುದಾರರು ಸದ್ರಿ ಅಭಿಜಿತ್ ನೊಂದಿಗೆ ಮಧ್ಯಾಹ್ಹ ಊಟಕ್ಕೆ ಹೋಗಿ, ಊಟ ಮುಗಿಸಿ, ವಾಪಾಸ್ಸು ರೂಮಿಗೆ ಬಂದು ಮಲಗಿದ್ದವರು ಸಂಜೆ 5-00 ಗಂಟೆಗೆ ಎಚ್ಚರವಾದಾಗ ಪಿರ್ಯಾದುದಾರರ ರೂಮಿನಲ್ಲಿದ್ದ ಅಭಿಜಿತ್‌‌ನು ಇಲ್ಲದೆ ಇದ್ದು, ಬಳಿಕ  ಪಿರ್ಯಾದಿದಾರರು  ರೂಮಿನಲ್ಲಿ ನೋಡಿದಾಗ ಸುಮಾರು 30,000/- ಮೌಲ್ಯದ ಹೆಚ್.ಪಿ.ಕಂಪೆನಿಯ ಲ್ಯಾಪ್ಟಾಪ್,   ರೂ. 15000/- ಮೌಲ್ಯದ ಬ್ಲಾಕ್ಬೆರೆ ಮೊಬೈಲ್ ಹ್ಯಾಂಡ್ ಸೆಂಟ್‌, ಸುಮಾರು 3000/- ಮೌಲ್ಯದ ಹೆಚ್.ಟಿ.ಸಿ.ಕಂಪೆನಿಯ ಮೊಬೈಲ್ ಹ್ಯಾಂಡ್ಸೆಟ್, ಹೀಗೆ ಒಟ್ಟು ರೂ. 48000/- ಮೌಲ್ಯದ ವಸ್ತುಗಳು ಕಾಣದೇ ಇದ್ದು, ಬಗ್ಗೆ ಸದ್ರಿ ಅಭಿಜಿತ್ನು ಸದ್ರಿ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ.

 

4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರು ದಿನಾಂಕ 04.12.2014 ರಂದು ಕುರ್ನಾಡು ಶಾಲೆಯಲ್ಲಿ ಶ್ರಮದಾನ ಕೆಲಸ ನಡೆಯುತ್ತಿದ್ದು, ಅಲ್ಲಿಗೆ ಆಣಿ ತರಲೆಂದು ತಮ್ಮ ಪರಿಚಯದ ನಿಯಾಜ್ಎಂಬವರ ಮೋಟಾರ್ಸೈಕಲ್ನಂಬ್ರ ಕೆಎ-19ಇಜಿ-7785 ರಲ್ಲಿ ಸಹ ಸವಾರನಾಗಿ ಬೋಳಿಯಾರು ಕಡೆಗೆ ಹೋಗುತ್ತಿರುವಾಗ ರಾತ್ರಿ ಸುಮಾರು 10:00 ಗಂಟೆಗೆ ಮಂಗಳೂರು ತಾಲೂಕು ಬೋಳಿಯಾರು ಗ್ರಾಮದ ಪಲ್ಲ ಎಂಬಲ್ಲಿಗೆ ತಲುಪುತ್ತಿದ್ದಂತಯೇ ಆರೋಪಿಯು ಮೋಟಾರ್ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮೋಟಾರ್ಸೈಕಲ್ಸ್ಕಿಡ್ಆಗಿ ಫಿರ್ಯಾದಿದಾರರು ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಫಿರ್ಯಾದಿದಾರರ ಬಲತೊಡೆಗೆ, ಬಲಕೈಗೆ ಮೂಳೆ ಮುರಿತದ ಗಾಯವಾಗಿದ್ದು, ಗಾಯಾಳು ಫಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಯು ಫಿರ್ಯಾದಿದಾರರ ಚಿಕಿತ್ಸೆಯ ಖರ್ಚನ್ನು ನೋಡುವುದಾಗಿ ಹೇಳಿ ವಾಪಾಸು ಬಾರದೇ ಇರುವುದರಿಂದ ದಿನ ತಡವಾಗಿ ದೂರು ನೀಡಿರುವುದಾಗಿದೆ.

 

5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07-12-2014 ರಂದು 12.15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಯೋಗೀಶ್ ಆಚಾರ್ಯ ರವರು ಶಿವಾನಂದ ಆಚಾರ್ಯ ರವರ KA-19-ED-4127 ನೇ ಮೋಟಾರು ಸೈಕಲ್ ನಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಮೂಡಬಿದ್ರೆಯಿಂದ ಬಂಟ್ವಾಳಕ್ಕೆ ಕರಿಂಜೆ ಗ್ರಾಮದ ತಾಕೊಡೆ ಹೋಲೋ ಬ್ಲಾಕ್ ಬಳಿ ಹೋಗುತ್ತಿರುವಾಗ ಎದುರಿನಿಂದ ಮೂಡಬಿದ್ರೆ ಕಡೆಗೆ KA-19-EE-9173 ನೇ ಮೋಟಾರು ಸೈಕಲ್ ನ್ನು ಅದರ ಸವಾರ ಪ್ರವೀಣ್ ಫರ್ನಾಂಡೀಸ್ ಎಂಬಾತನು ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿ KA-19-ED-4127 ನೇ ಮೋಟಾರು ಸೈಕಲ್ ಗೆ ಡಿಕ್ಕಿ ಮಾಡಿದ ಪರಿಣಾಮ ಸವಾರ ಶಿವಾನಂದ ಹಾಗೂ ಪಿರ್ಯಾದಿ ರಸ್ತೆಗೆ ಬಿದ್ದು  ಗಾಯಗೊಂಡಿದ್ದಲ್ಲದೆ, ಆರೋಪಿ ಪ್ರವೀಣ್ ಪೆರ್ನಾಂಡೀಸ್ ಎಂಬಾತನಿಗೆ ಕೂಡಾ ಡಿಕ್ಕಿಯ ಪರಿಣಾಮ ಗಾಯಗೊಂಡು ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿದ್ದು, ಪಿರ್ಯಾದಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ.

 

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-12-2014 ರಂದು ಫಿರ್ಯಾದಿದಾರರಾದ ಶ್ರೀ ಸಲ್ಮಾನ್ ರವರು ಅವರ ಸ್ನೇಹಿತ ಶರವಣ ಎಂಬವರೊಂದಿಗೆ ಸಹಸವಾರನಾಗಿ ಯೆನಪೋಯ ಯುನಿವರ್ಸಿಟಿಯಿಂದ  ತೊಕ್ಕೊಟ್ಟು ಕಡೆಗೆ ಬೈಕ್ ನಂಬ್ರ ಟಿಎನ್.20-ಸಿಡಬ್ಲ್ಯೂ.6610 ನೇದನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಮಧ್ಯಾಹ್ನ ಸುಮಾರು 03.30 ಗಂಟೆಗೆ ಕುತ್ತಾರು ಮದನಿ ನಗರ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರುಗಡೆಯಿಂದ ಅಂದರೆ ತೊಕ್ಕೊಟ್ಟು ಕಡೆಯಿಂದ ದೇರಳಕಟ್ಟೆ ಕಡೆಗೆ  ಟಿಪ್ಪರ್ ಲಾರಿ ಕೆಎ.19.ಸಿ 6804 ನೇಯದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ವಾಹನವೊಂದನ್ನು ಓವರ್ಟೇಕ್ ಮಾಡಿಕೊಂಡು ರಾಂಗ್ ಸೈಡ್ ನಿಂದ ಬಂದು ಫಿರ್ಯಾದಿದಾರರ ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಬೈಕ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವೃ ತರದ ರಕ್ತ ಗಾಯಗೊಂಡಿದ್ದು, ಅಲ್ಲಿ ಸೇರಿದವರು ಫಿರ್ಯಾದಿದಾರರನ್ನು ಎಬ್ಬಿಸಿ ಉಪಚರಿಸಿದಾಗ ಶರವಣನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಪಘಾತದಿಂದ ಫಿರ್ಯಾದಿದಾರರ ಎಡ ಕಾಲ ಮೊಣಗಂಟು, ಎಡ ಭುಜಕ್ಕೆ, ಎಡ ಕೈಯ ಮೊಣಗಂಟಿಗೆ ಗಾಯವಾಗಿದ್ದು, ಅಲ್ಲಿ ಸೇರಿದ್ದ ಜನರು ತನ್ನನ್ನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಗೆ ದಾಖಲಿಸಿರುತ್ತಾರೆ. 

 

No comments:

Post a Comment