ದೈನಂದಿನ ಅಪರಾದ ವರದಿ.
ದಿನಾಂಕ 03.03.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 1 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02.03.2014 ರಂದು 18:40 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀಮತಿ ಕುಮುದಾ ಜಯರಾಮ್ ರವರು ತಮ್ಮ ಬಾಬ್ತು KA-19-MC-9337ನೇ ನಂಬ್ರದ ಕಾರನ್ನು ಹಂಪನಕಟ್ಟೆ ಕಡೆಯಿಂದ ಲಾಲ್ ಭಾಗ್ ಸಾಯೀಬೀನ್ ಕಾಂಪ್ಲೆಕ್ಸ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಮಂಗಳೂರು ನಗರದ ಲಾಲ್ ಭಾಗ್ ಜಂಕ್ಷನ್ ಟ್ರಾಫಿಕ್ ಸಿಗ್ನಲ್ ನಲ್ಲಿ ನಿಲ್ಲಿಸಿಕೊಂಡಿರುವ ಸಮಯ ಪಿರ್ಯಾದುದಾರರ ಕಾರಿನ ಹಿಂದಿನಿಂದ KA-19-F-3214ನೇ ನಂಬ್ರದ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಅದರ ಚಾಲಕರು ಅತೀವೇಗ ಮತ್ತು ತೀರಾ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಸದ್ರಿ ಕಾರು ಜಖಂಗೊಂಡಿರುವುದಾಗಿದೆ.
2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-10-2009 ರಂದು ಪಿರ್ಯಾದುದಾರರಾದ ಶ್ರೀಮತಿ ತಾಹೀರಾ ರವರಿಗೆ ಆರೋಪಿ ಮಹಮ್ಮದ್ ಸಲೀಂ ರವರೊಂದಿಗೆ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆ ಸಮಯ ವರದಕ್ಷಿಣೆಯಾಗಿ 50 ಪವನ್ ಬಂಗಾರ ಹಾಗೂ 3ಲಕ್ಷ ರೂಪಾಯಿ ಹಣವನ್ನು ವರದಕ್ಷಿಣೆಯಾಗಿ ಆರೋಪಿಗಳ ಕೇಳಿಕೆಯಂತೆ ನೀಡಲಾಗಿದ್ದು, ಮದುವೆಯಾದ ಬಳಿಕ ಪಿರ್ಯಾದಿದಾರರು ತನ್ನ ಗಂಡನೊಂದಿಗೆ ಆರೋಪಿಗಳೆಲ್ಲರ ಜೊತೆ ವಾಸ್ತವ್ಯ ಇದ್ದರು. ಮದುವೆಯಾದ 1 ತಿಂಗಳ ಬಳಿಕ ವರದಕ್ಷಿಣೆ ನೀಡಿರುವುದು ಕಡಿಮೆಯಾಯಿತು ಇನ್ನೂ 5 ಲಕ್ಷ ಹಣ ನೀಡಬೇಕೆಂದು ಪಿರ್ಯಾದಿದಾರರಿಗೆ ಕಿರುಕುಳ ನೀಡಲು ಪ್ರಾರಂಬಿಸಿ ದೈಹಿಕ ಹಲ್ಲೆ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದು, ಇನ್ನು ಹಣ ನೀಡದಿದ್ದಲ್ಲಿ 2 ನೇ ಮದುವೆ ಮಾಡಿಸುವುದಾಗಿ ಪೀಡಿಸುತ್ತಿದ್ದರು. ಪಿರ್ಯಾದಿದಾರರು ಗರ್ಭಿಣಿಯಾದ ಸಮಯದಲ್ಲಿ ಅವರಿಗೆ ಸರಿಯಾದ ವೈದ್ಯಕೀಯ ತಪಾಸಣೆ ನೀಡದೆ ತವರು ಮನೆಗೆ ಕಳುಹಿಸಿ ಕೊಟ್ಟಿದರು. ಪಿರ್ಯಾದಿದಾರರು ತನ್ನ ಅಣ್ಣನ ಮನೆಯಾದ ಕಾವೂರಿಗೆ ಬಂದಿದ್ದ ಸಮಯ ಆರೋಪಿ ಮಹಮ್ಮದ್ ಸಲೀಂ ರವರು ಕಾವೂರಿಗೆ ಬಂದು "ನೀನು ನನಗೆ ತಲಾಕ್ ನೀಡಬೇಕು" ಎಂದು ಬೆದರಿಸಿದ್ದು, ವರದಕ್ಷಿಣೆಯಾಗಿ ನೀಡಿದ್ದ ಬಂಗಾರವನ್ನು ಬ್ಯಾಂಕಿನಲ್ಲಿ ಗಿರವಿ ಇಟ್ಟು ದ್ರೋಹ ವೆಸಗಿರುತ್ತಾರೆ.
3.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02/03/2014 ರಂದು ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಮುಸ್ತಾಫಾ ರವರು ತನ್ನ ಸ್ನೇಹಿತ ಆಸೀಫ್ ರವರ ಜೊತೆಯಲ್ಲಿ ಕೆ.ಎ 19 ಇಸಿ/8706 ನೇ ಮೋಟಾರು ಸೈಕನಿನಲ್ಲಿ ತನ್ನ ಮನೆಯಿಂದ ಜೋಕಟ್ಟೆ ಆಗಿ ಸುರತ್ಕಲ್ ಕಡೆಗೆ ಹೋಗಿತ್ತಿದ್ದಾಗ ಸಂಜೆ 5-35 ಗಂಟೆಗೆ ತೋಕೂರು ಗುತ್ತು ಜಾರಂದಾಯ ದೈವಸ್ಥಾನ ಬಂಡಿಕೊಟ್ಯಾ ಎಂಬಲ್ಲಿ ತಲುಪುತ್ತಿದಂತೆ ಹಿಂದಿನಿಂದ ಓಮ್ನಿ ಕಾರು ಹಾಗೂ ಮೋಟಾರು ಸೈಕಲ ಬರುತ್ತಿದ್ದು ಈ ಫೈಕಿ ಮೋಟಾರು ಸೈಕಲಿನಲ್ಲಿ ಇದ್ದ ಇಬ್ಬರೂ ಯುವಕರು ಬಜಪೆಗೆ ಹೋಗುವ ದಾರಿಯಾವುದೆಂದು ಕೇಳಿದಾಗ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲನ್ನು ನಿಧಾನ ಮಾಡಿ ರಸ್ತೆಯ ಬದಿ ನಿಲ್ಲಿಸುತ್ತಿದಂತೆ ಹಿಂದಿನಿಂದ ಬರುತ್ತಿದ್ದ ಮೊಟಾರು ಸೈಕಲ್ ಮತ್ತು ಮಾರುತಿ ಓಮ್ನಿ ಕಾರನ್ನು ಪಿರ್ಯಾದಿದಾರರ ಮೋಟಾರು ಸೈಕಲಿನ ಮುಂದೆ ಅಡ್ಡವಾಗಿ ನಿಲ್ಲಿಸಿ ಕಾರಿನಲ್ಲಿ ಇದ್ದ ಸುಮಾರು 7 ಜನ ಯುವಕರು ಮತ್ತು ಮೋಟಾರು ಸೈಕಲಿನಲ್ಲಿ ಇದ್ದ 2 ಜನ ಯುವಕರು ಕೆಳಗೆ ಇಳಿದು ಬಂದು ಅವರ ಕೈಯಲ್ಲಿ ಇದ್ದ ತಲವಾರು ತರಹದ ಉದ್ದನೆಯ ಕತ್ತಿಯನ್ನು ಹಿಡಿದು ತುಳು ಬಾಷೆಯಲ್ಲಿ " ಉಂಞ ಗೆ ಹಾಕುವಾತ್ತ್ ಮಲ್ಲ ಜನನಾ ಈ " ಎಂದು ಬೈದು ತಲವಾರಿನಿಂದ ಪಿರ್ಯಾದಿದಾರರ ಬಲ ಭುಜದ ಮೇಲೆ, ಬಲ ಕೈಯ ಮಣಿ ಗಂಟಿನ ಮೇಲೆ ಮತ್ತು ಎಡ ಕೈಯ ಕೋಲು ಕೈಯ ಮೇಲೆ ಬಲಕಾಲಿನ ಕೋಲು ಕಾಲಿನ ಮೇಲೆ ಹಾಗೂ ಆಸೀಪಿನ ತಲೆಯ ಹಿಂಬದಿಗೆ ತಲವಾರಿನಿಂದ ಕಡಿದು ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಆ ಸಮಯ ರಸ್ತೆಯಲ್ಲಿ ಬರುತ್ತಿದ್ದ ಬೇರೆ ವಾಹನಗಳನ್ನು ನೋಡಿ ಆರೋಪಿಗಳು ಆಯುಧಗಳೊಂದಿಗೆ ತಮ್ಮ ವಾಹನದಲ್ಲಿ ಜೋಕಟ್ಟೆ ಕಡೆಗೆ ಹೋಗಿರುತ್ತಾರೆ. ಅವರುಗಳು ಬಂದಿದ್ದ ವಾಹನಗಳಿಗೆ ನೋಂದಣಿ ಸಂಖ್ಯೆ ಇರುವುದಿಲ್ಲ , ಉಂಞ ಯಾನೆ ಸಂಶುದ್ದಿನ ಎಂಬಾತನ ಜೊತೆ ಈ ಹಿಂದ ಗಲಾಟೆ ಮಾಡಿದ ಕಾರಣಕ್ಕಾಗಿಯೇ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.
4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-02-2014ರ 15-30 ಗಂಟೆಯಿಂದ ದಿನಾಂಕ 28-02-2014ರಂದು 19-30 ಗಂಟೆಯ ಮಧ್ಯೆ ಮಂಗಳೂರು ನಗರದ ಕದ್ರಿ ಶಿವಭಾಗ್ ನ 1ನೇ ಕ್ರಾಸ್ ನಲ್ಲಿರುವ ಡೋರ್.ನಂ.15/16/860/9ನೇ ಗೀತಾಂಜಲಿ ಎಂಬ ಹೆಸರಿನ ಪಿರ್ಯಾದಿದಾರರಾದ ಶ್ರೀ ವಿ. ಭವಾನಿ ಪ್ರಸಾದ್ ರವರ ಬಾಬ್ತು ವಾಸ್ತವ್ಯದ ಮನೆಯ ಎದುರಿನ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಹರಿತವಾದ ಆಯುಧವನ್ನು ಉಪಯೋಗಿಸಿ ಮೀಟಿ ತೆರೆದು ಆ ಮೂಲಕ ಒಳ ಪ್ರವೇಶಿಸಿ, ಬೆಡ್ ರೂಮಿನ ಕಪಾಟಿನೊಳಗಿರಿಸಿದ್ದ ಸುಮಾರು 29 ಗ್ರಾಂ ತೂಕದ ಅಂದಾಜು ಒಟ್ಟು 82,000/- ರೂ ಬೆಲೆ ಬಾಳುವ ವಿವಿಧ ನಮೂನೆಯ ಚಿನ್ನಾಭರಣ ಹಾಗೂ ಸುಮಾರು 1300ಗ್ರಾಂ ತೂಕದ ಅಂದಾಜು 70,000/- ರೂ ಬೆಲೆ ಬಾಳುವ ವಿವಿಧ ನಮೂನೆಯ ಬೆಳ್ಳಿಯ ಪೂಜಾ ಸಾಮಾಗ್ರಿಗಳು ಹೀಗೆ ಒಟ್ಟು 1,52,000/- ರೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02/03/2014 ರಂದು ಸಾಯಂಕಾಲ 17.45 ಗಂಟೆಗೆ ಜೊಕಟ್ಟೆ ಕಡೆಯಿಂದ ಪೆರ್ಮುದೆ ಕಡೆಗೆ ಒಂದು ಪಿಕಪ್ ವಾಹನ ನಂಬ್ರ ಕೆ ಎ 19 ಡಿ 2283 ನೇದರ ಚಾಲಕನು ಅತೀ ವೇಗೆ ಹಾಗೂ ಅಜಗರುಕತೆಯಿಂದ ಚಲಾಯಿಸಿಕೊಂಡು ಬಂದು ಪೆರ್ಮುದೆ ಒ.ಎಮ್.ಪಿ.ಎಲ. ಮುಖ್ಯ ಗೇಟಿಗೆ ಡಿಕ್ಕಿ ಹೊಡೆದ ಪರಿಣಾಮ ಅಲ್ಲಿ ಸೆಕ್ಯೂರಿಟಿ ಗ್ರಾರ್ಡ್ ಕರ್ತವ್ಯದಲ್ಲಿದ್ದ ಮಹೇಶ್ ಹೊಸಕೋಟೆ , ರಾಜು ಚೆತ್ರಿ , ಲಕ್ಷ್ಮಣ ಮುಂಡ ಎಂಬವರಿಗೆ ಗಾಯವಾಗಿದ್ದು ,ಮಹೇಶ್ ಎಂಬವರಿಗೆ ತಲೆ ಮತ್ತು ,ಕಾಲಿಗೆ ,ರಾಜು ಚೆತ್ರಿ ಎಂಬವರಿಗೆ ಬಲ ಕಾಲಿಗೆ ಲಕ್ಷ್ಮಣ ಮುಂಡ ಎಂಬವರಿಗೆ ಬಲ ಕೈಗೆ ರಕ್ತ ಗಾಯವಾಗಿದ್ದು . ಸಾದಾ ಸ್ವರೂಪದ ಗಾಯವಾಗಿರುತ್ತದೆ. ಕೂಡಲೆ ಕಂಪೆನಿಯ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಎ ಜೆ ಆಸ್ಪತ್ರೆ ಮಂಗಳೂರುನಲ್ಲಿ ದಾಖಲಿಸಿದಲ್ಲಿ ವೈದ್ಯರು ಒಳ ರೋಗಿಯಾಗಿ ದಾಖಲು ಮಾಡಿದ್ದು ವಾಹನದ ಚಾಲಕನು ವಾಹನವನ್ನು ಹೊಂಡಕ್ಕೆ ಬಿಳಿಸಿ ವಾಹನವನ್ನು ಅಲ್ಲಿಯೇ ಬಿಟ್ಟು ಗಾಳುಗಳನ್ನು ಆಸ್ಪತ್ರೆಗೆ ಸಾಗಿಸದೇ ಅಲ್ಲಿಂದ ಪರಾರಿಯಾಗಿರುತ್ತಾನೆ.
No comments:
Post a Comment