Saturday, March 15, 2014

Daily Crime Reports 14-03-2014

ದೈನಂದಿನ ಅಪರಾದ ವರದಿ.

ದಿನಾಂಕ 13.03.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-03-2014ರಂದು ಸಮಯ ಸುಮಾರು 14-00ಗಂಟೆಗೆ ಪಿರ್ಯಾದಿದಾರರಾದ ವಿನೋದ್ ಎ.ಆರ್. ಪಿಂಟೋ ರವರ ಸಂಸ್ಥೆಯಲ್ಲಿ ಮಾಜಿ ಉದ್ಯೋಗಿಯಾದ ಶೈಲೇಶ ಎಂಬವರ ಮೋಬೈಲ್ಗೆ ಭೂಗದ ಪಾತಕಿ ರವಿ ಪೂಜಾರಿ ಎಂಬವರ ಹೆಸರಿನಲ್ಲಿ ಬಂದ ಬೆದರಿಕೆ ಸಂದೇಶದಲ್ಲಿ "Yeh Time Firing Tere Office Me Hoga " Don Ravi Poojary Contact No 00989370253321 ಎಂಬುದಾಗಿದೆ.

 

2.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12.03.2014 ರಂದು ಫಿರ್ಯಾದಿದಾರರಾದ ಮಂಗಳೂರು ನಗರ ಅಪರಾಧ ಪತ್ತೆ ವಿಭಾಗದ ಪೊಲೀಸ್ ನಿರೀಕ್ಷಕರಾದ ಶ್ರೀ ವೆಲೆಟೈನ್ ಡಿ'ಸೋಜಾ ರವರಿಗೆ ದೊರೆತ ಖಚಿತ ವರ್ತಮಾನದ ಮೇರಗೆ ತಮ್ಮ ಸಿಬ್ಬಂದಿಗಳೊಂದಿಗೆ ಬೆಳಿಗ್ಗೆ 11:00 ಗಂಟೆಗೆ ಮಂಗಳೂರು ತಾಲೂಕ, ಮಂಜನಾಡಿ ಗ್ರಾಮದ ನಾಟೆಕಲ್ಕ್ರಾಸ್ಎಂಬಲ್ಲಿ ತಲುಪಿದಾಗ 4 ಜನ ಯುವಕರು ಮೋಟಾರ್ಸೈಕಲ್ಒಂದನ್ನು ನಿಲ್ಲಿಸಿ ಮಾತಾಡುತ್ತಿದ್ದು ಫಿರ್ಯಾದಿದಾರರು ಮತ್ತು ಅವರ ಸಿಬ್ಬಂದಿಗಳನ್ನು ಕಂಡು ಓಡಲು ಪ್ರಯತ್ನಿಸಿದವರಲ್ಲಿ 3 ಜನರನ್ನು ಹಿಡಿದು ಒಬ್ಬ ಆರೋಪಿಯು ಪರಾರಿಯಾಗಿರುತ್ತಾನೆ. ಸದ್ರಿಯವರನ್ನು ಫಿರ್ಯಾದಿದಾರರು ವಿಚಾರಿಸದಲ್ಲಿ ಆರೋಪಿಗಳು ಭೂಗತ ಪಾತಕಿ ರವಿ ಪೂಜಾರಿ ಹಾಗೂ ಆತನ ಸಹಚರ ಕಲಿ ಯೋಗೀಶನ ಆದೇಶದಂತೆ 3 ತಲವಾರಿ ನೊಂದಿಗೆ 6 ಪಿಸ್ತೂಲಿನ ಸಜೀವ ಗುಂಡುಗಳು ಮತ್ತು ಎರಡು ಪ್ಯಾಕೆಟ್ಮೆಣಸಿಣ ಹುಡಿಯೊಂದಿಗೆ  ಮಂಗಳೂರು ನಗರದ ಶ್ರೀಮಂತ ಬಿಲ್ಡರ್ಒಬ್ಬರನ್ನು ಕೊಲೆ ಮಾಡಿ ಅವರ ಸಂಪತನ್ನು ದರೋಡೆ ಮಾಡುವ ಉದ್ದೇಶದಿಂದ ಅಕ್ರಮಕೂಟ ಸೇರಿ ಅಪಾಯಕರ ಆಯುಧ ಹಾಗೂ ಶಸ್ಸ್ತ್ರಾಸ್ತ್ರ ಇಟ್ಟುಕೊಂಡು ಒಳಸಂಚು ರೂಪಿಸಿದ್ದು , ಅಲ್ಲದೇ ಮೊಬೈಲ್ಗಳಲ್ಲಿ ನಿಂಬುಸ್ಸಾಫ್ಟೆವೇರ್ಗಳನ್ನು ಅಳವಡಿಸಿ ಬಿಲ್ಡರ್ಗಳ ಚಲನ ವಲನದ ಬಗ್ಗೆ ಮಾಹಿತಿಯನ್ನು ಆರೋಪಿ ಕಲಿಯೋಗಿಶನಿಗೆ ನೀಡಿ, ಸದ್ರಿ ಸಾಫ್ಟ್ವೇರ್ನ್ನು ಡಿಲೀಟ್ಮಾಡಿರುತ್ತಾರೆ.

 

3.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12.03.2014 ರಂದು ಬೆಳಿಗ್ಗೆ 09:30 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಶಿವಪ್ಪ ರವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-W-6033 ನೇಯದನ್ನು ನೀರ್ಕೆರೆ ಕಡೆಯಿಂದ ಸಂಪಿಗೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಮಂಗಳೂರು ತಾಲೂಕು ಪುತ್ತಿಗೆ ಗ್ರಾಮದ ಸಂಪಿಗೆ ಅಶ್ವತ್ಥಪುರ ಕ್ರಾಸ್ ಬಳಿ ತನ್ನ ಮೋಟಾರ್ ಸೈಕಲ್ ಗೆ ಇಂಡಿಕೇಟರ್ ಹಾಕಿ ಸವಾರಿ ಮಾಡುತ್ತಾ, ಸಾಯಿ ಹೋಟೆಲ್ ನ ಎದುರು ತಲುಪಿದಾಗ ಹಿಂದುಗಡೆಯಿಂದ ಅಂದರೆ ಮುಲ್ಕಿ ಕಡೆಯಿಂದ ಮೂಡಬಿದ್ರೆ ಕಡೆಗೆ ಪ್ಲೇಝರ್ ಸ್ಕೂಟರ್ ನಂಬ್ರ KA-19-EQ-9078 ನೇಯದನ್ನು ಅದರ ಸವಾರ ಪೀಟರ್ ಸಿಕ್ವೇರಾ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಢಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲಕಾಲ ಕೋಲು ಕಾಲಿಗೆ ರಕ್ತಗಾಯವಾಗಿ, ಬಲಕಾಲ ಮೊಣಗಂಟಿಗೆ ಗುದ್ದಿದ ನೋವುಂಟಾಗಿರುವುದಲ್ಲದೇಪ್ಲೇಝರ್ ಸ್ಕೂಟರ್  ಸವಾರ ಪೀಟರ್ ಸಿಕ್ವೇರಾರವರಿಗೆ ಕೂಡ ಬಲಕೈಗೆ ನೋವುಂಟಾಗಿದ್ದು, ಪಿರ್ಯಾದಿದಾರರು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

4.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಸಂಕಪ್ಪ ಪೂಜಾರಿ ರವರ ಬಾವ ಶೇಖರ ಪೂಜಾರಿ 41 ವರ್ಷ ಎಂಬಾತನು ದಿನಾಂಕ: 08-03-2014 ರಂದು 10-30 ಗಂಟೆಗೆ ಮಂಗಳೂರು ತಾಲೂಕಿನ, ಮೂಳೂರು ಗ್ರಾಮದ, ಮೂಳೂರು ಪದವು ಎಂಬಲ್ಲಿರುವ ಫಿರ್ಯಾದಿದಾರರ ಮನೆಯಿಂದ ಬ್ಲೇಡ್ ತರುತ್ತೇನೆಂದು  ಅಂಗಡಿಗೆ ಹೋದವನು ವಾಪಾಸು ಬಾರದೇ ಕಾಣೆಯಾಗಿರುವುದಾಗಿದೆಈತನು  ಮನೆಯಿಂದ ಹೋಗುವ ಸಮಯ ಕಪ್ಪು ಪ್ಯಾಂಟ್, ಹಸಿರು ಟೀ ಶರ್ಟ್  ಧರಿಸಿದ್ದು, ಕುತ್ತಿಗೆಯಲ್ಲಿ ಕಪ್ಪು  ನೂಲು ಧರಸಿರುತ್ತಾನೆ.

 

5.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-02-2014 ರಂದು ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಶರೀಫ್ ರವರು ತನ್ನ ಬಾಬ್ತು ಬೈಕ್ ನಂಬ್ರ KA-19-Q-6708 ನೇದರಲ್ಲಿ ತೊಕ್ಕಟ್ಟು ಪೇಟೆಗೆ ಹೋಗಿ ವಾಪಾಸು ಮನೆಗೆ ಬಂದು ರಾತ್ರಿ ಸುಮಾರು 9:00 ಗಂಟೆಗೆ ಮನೆ ಬಳಿ ಪಾರ್ಕ್ಮಾಡಿದ್ದನ್ನು ಮರುದಿವಸ ಬೆಳಿಗ್ಗೆ 07:00 ಗಂಟೆಗೆ ನೋಡಿದಾಗ ಬೈಕ್ ಕಾಣಿಸದೇ ಇದ್ದು, ನೆರೆಕೆರೆಯಲ್ಲಿ ವಿಚಾರಿಸಿದರೂ ಸಿಗದಿದ್ದು, ಯಾರಾದರು ಸ್ನೇಹಿತರು ತೆಗೆದುಕೊಂಡು ಹೋಗಿರ ಬಹುದೆಂದು ಬಾವಿಸಿ ಇಲ್ಲಿಯ ತನಕ ಹುಡಿಕಾಡಿದ್ದರೂ ಸಿಗದೇ ಇದ್ದು, ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಬೈಕಿನ ಮೌಲ್ಯ ರೂ. 15,000/- ಆಗಬಹುದು. ಇದರ ಚಾಸೀಸ್ ನಂಬ್ರ 02420C08198  ಮತ್ತು ಇಂಜಿನ್ ನಂಬ್ರ 02418424012 ಆಗಿರುತ್ತದೆ. 

 

6.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ:10-03-14 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀ ಸುಧಾಕರ ಕೆ. ರವರು  ಎಂದಿನಂತೆ ಕೆಲಸದ ನಿಮಿತ್ತ   ಮನೆಯಿಂದ ಹೊರಟು ಕುಳಾಯಿ ವಿಷ್ಣುಮೂರ್ತಿ ದೇವಸ್ಥಾನದವರೆಗೆ ಒಳ ರಸ್ತೆಯಲ್ಲಿ ಬಂದು ನಂತರ ಉಡುಪಿ-ಮಂಗಳೂರು ಏಕಮುಖ ಹೆದ್ದಾರಿಯ ಎಡ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಬರುತ್ತಾ ಬೆಳಿಗ್ಗೆ 08-30 ಗಂಟೆ ಸಮಯಕ್ಕೆ ಕುಳಾಯಿ ಸಂತೋಷ್ ಬಾರ್ ಕಟ್ಟಡದ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಮೋಟಾರ್ ಸೈಕಲ್ ನಂಬ್ರ ಕೆಎ-19-ಎಂ-2490 ನೇದನ್ನು ಅದರ ಸವಾರ ಸುರೇಶ್ ಎಂಬವರು ಅತೀ  ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ನೆಲಕ್ಕೆ ಬಿದ್ದು ಹಣೆಯ ಮಧ್ಯ ಭಾಗ, ಎಡ ಕಿವಿಗೆ ರಕ್ತ ಗಾಯ ಹಾಗೂ ಸೊಂಟದ ಹಿಂಭಾಗಕ್ಕೆ ಗುದ್ದಿದ ಗಾಯವಾಗಿರುವುದಲ್ಲದೇ ಸದ್ರಿ ಮೋಟಾರ್ ಸೈಕಲ್ ಸವಾರನಿಗೂ ಗಾಯವಾಗಿರುತ್ತದೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  12.03.2014  ರಂದು  ಮಂಗಳೂರು ನಗರದ ತಿರುವೈಲು  ಗ್ರಾಮದ ವಾಮಂಜೂರು  ಮರಿಯಾ ನಗರ ಎಂಬಲ್ಲಿ  ಪಿರ್ಯಾದಿದಾರರಾದ ಶ್ರೀ ಉಮ್ಮರ್ ಫಾರೂಕ್ ರವರ ತಂದೆ ಮೊಹಮ್ಮದ್ಎಂಬವರು  ರಾತ್ರಿ ಮಸೀದಿಗೆ ಹೋದವರು  ವಾಪಾಸ್ಸು ಮನೆಗೆ ಬರುತ್ತಿದ್ದಾಗ ಕೊಲೆ  ಮಾಡುವ ಸಮಾನ ಉದ್ದೇಶದಿಂದ ಪಿರ್ಯಾದಿದಾರರ  ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಮುಂಡಪ್ಪ ಮೂಲ್ಯ ಮತ್ತು  ಅವರ ಮಗ ಹರೀಶ್‌  ಎಂಬವರು ಪಿರ್ಯಾದಿದಾರರ ತಂದೆಗೆ ಬೈದು  ಮರದ ಸೊಂಟೆಯಿಂದ ಪಿರ್ಯಾದಿದಾರರ  ತಂದೆಯ  ತಲೆಗೆಬಲಕೈಗೆ ಹೊಡೆದಾಗ ಪಿರ್ಯಾದಿದಾರರ  ತಂದೆ ಬೊಬ್ಬೆ ಕೇಳಿ ಮನೆಯಲ್ಲಿದ್ದ ಪಿರ್ಯಾದಿದಾರರ ತಕ್ಷೀರು ಸ್ಥಳಕ್ಕೆ ಬಂದಾಗ ಹರೀಶನು ಎಂಬವನು  ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾಧಿದಾರರ ಹಣೆಯ ಮೇಲ್ಗಾಗ, ತಲೆಯ  ಬಲಬಾಗಕ್ಕೆ ತಿವಿದು ಮರದ ಸೊಂಟೆಯಿಂದ ಹರೀಶನು ಮೊಹಮ್ಮದ್ರವರ ಬಲ ಕೈ ಭುಜಕ್ಕೆ ತಲೆಯ ಹಿಂಭಾಗಕ್ಕೆ ಹೊಡೆದು  ಹಲ್ಲೆ ಉಂಟು ಮಾಡಿದ್ದಾಗಿದೆ.

No comments:

Post a Comment