Saturday, March 8, 2014

Daily Crime Report 06-3-2014

ದಿನಾಂಕ 06.03.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

2

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಶಂಕರ್ ಸಂಜೀವ್ ಗೌಡ ರವರು Anti Piracy Force Pvt Ltd  ಎಂಬ ಸಂಸ್ಥೆಯಲ್ಲಿ ವರ್ಕಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು, ನಕಲಿ ಸಾಪ್ಟ್‌  ವೇರ್ ನಿಂದ ವ್ಯವಹಾರ ಮಾಡುವವರ ವಿರುದ್ದ ಸಂಬಂಧ ಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಕೆಲಸ ಮಾಡಿಕೊಂಡಿದ್ದು, ವಿವಿಧ ಕಂಪನಿಗಳು ಇವರಿಗೆ ಸಾಪ್ಟ್ವೇರ್ ಪೈರಸಿಯ ಮೇಲೆ ಕಾನೂನು ಕ್ರಮ ಜರುಗಿಸಲು ಅಥರೈಜೇಷನ್ ಕೊಟ್ಟಿದ್ದು, ದಿನಾಂಕ 05-03-2014 ರಂದು ಮಂಗಳೂರಿನ ಬಿಜೈ ಕಾಪಿಕಾಡ್ನಲ್ಲಿರುವ ಮ್ಯಾಗ್ನ್ಂ ಇಂಟರ್ಗ್ರಾಫಿಕ್ಸ್ ಪ್ರೈ.ಲಿಮಿಟೆಡ್ ಎಂಬ ಕಛೇರಿಯಲ್ಲಿ ಕಾಪಿರೈಟ್ಗೆ  ಸಂಬಂಧಪಟ್ಟ ಸಾಪ್ಟ್ವೇರ್‌‌ಗಳ  ನಕಲಿ ಪ್ರತಿಯಿಂದ ವ್ಯವಹರ ಮಾಡುತ್ತಿದ್ದು, ಇವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿ ನೀಡಿರುತ್ತಾರೆ.

 

2.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-03-2014 ರಂದು ಬೆಳಿಗ್ಗೆ 09:15 ರವೇಳೆಗೆ  ಪಿರ್ಯಾದಿದಾರರಾದ ಸುಷ್ಮಾ ರವರು ತನ್ನ ಬಾಬ್ತು ಶ್ವಿಫ್ಟ್ ಡಿಝೈರ್ ಕಾರು ನಂಬ್ರ KA-19-MD-7590 ನೇ ದರಲ್ಲಿ ತನ್ನ ಮನೆಯಿಂದ ಎಸ್ ಕೋಡಿಹಳೆಯಂಡಿ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಕೆಮ್ರಾಲ್ ಗ್ರಾಮದ ಹೊಸಕಾಡು ಬಸ್ಸು ನಿಲ್ದಾಣ ಬಳಿ ತಲುಪುವಾಗ್ಗೆ ಪಕ್ಷಿಕೆರೆ ಕಡೆಯಿಂದ ಮೋಟಾರ್ ಸೈಕಲ್ಲ್ ನಂಬ್ರ  KA-19-EA-2308 ನೇ ದ್ದನ್ನು ಅದರ ಸವಾರ ಜಗದೀಶ ಎಂಬವರು ಹಿಂಬದಿ ಸೀಟ್ ನಲ್ಲಿ ದೇವದಾಸ್ ಎಂಬವರನ್ನು ಕುಳ್ಳಿರಿಸಿಕೊಂಡು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡುತ್ತಾ ಬಂದು ಒಮ್ಮೇಲೆ ಮೋಟಾರ್ ಸೈಕಲ್ಲ್ ನ್ನು ರಸ್ತೆಯ ಬಲಬದಿಗೆ ಸವಾರಿ ಮಾಡುತ್ತಾ ಬಂದು ಪಿರ್ಯಾದಿದಾರರ ಕಾರಿನ ಎಡಭಾಗಕ್ಕೆ  ಢಿಕ್ಕಿಪಡಿಸಿದ್ದು  ಪರಿಣಾಮ ಮೋಟಾರ್ ಸೈಕಲ್ಲ್ ಸಮೇತ ಸವಾರಿಬ್ಬರು ರಸ್ತೆಗೆ ಬಿದ್ದು ಎಡಕಾಲಿಗೆ ರಕ್ತ ಗಾಯವಾಗಿದ್ದು ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

3.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  5.03.2014 ರಂದು ಬೆಳಿಗ್ಗೆ  9.30 ಗಂಟೆಗೆ   ಫಿರ್ಯಾದಿದಾರರಾದ  ಜಗದೀಶ್ ರವರು ತನ್ನ  ನೆರೆಮನೆಯ  ದೇವದಾಸ್ ರವರೊಂದಿಗೆ ತನ್ನ ಬಾಬ್ತು  ಕೆಎ  19  EA 2308ನೇ   ಹೀರೋ  ಹೊಂಡಾ  ಬೈಕಿನಲ್ಲಿ  ಮಂಗಳೂರು ತಾಲೂಕು ಕೆಮ್ರಾಲ್  ಗ್ರಾಮದ  ಹೊಸಕಾಡು ಮಾರುತಿನಗರ  ಬಳಿ  ಸವಾರಿ ಮಾಡಿಕೊಂಡು  ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ಎಸ್ ಕೋಡಿಯಿಂದ  ಪಕ್ಷಿಕೆರೆ ಕಡೆಗೆ  ಕೆಎ  19 MD  7590ನೇ  ಸ್ವಿಪ್ಟ್ ಡಿಸೈರ್  ಕಾರು ಚಾಲಕ ಸುಷ್ಮಾ ಎಂಬವರು ಅತೀ ವೇಗ  ಹಾಗೂ ಅಜಾಗರೂತೆಯಿಂದ  ಚಲಾಯಸಿಕೊಂಡು ಬಂದು ಫಿರ್ಯಾದಿದಾರರ  ಬೈಕಿನ ಎಡಬದಿಗೆ  ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹ ಸವಾರರು  ರಸ್ತೆ  ಬಿದ್ದಿದ್ದು ಫಿರ್ಯಾದಿದಾರರ ಎಡಕೆನ್ನೆಯ ಬದಿಗೆ  ಎಡಕೈಗೆ  ಎಡಕಾಲಿನ  ಗಂಟಿಗೆ  ಹಾಗೂ ಎಡಪಾದದ  ಹಿಮ್ಮಡಿಗೆ  ಜಖಂ ಆಗಿದ್ದು ಸಹ ಸವಾರ  ದೇವಿದಾಸ್  ರವರಿಗೆ  ಹಿಮ್ಮಡಿ ಪಾದದ ಎಡಗಾಲಿಗೆ   ಗಾಯವಾಗಿದ್ದು ಚಿಕಿತ್ಸೆ  ಬಗ್ಗೆ  ಮುಕ್ಕಾ  ಶ್ರೀನಿವಾಸ್  ಆಸ್ಪತ್ರೆಗೆ  ಒಳರೋಗಿಯಾಗಿ ದಾಖಲಾಗಿದ್ದು ಈ ಪೈಕಿ  ದೇವಿದಾಸ್ ರವರನ್ನು  ಹೆಚ್ಚಿನ ಚಿಕಿತ್ಸೆ  ಬಗ್ಗೆ  ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ  ದಾಖಲಿಸಿರುವುದಾಗಿದೆ.

 

4.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-03-14 ರಂದು ಪಿರ್ಯಾದಿದಾರರಾದ ಶ್ರೀ ಸಿದ್ದಿಕ್ ರವರು ಕೆಲಸ ಬಿಟ್ಟು ರಾತ್ರಿ ಮನೆಗೆ ಬಂದು ನಂತರ ಅಲ್ಲೇ ಹತ್ತಿರವಿರುವ ತನ್ನ ತಂಗಿಯ ಮನೆಗೆ ಹೋಗಿ ಅಲ್ಲಿ ಮಾತನಾಡುತ್ತಿದ್ದ ಸಮಯ ಸುಮಾರು 20.00 ಗಂಟೆಗೆ ಸುವರ್ಣ ನಗರದ ವಾಸಿ ಹನೀಫ್ ಎಂಬಾತನು ಮನೆಯ ಒಳಗೆ ಪ್ರವೇಶಿಸಿ ಪಿರ್ಯಾದಿದಾರರನ್ನುದ್ದೇಶಿಸಿ, "ನೀನು ನನ್ನ ವಿಚಾರದಲ್ಲಿ ಭಾರೀ ಚಾಡಿ ಹೇಳುತ್ತೀಯಾ" ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಬಲಕುತ್ತಿಗೆಯ ಬಳಿ ಕೈಯಿಂದ ಹೊಡೆದು ದೂಡಿ ಹಾಕಿ ಕಾಲಿನಿಂದ ಎಡ ಸೊಂಟದ ಬಳಿಗೆ ಕಾಲಿನಿಂದ ತುಳಿದನು. ಪಿರ್ಯಾದಿ ಆತನಲ್ಲಿ ಯಾತಕ್ಕೆ ಹೊಡೆಯುತ್ತೀ ಎಂದು ಕೇಳಿದಾಗ, "ನಿನಗೆ ಹೊಡೆಯುವುದಲ್ಲ, ಜೀವ ಸಹಿತ ಬದುಕಲು ಬಿಡುವುದಿಲ್ಲ" ಎಂಬುದಾಗಿ ಜೀವ ಬೆದರಿಕೆ ಒಡ್ಡಿದ್ದು. ಆರೋಪಿ ಪಿರ್ಯಾದಿದಾರರ ಹೆಂಡತಿ ಮುಮ್ತಾಜ್ ರವರಲ್ಲಿ ಮಾತನಾಡುವ ವಿಚಾರ ಪಿರ್ಯಾದಿದಾರರಿಗೆ ತಿಳಿದಿದ್ದುಈ ಬಗ್ಗೆ ಆರೋಪಿಗೆ ಬುದ್ದಿ ಹೇಳಿದ್ದು, ಇದೇ ಕಾರಣದಿಂದ ಹನೀಫ್ ಹಲ್ಲೆ ನಡೆಸಿದ್ದುಹಲ್ಲೆಯಿಂದ ಪಿರ್ಯಾದಿದಾರರ  ಎಡ ಬದಿಯ ಎದೆಯಲ್ಲಿ ಗೀರಿದ ಗಾಯವಾಗಿರುತ್ತದೆ ಎಂಬಿತ್ಯಾದಿ.

 

5.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರೈನಾ ಬಿಡಿಕಾ ರವರು ಕೆಲಸ ಮಾಡುತ್ತಿರುವ ಮಂಗಳೂರು ನಗರದ ಮಿಷನ್ ಕಂಪೌಂಡ್ ನ ವಿಶ್ವಾಸ್ ಬಾವ ಬಿಲ್ಡರ್ಸ್ ನ ಇಂಪಿರಿಯಲ್ ಎಂಬ ಕಟ್ಟಡದ  ಸೈಟಿನಲ್ಲಿ 9 ತಿಂಗಳಿನಿಂದ ಹೆಲ್ಪರ್  ಕೆಲಸ ಮಾಡುತ್ತಿದ್ದ ಪಿರ್ಯಾದಿದಾರರ ಊರಿನ ಪಾಲೆಗಾವ್ ಎಂಬಲ್ಲಿನ ಕುಮಾರಿ ಸೆಂಥಾ (19) ಎಂಬವಳು  ದಿನಾಂಕ: 04-03-2014 ರಂದು  ಸಮಯ ಸುಮಾರು ಸಂಜೆ 4.00 ಗಂಟೆಗೆ ಸೋಪ್  ತರಲು ಅಥೆನಾ ಆಸ್ಪತ್ರೆಯ ಅಂಗಡಿಗೆ  ಹೋದವಳು ಮರಳಿ ಸೈಟಿಗೆ ಬಾರದೇ ಕಾಣೆಯಾಗಿರುತ್ತಾಳೆ. ಈ ಬಗ್ಗೆ ಎಲ್ಲಾ ಕಡೆ  ಹುಡುಕಾಡಿದರೂ ಇಲ್ಲಿಯವರೆಗೆ   ಪತ್ತೆಯಾಗಿರುವುದಿಲ್ಲ.

 

6.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-03-2014 ರಂದು ಪಿರ್ಯಾದಿದಾರರಾದ ಶ್ರೀ ಒನಿಲ್ ಪಿಂಟೋ ರವರ ತಂದೆ ಆಲ್ಬರ್ಟ್ ಪಿಂಟೋ (66) ಎಂಬವರು ಸಂಜೆ ವಾಕಿಂಗ್ ಬಗ್ಗೆ ಮನೆಯಿಂದ ಸುರತ್ಕಲ್ ಕಡೆಗೆ ನಡೆದುಕೊಂಡು ಹೋದವರು ಸಂಜೆ ಸುಮಾರು ಸಮಯ 5-30 ಗಂಟೆ ಸಮಯಕ್ಕೆ ಸುರತ್ಕಲ್ ನ ವಿನೋದ್ ಕೋಲ್ಡ್ ಹೌಸ್ ಬಳಿ ರಸ್ತೆಯ ತೀರಾ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕುಳಾಯಿ ಕಡೆಯಿಂದ ಕೆ.. 20.ಎಕ್ಸ್ 3025ನೇ ಮೋಟಾರು ಸೈಕಲ್ ಸವಾರನು ಸದ್ರಿ ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿ ತಂದೆ ಆಲ್ಬರ್ಟ್ ಪಿಂಟೋ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಆಲ್ಬರ್ಟ್ ಪಿಂಟೋ ರವರು ನೆಲಕ್ಕೆ ಬಿದ್ದು ತಲೆಗೆ ತೀರ್ವ ತರಹದ ಗಾಯವಾಗಿ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಕಲಿಸಿದ್ದು ಅಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿದೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25.02.2014 ರಂದು 06.30 ಗಂಟೆಗೆ  ಪದವು ಗ್ರಾಮದ ಜ್ಯೋತಿ ಹಿಲ್ಸ್‌‌ ಕಂಪೌಂಡ್‌‌‌ ಡೈರಿ ರೋಡ್‌‌ ಕುಲಶೇಖರ ಎಂಬಲ್ಲಿಂದ ಪಿರ್ಯಾಧಿದಾರರಾದ ಶ್ರೀ ಸಂತೋಷ್ ಕುಮಾರ್ ಶಿವಪ್ಪ ತಡಕೊಟೆ ರವರ ತಂದೆ ಶಿವಪ್ಪ ಮಲ್ಲಪ್ಪ ತಾಡಕೋಟ್‌‌ ಎಂಬವರು ಗೋವಾಕ್ಕೆ ಹೋಗಿ ಅಲ್ಲಿಂದ ಗೋಕರ್ಣಕ್ಕೆ ಹೋಗಿ ಮಹಾಶಿವರಾತ್ರಿಯ ಕೆಲಸ ಮುಗಿಸಿ ಮರಳಿ ಮನೆಗೆ ಬರುವುದಾಗಿ ತಿಳಿಸಿ ಹೋದವರು ಈ ವರೆಗೆ ಮನೆಗೂ ಬಾರದೆ ಸ್ವಂತ ಊರಾದ ಗದಗಕ್ಕೂ ಹೋಗದೆ ಕಾಣೆಯಾಗಿದ್ದು ಸದ್ರಿಯವರ ಪತ್ತೆಯ ಬಗ್ಗೆ ನೆರೆಕರೆಯವರಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಈವರೆಗೂ ಪತ್ತೆಯಾಗದೇ ಇರುವುದಾಗಿದೆ

No comments:

Post a Comment