Monday, March 31, 2014

Dialy Crime Reports 31-03-2014

ದೈನಂದಿನ ಅಪರಾದ ವರದಿ.
ದಿನಾಂಕ 31.03.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
3
ದರೋಡೆ ಪ್ರಕರಣ
:
1
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
2
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
2
ಮಹಿಳೆಯ ಮೇಲಿನ ಪ್ರಕರಣ
:
2
ರಸ್ತೆ ಅಪಘಾತ  ಪ್ರಕರಣ
:
2
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
3
ಇತರ ಪ್ರಕರಣ
:
1
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1.ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-8-2013 ರಂದು ಆರೋಪಿ ಪ್ರೀತಮ್ ರಮೇಶ್ ರವರು ಪಿರ್ಯದಿದಾರರಾದ ಶ್ರೀಮತಿ ತೃಪ್ತಿ ರವರನ್ನು ಬೋಳಾರದ ರಮಾಲಕ್ಷೀ  ನಾರಾಯಣ ಹಾಲ್ ನಲ್ಲಿ  ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆ ಸಮಯ ವರನ ಕಡೆಯವರ ಬೇಡಿಕೆಯಂತೆ ಮದುವೆಯ ಸಂಪೂರ್ಣ ಖರ್ಚು 10 ಲಕ್ಷ ಹಣವನ್ನು ಪಿರ್ಯಾದಿಯ ತಂದೆ ಹಾಗೂ ಅಣ್ಣನವರು ಭರಿಸಿದ್ದು, ಪಿರ್ಯಾದಿದಾರರಿಗೆ  20 ಪವನ್ ಚಿನ್ನ ಹಾಕಿದ್ದರುಮದುವೆ ಬಳಿಕ ಬಜಾಲಿನ ಅತ್ತೆ ಮನೆಯಲ್ಲಿ ವಾಸ ಮಾಡುತ್ತಿದ್ದಾಗ ಅತ್ತೆಯವರು ನನ್ನ ಮಗನಿಗೆ ಮದುವೆ ಇಷ್ಟವಿರಲಿಲ್ಲ ಅವನಿಗೆ ಬೇರೆ ಲವ್ ಇದೆ ನಿನ್ನ ತಂದೆ ಶ್ರೀಮಂತರೆಂದು ತುಂಬಾ ವರದಕ್ಷಿಣೆ ಹಾಗೂ ಚಿನ್ನ ಸಿಗಬಹುದೆಂದು ತಿಳಿದಿದ್ದೆವು. ಆದರೆ ನಿನ್ನ ಅಪ್ಪ ದಿವಾಳಿ ಜನ ಅಂತ ಮದುವೆ ದಿನ ತಿಳಿಯಿತೆಂದು ಮೂದಲಿಸಿ  ಅವರ ಎಲ್ಲಾ ಚಿನ್ನಾಭರಣ ತೆಗೆದಿಟ್ಟಿದ್ದರು .ನಂತರ ಆರೋಪಿ ಪ್ರೀತಮ್ ರಮೇಶ್ ರವರ ಜೊತೆ ದುಬೈಗೆ ಹೋಗಿ ವಾಸಿಸುತ್ತಿದ್ದಾಗ ಪಿರ್ಯಾದಿಯ ಗಂಡ ನನಗೆ ನೀನು ಇಷ್ಟವಿಲ್ಲ ಎಂದು ಕೂದಲನ್ನು ಎಳೆದು ಕೈಯಿಂದ ಹೊಡೆದು ಕಾಲಿನಿಂದ ತುಳಿದು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದುದ್ದಲ್ಲದೆ ಬೇರೆ ಹುಡುಗಿಯ ಜೊತೆ ಅನೈತಿಕ ಸಂಬಂದ ಹೊಂದಿದ್ದು ಪಿರ್ಯಾದಿದಾರರನ್ನು ಕೊಂದು ಬೀಡುತ್ತೇನೆ ಎಂದು ಬೆದರಿಕೆ ಹಾಕಿ ಇನ್ನು ಹೆಚ್ಚಿನ 10 ಲಕ್ಷ ವರದಕ್ಷಿಣೆ ಹಣ ತೆಗೆದುಕೊಂಡು ಬರುವಂತೆ ಹೇಳಿ ಊರಿಗೆ ಕಳುಹಿಸಿದ್ದು ದಿನಾಂಕ 20-03-2014 ರಂದು ಪಿರ್ಯಾದಿದಾರರ ತಂದೆಗೆ ಆರೋಪಿತನು ಪೋನು ಮಾಡಿ ನನಗೆ 10 ಲಕ್ಷ ವರದಕ್ಷಿಣೆ ಕೊಡಬೇಕು ಇಲ್ಲದಿದ್ದರೆ ನಿಮ್ಮ ಮಗಳೆ ಡೈವೊರ್ಸ್ ಕೊಡಲಿ ನಾನು ಬೇರೆ ಮದುವೆಯಾಗುತ್ತೇನೆಂದು ಬೆದರಿಕೆ ಹಾಕಿದ್ದರು.
 
2.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ ಕೊಡಿಯಾಲ್ಬೈಲ್ಪೂರ್ವದಲ್ಲಿರುವ ಆರ್ ಕೆ ಎಪ್ ಹಾಸ್ಟೇಲ್ ನಲ್ಲಿ  ವಾಸ್ತವ್ಯವಿದ್ದು, ಕೆನರಾ ಕಾಲೇಜ್‌‌ನಲ್ಲಿ 2ನೇ ವರ್ಷದ ಬಿ.ಎಸ್ಸಿಯಲ್ಲಿ ಓದುತ್ತಿದ್ದ ಮಡಿಕೇರಿಯ ಜಿ ಸಿ ಪೆರುಮಾಳ್ ರವರ ಮಗಳು 22 ವರ್ಷ ಪ್ರಾಯದ ಕುಮಾರಿ  ಕೆ ಪಿ ಜಯಶ್ರೀ ಎಂಬಾಕೆ ದಿನಾಂಕ 28-03-2014 ರಂದು ಬೆಳಿಗ್ಗೆ 09:30 ಗಂಟೆಗೆ ಮಡಿಕೇರಿಯ ತನ್ನ ಮನೆಗೆ ಹೋಗುವುದಾಗಿ  ಹಾಸ್ಟೆಲ್ನ ವಾರ್ಡನ್ರಲ್ಲಿ ತಿಳಿಸಿ  ಹೋದಾಕೆ ಊರಾದ ಮಡಿಕೇರಿಗೆ ಹೋಗದೆ ತಾನಿದ್ದ ಹಾಸ್ಟೆಲ್‌‌ಗೂ ಬಾರದೇ ಕಾಣೆಯಾಗಿರುತ್ತಾಳೆ.
 
3.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29.03.2014 ರಂದು 19.30 ಗಂಟೆಗೆ ಆಟೋರಿಕ್ಷಾ ನಂಬ್ರ KA19-8706 ನ್ನು ಅದರ ಚಾಲಕ ಕಲ್ಪನೆ ಕಡೆಯಿಂದ ಕುಲಶೇಖರ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕಲ್ಪನೆ ಮೈದಾನದ ಎದುರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ನಾರಯಣ ಗೌಡ ಎಂಬುವವರಿಗೆ ಡಿಕ್ಕಿ ಮಾಡಿದ ಪರಿಣಾಮ ನಾರಯಣಗೌಡ ರಸ್ತೆಗೆ ಬಿದ್ದು ಸಾದಾ ಸ್ವರೊಪದ ಗಾಯಗೊಂಡು ಸಿಟಿ ಆಸ್ಪತ್ರೆಗೆ ದಾಖಾಲಾಗಿ ಚಿಕೆತ್ಸೆಯಲ್ಲಿರುತ್ತಾರೆ.ಅಪಘಾತದ ವೇಳೆ ರಿಕ್ಷಾ ಜಖಂಗೊಂಡಿದ್ದು ಚಾಲಕನಿಗೂ ಕೂಡಾ ಸಾದಾ ಸ್ವರೊಪದ ಗಾಯಗಳಾಗಿರುತ್ತದೆ.
 
4.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28.03.2014 ರಂದು ಸಂಜೆ ಸುಮಾರು 3:20 ಗಂಟೆಗೆ ಬಂಟ್ವಾಳ ತಾಲೂಕು, ಫಜೀರು ಗ್ರಾಮದ, ಮಿತ್ತ ಪಾನೇಲ ಎಂಬಲ್ಲಿ ಯಾರೋ ಜೋರಾಗಿ ಮಾತಾಡುವುದನ್ನು ಕೇಳಿ ಫಿರ್ಯಾದಿದಾರರಾದ ಶ್ರೀ ಪೀಟರ್ ಮೊಂತೆರೋ ರವರು ತನ್ನ ಅಣ್ಣ ಮರಿಯನ್ಮೊಂತೆರೋ ಮತ್ತು ತಮ್ಮ ಗ್ರೇಸಿಯನ್ಮೊಂತೆರೋರವರೊಂದಿಗೆ ಹೋದಾಗ ಆರೋಪಿಗಳಾದ ಸ್ಟೀವನ್ಮತ್ತ ಫ್ಲೆವಿನ್ರವರು ಫಿರ್ಯಾದಿದಾರರು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೆನ್ನೆಗೆ ಹೊಡೆದು, ಸ್ಟೀವನ್ನು ಕೈಯಲ್ಲಿದ್ದ ಪಿಕ್ಕಾಸಿನಿಂದ ಫಿರ್ಯಾದಿದಾರರ ಬಲಕಾಲಿನ ಬೆರಳಿಗೆ ಕಡಿದುದ್ದಲ್ಲದೇ ಬಿಡಿಸಲು ಬಂದ ಮರಿಯನ್ಮೊಂತೆರೋ ಮತ್ತು ಗ್ರೀಸಿಯನ್ಮೊಂತೆರೋರವರಿಗೆ ಕೂಡ ಕೈಯಿಂದ ಮೈಕೈಗೆ ಹೊಡೆದಾಗ ಇವರು ಬೊಬ್ಬೆ ಹೊಡೆಯುವುದನ್ನು ಕೇಳಿ ಇತರರು ಅಲ್ಲಿಗೆ ಬರುವುದನ್ನು ಕಂಡು ಆರೋಪಿಗಳು "ಮುಂದಕ್ಕೆ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಗಾಯಾಳು ಫಿರ್ಯಾದಿದಾರರು ಮಂಗಳೂರು ವೆನ್ಲಾಕ್ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
 
5.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-03-2014 ರಂದು ಬೆಳಿಗ್ಗೆ 09:45 ಗಂಟೆಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಮಂಗಳೂರು ವಿಶ್ವ ವಿದ್ಯಾನಿಲಯದ ಪುರುಷರ ವಸತಿಗೃಹದ ನಿರ್ಮಾಣದ ಕೆಲಸವನ್ನು ಅನಿಲ್ ರೋಶನ್ ಡಿ'ಸೋಜಾರವರು ಮಾಡುತ್ತಿರುವಾಗ ಸುಮಾರು 30 ಅಡಿ ಎತ್ತರದಿಂದ ಕೆಳಗೆ ಬಿದ್ದು, ಅವರ ತಲೆಗೆ ತೀವ್ರ ಗಾಯವಾಗಿ ಪ್ರಜ್ಞಾಹೀನರಾಗಿದ್ದವರನ್ನು ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 30-03-2014 ರಂದು ಬೆಳಿಗ್ಗೆ 11:00 ಗಂಟೆಗೆ ಮೃತಪಟ್ಟಿರುತ್ತಾರೆ. ಸದ್ರಿ ಕಟ್ಟಡ ನಿರ್ಮಾಣ ಕೆಲಸದ ಗುತ್ತಿಗೆದಾರರಾದ ಹರೀಶ್ಚಂದ್ರ ಶೆಟ್ಟಿ ಹಾಗೂ ಸಹಗುತ್ತಿಗೆದಾರರಾದ ವಿಜಯ ಶೆಟ್ಟಿಗಾರ್ ರವರು ಯಾವುದೇ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳದೇ ಮತ್ತು ಕೆಲಸದ ಮುತುವರ್ಜಿಯನ್ನು ತೆಗೆದುಕೊಳ್ಳದೇ ಹಾಗೂ ಸುರಕ್ಷತಾ ಸಾಮಾಗ್ರಿಗಳನ್ನು ಕೂಡಾ ಕೊಡದೇ ಇರುವುದರಿಂದ ಈ ಘಟನೆ ಆಗಿರುತ್ತದೆ.
 
6.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  28.03.2014  ರಂದು ರಾತ್ರಿ ಸುಮಾರು  9.10 ಗಂಟೆಯ  ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ಉಮೇಶ ರವರು ಮೂಡಬಿದ್ರೆಯಿಂದ  ಪ್ರಿಯಾ  ಎಂಬ ಹೆಸರಿನ ಬಸ್ಸಿನಲ್ಲಿ ಬಂದು ಕಾರ್ನಾಡು ಗ್ರಾಮದ ಮುಲ್ಕಿ ಸರಕಾರಿ ಆಸ್ಪತ್ರೆಯ  ಬಳಿ  ಬಸ್ಸಿನಿಂದ  ಇಳಿದು  ವಸತಿಗೃಹಕ್ಕೆ ಹೋಗುವರೇ  ರಸ್ತೆಯನ್ನು ದಾಟಿ ಮಣ್ಣು ರಸ್ತೆಯಲ್ಲಿ  ನಿಂತುಕೊಂಡಿರುವಾಗ್ಗೆ  ಮುಲ್ಕಿ ಕಡೆಯಿಂದ  ಮೋಟಾರ್ ಸೈಕಲ್  ಕೆಎ 02 HC  9608ನೇದನ್ನು ಅದರ ಸವಾರರು ಮುಲ್ಕಿ ಕಡೆಯಿಂದ ಕಾರ್ನಾಡು ಕಡೆಗೆ  ಅತೀ ವೇಗ  ಹಾಗೂ ಅಜಾಗೂಕತೆಯಿಂದ  ಸವಾರಿ ಮಾಡಿಕೊಂಡು ಬಂದು ಮಣ್ಣು ರಸ್ತೆಯಲ್ಲಿ ನಿಂತಿದ್ದ ಫಿರ್ಯಾದಿದಾರರಿಗ  ಢಿಕ್ಕಿ ಹೊಡೆದಿದ್ದುಮೋಟಾರ್ ಸೈಕಲ್ ಸವಾರನು  ಮೋಟಾರ್ ಸೈಕಲ್ ನಿಲ್ಲಿಸದೇ   ಪರಾರಿಯಾಗಿರುವುದಾಗಿದೆ. ಈ ಅಪಘಾತದಿಂದ  ಫಿರ್ಯಾದಿದಾರರು  ರಸ್ತೆ  ಬದಿಯ ಚರಂಡಿಗೆ ಬಿದ್ದಿದ್ದು ಫಿರ್ಯಾದಿದಾರರ  ಬಲಕಾಲಿನ  ಕೋಲುಕಾಲಿಗೆ  ಮೂಳೆಮೂರಿತದ ಗಾಯ, ಎದೆಯ ಎಡಭಾಗಕ್ಕೆ ಎಡಕಣ್ಣಿನ  ಮೇಲ್ಬಾಗ, ಬಲಕೈಯ ತಟ್ಟಿಗೆ  ಗುದ್ದಿದ  ಗಾಯವಾಗಿರುವುದಾಗಿದೆ.,ಗಾಯಾಳು ಚಿಕಿತ್ಸೆ  ಬಗ್ಗೆ  ಮಂಗಳೂರು ಎಜೆ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
 
7.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-03-2014 ರಂದು ಸಂಜೆ 3:30 ರ ವೇಳೆಗೆ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಪೀರ್ ಸಾಬ್ ರವರು ತಾನು ಚಲಾಯಿಸಿಕೊಂಡು ಬರುತ್ತಿದ್ದ ಮೀನಿನ ಲಾರಿ KA-20-C-9420 ನೇ ದ್ದನ್ನು ಮಂಗಳೂರು ತಾಲೂಕು ಪಾವಂಜೆ ಗ್ರಾಮದ ಪಾವಂಜೆ ಎಂಬಲ್ಲಿ ಏಳು ಜನ ಅಪರಿಚಿತ ಯುವಕರು ಹೋಂಡಾ ಕಂಪನಿಯ ಬಿಳಿ ಬಣ್ಣದ ಕಾರಿನಲ್ಲಿ ಬಂದು ತಡೆದು ನಿಲ್ಲಿಸಿ, ಆ ಪೈಕಿ ನಾಲ್ಕು ಜನರು ಲಾರಿಯ ಎಡಬದಿಯ ಡೋರನ್ನು ತೆಗೆದು ಕ್ಯಾಬಿನ್ ನೊಳಗೆ ಹತ್ತಿ ಕೈಯಿಂದ ಲಾರಿಯ ಟೂಲ್ಸ್ ಬಾಕ್ಸ್ ನಲ್ಲಿಟ್ಟಿದ್ದ ರೂ 2.51.000/-ನಗದು ಹಣ ಹಾಗೂ ಪಿರ್ಯಾದಿದಾರರ ಪ್ಯಾಂಟಿನ ಕಿಸೆಯಲ್ಲಿದ್ದ ಪರ್ಸ್ ನೊಳಗಿಟ್ಟಿದ್ದ 16.000/- ನಗದು ಹಣ ಒಟ್ಟು ರೂ 2.67.000/- ನ್ನು ಹಾಗೂ ಪಿರ್ಯಾದಿದಾರರ ಡೈವಿಂಗ್ ಲೈಸೆನ್ಸ್ ,ಕೆನರಾ ಬ್ಯಾಂಕ್ ನ ಎ.ಟಿ.ಎಂ ಕಾರ್ಡ್ ಹಾಗೂ ಮೊಬೈಲ್ ನ ಸಿಮ್ ಕಾರ್ಡ್ ನ್ನು ದರೋಡೆ ಮಾಡಿಕೊಂಡು ಹೋಗಿರುವುದಾಗಿದೆ.
 
8.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-03-2014 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ಪಿರ್ಯಾದಿದಾರರಾದ ಶ್ರೀ ಸುರೇಶ್ ರವರು ರಾಮಕೃಷ್ಣ, ಸೀತಾರಾಮ, ಸಂತೋಷ ಇವರೊಂದಿಗೆ ಮನೆಯ ಕಡೆಗೆ ಬರುತ್ತಿರುವಾಗ ಕೆರೆಕಾಡು ಸಾರ್ವಜನಿಕ ಮಾರ್ಗದಲ್ಲಿ "ಓಂ"ಎಂಬ ಅಕ್ಷರ ಬರೆದಿದ್ದು, ಅದನ್ನು ನೋಡದೆ ನಡೆದುಕೊಂಡು ಬಂದಾಗ ಅಲ್ಲೇ ಇದ್ದ ಆರೋಪಿತರಾರ ರಾಜೇಶ್ ದೇವಾಡಿಗ, ದಿನೇಶ್ ದೇವಾಡಿಗ, ಸುನೀಲ್ ಪೂಜಾರಿ, ಸಂದೀಪ್ ಆಚಾರ್ಯ, ಪ್ರಶಾಂತ್ ಆಚಾರ್ಯ, ಬ್ರೀಜೇಶ್ ಶೆಟ್ಟಿಗಾರ್ ಎಂಬವರು ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಪಿರ್ಯಾದಿದಾರರನ್ನುದ್ದೇಶಿಸಿ ಕಣ್ಣು ಕಾಣುವುದಿಲ್ಲವಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಜಾತಿಯ ಹೆಸರು ತೆಗೆದು ಜಾತಿ ನಿಂದನೆ ಮಾಡಿದ್ದು, ನಿನಗೆ ಬಾರೀ ಅಹಂಕಾರ ಉಂಟು ಎಂದು ಹೇಳಿ ಹೊಡೆದಿದ್ದು, ಬಿಡಿಸಲು ಬಂದ  ರಾಮಕೃಷ್ಣ, ಸೀತಾರಾಮ, ಸಂತೋಷ ಅವರಿಗೂ ಹೊಡೆದಿದ್ದು, ಅದೇ ದ್ಷೇಪದಿಂದ ದಿನಾಂಕ 30-03-2014 ರಂದು ಮಧ್ಯಾಹ್ನ 3:10 ಗಂಟೆಯ ಸಮಯಕ್ಕೆ ಸೋಂಟೆಯಿಂದ ಹೊಡೆದಿರುವುದಾಗಿದೆ.
 
9.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿ ಶ್ರೀಮತಿ ನಸೀಮಾ ಬಾನು ದಿನಾಂಕ 04.07.2013 ರಂದು ಕೈಕಂಬದ ಮೇಗಾ ಪ್ಲಾಝಾ ಹಾಲ್ ನಲ್ಲಿ 1 ನೇ ಆರೋಪಿ ನಝೀರ್ ಹುಸೈನ್ ನನ್ನು ಮದುವೆಯಾಗಿದ್ದು, ಮದುವೆ ಬಳಿಕ ಪಿರ್ಯಾದಿದಾರರು 1 ನೇ ಆರೋಪಿಯ ಮನೆಯಾದ ಮಂಗಳೂರು ತಾಲೂಕು ಪುತ್ತಿಗೆ ಗ್ರಾಮದ ಹಂಡೇಲು ಎಂಬಲ್ಲಿನ ಜುಬೈದಾ ಮಂಝಿಲ್ ಎಂಬ ಮನೆಯಲ್ಲಿ ಗಂಡ ಮತ್ತು ಗಂಡನ ಮನೆಯವರೊಂದಿಗೆ ವಾಸವಾಗಿದ್ದು, ಮದುವೆ ಸಮಯ ಪಿರ್ಯಾದಿದಾರರ ಗಂಡ ವಿದೇಶದಲ್ಲಿ ಕೆಲಸದಲ್ಲಿರುವುದಾಗಿ ಹೇಳಿ ಪಿರ್ಯಾದಿದಾರರ ಕಡೆಯವರಿಂದ 65 ಪವನ್ ಬಂಗಾರ ಮತ್ತು ರೂ 3 ಲಕ್ಷ ವರದಕ್ಷಿಣೆ ಪಡೆದಿದ್ದು, ಮದುವೆ ಆಗಿ ಒಂದು ತಿಂಗಳವರೆಗೆ ಪಿರ್ಯಾದಿದಾರರೊಂದಿಗೆ ಸಂಸಾರ ನಡೆಸಿದ ಆರೋಪಿಯು ಬಳಿಕ ವಿದೇಶಕ್ಕೆ ಹೋಗದೇ ತನ್ನ ತಂದೆ, ತಾಯಿ ಮತ್ತು ಸಂಬಂಧಿಕರಾದ ಇತರ ಆರೋಪಿಗಳೊಂದಿಗೆ ಸೇರಿ ಪಿರ್ಯಾದಿದಾರರರಲ್ಲಿ ತವರು ಮನೆಯಿಂದ ಇನ್ನೂ 5 ಲಕ್ಷ ರೂಪಾಯಿ ಹಣ ವರದಕ್ಷಿಣೆ ರೂಪದಲ್ಲಿ ತರಬೇಕು, ಇಲ್ಲದಿದ್ದಲ್ಲಿ ಹೆಚ್ಚು ವರದಕ್ಷಿಣೆ ನೀಡುವ ಬೇರೆ ಹುಡುಗಿಯೊಂದಿಗೆ 1 ನೇ ಆರೋಪಿಗೆ ಮದುವೆ ಮಾಡಿಸುವುದಾಗಿ ಬೆದರಿಕೆ ಹಾಕಿರುವುದಲ್ಲದೇ ಸರಿಯಾಗಿ ಊಟ ನೀಡದೇ ಹಿಂಸೆ ನೀಡಿದ್ದು, ಪಿರ್ಯಾದಿದಾರರು ಹೆಚ್ಚು ವರದಕ್ಷಿಣೆ ಹಣ ನೀಡಲು ನಿರಾಕರಿಸಿದಾಗ ಆರೋಪಿಗಳು  ಸೇರಿ ದಿನಾಂಕ 28.02.2014 ರಂದು 17:00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಬಂಗಾರದ ಒಡವೆ, ಬಟ್ಟೆ ಬರೆಯನ್ನು ಕಸಿದು, ಮನೆಯಿಂದ ಹೊರಗೆ ಹಾಕಿದ್ದು, ಇತ್ತೀಚೆಗೆ  ವಿದೇಶದಿಂದ ಊರಿಗೆ ಬಂದಿರುವ ಆರೋಪಿಗಳಾದ ಸೌದಾ ಬಾನು ಮತ್ತು ಬಶೀರ್ ರವರು ಇತರ ಆರೋಪಿಗಳ ಜೊತೆ ಸೇರಿ ವರದಕ್ಷಿಣೆ ತರದಿದ್ದಲ್ಲಿ 1 ನೇ ಆರೋಪಿಗೆ ಬೇರೆ ಮದುವೆ ಮಾಡಿಸಲು ಹೆಚ್ಚು ವರದಕ್ಷಿಣೆ ನೀಡುವ ಹುಡುಗಿ ನೋಡಿಟ್ಟಿದ್ದೇವೆ, ಮದುವೆ ಮಾಡಿಸುವುದಾಗಿ ಬೆದರಿಕೆ ಹಾಕಿರುತ್ತಾರೆ.
 
10.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಅಹಮದ್ ಹುಸೇನ್ ರವರ ಬಾಬ್ತು ಪುಡ್ ಬಾಕ್ಸೈಟ್ ಅಂಗಡಿ ಮರಕಡ ಎಂಬಲ್ಲಿರುವ ಅಂಗಡಿಯ ಕೆಲಸದವರಾದ ಹಸನಬ್ಬ ಎಂಬವರು ದಿನಾಂಕ 25-03-2014ರಂದು ಸಂಜೆ 05-30 ಗಂಟೆಗೆ ಅಂಗಡಿಯ ಎದುರು ಇದ್ದ ದೂಳಿಗೆ ಪೈಪಿನಲ್ಲಿ ನೀರು ಹಾಕುತ್ತಿದ್ದ ಸಮಯ ರಸ್ತೆಯಲ್ಲಿ ಕೆಎ-19-ಪಿ-7436ನೇದರಲ್ಲಿ ಬರುತ್ತಿದ್ದ ಆರೋಪಿಗಳಾದ ಉಮೇಶ್ ಪೆರುಮಾಲ್  ಮತ್ತು ಇಬ್ಬರು ಕಾರಿಗೆ ನೀರು ಬಿತ್ತು ಎಂದು ಹಸನಬ್ಬನ ಬಳಿ ಬಂದು ಅವರನ್ನು ತಡೆದು ನಿಲ್ಲಿಸಿ ಕಣ್ಣಿಗೆ ಕೈಯಿಂದ ಹೊಡೆದಾಗ ಹಸನಬ್ಬನವರು ಅಂಗಡಿಯ ಒಳಗೆ ಓಡಿದಾಗ ಆರೋಪಿಗಳು ಒಳಗೆ ಬಂದು ಅಂಗಡಿಯಲ್ಲಿದ್ದ ಉದ್ಯೋಗಿಗಳನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ "ನೀವು ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ"ಎಂದು ಬೆದರಿಕೆ ಒಡ್ಡಿ ಅಂಗಡಿಯಲ್ಲಿದ್ದ ಕಪಾಟಿನ ಗ್ಲಾಸನ್ನು ಪುಡಿ ಮಾಡಿ ರೂ 15,000/- ನಷ್ಟ ಉಂಟು ಮಾಡಿರುತ್ತಾರೆ.
 
11.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ ದಿನಾಂಕ 28/03/2014 ರಂದು ಫಿರ್ಯಾದಿದಾರರಾದ ಶ್ರೀ ಹರೀಶ ಶೆಟ್ಟಿ ರವರು ಕರ್ತವ್ಯ ಮುಗಿಸಿ ಬಂದು ರಾತ್ರಿ 9-00 ಗಂಟೆಗೆ ತನ್ನ ಮೋಟಾರು ಸೈಕಲ್  KA19L2078 ನೇಯದನ್ನು ವಿದ್ಯಾನಗರ ಎಂ.ವಿ ಶೆಟ್ಟಿ ಕಾಲೇಜಿನ ಬಳಿಯ ತನ್ನ ನಿವಾಸದ ವಾಹನ ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿದ್ದು, ದಿನಾಂಕ 29/03/2014 ರಂದು ಬೆಳಿಗ್ಗೆ 09-00 ಗಂಟೆಗೆ ಫಿರ್ಯಾದಿದಾರರು ವಾಹನ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ಮೋಟಾರು ಸೈಕಲ್ ಅಲ್ಲಿ ಇಲ್ಲದೇ ಇದ್ದು, ಆಸುಪಾಸಿನಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ, ಮೋಟಾರು ಸೈಕಲ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
 
12.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30/03/2014 ರಂದು ರಾತ್ರಿ 11-00 ಗಂಟೆ ಸಮಯಕ್ಕೆ ಮಂಗಳೂರು ಉತ್ತರ ವಿಭಾಗ ಸಹಾಯಕ ಪೊಲೀಸ್ ಆಯುಕ್ತರ ಆದೇಶದಂತೆ ಪಣಂಬೂರು ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕಿಯಾದ ಶ್ರೀಮತಿ ಭಾರತಿ ಜಿ, ರವರು ಸಿಬ್ಬಂದಿಗಳಾದ ಎ,ಎಸ್,ಐ ನಾಗೇಶ, ಹೆಚ್,ಸಿ 996, ಪಿ,ಸಿ 2160, 2137, 658, 1305, 925 ನೇಯವರೊಂದಿಗೆ ರಾತ್ರಿ 11-30 ಗಂಟೆಗೆ ಪಡುಕೊಡಿ ಗ್ರಾಮದ ರಾಯಿಕಟ್ಟೆ ಕ್ಲಾಡಿ ಡಿ, ಸೋಜಾ ರವರ ಮನೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಮರ-ಗಿಡದ ಮಧ್ಯದಲ್ಲಿ ಯಾರಿಗೂ ಕಾಣದಂತೆ ವಿದ್ಯುತ್ ದೀಪದ ಸಹಾಯದಿಂದ ಹಣವನ್ನು ಪಣವಾಗಿಟ್ಟು ಉಳಾಯಿ-ಪಿದಾಯಿ ಜುಗಾರಿ ಆಟ ಮಾಡುತ್ತಿದ್ದವರನ್ನು ಸುತ್ತುವರಿದು ದಾಳಿ ಮಾಡಿದಲ್ಲಿ ಸುಮಾರು 10 ಜನರನ್ನು ಸಿಬ್ಬಂದಿಗಳ ಸಹಾಯದಿಂದ ಸ್ವಾಧೀನಕ್ಕೆ ತೆಗೆದು  ಅವರುಗಳ ಹೆಸರು ವಿಳಾಸ ತಿಳಿಯಲಾಗಿ 1. ಪ್ರಶಾಂತ 2. ಅಸ್ಪಾಕ್ 3. ರಾಜು. 4. ಶಿವರಾಜ್ 5.ಕೆ, ದಿನೇಶ ಶೆಟ್ಟಿ 6.ಕರಿಯಪ್ಪ 7.ಅಸ್ವಥ್ 8. ಅರುಣ ಡಿ ಸೊಜಾ 9. ಕ್ಲಾಡಿ ಡಿ ಸೋಜಾ ಮತ್ತು 10 ನಿತ್ಯಾನಂದ ಎಂಬವರಾಗಿದ್ದು ಕೆಲವರೂ ಅಲ್ಲಿಂದ ಬದಿಯಲ್ಲಿ ಇರುವ ನೀರಿನ ತೊಡಿಗೆ ಹಾರಿ ದಡ ಸೇರಿ ಪರಾರಿಯಾಗಿದ್ದು ಅವರುಗಳ ಫೈಕಿ ಒರ್ವನ ಹೆಸರು ರೋಶನ್ ಎಂಬುದಾಗಿ ತಿಳಿಯಿತು. ಆಪಾಧಿತರು ಜುಗಾರಿ ಆಟ ಮಾಡುತ್ತಿದ್ದ ಸ್ಥಳದಲ್ಲಿ ದೊರೆತ ಹಣವನ್ನು ಅಜಮಾಯಿಸಿ ನೋಡಲಾಗಿ 1000 ರೂಪಾಯಿಯ 3 ನೋಟುಗಳು, 500 ರೂಪಾಯಿಯ 11 ನೋಟುಗಳು 100 ರೂಪಾಯಿಯ 24 ನೋಟುಗಳು 50 ರೂಪಾಯಿಯ 4 ನೋಟುಗಳು 20 ರೂಪಾಯಿಯ 3 ನೋಟುಗಳು 10 ರೂಪಾಯಿಯ 41 ನೋಟುಗಳು ಮತ್ತು 5 ರೂಪಾಯಿಯನೋಟುಗಳು ಹೀಗೆ ಒಟ್ಟು 11585/- ರೂಪಾಯಿಗಳು ದೊರೆತವು ಜುಗಾರಿ ಆಟಕ್ಕೆ ಉಪಯೋಗಿಸಿದ ಸುಮಾರು 52 ಇಸ್ಪೀಟ್ ಎಲೆ, ವಿದ್ಯುತ್ ಧೀಪಕ್ಕೆ ಉಪಯೋಗಿಸಿದ ವಾಯರ್ ಗಳು 1 ಕಟ್ಟು  ಮತ್ತು ಪ್ರಕಾಶ ಮಾನವಾಗಿ ಉರಿಯ ಬಲ್ಲ ಬಲ್ಬ್-1 ಮತ್ತು ಚಾರ್ಜ್ ಲೈಟ್ -1  ಜುಗಾರಿ ಆಟ ಆಡುವರೇ ಉಪಯೋಗಿಸಿದ ಪ್ಯಾಸ್ಟಿಕ್ ತರ್ಪಾಲ್-1 ಹಳದಿ ಬಣ್ಣದು ಮತ್ತು ಕೆಂಪು ಬಣ್ಣದ ಅಲ್ಲಲಿ ಹರಿದಿರುವ ಮ್ಯಾಟ್ ತರ್ಪಾಲ್ -1 ಗಳನ್ನು ಸ್ವಾಧಿನ ಪಡಿಸಿಕೊಂಡು ಕ್ರಮ ಜರುಗಿಸಿರುವುದಾಗಿದೆ.
 
13.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಯುವರಾಜ್ ಕೆ. ಅಮೀನ್ ರವರು ಮಂಗಳೂರಿನಲ್ಲಿ ವಕೀಲ ವೃತ್ತಿಯನ್ನು ನಡೆಸುತ್ತಿದ್ದು, ಇವರು ತನ್ನ ಅಣ್ಣ ಯಶವಂತ್ ಕೆ. ಅಮೀನ್ ಇವರ ಹೆಸರಿನಲ್ಲಿರುವ KA 19 L 3920 ನೇ ನಂಬ್ರದ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕನ್ನು ಉಪಯೋಗಿಸುತ್ತಿದ್ದು, ದಿನಾಂಕ 29-03-2014 ರಂದು ತನ್ನ ಕೆಲಸ ಮುಗಿಸಿ ಸಂಜೆ ಸುಮಾರು 6 ಗಂಟೆಗೆ ಫಿರ್ಯಾದಿದಾರರ ಕಛೇರಿ ಇರುವ ಮಂಗಳೂರಿನ ಪಿಎಂ ರಸ್ತೆಯಲ್ಲಿರುವ ಭಾರತ್ ಬಿಲ್ಡಿಂಗ್ ನ ಕೆಳಗಡೆ ಪಾರ್ಕಿಂಗ್ ಜಾಗದಲ್ಲಿ ತನ್ನ KA 19 L 3920 ನೇ ನಂಬ್ರದ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕನ್ನು ನಿಲ್ಲಿಸಿ ಹೋಗಿದ್ದು, ಬಳಿಕ ರಾತ್ರಿ ಸುಮಾರು 10:00 ಗಂಟೆಗೆ ಬೈಕ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ ಬೈಕ್ ಸ್ಥಳದಲ್ಲಿ ಇಲ್ಲದೇ ಇದ್ದು ಕಾಣೆಯಾಗಿದ್ದು, ಕಳವಾದ ಬೈಕಿನ ಅಂದಾಝು ಬೆಲೆ- ರೂ. 10500/-   ಆಗಬಹುದು. ಬಳಿಕ ಎಲ್ಲಾ ಕಡೆ ಹುಡುಕಾಡಿದ್ದು, ಈ ವರೆಗೆ ಪತ್ತೆಯಾಗದೇ ಇದ್ದು, ಕಳವಾದ ಬೈಕಿನ ವಿವರ REG. NO-KA-19-W-3920, CHASIS NO. 00L20C15730, ENGINE NO.00L18M15481, MODEL-2000, COLOUR BLACK.
 
14.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ವನಿತಾ [43] ರವರು  ದಿನಾಂಕ 21-03-2014 ರಂದು ತನ್ನ ಅಸೌಖ್ಯದ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದುಪಿರ್ಯಾದಿದಾರರ  ಗಂಡನಾದ ಹೆದ್ದು ಬಾಬು ಗೌಡ [51] ಎಂಬವರು ಅವರ ಆರೈಕೆಯಲ್ಲಿದ್ದವರು, ದಿನಾಂಕ 24-03-2014 ರಂದು ಬೆಳಿಗ್ಗೆ   6-00 ಗಂಟೆಗೆ, ಪಿರ್ಯಾದಿದಾರರಲ್ಲಿ ತಾನು ಊರಿಗೆ  ಹೋಗುತ್ತೆನೆಂದು ಆಸ್ಪತ್ರೆಯಿಂದ ಹೊರಟು ಹೋದವರು, ಮನೆಗೆ ಹೋಗದೇ ಕಾಣೆಯಾಗಿರುತ್ತಾರೆ. ಪಿರ್ಯಾದಿದಾರರು ಕಾಣೆಯಾದ ತನ್ನ ಗಂಡನಾದ ಹೆದ್ದು ಬಾಬು ಗೌಡ ಎಂಬವರ ಪತ್ತೆಯ ಬಗ್ಗೆ ಊರಿನಲ್ಲಿ, ಸಂಬಂಧಿಕರ ಮನೆಯಲ್ಲಿ ಹುಡುಕಾಡಿ ಪತ್ತೆಯಾಗದೇ ಇರುವುದಾಗಿದೆ.        
 
15.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-03-2014 ರಂದು ಬಜ್ಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ನರಸಿಂಹಮೂರ್ತಿ ಪಿ. ರವರು ಮತ್ತು ಸಿಬ್ಬಂಧಿಯವರು ಮಂಗಳೂರು ತಾಲೂಕಿನ, ತೆಂಕುಳಿಪಾಡಿ ಗ್ರಾಮದ, ಪೊಳಲಿ ದ್ವಾರದ ಸಮೀಪ ಲೋಕಸಭಾ ಚುನಾವಣೆಯ ನಿಮಿತ್ತ, ನಿರ್ಮಿಸಲಾದ ತಾತ್ಕಾಲಿಕ ಚಕ್ ಪೋಸ್ಟ್ ನ ಬಳಿ ವಾಹನ ತಪಾಸಣೆಯಲ್ಲಿದ್ದ ಸಮಯ 19-50 ಗಂಟೆಗೆ ಗುರುಪುರ ಕಡೆಯಿಂದ, ಕೈಕಂಬ ಕಡೆಗೆ ಅಶೋಕ್ ರೈ ಎಂಬವರು ಚಲಾಯಿಸಿಕೊಂಡು ಬಂದ ಕೆಎ 19 ಝಡ್ 4361 ನಂಬ್ರದ ವೇಗನರ್ ಕಾರನ್ನು ತಪಾಸಣೆ ಮಾಡಿದಾಗ, ಕಾರಿನೊಳಗೆ ಯಾವುದೇ ಪರವಾನಿಗೆ ಇಲ್ಲದೇ ಓರ್ವ ವ್ಯಕ್ತಿ ಸಾಗಾಟಕ್ಕೆ ನಿಗದಿಪಡಿಸಲಾದ ಪ್ರಮಾಣಕ್ಕಿಂತ ಹೆಚ್ಚಿನ ಅಂದರೆ 180.36 ಲೀಟರ್ ನಷ್ಟು ಬಿಯರ್ ತುಂಬಿದ 372 ಬಾಟಲಿಗಳನ್ನು ಸಾಗಾಟ ಮಾಡಿದ್ದು, ವಶಕ್ಕೆ ತೆಗೆದುಕೊಂಡು ಕ್ರಮ ಜರುಗಿಸಿರುವುದಾಗಿದೆ.

No comments:

Post a Comment