Friday, March 28, 2014

Daily Crime Reports 28-03-2014

ದೈನಂದಿನ ಅಪರಾದ ವರದಿ.

ದಿನಾಂಕ 28.03.201409:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

2

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

2

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

9

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

2

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24/03/2014 ರಂದು ಮದ್ಯಾಹ್ನ ಸುಮಾರು 12:20 ಗಂಟೆಗೆ ಮೋಟಾರ್ ಸೈಕಲ್ ನಂಬ್ರ KA-19-EB-7537 ನೇ ದನ್ನು ಅದರ ಸವಾರ ಮಂಗಳಾದೇವಿ ಕಡೆಯಿಂದ ಮುಳಿಹಿತ್ಲು ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಕೊಂಡು ಬಂದು ಕಲ್ಲುರ್ಟಿ ದೈವಸ್ಥಾನದ ಬಳಿ ತಲುಪುವಾಗ ಬೋಳಾರ ಕಡೆಯಿಂದ ಮಂಗಳಾದೇವಿ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ KA-19-Q-6523 ನೇ ದಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೋಟಾರ್ ಸೈಕಲ್ ನಲ್ಲಿದ್ದ ಫಿರ್ಯಾದುದಾರರಾದ ಶ್ರೀ ಸುರೇಶ್ ಮೂಲ್ಯ ರವರ ಬಲಕಾಲಿನ ಹಿಮ್ಮಡಿಗೆ ರಕ್ತಗಾಯ ಉಂಟಾಗಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಆರೋಪಿ ಗಾಯಾಳುವಿನ ಖರ್ಚು ಭರಿಸುತ್ತೇನೆ ಎಂದು ಹೇಳಿ ನಂತರ ನಿರಾಕರಿಸಿರುತ್ತಾರೆ ಅಲ್ಲದೆ ಆರೋಪಿ ಅಪಘಾತದ ನಂತರ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಿಲ್ಲ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-03-2014 ರಂದು ಸಮಯ ಸುಮಾರು 13.00 ಗಂಟೆಗೆ ಆಕ್ಟಿವಾ ಹೊಂಡಾ ಸ್ಕೂಟರ್ ನಂಬ್ರ KA19-EJ-5348 ನ್ನು ಅದರ ಸವಾರ ಹಂಪನಕಟ್ಟೆ ಕಡೆಯಿಂದ .ಬಿ ಶೆಟ್ಟಿ ವೃತ್ತದ ಕಡೆಗೆ  U.P ಮಲ್ಯ ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು RTO ಕಛೇರಿ ಬಳಿ ಮುಂದಿನಿಂದ ಹೋಗುತ್ತಿದ್ದ ಸ್ಕೂಟರ್ ನಂಬ್ರ KA19-EH-9195 ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರಾದ ಶ್ರೀ ನಿತಿನ್ ಕುಮಾರ್ ರವರು ರಸ್ತೆಗೆ ಬಿದ್ದು ಎಡಕಾಲಿನ ಮೊಣಗಂಟಿಗೆ ಗುದ್ದಿದ ನೋವು ಉಂಟಾಗಿ  SCS ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿ ಚಿಕೆತ್ಸೆಯಲ್ಲಿರುತ್ತಾರೆ.

 

3.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25.03.2014 ರಂದು 17-00 ಗಂಟೆಗೆ ಗಾಯಾಳು  ಸುಬ್ಬ ಎಂಬವರು ತೋಡಾರು ಜಂಕ್ಷನ್ ಬಳಿ ತಲೆ ಕೂದಲು ತೆಗೆಯುವರೇ  ರಸ್ತೆಯನ್ನು  ಸಂಪೂರ್ಣವಾಗಿ ದಾಟುವ ಸಮಯ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ  ಕೆಎ-19-ಎಂಎ-156 ನೇ ಯದರ ಚಾಲಕರು  ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ರಸ್ತೆಯ ಅಂಚಿನಲ್ಲಿದ್ದ ಸುಬ್ಬ ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ ಸುಬ್ಬರವರು ರಸ್ತೆಗೆ ಬಿದ್ದು  ಬಲ ಬದಿಯ ತಲೆಗೆ ಗಂಬೀರ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರು ಇಂಡಿಯಾನಾ  ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

4.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27-03-2014 ರಂದು  13.05 ಗಂಟೆ ಸಮಯಕ್ಕೆ  ಬೆಳ್ತಂಗಡಿಯಿಂದ ಕಾರ್ಕಳದ ಕಡೆ ಪಿರ್ಯಾದಿದಾರರಾದ ಶ್ರೀ ಸತಿಶ್ ಕುಮಾರ್ ರವರು ಪ್ರಯಾಣಿಸುತ್ತಿದ್ದ ಬಸ್ ನಂಬ್ರ ಕೆಎ-20-ಸಿ-7009 ನೇಯದನ್ನು ಅದರ ಚಾಲಕ ಅಯೂಬ್ ಎಂಬವರು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಮಂಗಳೂರು ತಾಲೂಕು ನೆಲ್ಲಿಕಾರು ಗ್ರಾಮದ ಪೆರ್ನೋಡಿ ಎಂಬಲ್ಲಿ ತನ್ನ ಎದುರಿನಿಂದ ಅಂದರೆ ಕಾರ್ಕಳ ಕಡೆಯಿಂದ ಬೆಳ್ತಂಗಡಿ ಕಡೆ ಬರುತ್ತಿದ್ದ ಕಾರು ನಂಬ್ರ ಕೆಎ-19-ಎಂಸಿ-8050 ನೇಯದಕ್ಕೆ ಢಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಬಸ್ಸಿನಲ್ಲಿ ಟಿಕೆಟ್ ನೀಡುತ್ತಿದ್ದ ಕಂಡೆಕ್ಟರ್ ಸುಧಾಕರ ಎಂಬವರು ಹಿಡಿತ ತಪ್ಪಿ ಬಸ್ಸಿನಿಂದ ಹೊರಕ್ಕೆ, ರಸ್ತೆಗೆ ಎಸೆಯಲ್ಪಟ್ಟು, ತೀವ್ರ ರೀತಿಯಲ್ಲಿ ಗಾಯಗೊಂಡು  ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ, ಅಲ್ಲದೇ ಕಾರಿನಲ್ಲಿದ್ದವರು ಕೂಡ ಗಾಯಗೊಂಡಿರುತ್ತಾರೆ.

 

5.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26.03.2014 ರಂದು ಪಿರ್ಯಾದಿದಾರರಾದ ಶ್ರೀ ರಮೇಶ್ ಶೆಟ್ಟಿ ರವರು ಆಲಂಗಾರು ಪೇಟೆಗೆ ಬರುವರೇ ತನ್ನ ಸೈಕಲ್ ನಲ್ಲಿ ಮನೆಯಿಂದ ಹೊರಟು, ಸುಮಾರು 19:00 ಗಂಟೆಗೆ ಮಂಗಳೂರು ತಾಲೂಕು ಪುತ್ತಿಗೆ ಗ್ರಾಮದ ಪುತ್ತಿಗೆ ದೇವಸ್ಥಾನದ ದ್ವಾರದ ಬಳಿ ತಲುಪಿದಾಗ ಕಡಂದಲೆ ಕಡೆಯಿಂದ ಆಲಂಗಾರು  ಕಡೆಗೆ ಮೋಟಾರ್ ಸೈಕಲ್ ಸವಾರರೋರ್ವರು ತನ್ನ ಮೋಟಾರ್ ಸೈಕಲನ್ನು ಅತೀ ವೇಗ ಹಾಗೂ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದು ಪಿರ್ಯಾದಿದಾರರ ಸೈಕಲ್ ಗೆ ಢಿಕ್ಕಿಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ಸೈಕಲ್ ಸಮೇತ ರಸ್ತೆಗೆ ಬಿದ್ದು,ಬಲಕಾಲಿನ ಕೋಲುಕಾಲಿಗೆ, ಬಲಕೈಯ ತಟ್ಟಿಗೆ ಗುದ್ದಿದ ನೋವಾಗಿದ್ದು, ಎಡಕಣ್ಣಿನ ಎಡಬದಿಯಲ್ಲಿ ರಕ್ತಗಾಯವಾಗಿದ್ದು, ಬಲಕಾಲಿನ ಮಣಿಗಂಟಿನ ಬಳಿ ತರಚಿದ ಗಾಯವಾಗಿದ್ದು,  ಎದೆಯ ಬಳಿ ಗುದ್ದಿದ ನೋವುಂಟಾಗಿರುತ್ತದೆ. ಅಲ್ಲದೇ ಅಪಘಾತಪಡಿಸಿದ ಮೋಟಾರ್ ಸೈಕಲ್ ಸಹ ರಸ್ತೆಗೆ ಬಿದ್ದು, ಜಖಂಗೊಂಡಿದ್ದು, ಸವಾರನ ಮುಖಕ್ಕೆ ಹಾಗೂ ಎಡತೊಡೆಗೆ ಗುದ್ದಿದ ನೋವುಂಟಾಗಿದ್ದು,  ವಾಹನದ ನಂಬ್ರ ನೋಡಲು ರಾತ್ರಿಯಾದುದರಿಂದ ಅಸಾಧ್ಯವಾಗಿರುತ್ತದೆ.

 

6.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-03-2014 ರಂದು ಸಂಜೆ ಸುಮಾರು 16-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ವನೀತಾ ಶೆಟ್ಟಿಗಾರ್ ರವರು ನಂತೂರಿನಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ನಿಂದ ಇಳಿದು ಮಂಗಳೂರು ನಗರದ ಬಿಕರ್ನಕಟ್ಟೆಯ ಹಳೇ ಪೊಲೀಸ್ ಠಾಣೆಯ ಎದುರುಗಡೆ ರಸ್ತೆಯಲ್ಲಿರುವ ತನ್ನ ತಂಗಿ ಉಮಾ ತಾರನಾಥ್ ರವರ ಮನೆಗೆ ಹೆದ್ದಾರಿಯಿಂದಾಗಿ ಇಂಟರ್ ಲಾಕ್ ಹಾಸಿದ ಒಳರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯ ದ್ವಿ-ಚಕ್ರ ವಾಹದಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ಮುಂದಕ್ಕೆ ತಮ್ಮ ಬೈಕನ್ನು ಚಲಾಯಿಸಿಕೊಂಡು ಹೋಗಿ ನಂತರ ತಿರುಗಿಸಿಕೊಂಡು ಅತೀ ವೇಗವಾಗಿ ಚಲಾಯಿಸಿಕೊಂಡು ಪಿರ್ಯಾದಿದಾರರ ಬಳಿ ಬಂದು ಸದ್ರಿಯವರ ಕುತ್ತಿಗೆಯಲ್ಲಿದ್ದ ಸುಮಾರು 38 ಗ್ರಾಂ ತೂಕವಿರುವ ಅಂದಾಜು ಮೌಲ್ಯ 76,000/- ರೂ ಬೆಲೆ ಬಾಳುವ  ಚಿನ್ನದ ಮುತ್ತಿನ ಸರವನ್ನು ಏಕಾಏಕಿ ಕೈಹಾಕಿ ಕಿತ್ತು ಲೂಟಿ ಮಾಡಿಕೊಂಡು ಹೋಗಿರುವುದಾಗಿದೆ.

 

7.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಕುಶಾಲಾ ರವರ ಗಂಡ ಎಂ.ಆರ್.ಕುಮಾರ್ @ ರತ್ನಾಕರ್ ರವರು ಸ್ವಂತ ರಿಕ್ಷಾದಲ್ಲಿ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿರುವುದಾಗಿದೆ. ಫಿರ್ಯಾದಿದಾರರ ಗಂಡ ದಿನಾಂಕ 22-03-2014 ರಂದು ಸಾಯಂಕಾಲ ಸುಮಾರು 4:00 ಗಂಟೆಗೆ ಮೂಡಬಿದ್ರೆಯಲ್ಲಿರುವ ಫಿರ್ಯಾದಿದಾರರ ತಂಗಿ ಮಲ್ಲಿಕಾಳ ಗಂಡ ಹರೀಶ್ ರವರ ಜೊತೆ ಟಿಪ್ಪರ್ ಕಲಿಯುವ ಸಲುವಾಗಿ ಹೊರಟಿದ್ದು, ರಾತ್ರಿ 9 ಗಂಟೆಯಾದರೂ ಬಾರದೇ ಇದ್ದಾಗ ಅವರ ಮೊಬೈಲ್ ನಂ 8088485991 ಕ್ಕೆ ಫೋನ್ ಮಾಡಿದಾಗ ರಿಂಗ್ ಆಗುತ್ತಿದ್ದು, ಬಳಿಕ ಹರೀಶ್ ರವರ ಮೊಬೈಲ್ ನಂಬ್ರ 9342212211 ಕ್ಕೆ ಕರೆ ಮಾಡಿದಾಗ ಫಿರ್ಯಾದಿದಾರರ ಗಂಡನವರು ಅವರ ಸ್ನೇಹಿತ ಆಂಡ್ರ್ಯೂ ಎಂಬಾತನಿಂದ ಫೋನ್ ಬಂದ ಕಾರಣ ಹೋಗಿರುತ್ತಾರೆ ಎಂದು ತಿಳಿಸಿದ್ದು, ದಿನಾಂಕ 24-03-2014 ವರೆಗೆ ಮನೆಗೆ ವಾಪಾಸ್ಸು ಮನೆಗೆ ಬಾರದೇ ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದ ಕಾರಣ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರನ್ನು ನೀಡಿದ್ದು, ಬಳಿಕ ದಿನಾಂಕ 23-03-2014 ರಂದು ಢಾನ್  ಬಾಸ್ಕೋ ಹಾಲಿನ ಮುಂಭಾಗ ರಸ್ತೆ ಫುಟ್ ಫಾತಿನಲ್ಲಿ ಒಬ್ಬ ಗಂಡಸಿನ ಶವ ದೊರೆತ ಮಾಹಿತಿ ದಿನಾಂಕ 26-03-2014 ರಂದು ಸಿಕ್ಕಿದ್ದು ಶವವನ್ನು ವೆನ್ ಲಾಕ್ ಶವಾಗಾರದಲ್ಲಿ ಪರಿಶೀಲಿಸಿದಲ್ಲಿ ಫಿರ್ಯಾದಿದಾರರ ಗಂಡನದ್ದೇ ಅಂತ ಗುರುತಿಸಿದ್ದು, ಈ ಬಗ್ಗೆ ಫಿರ್ಯಾದಿದಾರರ ಗಂಡನನ್ನು ಅವರ ಸ್ನೇಹಿತ ಫಳ್ನೀರಿನ ಆಂಡ್ರ್ಯೂ ಮತ್ತು ಇತರರು ಸೇರಿಕೊಂಡು ವ್ಯವಹಾರದ ದ್ವೇಷದಿಂದ ಕೊಲೆ ಮಾಡಿ ಢಾನ್  ಬಾಸ್ಕೋ ಹಾಲಿನ ಮುಂಭಾಗ ರಸ್ತೆ ಫುಟ್ ಫಾತಿನಲ್ಲಿ ಹಾಕಿರಬಹುದೆಂಬ ಬಲವಾದ ಗುಮಾನಿ ಇರುವುದಾಗಿದೆ.

 

8.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಲೋಕಸಭಾ ಸಾರ್ವತ್ರಿಕ ಚುನಾವಣೆ 2014 ದಿನಾಂಕ 17-03-2014 ರಂದು ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಜನಾರ್ಧನ ಪೂಜಾರಿಯವರು ಚುನಾವಣಾ ಪ್ರಚಾರ ಸಂದರ್ಭ ಕಾಂಗ್ರೇಸ್ ಕಛೇರಿಯಲ್ಲಿ ಆಯೋಜಿಸಲಾದ ಪತ್ರಿಕಾ ಗೋಷ್ಠಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯು 14-15 ನೇ ಸಾಲಿಗೆ ಸ್ವಯಂ ಆಸ್ತಿ ತೆರಿಗೆ ಮತ್ತು ಘನ ತ್ಯಾಜ್ಯ ವಿಲೇವಾರಿ ಕರವನ್ನು ಮಹಾನಗರ ಪಾಲಿಕೆ ಹೆಚ್ಚಿಸಿದ ಬಗ್ಗೆ ಪತ್ರಿಕಾ ಗೋಷ್ಟಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಹೇಳಿಕೆಯನ್ನು ನೀಡಿರುತ್ತಾರೆ ಎಂದು 203 ನೇ ಮಂಗಳೂರು ನಗರ ದಕ್ಷಿಣ ವಿ..ಕ್ಷೇತ್ರ ಇದರ ಸೆಕ್ಟರ್ ಮ್ಯಾಜಿಸ್ಟ್ರೇಟ್ ಆದ ಫಿರ್ಯಾದಿದಾರರಾದ ಶ್ರೀ ಜಿ.ವಿ. ರಾಜಶೇಖರ್ ರವರಿಗೆ ದೂರು ಬಂದಿದ್ದು, ಬಳಿಕ ಸದ್ರಿ ಪತ್ರಿಕಾ ಗೋಷ್ಟಿಗೆ ಸಂಬಂಧಿಸಿದಂತೆ ವೀಡಿಯೋ ವೀವಿಂಗ್ ತಂಡದವರಿಂದ ಸಿಡಿಯನ್ನು ಪರಿಶೀಲಿಸಿದ್ದು, ವೀಡೀಯೋ ತುಣುಕಿನಲ್ಲಿ " ನಾವು ತೆರಿಗೆಯನ್ನು ಏರಿಸುವುದಿಲ್ಲ, ಕಾಂಗ್ರೇಸ್ ಮಾಡುವುದಿಲ್ಲ, ಪೂಜಾರಿ ಮಾಡಲಿಕ್ಕೆ ಬಿಡುವುದಿಲ್ಲ ಭರವಸೆಯನ್ನು ನಮ್ಮ ಜನರಿಗೆ ನಾವು ಕೊಡುತ್ತಾ ಇದ್ದೇವೆ"ಎಂದು ಹೇಳಿರುತ್ತಾರೆ. ಮೇಲ್ನೋಟಕ್ಕೆ ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ  ಆಗಿರುತ್ತದೆ.

 

9.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-03-2014 ರಂದು  ಬೆಳಿಗ್ಗೆ 9-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕೆ. ರಾಧಾಕೃಷ್ಣ ರಾವ್, ಜ್ಯೂನಿಯರ್ ಇಂಜಿನಿಯರ್ ಮೆಸ್ಕಾಂ ರವರು ಸಿಬ್ಬಂದಿಗಳೊಂದಿಗೆ ಕಚೇರಿಯಲ್ಲಿರುವ ಸಮಯ, ಶಕ್ತಿ ಇಲೆಕ್ಟ್ರಿಕಲ್ಸ್ ಮಾಲಿಕರಾದ  ಸುಮಿತ್ ರಾಜ್ ಎಂಬಾತನು ತನ್ನ ಜೊತೆ ಒಬ್ಬಾತನನ್ನು ಕರೆದುಕೊಂಡು ಬಂದು ಕಚೇರಿಗೆ ಅಕ್ರಮವಾಗಿ ಒಳಪ್ರವೇಶಿಸಿ,  ಕರ್ತವ್ಯದಲ್ಲಿದ್ದ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ,  ಪಿರ್ಯಾದಿದಾರರಿಗೆ ಹಾಗೂ  ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದುದಲ್ಲದೇ, ಸುಮಿತ್ ರಾಜ್ ನು, ತನ್ನ ಕೈಯಲ್ಲಿದ್ದ ಕತ್ತಿಯನ್ನು  ಪಿರ್ಯಾದಿದಾರರ ಕುತ್ತಿಗೆಗೆ ಒತ್ತಿ ಹಿಡಿದು, ಬಳಿಕ ಪಿರ್ಯಾದಿದಾರರನ್ನು ಕೈಯಿಂದ ಎಳೆದು ಹಲ್ಲೆ ನಡೆಸಿದ್ದಲ್ಲದೇ, ಸುಮಿತ್ ರಾಜ್ ಎಂಬವನ ಜೊತೆಯಲ್ಲಿ ಬಂದಿದ್ದ ಇನ್ನೋರ್ವ ನು ಕೂಡಾ ತನ್ನ ಕೈಯಲ್ಲಿದ್ದ  ದೊಡ್ಡ ಕತ್ತಿಯನ್ನು ಪಿರ್ಯಾದಿದಾರರ ಕುತ್ತಿಗೆಗೆ ಒತ್ತಿ ಹಿಡಿದು ಗಾಯಗೊಳಿಸಿದ್ದುದಲ್ಲದೇ, ಸುಮಿತ್ ರಾಜ್ ನು ಪಿರ್ಯಾದಿದಾರರನ್ನು ಉದ್ದೇಶಿಸಿ " ಸಂಜೆಯೊಳಗೆ ನಾನು ನಿನ್ನನ್ನು ಸಾಯಿಸುತ್ತೇನೆ. ನೀನು ಇವತ್ತು ಹೇಗೆ ಮನೆಗೆ ಹೋಗುತ್ತಿ"  ಎಂದು ಜೀವ ಬೆದರಿಕೆ ಯನ್ನು ಹಾಕಿರುವುದಾಗಿದೆ. ಆರೋಪಿ ಸುಮಿತ್ ರಾಜ್ ನು ವಿದ್ಯುತ್ ಗುತ್ತಿಗೆದಾರನಾಗಿದ್ದು, ಈತನು ದಿನಾಂಕ 26-03-2014 ರಂದು ತಾತ್ಕಾಲಿಕ ವಿದ್ಯುತ್ ಸಂಪರ್ಕ ಪುನರ್ ಸಂಪರ್ಕ  ಕಲ್ಪಿಸುವ ವಿಚಾರದಲ್ಲಿ ಸಂಜೆಯ ಪಾಳಿಯ ನೌಕರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದೇ ವಿಷಯದ ಬಗ್ಗೆ ಬೆಳಿಗ್ಗೆ ಕಚೇರಿಗೆ ಅಕ್ರಮವಾಗಿ ಪ್ರವೇಶಿಸಿ, ಕರ್ತವ್ಯದಲ್ಲಿದ್ದ ಪಿರ್ಯಾದಿದಾರರಿಗೆ ಮತ್ತು ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ, ಜೀವಬೆದರಿಕೆಯನ್ನು ಒಡ್ಡಿ, ಸಾರ್ವಜನಿಕ ಕರ್ತವ್ಯದಲ್ಲಿದ್ದ ಪಿರ್ಯಾದಿದಾರರಿಗೆ ಮತ್ತು ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿರುವುದಾಗಿದೆ.

 

10.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26-03-2014 ರಂದು ಬಜಪೆ ಕಡೆಯಿಂದ ಕೈಕಂಬ ಕಡೆಗೆ ಮೋಟಾರು ಸೈಕಲ್ ನಲ್ಲಿ ಹೋಗುತ್ತಿರುವ ಸಮಯ ಫಿರ್ಯಾದಿದಾರರಾದ ಶ್ರೀ ರವಿರಾಜ್ ಶೆಟ್ಟಿ ರವರ ಎದುರಿನಿಂದ ಹೋಂಡಾ ಆಕ್ಟಿವಾ ನಂಬ್ರ ಕೆಎ 19 ವಿ 5525 ನೇದರಲ್ಲಿ ಪರಿಚಯದ ಶರ್ಮಿಳಾ ಎಂಬವರು ಸುಂಕದಕಟ್ಟೆಗೆ ಅವರ ಮನೆಯ  ಕಡೆಗೆ ಹೋಗುತ್ತಿದ್ದು, ಬೆಳಿಗ್ಗೆ 9-15 ಗಂಟೆ ಸಮಯಕ್ಕೆ  ಅವರ ಎದುರಿನಿಂದ ಅಂದರೆ ಕೈಕಂಬ ಕಡೆಯಿಂದ ಬಜಪೆ ಕಡೆಗೆ  ಕೆಎ 19 ಇಡಿ 1995 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರರು  ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು , ಒಂದು ವಾಹನವನ್ನು ಓವರ್ ಟೇಕ್ ಮಾಡಿ  ತೀರಾ ಬಲಬದಿಗೆ ಬಂದು ಮಂಗಳೂರು ತಾಲೂಕು, ಪಡುಪೆರಾರ ಗ್ರಾಮದ ಸುಂಕದಕಟ್ಟೆ ಎಂಬಲ್ಲಿ ಶ್ರೀಮತಿ ಶರ್ಮಿಳಾ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಹೋಂಡಾ ಆಕ್ಟಿವಾ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡದ್ದಲ್ಲದೇ, ಶರ್ಮಿಳಾ ರವರಿಗೆ ತೀವ್ರ ತರಹದ ಗಾಯವೂ, ಬೈಕ್ ಸವಾರ ಪುಷ್ಪರಾಜ್ ಮತ್ತು ಸಹ ಸವಾರ ಜಯಂತ್ ರವರಿಗೆ  ಸಾದಾ ತರಹದ ಗಾಯಗಳಾಗಿರುತ್ತದೆ.

 

11.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ: 27-03-2014 ರಂದು ಬೆಳಿಗ್ಗೆ 07-30 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ಎ. ಅಬ್ದುಲ್ ಖಾದರ್ ರವರ ಮಗ, 12 ವರ್ಷ ಪ್ರಾಯದ ಮಹಮ್ಮದ್ ಉನೈಸ್ ರವರು  ಮದರಸಕ್ಕೆ ಹೋಗಿ ವಾಪಾಸು ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಾ  , ಮಂಗಳೂರು ತಾಲೂಕಿನ,  ಅಡ್ಡೂರು ಗ್ರಾಮದ ಸಲ್ಲಾಜೆ ಎಂಬಲ್ಲಿ ಅಡ್ಡೂರು ಕಡೆಯಿಂದ ಕೆಎ 19 ಇಡಿ  7592 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಸಿಕೊಂಡು ಬಂದು ಮಹಮ್ಮದ್ ಉನೈಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಹಮ್ಮದ್ ಉನೈಸ್ ರವರ ಬಲಕಾಲಿನ ಬೆರಳಿಗೆ ಜಖಂ ಆಗಿ  ಎಲುಬು ತುಂಡಾಗಿ  ತೀವ್ರ ತರಹದ ಗಾಯವುಂಟಾಗಿದ್ದು, ಸದ್ರಿಯವರನ್ನು ಚಿಕಿತ್ಸೆಯ ಕುರಿತು ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿರುವುದಾಗಿದೆ.  

 

12.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-03-2014 ರಂದು  ರಾತ್ರಿ 11-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ರಾಕೇಶ್ ಕುಮಾರ್ ರವರ ದೊಡ್ಡಮ್ಮ ಶ್ರೀಮತಿ ಕಮಾಲಾಕ್ಷಿಯವರು ಅವರ ಮನೆಯ ಮುಂಬಾಗಿಲ ಬಾಗಿಲನ್ನು ಭದ್ರಪಡಿಸಿ ಮಲಗಿದ್ದು ರಾತ್ರಿ ಸುಮಾರು  01-00 ಗಂಟೆ ಸಮಯಕ್ಕೆ ಯಾರೋ ಓರ್ವ ವ್ಯಕ್ತಿ  ಮನೆಯ ಒಳಗಡೆಯಿಂದ  ಅಳವಡಿಸಿರುವ ಚಿಲಕವನ್ನು ಹೊರಗಡೆಯಿಂದ ಕೈ ಹಾಕಿ ತೆಗೆದು ಒಳ ಪ್ರವೇಶಿಸಿ, ಪಿರ್ಯಾದಿದಾರರ ದೊಡ್ಡಮ್ಮ ಶ್ರೀಮತಿ ಕಮಾಲಾಕ್ಷಿಯವರ  ಕುತ್ತಿಗೆಯಿಂದ  ಸುಮಾರು 20 ಗ್ರಾಂ ತೂಕದ ಅಂದಾಜು ಮೌಲ್ಯ ರೂ 45000/- ಬೆಲೆ ಬಾಳುವ ಚಿನ್ನದ ಸರವನ್ನು ಕಸಿದು ಹೋಗಿರುವುದಾಗಿದೆ.  

 

13.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-03-2014 ರಂದು ಸಂಜೆ 5-15 ಗಂಟೆಗೆ ಸುರತ್ಕಲ್ ಗ್ರಾಮದ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ದಾಖಲಾದ ಮನೀಶ್ (55) ವಾಸಃ ವಿಶ್ವಾಸದ ಮನೆ ಶಂಕರಪುರ ಕಾಪು ಉಡುಪಿ ಎಂಬವರು ಅದೇ ದಿನ ಸಂಜೆ ವಾರ್ಡಿಗೆ ಶಿಫ್ಟ್ ಮಾಡುವ ಸಮಯ ಬಾತ್ ರೂಮಿಗೆಂದು ಹೋದವರು ಸಂಜೆ 5-30 ಗಂಟೆ ಮದ್ಯೆ ಕಾಣೆಯಾಗಿದ್ದು ಸದ್ರಿಯವರು ಮಾನಸಿಕ ಅಸ್ವಸ್ಥರಾಗಿದ್ದು ಅದೇ ಕಾರಣಕ್ಕಾಗಿ ದಾಖಲಾಗಿರುವುದಾಗಿಯೂ ಆತನನ್ನು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಇರುವುದಾಗಿದೆ.

 

14.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-03-2014 ರಂದು ಪಿರ್ಯಾದಿದಾರರಾದ ಪಾವನ್ ಶೆಟ್ಟಿ ತನ್ನ ಸ್ನೇಹಿತರಾದ ರಾಹುಲ್, ಅಕ್ಷಯ್, ರಾಜೆಶ್ ರೊಂದಿಗೆ ಸುರತ್ಕಲ್ ಎನ್ ಟಿ ಕೆ ಬೀಚ್ ಗೆ 15-30 ಗಂಟೆಗೆ ಬಂದು ಬೀಚ್ ನೀರಿನಲ್ಲಿ ಆಟವಾಡುತ್ತಿದ್ದ ಸಮಯ ಸುಮಾರು 17-00 ಗಂಟೆಗೆ ಪಿರ್ಯಾದಿದಾರರ ಸ್ನೇಹಿತ ರಾಜೇಶನು ಸಮುದ್ರದ ನೀರಿನ ದೊಡ್ಡದಾದ ತೆರೆಗೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ತಕ್ಷಣ ಅಲ್ಲಿದ್ದ ಜನರಿಗೆ ತಿಳಿಸಿ ಕಾಪಾಡಲು ಪ್ರಯತ್ನಿಸಿದಲ್ಲಿ ಫಲಕಾರಿಯಾಗದೇ ಕಾಣೆಯಾಗಿರುವುದಾಗಿದೆ.

 

15.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮುಕುಲ್ ಬರ್ಮನ್ ರವರು North Eastern Engineers ಕಂಪನಿಯಲ್ಲಿ ಸೈಟ್ ಇನ್ ಚಾರ್ಜ್ ಆಗಿ ಕೆಲಸ ಮಾಡಿಕೊಂಡಿದ್ದು ಕಂಪನಿಯ ಬಾಬ್ತು ಕೆಲಸದ ಬಗ್ಗೆ ಕೇಬಲ್ ಡ್ರಮ್ ಅನ್ನು ದಿನಾಂಕ 18-12-2013 ರಂದು ತರಿಸಿ ಎಂ ಆರ್ ಪಿ ಎಲ್ ಕಂಪನಿಯ ಸಬ್ ಸ್ಟೇಷನ್ ನಂಬ್ರ 24 ಎದುರು ಕೇಬಲ್ ಡ್ರಮ್ ಗಳನ್ನು ಇರಿಸಿದ್ದು ದಿನಾಂಕ 25-03-2014 ರಂದು ಕೆಲಸ ಮಾಡುವರೇ ಕೇಬಲ್ ಡ್ರಮ್ ಇರಿಸಿದ್ದ ಜಾಗದಲ್ಲಿ ನೋಡಿದಲ್ಲಿ 2 ಕೇಬಲ್ ಡ್ರಮ್ ಗಳು ಕಾಣೆಯಾಗಿದ್ದು ಯಾರೋ ಕಳ್ಳರು ಕೇಬಲ್ ಡ್ರಮ್ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

16.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15.03.2014 ರಂದು 20.45 ಗಂಟೆಗೆ ಮಂಗಳೂರು ತಾಲೂಕು ಅಡ್ಯಾರ್‌‌ ಗ್ರಾಮದ ಅಡ್ಯಾರ್‌‌ ಕಟ್ಟೆ ಬಳಿ ಕೆಎ-19-ಸಿ-3782 ನಂಬ್ರದ ಆಟೋ ರಿಕ್ಷಾವನ್ನು ಅದರ ಚಾಲಕ ಅಶೋಕ ಎಂಬಾತನು ಅರ್ಕುಳ ಕಡೆಯಿಂದ ಕೊಡಕ್ಕಲ್‌‌ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬರುತ್ತಿರುವುದನ್ನು  ಕಂಡು ಒಮ್ಮೆಲೇ ಬ್ರೇಕ್‌‌ ಹಾಕಿ ಎಡಕ್ಕೆ ತಿರುಗಿಸಿದ್ದರಿಂದ ಆಟೋರಿಕ್ಷಾ ಬಲಮಗ್ಗುಲಾಗಿ ಬಿದ್ದು ಆಟೋ ರಿಕ್ಷಾದಲ್ಲಿ ಪಿರ್ಯಾಧಿ ಕಿಶೋರ್‌‌ನೊಂದಿಗೆ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರ ತಾಯಿ ಭವಾನಿ(60) ಎಂಬವರಿಗೆ ಎದೆಗೆ, ಬಲಕೈಗೆ ಗುದ್ದಿದ ಗಾಯವಾಗಿದ್ದು ಭವಾನಿರವರು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಆರೋಪಿಯು ಚಿಕಿತ್ಸಾ ವೆಚ್ಚವನ್ನು ನೀಡುವುದಾಗಿ ಹೇಳಿ ಬಳಿಕ ಚಿಕಿತ್ಸಾ ವೆಚ್ಚ ನೀಡಲು ನಿರಾಕರಿಸಿದ್ದರಿಂದ ವಿಳಂಭವಾಗಿ ದೂರು ನೀಡಿದ್ದಾಗಿದೆ.

 

17.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25.03.2014 ರಂದು ಪಿರ್ಯಾಧಿದಾರರಾದ ಶ್ರೀ ಸಂತೋಷ್ ರವರು ತನ್ನ ಅಕ್ಕನ  ಬಾಬ್ತು ಕೆಎ-19-ಇಕೆ-209 ನೇ ಮೋಟಾರ್ಸೈಕಲ್‌‌ನಲ್ಲಿ  ತನ್ನ ಸ್ನೇಹಿತ ನಿತಿನ್‌‌ ಎಂಬವರೊಂದಿಗೆ ಪೆಟ್ರೋಲ್‌‌ ಹಾಕುವರೇ  ನೀರುಮಾರ್ಗ ಕಡೆಗೆ ಬರುತ್ತಾ ನೀರುಮಾರ್ಗ ಪೆಟ್ರೋಲ್‌‌ ಪಂಪ್ನಿಂದ ಸ್ವಲ್ಪ ದೂರ ತಲುಪುತ್ತಿದ್ದಂತೆ  ಎದುರುಗಡೆಯಿಂದ ಅಂದರೆ ನೀರುಮಾರ್ಗದಿಂದ  ಅಡ್ಯಾರ್‌‌ಪದವು ಕಡೆಗೆ  ಕೆಎ-21-ಎಲ್‌‌-7926 ನೇ ಮೋಟಾರ್‌‌ ಸೈಕಲನ್ನು ಅದರ ಸವಾರ ಜಯಪ್ರಕಾಶ್‌‌ ಎಂಬಾತನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ  ಮೋಟಾರ್ಸೈಕಲ್ಗೆ ಡಿಕ್ಕಿಹೊಡೆದ ಪರಿಣಾಮ  ಮೋಟಾರ್ಸೈಕಲ್‌‌ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಭುಜಕ್ಕೆ ಗುದ್ದಿದ ಗಾಯ, ಮೊಣಕಾಲಿನ ಗಂಟಿಗೆ ರಕ್ತ ಗಾಯ, ನಿತಿನ್‌‌ಗೆ ಗಡ್ಡದ  ಕೆಳಗೆ ಹಾಗೂ ಮೊಣಕಾಲಿಗೆ ಬಲಭುಜಕ್ಕೆ ಗುದ್ದಿದ ಹಾಗೂ ತರಚಿದ ಗಾಯವಾಗಿರುತ್ತದೆ ಹಾಗೂ ಆರೋಪಿ ಜಯಪ್ರಕಾಶ್‌‌ ಚಲಾಯಿಸುತ್ತಿದ್ದ ಮೋಟಾರ್‌‌ ಸೈಕಲ್‌‌ನಲ್ಲಿ ಸಹಸವಾರನಾಗಿ ಸವಾರಿ ಮಾಡುತ್ತಿದ್ದ ಸಜಾನ್‌‌ ಎಂಬಾತನಿಗೆ ಮುಖಕ್ಕೆ ಹಾಗೂ ಕೈಕಾಲುಗಳಿಗೆ ರಕ್ತ ಬರುವ ಹಾಗೂ ತರಚಿದ ಗಾಯವಾಗಿರುವುದಾಗಿದೆ.

No comments:

Post a Comment