Friday, December 19, 2014

Daily Crime Reports 19 12 2014

ದಿನಾಂಕ 19.12.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 5/12/2014 ರಂದು ಫಿರ್ಯಾದುದಾರರಾದ ತ್ರಿವೇಣಿ ಕೊಡ್ಕಣಿ ರವರು ಕಾರು ನಂಬ್ರ MH-46-A-585 ನ್ನು ಫೋರ್ಡ ಸರ್ವಿಸ್ ಸೆಂಟರ್ ಕಡೆಯಿಂದ ಫಳ್ನಿರ್ ಕಡೆಗೆ ಹೋಗುವರೇ ಸಂಜೆ 6:45 ಗಂಟೆಗೆ  ಕೆ ಪಿ ಟಿ ವೃತ್ತದ ಬಳಿ ತಲುಪುತ್ತಿದ್ದಂತೆ ಸದ್ರಿಯವರ ಹಿಂದುಗಡೆಯಿಂದ ಬಸ್ಸು ನಂಬ್ರ KA-19-D-5679 ನೇದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಢು ಬಂದು ಫಿರ್ಯಾದುದಾರರ ಕಾರನ್ನು ಓವರಟೆಕ್ ಮಾಡುವ ವೇಳೆ ಫಿರ್ಯಾದುದಾರರ ಕಾರಿನ ಎಡಬದಿಗೆ ಡಿಕ್ಕಿ ಮಾಡಿದ ಪರಿಣಾಮ ಕಾರಿನ ಎಡಭಾಗ ಜಖಂಗೊಂಡಿದ್ದು ಜಖಂನ ಖರ್ಚು ವೆಚ್ಚಗಳನ್ನು ಬಸ್ಸಿನ ಚಾಲಕ ನೀಡುವುದಾಗಿ ತಿಳಿಸಿ, ಬಳಿಕ ನಿರಾಕರಿಸಿರುವುದರಿಂದ ದೂರು ನಿಡಲು ವಿಳಂಬವಾಗಿರುತ್ತದೆ.

 

2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಪುಷ್ಪಲತಾ ರವರ ಗಂಡ ದುರ್ಗಾಪ್ರಸಾದ್ (27) ಎಂಬವರು ಅವರು ವಾಸವಾಗಿದ್ದ ಬಾಳ ಗ್ರಾಮದ ಮಂಗಳಪೇಟೆ  ಬಾಳ ಗ್ರಾಮ ಪಂಚಾಯತ್ ಕಚೇರಿ ಬಳಿ ಮಂಜುಳ ನಿವಾಸದಿಂದ 2 ತಿಂಗಳ ಹಿಂದೆ ಬೆಳಿಗ್ಗೆ 8-00 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೇಳಿ ಹೋದವರು ಈ ವರೆಗೂ ವಾಪಾಸು ಮನೆಗೆ ಬಾರದೇ ಇದ್ದು, ದುರ್ಗಾಪ್ರಸಾದ್ ರವರಿಗೆ ಊರಿನ ತುಂಬಾ ಸಾಲ ಇದ್ದು ಇದರಿಂದ ಅವರು ಈ ಹಿಂದೆ ಕೂಡ 2 ಬಾರಿ ಮನೆಯಿಂದ ಹೇಳದೆ ಹೋದವರು ನಂತರ ವಾಪಾಸು ಬಂದಿರುತ್ತಾರೆ. ಆದರೇ ಈಗ ದುರ್ಗಾಪ್ರಸಾದ್ ರವರು ಮನೆ ಬಿಟ್ಟು ಹೋಗಿ ಈಗಾಗಲೇ 2 ತಿಂಗಳು ಕಳೆದಿದ್ದು ವಾಪಾಸು ಬಾರದೇ ಇರುವುದಾಗಿದೆ. ಕಾಣೆಯಾದ ದುರ್ಗಾಪ್ರಸಾದ್ ರವರ ಚಹರೆ: ಎತ್ತರ: 5 ಅಡಿ 7 ಇಂಚು, ಕಪ್ಪು ಬಣ್ಣ, ಉರುಟು ಮುಖ, ಆಕಾಶ ನೀಲಿ ಬಣ್ಣದ ಶರ್ಟ್ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ, ತುಳು, ತಮಿಳು ಭಾಷೆ ಮಾತನಾಡುತ್ತಾರೆ.

 

3.ಮಂಗಳೂರು ದಕ್ಷಿಣ ಠಾಣೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-12-2014 ರಂದು 17-00 ಗಂಟೆಗೆ ಪ್ರಕರಣದ ಪಿರ್ಯಾದಿದಾರರಾದ ಶ್ರೀ ನಾಗೇಶ್ ಇವರು ಮಂಗಳೂರು ನಗರದ ಸರ್ವಿಸ್ ಬಸ್ಸ್ ನಿಲ್ದಾಣ ಹತ್ತಿರ  ಇರುವ ಬಾಲಭವನ ಪಾರ್ಕ್ ನಲ್ಲಿ ಬೆಂಚ್ ನಲ್ಲಿ ಕುಳಿತುಕೊಂಡಿರುವಾಗ್ಗೆ ಇಬ್ಬರು ವ್ಯಕ್ತಿಗಳು ಅವರ ಹತ್ತಿರಕ್ಕೆ ಬಂದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಮೊಬೈಲ್ ಸೆಟ್ ಕೊಡುವಂತೆ ಬೆದರಿಸಿದಾಗ ಪಿರ್ಯಾದಿದಾರರು ಕೊಡಲು ನಿರಾಕರಿಸಿದ್ದು ಆ ಇಬ್ಬರು ವ್ಯಕ್ತಿಗಳು ಪಿರ್ಯಾದಿದಾರರಿಗೆ ಬೆದರಿಕೆಯೊಡ್ಡಿ ಪಿರ್ಯಾದಿದಾರರ ಕೈಯಲ್ಲಿದ್ದ  ಅಂದಾಜು ರೂಪಾಯಿ 2000/- ಬೆಲೆ ಬಾಳುವ ಸಿಮ್ ಇದ್ದ ಸಾಮ್ ಸಂಗ್ ಕಂಪನಿಯ ಮೊಬೈಲ್ ಸೆಟ್ ಹಾಗೂ ಕುತ್ತಿಗೆಯಲ್ಲಿದ್ದ  ಅಂದಾಜು ರೂಪಾಯಿ 20000/- ಬೆಲೆ ಬಾಳುವ ಸುಮಾರು 8 ಗ್ರಾಮ್ ತೂಕದ ಚಿನ್ನದ ಸರವನ್ನು ಬಲತ್ಕಾರವಾಗಿ ಕಿತ್ತು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ.

 

4.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ: 18.12.2014 ರಂದು ಪಿರ್ಯಾಧಿದಾರರಾದ ಶ್ರೀ ವಿಜಯಕುಮಾರ್ ರವರ ಪತ್ನಿ ಶ್ರೀಮತಿ ಸುಮತಿ ರವರು ಪಡೀಲ್‌‌ ಕೆಂಬಾರ್‌‌ ಎಂಬಲ್ಲಿ ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಸಮಯ ಮಧ್ಯಾಹ್ನ ಸುಮಾರು 3.45 ಗಂಟೆಗೆ ಕೆಎ-19-ಎಂಸಿ-1279 ನೇ ಕಾರನ್ನು ಅದರ ಚಾಲಕ ಮೋಹನ್‌‌‌ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಸುಮತಿ ರವರಿಗೆ ಡಿಕ್ಕಿಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ರಕ್ತಬರುವ ಗಾಯವಾಗಿದ್ದು, ಬಲ ತೊಡೆ ಹಾಗೂ ಬಲಭುಜಕ್ಕೆ ಗುದ್ದಿದ ರೀತಿಯ ಗಾಯವಾಗಿದ್ದು  ಎಡಕೈ ಮೊಣಗಂಟಿನ ಬಳಿ ತರಚಿದ ಗಾಯವಾಗಿ  ಚಿಕಿತ್ಸೆ ಬಗ್ಗೆ SCS ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ನಿತೀಲ್ ಹೆಗಡೆ ರವರ ಕಾರು ನಂಬ್ರ: KA-19-MC-2100 ಪಡೀಲ್ ನಿಂದ ಕಣ್ಣೂರಿಗೆ ಹೋಗುವಾಗ NH 47 ರಲ್ಲಿ ಬಲಬದಿಯಲ್ಲಿ ಹೊಗುತ್ತೀರುವಾಗ ಎಡ ಬದಿಯಿಂದ AP-26-W-8109  ನೇ ಲಾರಿ ಚಾಲಕರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪರಿಣಾಮವಾಗಿ ಪಿರ್ಯಾದಿದಾರರ ಕಾರಿನ ಎಡ ಬದಿಯ ಎರಡು ಡೋರ್ಗೆ ಜಖಂಗೊಂಡು ಸುಮಾರು 60,000 ರೂಗಳ ನಷ್ಟ ಆಗಿರುತ್ತದೆ.

 

No comments:

Post a Comment