Saturday, March 15, 2014

Daily Crime Reports 15-03-2014

ದೈನಂದಿನ ಅಪರಾದ ವರದಿ.

ದಿನಾಂಕ 15.03.201409:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-03-2014ರಂದು ಬೆಳಿಗ್ಗೆ 10-30 ಗಂಟೆಗೆ ಮಂಗಳೂರು ನಗರದ ಮಣ್ಣಗುಡ್ಡ ಎಂಬಲ್ಲಿರುವ ಸಾಯಿಪ್ರೇಮ್ ಎಂಬ ನಿರ್ಮಾಣ ಹಂತದ ಅಪಾರ್ಟ್ಮೆಂಟ್‌‌ 2ನೇ ಮಹಡಿಯ ಡಕ್ಕಿನಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಪಿರ್ಯಾದುದಾರರಾದ ಶ್ರೀ ರಾಮಪ್ಪ ಹೊಸಮನಿ ರವರ ಜೊತೆಯಲ್ಲಿ ಕೆಲಸಮಾಡುತ್ತಿದ್ದ ನಾಗರಾಜ ಎಂಬಾತನು ಆಕಸ್ಮಿಕವಾಗಿ ಆಯತಪ್ಪಿ ಸುಮಾರು 20 ಅಡಿಗಳಷ್ಟು ಆಳಕ್ಕೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯವುಂಟಾಗಿದ್ದು, ಈ ಘಟನೆಗೆ ಸದ್ರಿ ಅಪಾರ್ಟ್ಮೆಂಟ್‌‌ನ ನಿರ್ಮಾಣ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡ ದಯಾನಂದ ಹಾಗೂ ಸೆಂಟ್ರಿಂಗ್ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡ ಉತ್ತಮ್ರವರು ಯಾವುದೇ ಸುರಕ್ಷತಾ ಸಾಧನಗಳನ್ನು ಅಳವಡಿಸದೇ ನಿರ್ಲಕ್ಷತೆ ವಹಿಸಿರುವುದೇ ಕಾರಣವಾಗಿರುತ್ತದೆ

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-02-2014 ರಂದು ಬೆಳಗ್ಗೆ ಸುಮಾರು 11:40 ಗಂಟೆಗೆ ಬಸ್ಸು ನಂಬ್ರ KA-19-AB-6399 ನೇದನ್ನು ಅದರ ಚಾಲಕ ಕೋಟಿ ಚೆನ್ನಯ್ಯ ಸರ್ಕಲ್ ಕಡೆಯಿಂದ ಮಾರ್ನಮಿಕಟ್ಟೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮಾರ್ನಮಿಕಟ್ಟೆಯ ಯುನಿವರ್ಸಲ್ ಟಯರ್ ಶಾಪ್ ಎದುರು ಮುಂದಿನಿಂದ ಹೋಗುತ್ತಿದ್ದ ಮೋಟರ್ ಸೈಕಲ್ ನಂಬ್ರ KA-19-EE-3742 ನೇದನ್ನು ಎಡಭಾಗದಿಂದ ಒವರಟೆಕ್ ಮಾಡುವ ಸಮಯ ಮಾರ್ನಮಿಕಟ್ಟೆ ಕಡೆಯಿಂದ ಕೋಟಿ ಚೆನ್ನಯ್ಯ ಸರ್ಕಲ್ ಕಡೆಗೆ ಜೀಪು ನಂಬ್ರ KA-19-M-99 ನೇ ದನ್ನು ಅದರ ಚಾಲಕ ರಸ್ತೆ ಮಧ್ಯೆ ದಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಾಗ ಎರಡೂ ವಾಹನಗಳ ಮಧ್ಯೆ ಮೋಟರ್ ಸೈಕಲ್ ಸಿಲುಕಿ ಬಸ್ಸಿನ  ಬಲಭಾಗದ ಬಾಡಿ ಹಾಗೂ ಜೀಪಿನ ಮುಂಭಾಗದ ಬಲಭಾಗದ ಬಂಪರ್ ಮೋಟರ್ ಸೈಕಲಿಗೆ ಡಿಕ್ಕಿ ಆದಾಗ ಮೋಟರ್ ಸೈಕಲ್ ಸವಾರ ಮೋಟರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ರಸ್ತೆಗೆ ಬಿದ್ದ ಮೋಟರ್ ಸೈಕಲ್ ಸವಾರನ ತಲೆಯ ಮೇಲೆ ಬಸ್ಸಿನ ಬಲಭಾಗದ ಹಿಂಬದಿಯ ಚಕ್ರ ಹರಿದು ಹೋಗಿ ಸವಾರ ಸ್ಥಳದಲ್ಲೆ ಮೃತಪಟ್ಟಿರುವುದ್ದಾಗಿದೆ.

 

3.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  14.03.2014  ರಂದು  ಸಂಜೆ 5.50 ರ ವೇಳೆಗೆ  ಆರೋಪಿ ಲಾರಿ ಕೆಎ 48 3431ನೇದರ ಚಾಲಕ ಸಿದ್ದಪ್ಪ ಎಂಬಾತನು  ತಾನು ಚಲಾಯಿಸುತ್ತಿದ್ದ  ಲಾರಿಯನ್ನು  ಹಳೆಯಂಗಡಿ ಕಡೆಯಿಂದ  ಮುಲ್ಕಿ ಕಡೆಗೆ ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದು ಕಾರ್ನಾಡು ಗ್ರಾಮದ ಕೊಲ್ನಾಡ್  ಜಂಕ್ಷನ್  ಬಳಿ ತಲುಪುವಾಗ್ಗೆ ಎದುರುಗಡೆಯಿಂದ ಸಿದ್ದಪ್ಪ ಇವರು  ಮಂಜು ಎಂಬವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿದ್ದ   ಮೋಟಾರ್ ಸೈಕಲ್  ಕೆಎ  24  Q 2553 ನೇದಕ್ಕೆ ಲಾರಿಯ ಹಿಂಭಾಗದ   ಟಯರ್ ನ  ಮಡ್ ಗಡ್  ಡಿಕ್ಕಿಹೊಡೆದ  ಪರಿಣಾಮ  ಮೋಟಾರ್ ಸೈಕಲ್  ಸವಾರ ಸಹ ಸವಾರರಿಬ್ಬರು ರಸ್ತೆಗೆ  ಬಿದ್ದಿದ್ದು ತಲೆಗೆ  ತೀವ್ರ ತರಹದ  ಗಾಯಗೊಂಡ ಮಂಜು  ಪ್ರಾಯ:18 ವರ್ಷ  ಈತನನ್ನು ಚಿಕಿತ್ಸೆಯ ಬಗ್ಗೆ  ಮುಕ್ಕಾ ಶ್ರೀನಿವಾಸ  ಆಸ್ಪತ್ರೆಗೆ  ಕರೆದುಕೊಂಡು ಹೋಗುತ್ತಿದ್ದಾಗ  ದಾರಿ ಮದ್ಯೆ ಮೃತಪಟ್ಟಿರುವುದಾಗಿದೆ ಮೋಟಾರ್ ಸೈಕಲ್ ಸವಾರ ಸಿದ್ದಪ್ಪನ ಎಡ ಕಾಲಿನ  ಕೋಲು ಕಾಲಿಗೆ   ರಕ್ತಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ದಾಖಲಾಗಿರುವುದಾಗಿದೆ.

 

4.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಘುರಾಮ ಶೆಟ್ಟಿ ರವರ ಹಾಸ್ಟೇಲ್ನಲ್ಲಿದ್ದ  ಮೂಡಬಿದ್ರೆ ಆಳ್ವಾಸ್ಪದವಿ ಪೂರ್ವ ಕಾಲೇಜಿನ ದ್ವಿತೀಯಾ ವರ್ಷದ ಪಿಯುಸಿ ವಿದ್ಯಾರ್ಥಿಯಾದ  ಬಸವರಾಜ ಎಸ್ಪ್ರಾಯ 18 ವರ್ಷ ಎಂಬವನು ಪುತ್ತಿಗೆ ಗ್ರಾಮದ ಆಳ್ವಾಸ್ಕಾಲೇಜಿನ ಕೊಡಚಾದ್ರಿ  ಬಾಯ್ಸ್ಹಾಸ್ಟೇಲ್ನಿಂದ ದಿನಾಂಕ ; 13-03-2014 ರಂದು ಬೆಳಿಗ್ಗೆ 08-15 ಗಂಟೆಗೆ ಪರೀಕ್ಷೆಗೆ ಹಾಜರಾಗಲು ಕಾಲೇಜಿಗೆ ಹೋದವನು ವಾಪಾಸ್ಹಾಸ್ಟೇಲ್ಗೆ ಬಾರದೇ ಕಾಣೆಯಾಗಿದ್ದು. ಆಳ್ವಾಸ್ಕಾಲೇಜಿನ ಕ್ಯಾಂಪಸ್ನಲ್ಲಿ ಹಾಗೂ ಮೂಡಬಿದ್ರೆ ಪೇಟೆ ಪರಿಸರದಲ್ಲಿ ಹುಡುಕಿದಾಗಲೂ ಪತ್ತೆಯಾಗಿರುವುದಿಲ್ಲ. ಕಾಣೆಯಾದ ಹುಡುಗನ  ಚಹರೆ : ಹೆಸರು: ಬಸವರಾಜ ಎಸ್ಪ್ರಾಯ: 18 ವರ್ಷಎತ್ತರ 5 ಅಡಿ, ಸಾಧಾರಣ ಶರೀರ, ಗೋಧಿ ಮೈಬಣ್ಣ, ಕಪ್ಪು ಬಣ್ಣದ ಪ್ಯಾಂಟ್  ಮತ್ತು ಆಕಾಶ ನೀಲಿ ಬಣ್ಣದ ಆಳ್ವಾಸ್ ಕಾಲೇಜಿನ ಸಮವಸ್ತ್ರ ಧರಿಸಿರುತ್ತಾನೆಕನ್ನಡ, ತೆಲುಗು, ಇಂಗ್ಲೀಷ್ ಭಾಷೆಗಳನ್ನು ಮಾತಾಡುತ್ತಾನೆ.

 

5.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-03-2014 ರಂದು 16-30 ಗಂಟೆಗೆ ಮಂಗಳೂರು ನಗರದ ಕಂಕನಾಡಿ ಕುದ್ಕೋರಿ ಗುಡ್ಡದ ಎವರ್ ಗ್ರೀನ್ ಹೋಟೇಲ್ ಎದುರುಗಡೆ ಪಿರ್ಯಾದಿದಾರರಾದ ಶ್ರೀ ಪ್ರಶಾಂತ್ ಹಾಗೂ ಅವರ ನೆರೆಯ ಶೇಖರ್ ಎಂಬವರು ಬರುತ್ತಿದ್ದ ರಿಕ್ಷಾವನ್ನು ಆರೋಪಿಗಳಾದ ಸುನಿಲ್, ಅನಿಲ್, ರತ್ನಾಕರ ಮತ್ತು ಪ್ರಸಾದ್ ಎಂಬವರು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ, ರಿಕ್ಷಾದಲ್ಲಿದ್ದ ಪಿರ್ಯಾದಿದಾರರಾದ  ಪ್ರಶಾಂತ್  ಮತ್ತು  ಜೊತೆಗಿದ್ದ ಶೇಖರ್  ರವರನ್ನು ಎಳೆದು ಹಾಕಿ ಸುನೀಲನು ಆತನ ಕೈಯಲ್ಲಿದ್ದ ಕ್ರಿಕೆಟ್ ಆಟದ ವಿಕೆಟಿನಿಂದ ತಲೆಗೆ ಹಾಗೂ ಹಣೆಗೆ ಬಲವಾಗಿ ಹಲ್ಲೆ ನಡೆಸಿ ತೀವೃತರಹದ ರಕ್ತ ಗಾಯವನ್ನುಂಟು ಮಾಡಿದಲ್ಲದೆ ಉಳಿದ  ಆರೋಪಿಗಳಾದ ರತ್ನಾಕರ, ಅನಿಲ್ ಮತ್ತು ಪ್ರಸಾದ್ ಕೈಯಿಂದ ಹಾಗೂ ಕಾಲಿನಿಂದ ಹಲ್ಲೆ ನಡೆಸಿದ್ದು ಶೇಖರನಿಗೆ ಆರೋಪಿ ಸುನಿಲನು ಮರದ ಸೊಂಟೆಯಿಂದ ಬಲ ಕೈಗೆ ಹಲ್ಲೆ ನಡೆಸಿದ್ದು ಅನಿಲನು ಕೈಯಿಂದ ಹಲ್ಲೆ ನಡೆಸಿರುವುದಲ್ಲದೆ ಅವಾಚ್ಯ ಶಬ್ದಗಳಿಂದ "ನಿಮ್ಮನ್ನು ಮುಂದಕ್ಕೆ ಕೊಲ್ಲದೆ ಬಿಡುವುದಿಲ್ಲ" ಎಂದು ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ.

 

6.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಎಸ್. ಮೋಹನ್ ಹೊಳ್ಳ ರವರು ಕಳೆದ ಎರಡು ತಿಂಗಳಿನಿಂದ ಬಾವಟಗುಡ್ಡೆಯಲ್ಲಿರುವ ನ್ಯಾಯಾಲಯದ ಸಂಕಿರ್ಣ ಮಂಗಳೂರಿನಲ್ಲಿ ಶಿರಸ್ತೇದಾರರಾಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ. ನ್ಯಾಯಾಲಯ ಸಂಕೀರ್ಣ ಗ್ರೌಂಡ್ ಮಹಡಿಯಲ್ಲಿ ಕ್ರಿಮಿನಲ್ ಕೇಸಿನಲ್ಲಿ ವಶಪಡಿಸಲಾದ ಸೊತ್ತುಗಳನ್ನು ಇಡುತ್ತಿದ್ದು, ಇದರ ಕಾರ್ಯವನ್ನು ಶ್ರಿಮತಿ ಮೀನಾಕ್ಷಿ  ದ್ವಿತೀಯ ದರ್ಜೆ ಗುಮಾಸ್ತೆ ಇವರು ನಿರ್ವಹಿಸುತ್ತಿದ್ದು, ಸದ್ರಿ ಕೊಠಡಿಯ  ಕೀಯನ್ನು ಶ್ರಿಮತಿ ಮೀನಾಕ್ಷಿ ಯವರು ಮಾತ್ರಾ ಹೊಂದಿದ್ದು, ದಿನಾಂಕ 13-03-2014 ರಂದು ಸಂಜೆ 5:30 ಗಂಟೆಗೆ ಪ್ರಾಪರ್ಟಿ ರೂಮಿನ ಬಾಗಿಲು ಭದ್ರ ಮಾಡಿ ಬೀಗ ಹಾಕಿ ಹೋಗಿದ್ದು, ಮಾರನೇ ದಿನ ದಿನಾಂಕ 14-03-2014 ರಂದು ಬೆಳಿಗ್ಗೆ 12:00 ಗಂಟೆಗೆ ಸಿಸಿ ನಂ 497/11, 2 ನೇ ಸಿಜೆಎಂ ಮಂಗಳೂರು ನ್ಯಾಯಾಲಯದ ಸೊತ್ತುಗಳನ್ನು ವಿಚಾರಣೆಗಾಗಿ ಸೊತ್ತು ಕೊಠಡಿಯನ್ನು ತೆರೆಯಲಾಗಿ ಪಿಆರ್ 84/11 ಸೊತ್ತುಗಳನ್ನು ಪರಿಶೀಲಿಸಲಾಗಿ ಪೂರ್ವ ಪೊಲೀಸ್ ಠಾಣೆ ಪಿಆರ್ 98/11 ಕ್ರೈಂ ನಂ 49/11,  1. E MACHINE ಎಂಬ ಕಂಪೆನಿಯ ಕಪ್ಪು ಬಣ್ಣದ ಲ್ಯಾಪ್ ಟಾಪ್ ರೂ 15,000/-, 2. LG ಕಂಪೆನಿಯ ಮೊಬೈಲ್ ಹ್ಯಾಂಡ್ ಸೆಟ್ ರೂ 10,000/-, 3. SAMSUNG ಕಂಪೆನಿಯ ಬಿಳಿ ಬಣ್ಣದ ಮೊಬೈಲ್ ಹ್ಯಾಂಡ್ ಸೆಟ್ ರೂ.10000/-, ಪೂರ್ವ ಪೊಲೀಸ್ ಠಾಣೆ, ಪಿಆರ್ 84/11 ಕ್ರೈಂ ನಂ 33/11 - 4. ಮಾಸಿದ ಖಾಲಿ ಬಣ್ಣದ ಬ್ಯಾಗ್-1   5. ಮೊಬೈಲ್ ಸೆಟ್ ಗೋಲ್ಡ್ ಕಲರ್  ಐಎಂಇಐ ನಂ  327291030242352 ಇದರಲ್ಲಿ ಐಡಿಯಾ ಸಿಮ್ ಅಂದಾಜು ಬೆಲೆ- 4000, 6. ನೋಕಿಯಾ ಕಂಪೆನಿಯ ಮೊಬೈಲ್ಐಎಂಇಐ ನಂ. 251544046065902, ಪೂರ್ವ ಪೊಲೀಸ್ ಠಾಣೆ ಪಿಆರ್ 43/11 ಕ್ರೈಂ ನಂ 8/13 - 1.ತೊಶಿಬಾ ಕಂಪೆನಿಯ LCD TV-1, MODERN NO. 24PA200ZE ಆಗಿದ್ದು ಅಂದಾಜು ಮೌಲ್ಯ ರೂ.14000/- ಈ ಸೊತ್ತುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಒಟ್ಟು ಮೌಲ್ಯ ರೂ 60,000/- ಆಗಬಹುದು, ಅಲ್ಲದೇ ಬೇರೆ ಯಾವ ಸೊತ್ತುಗಳು ಕಳವು ಆಗಿರುತ್ತದೆ ಎಂಬುದು ತಿಳಿದು ಬಂದಿಲ್ಲವಾಗಿದೆ.

 

7.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 12/03/2014 ರಂದು ಬೆಳಿಗ್ಗೆ 09.00 ಗಂಟೆಗೆ ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ಕೊಲ್ಲಾಯಿ ಸರಸ್ವತಿ ಮನೆ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಬಾಲಕೃಷ್ಣ ಶೆಟ್ಟಿ ರವರು ತನ್ನ ಸಂಬಂಧಿ ನಾರಾಯಣ ಎಂಬವರ ಜಾಗದಲ್ಲಿ ಗೇರು ಬೀಜಗಳನ್ನು ಹೆಕ್ಕುತ್ತಿರುವಾಗ ಅಲ್ಲಿಗೆ ಬಂದ ಆರೋಪಿ ವಿಠಲ ಶೆಟ್ಟಿಯು " ಇದು ನನ್ನ ಜಾಗ, ಇಲ್ಲಿ ನೀನು ಗೇರು ಬೀಜ ಹೆಕ್ಕಬಾರದು " ಎಂದು ಜೋರು ಮಾಡಿದಾಗ, ಪಿರ್ಯಾದಿದಾರರು " ಇದು ನಿನ್ನ ಜಾಗ ಅಲ್ಲ ನಾರಾಯಣ ಶೆಟ್ಟಿಯವರ ಜಾಗ " ಎಂದು ಹೇಳಿದ್ದು, ಅದಕ್ಕೆ ಆರೋಪಿ ಆಕ್ಷೇಪಿಸಿದ್ದು, ನಂತರ ಪಿರ್ಯಾದಿದಾರರು ಅಲ್ಲಿಂದ ಹೊರಟಾಗ ಆರೋಪಿಯು ಪಿರ್ಯಾದಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಮರದ ದೊಣ್ಣೆಯಿಂದ ಪಿರ್ಯಾದಿದಾರರ ತಲೆಯ ಹಿಂಭಾಗಕ್ಕೆ, ಬಲ ಕಾಲಿಗೆ, ಬೆನ್ನಿಗೆ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಮುಂದಕ್ಕೆ ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುವುದಾಗಿದೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  12.03.2014 ರಂದು  ರಾತ್ರಿ  9:30  ಗಂಟೆ ವೇಳೆಗೆ ಪಿರ್ಯಾದಿದಾರರಾದ ಶ್ರೀಮತಿ ಪುಷ್ಪಾ ರವರ ಮನೆಯ  ಎದುರುಗಡೆ ನಡೆದುಕೊಂಡು ಹೋಗುತ್ತಿದ್ದ ಮೊಹಮ್ಮದ್ಎಂಬವರು ಪಿರ್ಯಾದಿದಾರರ  ನಾಯಿಗೆ ದೊಣ್ಣೆ ತೋರಿಸಿ ಹೆದರಿಸುತ್ತಿದ್ದುದರಿಂದ ನಾಯಿ  ಬೊಗಳುತ್ತಿದ್ದನ್ನು  ಕೇಳಿ ಪಿರ್ಯಾದಿದಾರರ  ಗಂಡ ಗೇಟಿನ  ಬಳಿಗೆ ಹೋಗಿ  ಸದ್ರಿ ಮೊಹಮ್ಮದ್ರೊಡನೆ ಮಾತನಾಡುತ್ತಿದ್ದಾಗ ಆರೋಪಿಗಳಾದ ಫಾರೂಕ್‌,  ಮತ್ತು  ಬದ್ರು ಎಂಬವರು  ಅಲ್ಲಿಗೆ ಬಂದು  ಪಿರ್ಯಾದಿದಾರರ  ಗಂಡನಿಗೆ ಅವಾಚ್ಯ ಶಬ್ದದಿಂದ ಬೈದು  ಕೈಯಿಂದ ಹೊಡೆದುದನ್ನು ಕಂಡು ಪಿರ್ಯಾದಿದಾರರು  ಮತ್ತು ಅವರ ಮಗ ಹರೀಶ್‌  ತಡೆಯಲು  ಹೋದಾಗ ಫಾರೂಕ್ಎಂಬವನು ಮರದ ದೊಣ್ಣೆಯಿಂದ ಪಿರ್ಯಾದಿದಾರರಿಗೆ ಮತ್ತು  ಹರೀಶ್ನಿಗೆ ಹೊಡೆದು ಗಾಯವನ್ನು  ಉಂಟು ಮಾಡಿದ್ದಲ್ಲದೆ , ಅಲ್ಲದೆ ಆರೋಪಿ  ಬದ್ರು  ಎಂಬಾತನು  ಪಿರ್ಯಾದಿದಾರರನ್ನು ಮತ್ತು  ಅವರ ಗಂಡನಿಗೆ ಜೀವ ಬೆದರಿಕೆ ಹಾಕಿರುತ್ತಾರೆ.

No comments:

Post a Comment