ದಿನಾಂಕ 11.03.2014 ರ 18:30 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 1 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 0 |
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-03-2014ರಂದು ಪಿರ್ಯಾದಿದಾರರಾದ ದೇಬಾ ಜ್ಯೋತಿ ದತ್ತಾ ರವರು ಉರ್ವಾ ಮಾರ್ಕೆಟ್ ಕಡೆಯಿಂದ ರಾತ್ರಿ ಸುಮಾರು 10-45 ಗಂಟೆ ಸಮಯಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ 4 ಜನ ಅಪರಿಚಿತರು ಪಿರ್ಯಾದಿದಾರರನ್ನು ಉದ್ದೇಶಿಸಿ ನೀವು ದತ್ತರಾ, ಎಂದು ವಿಚಾರಿಸಿ ಪಿರ್ಯಾದಿದಾರರ ಮುಖ, ಎರೆಡು ಕೆನ್ನೆಗಳಿಗೆ ಕೈಯಿಂದ ಹೊಡೆದು ಕೆಳಗೆ ಕೆಡವಿ ಕಾಲುಗಳಿಂದ ತುಳಿದು ಗಾಯಪಡಿಸಿ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಕೈಯಲ್ಲಿದ್ದ ಚಿನ್ನದ ಬ್ರಾಸ್ಲೈಟ್ನ್ನು ಬಲತ್ಕಾರವಾಗಿ ಎಳೆದುಕೊಂಡು ಪರಾರಿಯಾಗಿರುವದಾಗಿದೆ ಅಪರಿಚಿತರು ಸುಲಿಗೆ ಮಾಡಿದ ಚಿನ್ನಾಭರಣದ ಅಂದಾಜು ತೂಕ 26 ಗ್ರಾಂ ಗಳಾಗಿದ್ದು ಮೌಲ್ಯ ರೂಪಾಯಿ ಸುಮಾರು 50000/- ಆಗಬಹುದು.
2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-03-2014 ರಂದು ಅವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆ.ಎ.18.ಹೆಚ್.7809ನೇದರಲ್ಲಿ ಮಂಜುನಾಥ ಎಂಬವರನ್ನು ಸಹಸವಾರರನ್ನಾಗಿ ಕಳ್ಳಿರಿಸಿ ಕೆಲಸದ ನಿಮಿತ್ತ ಉಡುಪಿಯಿಂದ ಮಂಗಳೂರಿಗೆ ಮೋಟಾರು ಸೈಕಲನ್ನು ಚಲಾಯಿಸಿಕೊಂಡು ಬರುತ್ತಾ ಸುರತ್ಕಲ್ ಕಳೆದು ಹೊಸಬೆಟ್ಟು ಕಡೆಗೆ ರಾ.ಹೆ 66ರಲ್ಲಿ ಸಾಗುತ್ತಾ ಹೊಸಬೆಟ್ಟು ಜಂಕ್ಷನ್ ನಲ್ಲಿ ಬೆಳಿಗ್ಗೆ 07-15 ಗಂಟೆ ಸಮಯಕ್ಕೆ ಪಶ್ಚಿಮ ಬದಿಯ ರಸ್ತೆಗೆ ಹೋಗುವರೇ ಮೋಟಾರು ಸೈಕಲನ್ನು ನಿದಾನಿಸಿ ತಿರುಗಿಸುತ್ತಿರುವಾಗ ಹಿಂದಿನಿಂದ ಅಂದರೆ ಸುರತ್ಕಲ್ ಕಡೆಯಿಂದ ಕೆ.ಎ.19. ಎಂ.ಬಿ 6696ನೇ ಮಾರುತಿ 800 ಕಾರು ಚಾಲಕ ಮಹಮ್ಮದ್ ಸಾಕೀಬ್ ಎಂಬಾತನು ಅವರ ಬಾಬ್ತು ಸದ್ರಿ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೊಟಾರು ಸೈಕಲಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿ ಹಾಗೂ ಸಹಸವಾರ ಕೆಳಕ್ಕೆ ಬಿದ್ದು ಪಿರ್ಯಾದಿಯ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಅಲ್ಲದೇ ಸಹಸವಾರ ಮಂಜನಾಥನಿಗೆ ಅಲ್ಪ ಸ್ವಲ್ಪ ಗಾಯವಾಗಿ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಸುಜಾತಾ ರವರ ಪತಿ, ಪ್ರಾಯ 40 ವರ್ಷದ ಉಮೇಶ ಆಚಾರ್ಯ ಎಂಬವರು ಮಂಗಳೂರು ತಾಲೂಕು ಪುತ್ತಿಗೆ ಗ್ರಾಮದ ಪರಿಸರದಲ್ಲಿ ಮರದ ಕೆಲಸ ಮಾಡಿಕೊಂಡಿದ್ದು, ರಾತ್ರಿ ತನ್ನ ಮನೆಯಾದ ಕುಳಾಯಿಗೆ ಬರುತ್ತಿದ್ದು, ಪಿರ್ಯಾದಿದಾರರು ತುಂಬು ಗರ್ಬಿಣಿಯಾಗಿದ್ದುದರಿಂದ, ಕಲ್ಲಮುಂಡ್ಕೂರಿನ ತಾಯಿ ಮನೆಗೆ ಬಂದಿದ್ದು, ದಿನಾಂಕ 10.03.2014 ರಂದು ಸಂಜೆ ಪಿರ್ಯಾದಿದಾರರನ್ನು ನೋಡಲು ಕಲ್ಲಮುಂಡ್ಕೂರಿನ ತಾಯಿ ಮನೆಗೆ ಬಂದು ಸುಮಾರು 18:45 ಗಂಟೆಯಿಂದ 19:00 ಗಂಟೆಯ ವೇಳೆ ತಾನು ಕುಳಾಯಿಗೆ ಹೋಗುತ್ತೇನೆ ಎಂದು ಹೋದವರು ಮನೆಗೆ ಹೋಗದೇ ಕಾಣೆಯಾಗಿದ್ದು, ಈ ದಿನ ಆತನ ಮೋಟಾರ್ ಸೈಕಲ್, ಚಪ್ಪಲಿ, ಅಂಗಿ ಇತ್ಯಾದಿ ಪುತ್ತಿಗೆ ತಾಲೂಕಿನ ಮಜ್ಜಿಗುರಿ ಕೆಂಪುಕಲ್ಲುಕೋರೆಯಲ್ಲಿ ಬಿದ್ದಿರುವುದಾಗಿದೆ. ಕಾಣೆಯಾದವರ ಚಹರೆ : ಹೆಸರು: ಉಮೇಶ್ ಆಚಾರ್ಯ, ಪ್ರಾಯ: 40 ವರ್ಷ, 5.6 ಅಡಿ ಎತ್ತರ, ತೆಳ್ಳಗಿನ ಶರೀರ, ಸಾಧಾರಣ ಬಿಳಿ ಮೈಬಣ್ಣ, ಕನ್ನಡ, ತುಳು ಭಾಷೆಗಳನ್ನು ಮಾತಾಡುತ್ತಾರೆ.
4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 1-3-2014 ರಂದು 17-30 ಗಂಟೆಯಿಂದ ದಿನಾಂಕ 4-3-2014 ರ 16-00 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಪಾಂಡೇಶ್ವರದಲ್ಲಿರುವ ಬಿ.ಎಸ್.ಎನ್.ಎಲ್. ಇಲಾಖೆಗೆ ಸಂಬಂಧಪಟ್ಟ ಸ್ಟೋರ್ ಯಾರ್ಡ್ ನಿಂದ 60 ಮೀಟರ್ ಉದ್ದದ 100 ಜೊತೆ ವಯರ್ ಗಳಿದ್ದ ಕೇಬಲನ್ನು ಹಾಗೂ ಇತರ ಗುಜಿರಿ ಕೇಬಲ್ ತುಂಡುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂಪಾಯಿ 8000/- ಆಗ ಬಹುದು.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-02-2014 ರಂದು ರಾತ್ರಿ 8-00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ರಫೀಕ್ ರವರು ತನ್ನ ಬಾಬ್ತು ಸ್ಕೂಟರ್ ನಂಬ್ರ KA 19 EA 2407 ನೇ HONDA ACTIVA ವನ್ನು ಮಂಗಳೂರು ನಗರದ ಜೆಪ್ಪು ಮಾರ್ಕೆಟ್ ಯ್ಯೂರೊ ಬಿಲ್ಡಿಂಗ್ ನ ಹತ್ತಿರ ನಿಲ್ಲಿಸಿ ಅವರ ಮನೆಗೆ ಹೋಗಿದ್ದು, ದಿನಾಂಕ 14-02-2014 ರಂದು ಬೆಳಿಗ್ಗೆ ಸುಮಾರು 8-00 ಗಂಟೆಗೆ ಪಿರ್ಯಾದಿದಾರರು ಸ್ಕೂಟರ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ, ಸ್ಕೂಟರ್ ಅಲ್ಲಿರದೇ ಕಾಣೆಯಾಗಿದ್ದು, ಸುತ್ತಮುತ್ತ ಹುಡುಕಾಡಿ ನಂತರ ಬಂದರು, ಸೆಂಟ್ರಲ್ ಮಾರ್ಕೆಟ್, ರೈಲ್ವೆ ನಿಲ್ದಾಣ ಮೊದಲಾದ ಕಡೆಗಳಲ್ಲಿ ಪದೇ ಪದೇ ಹುಡುಕಾಡಿದ್ದು, ಈವರೇಗೆ ಸ್ಕೂಟರ್ ಪತ್ತೆಯಾಗದೇ ಇದ್ದುದರಿಂದ, ಅದನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರು ಈದಿನ ದೂರು ನೀಡಿರುವುದಾಗಿದೆ. ಕಳವಾದ ಸ್ಕೂಟರ್ ನ ಅಂದಾಜು ಮೌಲ್ಯ ರೂಪಾಯಿ 25,000/- ಆಗಬಹುದು.
No comments:
Post a Comment