Wednesday, March 12, 2014

Daily Crime Report 10-03-2014

 

ದಿನಾಂಕ 10.03.201419:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

2

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

5

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

6

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

3

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಾರರಾದ ಶ್ರೀ ಅರುಣ್ ರಾಜ್ ರವರ ತಮ್ಮನಾದ ಅನಿಲ್ರಾಜ್‌(45) ಎಂಬುವರು ದಿನಾಂಕ 06-03-2014ರಂದು ಬೆಳ್ಳಿಗ್ಗೆ ಮನೆ ನಂಬ್ರ 5-12-1159, ಪಾಮ್ ವಿವ್ಹ್ ಹರಿದಾಸ್ ಲೇನ್, ಮಣ್ಣಗುಡ್ಡ, ಮಂಗಳೂರು ಯಿಂದ ಹೋರ ಹೊದವರು ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಸದ್ರಿಯವರ ಬಗ್ಗೆ ಸಂಬಂದಿಗಳಲ್ಲಿ  ಮತ್ತು ನಗರದ ದೇವಸ್ಥಾನಗಳಲ್ಲಿ ಹುಡುಕಾಡಿದಲ್ಲಿ ಪತ್ತೇಯಾಗಿರುವದಿಲ್ಲ.

 

2.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22.01.2014 ರಂದು ಬೆಳಿಗ್ಗೆ 10:15 ಗಂಟೆಗೆ ಮಂಗಳೂರು ತಾಲೂಕು, ಮಂಜನಾಡಿ ಗ್ರಾಮದ ನಾಟೆಕಲ್ಎಂಬಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಫಿರ್ಯಾದಿದಾರರಾದ ಶ್ರೀಮತಿ ತಾಜ್ನಿಝ್ ಬಾನು ರವರ ಗಂಡನನ್ನು ಆರೋಪಿ ಅಬ್ದುಲ್‌ @ ಬಾವಾ ಕುಟ್ಟಿ ಎಂಬಾತನು ಅಕ್ರಮವಾಗಿ ತಡೆದು ನಿಲ್ಲಿಸಿ, ಕೈಯಿಂದ ಹಲ್ಲೆ ನಡೆಸಿ. ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿದೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-03-2014 ರಂದು ರಾತ್ರಿ ಸುಮಾರು 10.30 ಗಂಟೆಗೆ ಮೋಟರ್ ಸೈಕಲ್ ನಂಬ್ರ KA19-EF-8034 ರಲ್ಲಿ ಅದರ ಸವಾರ ನಿಶಾನ್ ಶೆಣೈ ಎಂಬುವವರು ತನ್ನ ತಾಯಿ ವಸಂತಿ ಶಣೈ ಎಂಬುವವರನ್ನು ಹಿಂಬದಿ ಸವಾರರಾಗಿ ಕುಳ್ಳಿರಿಸಿಕೊಂಡು ಕಲ್ಪನೆ ಕಡೆಯಿಂದ ಕಕ್ಕಬೆಟ್ಟು ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ಕಲ್ಪನೆಯ ಜಾನ್ ಪೆರಾವೋ ಎಂಬುವವರ ಮನೆಯ ಬಳಿ ರಸ್ತೆ ಮದ್ಯೆ ಹಾಕಿರುವ ಡ್ರೈನೇಜ್ ನ  ಉಬ್ಬುವಿನ ಮೇಲೆ ಚಲಾಯಿಸಿಕೊಂಡು ಹೋದಾಗ ಹಿಂಬದಿ ಸವಾರಾಳಾಗಿದ್ದ ಮಹಿಳೆ ಹಿಂದಕ್ಕೆ ವಾಲಿಕೊಂಡು ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ರಕ್ತಗಾಯ ಮತ್ತು ಕೈಕಾಲುಗಳಿಗೆ ತರಚಿದ ಗಾಯ ಉಂಟಾಗಿ SCS ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕೆತ್ಸೆಯಲ್ಲಿರುತ್ತಾರೆ.

 

4.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-03-2014 ರಂದು  ಸಮಯ ಸುಮಾರು 23.00 ಗಂಟೆಗೆ ಮೋಟರ್ ಸೈಕಲ್ ನಂಬ್ರ KA-03-X-7784 ನೇದನ್ನು ಕುಲಶೇಖರದ ಕಡೆಯಿಂದ ಕೈಕಂಬದ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕೈಕಂಬದ ಬಳಿ ಇರುವ  ಪ್ಲಾಮ ಬಿಲ್ಡಿಂಗ್ ಎದುರು ತಲುಪುವಾಗ ಕುಲಶೇಖರದ ಕಡೆಗೆ ನಂತೂರು ನಿಂದ ಬರುತ್ತಿದ್ದ ಮೋಟರ್ ಸೈಕಲ್ ನಂಬ್ರ KA18-W-9348 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಎರಡೂ ಮೋಟರ್ ಸೈಕಲ್ ರಸ್ತೆಗೆ ಬಿದ್ದು ಫಿರ್ಯಾದುದಾರರಾದ ಶ್ರೀ ಜೇಮ್ಸ್ ಲಾರೇನ್ಸ್ ಡಿ'ಸೋಜಾ ರವರ ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಂಭೀರ ಗಾಯ ,ಪಾದಕ್ಕೆ ಮತ್ತು ಎಡಕೈಗೆ ತರಚಿದ  ಗಾಯವಾಗಿ  ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕೆತ್ಸೆಯಲ್ಲಿರುತ್ತಾರೆ.ಮತ್ತು ಡಿಕ್ಕಿ ಮಾಡಿದ  ಮೋಟರ್ ಸೈಕಲ್ ಸವಾರ ಜಾಸ್ಮಿನ್ ರಾಹುಲ್ ಸಲ್ದಾನ ರ ಎಡಕಾಲಿನ ಮೊಣಗಂಟಿಗೆ ಗುದ್ದಿದ ಗಾಯ,ಬಲ ಕೈ ಬೆರಳಿಗೆ ಮತ್ತು ಮುಖಕ್ಕೆ ರಕ್ತ ಗಾಯ ವಾಗಿ ಚಿಕೆತ್ಸೆಗೆ ತೆರಳಿರುತ್ತಾರೆ.

 

5.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-03-14 ರಂದು ಫಿರ್ಯಾದಿದಾರರಾದ ರಾಹುಲ್ ರೋಜರ್ ಕೊರೇಯಾ  ಎಂಬವರು ಬೆಳುವಾಯಿಯಲ್ಲಿ  ಮೊಬೈಲ್ ನ ಕಲೆಕ್ಷನ್ ವಸೂಲಿ ಮಾಡಿ ಬೆಳುವಾಯಿ ಯಿಂದ ವಾಪಾಸು ಅವರ ಬಾಬ್ತು ಮೋಟಾರ್ ಸೈಕಲ್ ನಂ ಕೆಎ-19-ಇಜೆ-4714 ನೇದರಲ್ಲಿ ಅವಿನಾಶ್ ಎಂಬವರನ್ನು ಕುಳ್ಳಿರಿಸಿಕೊಂಡು ಮೂಡಬಿದ್ರೆ ಕಡೆಗೆ ರಾಷ್ಟ್ರೀಯ ಹೆದ್ದಾರಿಯ ಡಾಮಾರು ರಸ್ತೆಯಲ್ಲಿ ವಾಪಾಸು ಬರುತ್ತಾ ಬೆಳುವಾಯಿ ಗ್ರಾಮದ ಬೆಳುವಾಯಿ ಬಸ್ಸು ತಂಗುದಾಣದ ಬಳಿ ತಲುಪಿದಾಗ ಸಮಯ ಸುಮಾರು 17.30 ಗಂಟೆಯ ವೇಳೆಗೆ ಎದುರಿನಿಂದ ಕೆಎ-20-ಎಸ್-1614 ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ಸಂದೇಶ್ ದೇವಾಡಿಗ ಎಂಬವರು ಅತೀ ವೇಗ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಹಾಗೂ ಸವಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ತಲೆಯ ಎಡಬದಿಗೆ, ಕಣ್ಣುಗಳ ಕೆಳಭಾಗದಲ್ಲಿ ಗುದ್ದಿದ ನೋವು, ಗದ್ದಕ್ಕೆ ರಕ್ತಗಾಯವಾಗಿ ಮೇಲಿನ ಒಂದು ಹಲ್ಲು ಹಾಗೂ ಕೆಳಗಿನ 3 ಹಲ್ಲುಗಳು ಜಖಂಗೊಂಡಿದ್ದು, ಬಲಕಿವಿಯ ಬಳಿ ಗುದ್ದಿದ ಗಾಯ, ಬಲಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿದ್ದು ಮಂಗಳೂರಿನ ಎಜೆ ಆಸ್ಪತ್ರಗೆ  ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಹಾಗೂ ಸಹಸವಾರರಿಗೆ ಯಾವುದೇ ಗಾಯ ಉಂಟಾಗಿರುವುದಿಲ್ಲ.

 

6.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-03-2014 ರಂದು 15.00 ಗಂಟೆಗೆ ದರೆಗುಡ್ಡೆ ಗ್ರಾಮದ ದರೆಗುಡ್ಡೆ ಪೇಟೆ ರವಿ ಶೆಟ್ಟಿಯವರ ಗೂಡಂಗಡಿಯ ಹಿಂದುಗಡೆ ಬಾಸ್ಕರ ಕೊಟ್ಯಾನ್ರವರ ಕಾಡು ಸ್ಥಳದಲ್ಲಿ  ಜುಗಾರಿ ಆಟ ನಡೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ 15.30 ಗಂಟೆಗೆ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಅನಂತ ಪದ್ಮನಾಭ ರವರು ಸಿಬ್ಬಂದಿಯವರ ಜೊತೆಯಲ್ಲಿ ದಾಳಿ ಮಾಡಿದಲ್ಲಿ ಉಲಾಯಿ - ಪಿದಾಯಿ ಎಂಬ ಜುಗಾರಿ ಆಟಕ್ಕೆ ನಿರತರಾಗಿದ್ದ 6 ಮಂದಿ ಆರೋಪಿಗಳಾದ ಶೇಖರ ಪೂಜಾರಿ, ವಸಂತ ಶೆಟ್ಟಿ, ಅಂಗಾರಾ, ಶೇಖರ ಪೂಜಾರಿ, ಪಾಲ್ ಮೆನೆಜಸ್ ರಂಬವರನ್ನು ವಶಕ್ಕೆ ಪಡೆದುಕೊಂಡು ಜುಗಾರಿ ಆಟಕ್ಕೆ ಉಪಯೋಗಿಸಿದ  ಕಂಬಳಿ-1   ಮತ್ತು 52 ಇಸ್ಪೀಟ್ ಎಲೆಗಳು, ಆಟ ಆಡಲು ಉಪಯೋಗಿಸಿದ  ರೂ 1000/- ಮುಖ ಬೆಲೆಯ  1 ನೋಟುಗಳು, ರೂ 500/- ಮುಖ ಬೆಲೆಯ 5 ನೋಟುಗಳು, ರೂ 100/- ಮುಖ ಬೆಲೆಯ 18 ನೋಟುಗಳು, ರೂ 50/- ಮುಖ ಬೆಲೆಯ 2 ನೋಟುಗಳು, ರೂ 20 /- ಮುಖ ಬೆಲೆಯ 2 ನೋಟುಗಳು, ರೂ 10/- ಮುಖ ಬೆಲೆಯ 9 ನೋಟುಗಳು, ನೋಟುಗಳು, ಒಟ್ಟು  ರೂ 5,530/- ಸೊತ್ತುಗಳನ್ನು ಸ್ವಾದೀನ ಪಡಿಸಿಕೊಂಡು ಕ್ರಮ ಕೈಗೊಂಡಿರುವುದಾಗಿದೆ.

 

7.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-03-2014 ರಂದು ರಾತ್ರಿ ಸಮಯ ಸುಮಾರು 9-30 ಗಂಟೆಗೆ ಪಿರ್ಯಾದಿದಾರರಾದ ಅರುಣ್ ಕುಮಾರ್ ರವರು ಕೆಲಸ ಮುಗಿಸಿ ಜ್ಯೋತಿನಗರ ಬಸ್ ನಿಲ್ಡಾಣದ ಬಳಿಗೆ ಬಂದಾಗ ಪಿರ್ಯಾದಿದಾರರಿಗೆ ಪರಿಚಯವಿರುವ ಭರತ್, ಶರತ್, ರವಿ, ನಾಗು, ಸಿರ್ಕ್ಯ ಮುಂತಾದವರು ಅಲ್ಲಿ ನಿಂತಿದ್ದು, ಅವರ ಪೈಕಿ ಭರತ್ ಎಂಬವರು ಪಿರ್ಯಾದಿದಾರರ ಎದುರು ಬಂದು ನಿಂತು " ನೀನು ಯಾವಾಗಲೂ ನನ್ನನ್ನು ದುರುಗುಟ್ಟಿ ನೋಡುವುದು ಯಾಕೆ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ" ಎಂದು ಹೇಳಿ ಕೈಯಿಂದ ಕೆನ್ನೆಗೆ ಹೊಡೆದು, ಆ ಸಮಯ ಅಲ್ಲಿದ್ದ ರವಿ, ನಾಗು, ಸಿರ್ಕ್ಯ ಎಂಬವರು ಪಿರ್ಯಾದಿದಾರರನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಭರತ್ ಎಂಬವನು ಸೋಡಾ ಬಾಟಲಿಯಿಂದ ಪಿರ್ಯಾದಿದಾರರಿಗೆ ಹೊಡೆದ್ದುದರಿಂದ ಬಲಕಣ್ಣಿನ ಹುಬ್ಬಿಗೆ ಗಾಯವಾಗಿದ್ದು, ಅಲ್ಲಿದ್ದ ರವಿ, ನಾಗಾ, ಸಿರ್ಕ್ಯು, ಮತ್ತು ರಘ ಎಂಬವರು ಕೈಯಿಂದ ಹೊಡೆದು, ನಂತರ ಭರತ್ ಎಂಬವರು ಯಾವುದೋ ಕಬ್ಬಿಣದ ಮುಳ್ಳಿನ ತರಹದ ಹತ್ಯಾರಿನಿಂದ ಹೊಡೆದ ಪರಿಣಾಮ ಕಿವಿಯ ಹಿಂಬದಿಗಾಯವಾಗಿ ರಕ್ತ ಬಂದಿದ್ದು, ಬೊಬ್ಬೆಯನ್ನು ಕೇಳಿ ಜನರು ಸೇರುವಾಗ ಆರೋಪಿಗಳಾದ ಭರತ್, ರವಿ ಕೊಲ್ಲದೇ ಬಿಡುವುದಿಲ್ಲವಾಗಿ ಬೆದರಿಕೆ ಒಡ್ಡಿದ್ದು, ಅಲ್ಲಿಂದ ಪರಾರಿಯಾಗಿರುತ್ತಾರೆ. ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಹೊರರೋಗಿಯಾಗಿ ದಾಖಲಾಗಿರುವುದಾಗಿದೆ.

 

8.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-03-2014 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಶ್ವಿರ್ ರವರು ತನ್ನ ಬಾಬ್ತು ಕೆ. 19 ,ಜೆ 7837 ನೇ ನಂಬ್ರ ಮೋಟಾರು ಸೈಕಲಿನಲ್ಲಿ ಹೋಗುತ್ತಾ ಅಂಗಾರಗುಂಡಿ ಜಂಕ್ಷನ ಬಳಿ ತಲುಪ್ಪಿದ್ದಾಗ ಆರೋಪಿಗಳಾದ 1. ಅಕ್ರಂ 2. ಮೂಶೋಕ್ 3. ಜಲೀಲ್ ಎಂಬವರುಗಳು ಸಮಾನ ಉದ್ದೇಶದಿಂದ  ಬೇರೊಂದು ಮೋಟಾರು ಸೈಕಲಿನಲ್ಲಿ ಪಿರ್ಯಾದಿದಾರರನ್ನು ಬೆನ್ನಟ್ಟಿ ಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಅಡ್ಡ ನಿಲ್ಲಿಸಿ ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ  ಪಿರ್ಯಾದಿದಾರರನ್ನು ಉದ್ದೇಶೀಸಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ನೋಡಿ ಕೊಳ್ಳುತ್ತೇನೆ ಎಂಬುದಾಗಿ ಬೇದರಿಕೆ ಒಡ್ಡಿದ್ದು. ಪಿರ್ಯಾದಿದಾರರ ಮೇಲೆ ವಯಕ್ತಿಕ ದ್ವೇಷದಿಂದ ಈ ಕೃತ್ಯ ನಡೆಸಿರುವುದಾಗಿದೆ.

 

9.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-03-2014 ರಂದು ಮಧ್ಯಾಹ್ನ 3.30 ಗಂಟೆಗೆ ಉತ್ತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಚಲುವರಾಜು ಬಿ. ರವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮಂಗಳೂರು ನಗರದ ಕಾರ್ ಸ್ಟ್ರೀಟ್ ನ ಕಾಮತ್ ಕಾಂಪೌಂಡ್ ಒಳಗಡೆ ಹಿಂಬದಿ ಖಾಲಿ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಉಲಾಯಿ-ಪಿದಾಯಿ ಎಂಬ ಜುಗಾರಿ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳಾದ ಪಿಸಿ 329, ಪಿಸಿ 673, ಪಿಸಿ 899, ಪಿಸಿ 374 ಹಾಗೂ ಪಿಸಿ 865 ಹಾಗೂ ಪಂಚರೊಂದಿಗೆ ಇಲಾಖಾ ವಾಹನ ಕೆಎ19-ಜಿ-596 ನೇದರಲ್ಲಿ ಹೊರಟು 4.00  ಗಂಟೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿ ಆರೋಪಿಗಳಾದ 1) ಸಲೀಂ 2) ಗುರುವಪ್ಪ 3) ನಾಗರಾಜ್ ಕಾಮತ್ 4) ಮುರಳಿ ಕೆ. 5) ರವೀಂದ್ರ ಬಸ್ರೂರು 6) ಸಂತೋಷ್ ಶೆಣೈ ರವರನ್ನು ದಸ್ತಗಿರಿ ಮಾಡಿ ವಶಕ್ಕೆ ತೆಗದುಕೊಂಡು ಅವರು ಆಟಕ್ಕೆ ಬಳಸಿದ ಹಣ ರೂ. 3200/, ಮತ್ತು ಸೊತ್ತುಗಳಾದ  44 ಇಸ್ಪೀಟ್ ಎಲೆ, ನೆಲಕ್ಕೆ ಹಾಸಿದ್ದ ದಿನ ಪತ್ರಿಕೆಯನ್ನು ಸ್ವಾಧೀನಪಡಿಸಿ ಕೊಂಡಿರುವುದಾಗಿದೆ.

 

10.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09/03/2014 ರಂದು ಸಂಜೆ 05 00 ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಅಶೋಕ ಹನುಮಂತ್ ಬೆಲವನರಕಾಂತಿ ರವರು ಕೆ ಎ 19 ಎಮ್ ಬಿ 3528ನೇ ಬೊಲೆರೋ ಕಾಂಪರ ವಾಹನ ವನ್ನು ಮಂಗಳೂರು ಕಡೆಯಿಂದ ಬೈಕಂಪಾಡಿ ಕಡೆಗೆ ಎನ್ ಎಚ್ 66 ರಲ್ಲಿ ಕುದುರೆಮುಖ ಬಳಿ ಚಲಾಯಿಸಿಕೂಂಡು ತಲುಪುತ್ತಿದಂತೆ ಕೆ ಎಲ್ 14-6717 ಲಾರಿಯನ್ನು ಅದರ ಚಾಲಕ ದಯಾ ಪ್ರಸಾದ  ಹಿಂದಿನಿಂದ ಅತಿ ವೇಗ ಅಜಾಗರುಕತೆಯಿಂದ ಎಡ ಬದಿಯಿಂದ ಚಲಾಯಿಸಿಕೂಂಡು ಬಂದು ಬಲಕ್ಕೆ ತಿರುಗಿಸಿ ಪಿರ್ಯಾದಿ ವಾಹನಕ್ಕೆ ಮುಂಬದಿ ಎಡ ಬದಿ ಡಿಕ್ಕಿ ಉಂಟುಮಾಡಿ ವಾಹನ ಜಖಂ ಗೊಳಿಸಿ ಆ ಸಮಯ  ಪಿರ್ಯಾದಿ ವಾಹನದಿಂದ ಇಳಿಯುತ್ತಿದಂತೆ ಆರೋಪಿ ಲಾರಿ ಚಾಲಕ ಲಾರಿಯಿಂದ ಕಬ್ಬಿಣ ರಾಡ ನ್ನು ತೆಗೆದುಕೂಂಡು ಬಂದು ಅಪಘಾತ ,ಮಾಡಿದೇಲ್ಲವೆ ಎಂದು ಹೇಳಿ ಪಿರ್ಯಾದಿಗೆ ಕಬ್ಬಿಣದ ರಾಡ ನಿಂದ ತಲೆಗೆ ಹೊಡಿದು ರಕ್ತ ಗಾಯ ಗೂಳಿರುತ್ತಾನೆ. ಗಾಯಗೂಂಡ ಪಿರ್ಯಾದಿ ಸರಕಾರಿ ವೆನಲಾಕ ಆಸ್ಪತ್ರೆ ಯಲ್ಲಿ ಚಿಕಿತ್ಸ ಪಡೆಯುತ್ತಿರುವುದಾಗಿದೆ.

 

11.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-03-2014 ರಂದು ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಅಜೀಜ್ ರವರು ಧಕ್ಕೆಯಲ್ಲಿ ಕೂಲಿ ಕೆಲಸ ಮಾಡಿ ಸ್ಟೆಟ್ ಬ್ಯಾಂಕ್ ಗೆ ಬಂದು ಅಲ್ಲಿಂದ ರೊಸಾರಿಯೊ ಹೈಸ್ಕೂಲ್ ರೋಡ್ ನ ಬದಿಯ ರಸ್ತೆಯಲ್ಲಿ ದಕ್ಕೆಗೆ ನಡೆದುಕೊಂಡು ಹೋಗುತ್ತಿರುವ ವೇಳೆ ಸುಮಾರು 20.15 ವೇಳೆಗೆ ಗೂಡ್ ಶೆಡ್ ರಸ್ತೆಯ ಪ್ರೆಂಡ್ಸ ಬಾರ್ ನ ಬಳಿ ಹೋಗುತ್ತಿದ್ದಂತೆ ಸ್ವಲ್ಪ ಮುಂದೆ ರಸ್ತೆಯ ಬದಿಯಲ್ಲಿ ಪಿರ್ಯಾದಿದಾರರ ದೂರದ ಸಂಬಂದಿ ಮುನ್ನಾ ಯಾನೆ ಮೊಹ್ಮದ್ ಗೌಸ್ ಎಂಬಾತನು ದಾರಿಹೋಕರಲ್ಲಿ ಹಣವನ್ನು ಕೇಳುತ್ತಿದ್ದುದನ್ನು ಕಂಡು "ಈ ರೀತಿ ಸಿಕ್ಕ ಸಿಕ್ಕವರಲ್ಲಿ ಹಣವನ್ನು ಕೇಳಿ ನಮ್ಮ ಜಾತಿಯ ಮರ್ಯಾದೆ ತೆಗಿತಿಯಾ ನಿನಗೆ ದುಡಿದು ತಿನ್ನಲಾಗುವುದಿಲ್ಲವೆ" ಎಂದು ಬುದ್ದಿವಾದ ಹೇಳಿದ್ದಕ್ಕೆ ಆರೋಪಿತರು ಅವಾಚ್ಯ ಶಬ್ದಗಳಿಂದ ಬೈಯ್ದುದಲ್ಲದೆ ಪುನಃ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಹೇಳಿ ಪ್ಯಾಂಟ್ ಕಿಸೆಯಿಂದ ಹರಿತವಾದ ಬ್ಲೇಡ್ ನ್ನು ತೆಗೆದು ಪಿರ್ಯಾದಿದಾರರ ಎಡಕುತ್ತಿಗೆಗೆ ಬಲವಾಗಿ ತಿವಿದಿರುತ್ತಾನೆ. ಪಿರ್ಯಾದಿ ಒಮ್ಮೆಲೆ ರಕ್ತ ಗಾಯವಾಗಿದ್ದು ಬಳಿಕ ಅವರಿಗೆ ಅಲ್ಲಿದ್ದ ಜನರು ಪ್ರಥಮ ಚಿಕಿತ್ಸೆ ನೀಡಿ ನಂತರ 108 ಅಂಬ್ಯುಲೆನ್ಸ ನ ಮುಖಾಂತರ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿರುತ್ತಾರೆ. ಆರೋಪಿತರು ಧಕ್ಕೆ ಪರಿಸರದಲ್ಲಿ ಈ ಮೋದಲು ದಾರಿ ಹೋಕರಲ್ಲಿ ಹಣವನ್ನು ಬೇಡುತ್ತಿದ್ದು ಆತನಿಗೆ ಬುದ್ದಿ ಹೇಳಿದರು ಸಂಭಂದಿಕರಿಗೆ ಈ ವಿಚಾರ ತಿಳಿಸಿದ್ದು ಈ ದ್ವೇಷದಿಂದ ಈ ಕೃತ್ಯ ಮಾಡಿರುವುದಾಗಿದೆ.

 

12.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 08-03-2014 ರಂದು ಸಂಜೆ ಸುಮಾರು 6-30 ಗಂಟೆಯಿಂದ  ದಿನಾಂಕ 09-03-2014 ರಂದು ಬೆಳಿಗ್ಗೆ ಸುಮಾರು 08-30 ಗಂಟೆಯ ಮಧ್ಯೆ ಕಾನ-ಜೋಕಟ್ಟೆಯ ಕಾರಿಡಾರ್ರಸ್ತೆಯ ಬಲಬದಿಯಲ್ಲಿ ಯಾದವ ಕುಲಾಲ್ರವರ ನಿರ್ಮಾಣ ಹಂತದ ಮನೆಯಲ್ಲಿ ಸೆಂಟ್ರಿಂಗ್ಕೆಲಸದ ನಿಮಿತ್ತ  ಸದ್ರಿ ಮನೆಯ ಒಂದು ರೂಮಿನೊಳಗೆ ಇಟ್ಟಿರುವ 42 ಕಬ್ಬಿಣದ ಸೆಂಟ್ರಿಂಗ್ಶೀಟ್ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೆಂಟ್ರಿಂಗ್ ಶೀಟುಗಳಲ್ಲಿ B. ಮತ್ತು K. ಇಂಗ್ಲೀಷ್ಅಕ್ಷರದಲ್ಲಿ ವೆಲ್ಡ್ಮಾಡಿದ್ದು,  P,  ಮತ್ತು ME  ಅಕ್ಷರವು ಪೈಂಟ್ನಲ್ಲಿ ಬರೆದಿರುತ್ತದೆ ಕಳವಾದ  ಕಬ್ಬಿಣದ ಸೆಂಟ್ರಿಂಗ್ಶೀಟುಗಳ ಅಂದಾಜು ಮೌಲ್ಯ 45,000/- ರೂಪಾಯಿ ಆಗಬಹುದು.

 

13.ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-03-2014 ರಂದು ರಾತ್ರಿ ಸುಮಾರು 11-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಾಲ್ಫ್ ಮನೇಜಸ್ ರವರ ವಾಸದ ಮನೆಯಾದ ಮಂಗಳೂರು ಬಿಜ್ಯೆ ಕಾಪಿಕಾಡಿನ ಕೊಟ್ಟಾರ ಕ್ರಾಸ್ ರಸ್ತೆಯ ಮನೆಯ ಬಳಿಗೆ ಬಂದ  ಯಾರೋ  ಇಬ್ಬರು ಅಪರಿಚಿತರು ಮಾವಿನ ಕಾಯಿ ಕೊಯ್ಯಲು ಪ್ರಯತ್ನಿಸುವ ವೇಳೆ ಪಿರ್ಯಾದಿದಾರರು ಅಕ್ಷೇಪಿಸಿ ಅವರನ್ನು ಸಮೀಪದ ದೇವಸ್ಥಾನದ ತನಕ ಹಿಂಬಾಲಿಸಿದ್ದು ಅ ವೇಳೆಗೆ ಸದ್ರಿ ಅಪರಿಚಿರ ಪೈಕಿ ಒರ್ವನು ಮರದ ದೊಣ್ಣೆಯಿಂದ ಪಿರ್ಯಾದಿದಾರರ ಕೈ ಗೆ ಹಾಗೂ ಇನ್ನೊರ್ವನು ಪಿರ್ಯಾದಿದಾರರ ತಲೆಯ ಹಿಂಬದಿಗೆ ಕೈ ,ಯಿಂದ ಹೊಡೆದು ಗಾಯ ಗೊಳಿಸಿ ಅಲ್ಲಿಂದ ಬೆದರಿಸಿ ಓಡಿ ಹೋಗಿರುತ್ತಾರೆ. ಈ ಘಟನೆಗೆ ಪಿರ್ಯಾದಿದಾರರ ಮನೆಯ ಮಾವಿನ ಕಾಯಿಯನ್ನು ಅಪರಿಚಿತರು ಕೊಯ್ಯಲು ಬಂದಾಗ ಅವರ ನಾಯಿ ಬೊಗಳಿದಾಗ ಪಿರ್ಯಾದಿದಾರರು  ಹಿಂಬಾಲಿಸಿಕೊಂಡು ಹೋಗಿರುವುದೇ ಇದೇ ಕಾರಣವಾಗಿರುತ್ತದೆ.

 

14.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ತಿಮ್ಮಪ್ಪ ರವರು ಮತ್ತು ಅವರ ತಂದೆ ಚಿನ್ನಯ ಗೌಡ ಎಂಬವರೊಂದಿಗೆ ದಿನಾಂಕ: 09-03-2014 ರಂದು ಕೊಂಪದವಿನಿಂದ ಸುಂಕದಕಟ್ಟೆಗೆ  ಅಟೋರಿಕ್ಷಾ ನಂ; ಕೆಎ  19  ಬಿ   9859 ರಲ್ಲಿ ಬರುತ್ತಾ ಸಂಜೆ 4-15 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ , ಕೊಂಪದವು ಗ್ರಾಮದ ತರೋಳಿ ಕಾಡು ನವಚೇತನ ಯುವಕ ಸಂಘದ ಬಳಿ ತಿರುವು ರಸ್ತೆಯಲ್ಲಿ ಬರುತ್ತಿದ್ದಂತೇ ಮುಚ್ಚೂರು ಕಡೆಯಿಂದ ಕೊಂಪದವು ಕಡೆಗೆ ಟೂರಿಸ್ಟ್ ಟೆಂಪೋ ನಂ: ಕೆಎ  19  ಡಿ 9859 ನ್ನು ಅದರ ಚಾಲಕ ರಮೇಶ್ ಎಂಬವರು ಬಹಳ ದುಡುಕುತನ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ  ಫಿರ್ಯಾದಿದಾರರ  ಬಲಕೆನ್ನೆಗೆ, ಬಲಭುಜಕ್ಕೆ ಹಾಗೂ ಎಡ ಮೊಣಗಂಟಿಗೆ ಗುದ್ದಿದ ಜಖಂ ಆಗಿದ್ದು, ಫಿರ್ಯಾದಿದಾರರು ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

15.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08.03.2014 ರಂದು ಪಿರ್ಯಾದಿದಾರರಾದ ಶ್ರೀ ಸದಾಶಿವ ಕೆ.ಎಸ್. ರವರು ತನ್ನ ಬಾಬ್ತು KA05K5662 ನೇ ದರಲ್ಲಿ  ಕಣ್ಣೂರಿಗೆ ಹೋಗಿ ಮರಳಿ ಮಂಗಳೂರು ಕಡೆಗೆ ಬರುತ್ತಾ ಪಂಪ್ವೆಲ್‌‌  ತಲುಪುತ್ತಿದ್ದಂತೆ ಸಮಯ ಸುಮಾರು 14.20 ಗಂಟೆಗೆ  ಪಂಪ್ವೆಲ್‌‌ ವೃತ್ತ ಕಡೆಗೆ KA19EH8194 ನೇ ಮೋಟಾರ್‌‌‌ ಸೈಕಲನ್ನು ಅದರ ಚಾಲಕ ನಂದನ್‌‌ ಶೆಟ್ಟಿ ಎಂಬಾತನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆದಾಟುವರೇ ರಸ್ತೆ ಬದಿಯಲ್ಲಿ ನಿಂತಿದ್ದ ಸೋಯೆಬ್‌‌ ಅಖ್ತರ್‌‌ ಎಂಬ ಬಾಲಕನಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಹಾಗೂ ಮೋಟಾರ್‌‌ ಸೈಕಲ್ಸವಾರ  ರಸ್ತೆಗೆ  ಬಿದ್ದು , ಬಾಲಕನ ಕಿವಿಯ ಬಳಿ ರಕ್ತ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದಾಗಿಯೂ ಮತ್ತು ಮೋಟಾರ್‌‌ ಸೈಕಲ್‌‌ ಸವಾರನ ಎಡಕಾಲಿಗೆ ಮೂಳೆ ಮುರಿತದ ತೀವ್ರ ಗಾಯವಾಗಿರುವುದಾಗಿದೆ.

 

16.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08.03.2014 ರಂದು ರಾತ್ರಿ21.45 ಗಂಟೆ ಸಮಯಕ್ಕೆ  ಪಿರ್ಯಾದಿದಾರರಾದ ಶ್ರೀ ಲೋಹಿತ್ ಕುಮಾರ್ ಎಂ. ರವರು ತನ್ನ ಸ್ನೇಹಿತನ ಬಾಬ್ತು KA21J7937 ನೇ ನಂಬ್ರದ ಬಜಾಜ್‌‌ ಡಿಸ್ಕವರಿ ಮೋಟಾರ್‌‌ ಸೈಕಲ್ನಲ್ಲಿ ಅಡ್ಯಾರ್‌‌ ಪೋಸ್ಟ್‌‌  ಆಫೀಸ್‌‌ ಬಳಿ ಇರುವ ಅಂಗಡಿಗೆ ಹೋಗುವರರೇ ರಾಹೆ-73 ರಲ್ಲಿ ಮಂಗಳೂರು ಕಡೆಯಿಂದ ಬಿ.ಸಿ ರೋಡ್‌‌ ರಸ್ತೆಯಲ್ಲಿ ಹೋಗುತ್ತಾ ಅಡ್ಯಾರ್‌‌ ಪೋಸ್ಟ್‌‌ ಆಫೀಸ್‌‌ ಬಳಿ ತಲುಪಿದಾಗ ಮಂಗಳೂರು ಕಡೆಯಿಂದ ಬಿ.ಸಿ ರೋಡ್‌‌ ಕಡೆಗೆ KA12-9072 ನೇ ಇನ್ನೋವಾ ಕಾರನ್ನು ಅದರ ಚಾಲಕ ಮಹಮ್ಮದ್‌‌ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ಗೆ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಪಿರ್ಯಾಧಿದಾರರು ಮೋಟಾರ್‌‌ ಸೈಕಲ್ಸಮೇತ ರಸ್ತೆಗೆ ಬಿದ್ದು ಅವರ  ತಲೆಯ ಎಡಭಾಗ, ಎಡ ಹುಬ್ಬು, ಎಡ ಹೆಗಲು, ಮತ್ತು ಭುಜದಲ್ಲಿ ಜಖಂ ಆಗಿದ್ದಲ್ಲದೆ  ಎದೆಯ ಎಡಭಾಗದಲ್ಲಿ ತರಚಿದ ಗಾಯ ಮತ್ತು ಬಲಕಾಲಿಗೂ ಗಾಯವಾಗಿರುವುದಾಗಿದೆ.

 

No comments:

Post a Comment