ದೈನಂದಿನ ಅಪರಾದ ವರದಿ.
ದಿನಾಂಕ 18.03.2014 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 2 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸುಸೈನ್ ಪೈ ರವರು ಆರೋಪಿತರಾದ ಸಂತೋಷ್ ಕಾರ್ಕಳ ರವರಿಂದ ಹೊಸ ಪ್ಯಾಕ್ಟರಿಯೊಂದನ್ನು ನಡೆಸುವ ಬಗ್ಗೆ ರೂ 12,45,000 ಲಕ್ಷ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದು ಪ್ಯಾಕ್ಟರಿ ಕಾರ್ಯ ನಿರ್ವಹಿಸಿದ ಬಳಿಕ ಹಣ ಮರು ಪಾವತಿಸುವುದಾಗಿ ಒಪ್ಪಿಕೊಂಡಿದ್ದು ನಂತರ ಕಾರಣಾಂತರಗಳಿಂದ ಪ್ಯಾಕ್ಟರಿ ತೆರಯದೆ ಇದ್ದು ಸದ್ರಿ ಹಣವನ್ನು ವಾಪಸ್ಸು ನೀಡುವ ಬಗ್ಗೆ ಆರೋಪಿತರು ಪಿರ್ಯಾದುದಾರರಿಗೆ ಆಗಾಗ ಪೊನ ಮಾಡಿ ಬೆದರಿಕೆ ಒಡ್ಡುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪಿರ್ಯಾದುದಾರರು ದೂರು ನೀಡಿದ್ದು ಅಲ್ಲಿ 3 ಕಂತಿನಲ್ಲಿ ಆರೋಫಿತರ ಹಣವನ್ನು ಪಿರ್ಯಾದುದಾರರು ಹಿಂತಿರುಗಿಸುವದಾಗಿ ಲಿಖಿತವಾಗಿ ಬರೆದುಕೊಟ್ಟಿರುತ್ತಾರೆ ಆದಾಗ್ಯೂ ದಿನಾಂಕ 14-03-2014 ರಂದು ಸಂಜೆ ಪಿರ್ಯಾದುದಾರರು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಸಂಜೆ ಸುಮಾರು 07:00 ಗಂಟೆ ಸಮಯಕ್ಕೆ ಆರೋಪಿತರು ವ್ಯಕ್ತಿಯೋಬ್ಬರೊಂದಿಗೆ ಪಿರ್ಯಾದುದಾರರ ಮನೆಯೊಳಗೆ ಪ್ರವೇಶಿಸಿ ಪಿರ್ಯಾದುದಾರರ ತಾಯಿಯ ಮುಂದೆ ನಿಮ್ಮ ಮಗನನ್ನು ಬಿಡುವುದಿಲ್ಲ ನನ್ನಿಂದ ಪಡೆದ ಹಣವನ್ನು ಇವತ್ತೆ ಹಿಂತಿರುಗಿಸಬೇಕು ಇಲ್ಲದಿದ್ದರೆ ಅವನನ್ನು ಕೊಲ್ಲುತ್ತ್ತೇನೆ ಅವನ ಮೇಲೆ ಅಟ್ರಾಸಿಟಿ ಕೇಸ್ ಹಾಕುತ್ತೇನೆ . ನಿಮ್ಮನ್ನು ನಿಮ್ಮ ಕುಟುಂಬದವರನ್ನು ಉಳಿಸುವುದಿಲ್ಲ ನನ್ನ ಕೈಯಲ್ಲಿರುವ ನಿಮ್ಮ ಮಗನ ಪಾಸಪೋರ್ಟ ಉಪಯೋಗಿಸಿ ನಿಮ್ಮ ಮಗನಿಗೆ ತೊಂದರೆ ಮಾಡುತ್ತೇನೆ ಎಂಬಿತ್ಯಾದಿಯಾಗಿ ಬೈಯ್ದದ್ದು ಇದರಿಂದ ಕ್ಯಾನ್ಸರ್ ರೊಗಿಯಾದ ಪಿರ್ಯಾದುದಾರರ ತಾಯಿಯವರು ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ ಅಲ್ಲದೆ ಪಿರ್ಯಾದುದಾರರ ಮೋಬೈಲಗೆ 9886770885 ಈ ನಂಬ್ರದಿಂದ ಹಿಂದಿಯಲ್ಲಿ ಯಾರೋ ಹಣದ ಬಗ್ಗೆ ಮಾತಾಡಿ ಬೆದರಿಕೆ ಹಾಕಿರುವುದು.
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಬೋಳಿಯಾರು ಗ್ರಾಮದ ಅಮ್ಮೆಂಬಳ ಕೋಟೆ ಮನೆ, ಧರ್ಮನಗರ ಎಂಬಲ್ಲಿನ ವಾಸಿ ಮಹಮ್ಮದ್ ರಿಯಾಜ್ರವರೊಂದಿಗೆ ದಿನಾಂಕ 18-03-2013 ರಂದು ಪಿರ್ಯಾದಿದಾರರಾದ ಶ್ರೀಮತಿ ಹಪ್ಸಾ ಬಾನು ರ ಮದುವೆಯಾಗಿದ್ದು, ಮದುವೆ ಸಮಯದಲ್ಲಿ ಗಂಡನ ಕಡೆಯವರಿಗೆ ರೂ 3,00,000/- ವರದಕ್ಷಿಣೆ ಹಾಗೂ 15 ಪವನ್ ಚಿನ್ನವನ್ನು ಕೂಡಾ ಕೊಟ್ಟಿರುತ್ತಾರೆ. ತದನಂತರ ಆರೋಪಿಗಳಾದ ಗಂಡ ಮಹಮ್ಮದ್ ರಿಯಾಜ್, ಮಾವ ಹಸನಬ್ಬ, ಗಂಡನ ಅಣ್ಣ ರಫೀಕ್ ಮತ್ತು ಗಂಡನ ತಾಯಿಯ ತಮ್ಮ ಹಮೀದ್ರವರು ಸೇರಿ ಹೆಚ್ಚುವರಿ 15 ಪವನ್ ಚಿನ್ನವನ್ನು ಮತ್ತು ಹಣವನ್ನು ತವರು ಮನೆಯಿಂದ ತರಬೇಕೆಂದು ಒತ್ತಾಯ ಮಾಡಿ ವರದಕ್ಷಿಣೆಯ ಬಗ್ಗೆ ಆಗಾಗ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟು, ಕೈಯಿಂದ ಹೊಡೆದು ಪಿರ್ಯಾದಿದಾರರಿಗೆ ಅವ್ಯಾಚ್ಯ ಶಬ್ದದಿಂದ ಬೈದು, ಜೀವ ಬೆದರಿಕೆಯನ್ನು ಕೂಡಾ ಹಾಕಿರುತ್ತಾರೆ ಹಾಗೂ ಪಿರ್ಯಾದಿದಾರರನ್ನು ತವರು ಮನೆಗೆ ವಾಪಾಸು ಕಳುಹಿಸಿಕೊಟ್ಟಿರುತ್ತಾರೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15.3.2014 ರಂದು ಸಮಯ ಸುಮಾರು ಮದ್ಯಾಹ್ನ 12.45 ಗಂಟೆಗೆ ಮೋಟರ್ ಸೈಕಲ್ ನಂಬ್ರ KA19-V-5765ನ್ನು ಅದರ ಸವಾರ ಮಲ್ಲಿಕಟ್ಟೆ ಕಡೆಯಿಂದ ಭಾರತ್ ಬೀಡಿ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಸಿಟಿ ಆಸ್ಪತ್ರೆ ಎದುರು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದುದಾರರಾದ ಶ್ರೀ ಮೋಹನ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ರಸ್ತೆಗೆ ಬಿದ್ದು ,ಬಲಕಾಲಿಗೆ ಗಂಭೀರ ಸ್ವರೂಪದ ಗುದ್ದಿದ ಗಾಯ ಉಂಟಾಗಿ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕೆತ್ಸೆಯಲ್ಲಿರುತ್ತಾರೆ.
4.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಾನ್ಯ ನ್ಯಾಯಾಲಯದ ಅಧಿಕಾರವ್ಯಾಪ್ತಿಗೊಳಪಟ್ಟ ಕಾವೂರು ಪೊಲೀಸ್ ಠಾಣಾ ಸರಹದ್ದಿನ ಕಾವೂರು ಗ್ರಾಮದ ಶಿವನಗರ ಎಂಬಲ್ಲಿಯ ಮನೆ ಸಂಖ್ಯೆ:3-48/1 ರಲ್ಲಿ ವಾಸವಾಗಿರುವ ಪ್ರಕರಣದ ಪಿರ್ಯಾದುದಾರರಾದ ಶ್ರೀಮತಿ: ಪೋರಿನ್ ಲೀನಾ ಮೋರಾಸ್ ಎಂಬವರಿಗೆ ದಿನಾಂಕ:16-03-2013 ರಂದು ತನ್ನ ಗಂಡ ಶ್ರೀ ಹೆನ್ರಿ ಮೋರಾಸ್ ಎಂಬವರು ತನ್ನನ್ನು ಮತ್ತು ತನ್ನ ಮಕ್ಕಳನ್ನು ಮನೆ ಬಿಟ್ಟು ಹೋಗುವಂತೆ ಬಲವಂತ ಮಾಡಿದ್ದಲ್ಲದೇ "ನಿಮಗೇನು ಈ ಮನೆಯಲ್ಲಿ ನಿಲ್ಲುವ ಹಕ್ಕಿಲ್ಲ, ನಿಮ್ಮನ್ನು ಹೊಡೆದು ಸಾಯಿಸುತ್ತೇನೆ" ಎಂಬುದಾಗಿ ಅವಾಚ್ಯಶಬ್ದದಿಂದ ಬೈದು ಕೊಲೆಬೆದರಿಕೆಯನ್ನು ಒಡ್ಡಿರುವುದಲ್ಲದೇ ಪಿರ್ಯಾದುದಾರರಿಗೆ ಮಾನಸಿಕ ಹಿಂಸೆ ಹಾಗೂ ದೈಹಿಕ ಕಿರುಕುಳವನ್ನು ನೀಡಿರುತ್ತಾರೆ.
5.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-03-2014 ರಂದು ಸಂಜೆ ಸುಮಾರು 5-00 ಗಂಟೆಯಿಂದ ಈ ದಿನ ದಿನಾಂಕ 17-03-2014 ರಂದು ಬೆಳಿಗ್ಗೆ ಸುಮಾರು 06-00 ಗಂಟೆ ಮದ್ಯೆ ಯಾರೋ ಕಳ್ಳರು ಪಿರ್ಯಾದುದಾರರಾದ ಶ್ರೀ ಹಸನಬ್ಬಾ ರವರ ಮನೆ ಹಿಂಬದಿ ಕಟ್ಟಿ ಹಾಕಿದ್ದ ಆಸ್ಟೀನ್ ಜಾತಿಯ ಗಬ್ಬದ ದೊಡ್ಡ ದನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-03-2014 ಪಿರ್ಯಾದಿದಾರರಾದ ಶ್ರೀಮತಿ ನಮೀತಾ ರವರು ತಮ್ಮ ಮನೆ ವಾಮಂಜೂರಿನಿಂದ ಮಂಗಳೂರು ಕಡೆಗೆ ತಮ್ಮ ಬಾಬ್ತು KA 19 MC 6248 ನೇ ನಂಬ್ರದ ಮಾರುತಿ ಆಲ್ಟೋ ಕಾರಿನಲ್ಲಿ ತನ್ನ ಮಕ್ಕಳನ್ನು ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯಕ್ಕೆ ಬಿಡುವ ಬಗ್ಗೆ ಹೊರಟು ಕಾರನ್ನು ಚಲಾಯಿಸಿಕೊಂಡು ಬರುತ್ತಾ ಬೆಳಿಗ್ಗೆ ಸುಮಾರು 7-40 ಗಂಟೆಗೆ ಕುಲಶೇಖರ ಚೌಕಿ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಹಿಂದುಗಡೆಯಿಂದ ಅಂದರೆ, ವಾಮಂಜೂರು ಕಡೆಯಿಂದ KA 19 P 2695 ನೇ ನಂಬ್ರದ ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಹಿಂದುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರ ಕಾರು ಒಮ್ಮೆಲೆ ಮುಂದಕ್ಕೆ ಚಲಾಯಿಸಿ ರಸ್ತೆಯ ಬಲಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದು , ಪರಿಣಾಮ ಪಿರ್ಯಾದಿದಾರರ ಕಾಲಿಗೆ ಗುದ್ದಿದ ಗಾಯ ಮತ್ತು ಕಾರಿನ ಮುಂಭಾಗ ಮತ್ತು ಹಿಂಭಾಗ ಜಖಂ ಗೊಂಡಿರುತ್ತದೆ. ಪಿರ್ಯಾದಿದಾರರು ಸಿಟಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.
No comments:
Post a Comment