ದೈನಂದಿನ ಅಪರಾದ ವರದಿ.
ದಿನಾಂಕ 29.03.2014 ರ 10:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 7 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 3 |
ಇತರ ಪ್ರಕರಣ | : | 2 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27-03-2014 ರಂದು ಪಿರ್ಯಾದುದಾರರಾದ ಶ್ರೀ ರಾಮದಾಸ್ ರವರು ಊರಿಗೆ ಹೋಗುವರೇ ಮಂಗಳೂರು ನಗರದ ಬಿಜೈ ಕಾಪಿಕಾಡ್ ಕಡೆಯಿಂದ ಕೆ.ಎಸ್.ಆರ್.ಟಿಸಿ ಕಡೆಗೆ ಕಾಂಕ್ರೀಟ್ ರಸ್ತೆಯ ತೀರಾ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಕಾಪಿಕಾಡ್ ಆನೆಗುಂಡಿ ಕ್ರಾಸ್ ಬಳಿಯ ಎಸ್.ಬಿ.ಎಂ ಎ.ಟಿ.ಎಂ ನ ಎದುರಿನ ರಸ್ತೆಗೆ ಸಮಯ ಸುಮಾರು 22:30 ಗಂಟೆಗೆ ತಲುಪಿದಾಗ, ಅವರ ಹಿಂಬದಿಯಿಂದ ಅಂದರೆ ಕೊಟ್ಟಾರಕ್ರಾಸ್ ಕಡೆಯಿಂದ ಬಿಜೈ ಕೆ.ಎಸ್.ಆರ್.ಟಿಸಿ ಕಡೆಗೆ ಒಂದು ಮೋಟಾರು ಸೈಕಲ್ನ್ನು ಅದರ ಸವಾರನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡ ಕೈಯ ಮೂಳೆ ಮುರಿತದ ತೀವ್ರ ಸ್ವರೂಪದ ಗಾಯವಾದ್ದವರನ್ನು ಅಲ್ಲಿದ್ದ ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ, ಈ ಘಟನೆ ನಡೆದ ತಕ್ಷಣಸದ್ರಿ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲಿನೊಂದಿಗೆ ಪರಾರಿಯಾಗಿದ್ದು ಮೋಟಾರು ಸೈಕಲ್ ನಂಬ್ರ ನೋಡಲು ಸಾದ್ಯವಾಗಿರುವುದಿಲ್ಲ.
2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28-03-2014 ರಂದು ಪಿರ್ಯಾದುದಾರರಾದ ಶ್ರೀಮತಿ ವನಮಾಲಾ ಹೆಚ್.ಸಿ., ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ರವರು ಮಂಗಳೂರು ನಗರದ ಪಿ.ವಿ.ಎಸ್ ಜಂಕ್ಷನ್‌ನಲ್ಲಿ ಸಂಚಾರ ಕರ್ತವ್ಯದಲ್ಲಿದ್ದ ಸಮಯ ಸುಮಾರು 11:45 ಗಂಟೆಗೆ ಪಿ.ವಿ.ಎಸ್ ಜಂಕ್ಷನ್‌ನಲ್ಲಿನ ಟ್ರಾಫಿಕ್ ಅಂಬ್ರೆಲ್ಲಾದಲ್ಲಿ ಕುಳಿತುಕೊಂಡು ಸಂಚಾರ ಕರ್ತವ್ಯ ನಿರ್ವಹಿಸುತ್ತಾ, ಬಲ್ಲಾಲ್‌ಬಾಗ್ ಕಡೆಯಿಂದ ಪಿ,ವಿ.ಎಸ್ ಕಡೆಗೆ ಬರುವ ವಾಹನಗಳಿಗೆ ನಿಲ್ಲಲು ಸೂಚನೆ ನೀಡಿ, ಬಂಟ್ಸ್ ಹಾಸ್ಟೆಲ್‌ನಿಂದ ಪಿ.ವಿ.ಎಸ್ ಆಗಿ ಬಲ್ಲಾಲ್‌ಬಾಗ್ ಕಡೆಗೆ ಹೋಗುವ ವಾಹನಗಳಿಗೆ ಹೋಗುವರೇ ಸೂಚನೆ ನೀಡುತ್ತಿದ್ದಾಗ, ಬಲ್ಲಾಲ್‌ಬಾಗ್ ಕಡೆಯಿಂದ ಪಿ.ವಿ.ಎಸ್ ಕಡೆಗೆ ಕಾರು ನಂಬ್ರ ಕೆ.ಎಲ್-12-ಜಿ-4577 ನೇದನ್ನು ಅದರ ಚಾಲಕನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಿಲ್ಲಿಸಲು ನೀಡಿದ ಸೂಚನೆಯನ್ನು ಧಿಕ್ಕರಿಸಿ ಏಕಾಏಕಿ ಪಿರ್ಯಾದಿದಾರರು ಕುಳಿತಿದ್ದ ಟ್ರಾಫಿಕ್ ಕಟ್ಟೆಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಟ್ರಾಫಿಕ್ ಕಟ್ಟೆಯು 2 ಸುತ್ತು ತಿರುಗಿ ಕೆಳಗೆ ಬಿದ್ದು, ಪಿರ್ಯಾದಿದಾರರು ಅದರ ಒಳಗೆ ಸಿಕ್ಕಿ ಎಡತಲೆಗೆ ಗುದ್ದಿದ ತೀವ್ರ ಗಾಯ ಹಾಗೂ ಎಡಪಕ್ಕೆಲುಬು, ಎಡ ಕಾಲುಗಳಿಗೆ ಗುದ್ದಿದ ನಮೂನೆಯ ಗಾಯವಾದ್ದವರನ್ನು ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿರುವುದಾಗಿದೆ.
3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28.03.2014 ರಂದು ಪಿರ್ಯಾದುದಾರರಾದ ಶ್ರೀ ಶಿವರಂಜನ್ ರವರು ಮಂಗಳೂರು ನಗರದ ಮಣ್ಣಗುಡ್ಡೆ - ಬಳ್ಳಾಲ್ ಭಾಗ್ ರಸ್ತೆಯಲ್ಲಿ ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಾ ರಾತ್ರಿ ಸುಮಾರು 10:30 ಗಂಟೆಗೆ ಬಳ್ಳಾಲ್ ಭಾಗ್ ಜಂಕ್ಷನ್ನಿಗೆ ತಲುಪಿ ರಸ್ತೆ ದಾಟುವರೇ ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ್ಗೆ ಪಿವಿಎಸ್ ಕಡೆಯಿಂದ ಲಾಲ್ ಭಾಗ್ ಕಡೆಗೆ KA 19 Y 6282ನೇ ನಂಬ್ರದ ಮೋಟಾರ್ ಸೈಕಲ್ಲನ್ನು ಅದರ ಸವಾರ ದೀಕ್ಷಿತ್ ಎಂಬವರು ಅತೀವೇಗ ಮತ್ತು ತೀರಾ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಅವರ ತಲೆಯ ಹಿಂದುಗಡೆ ರಕ್ತ ಗಾಯ, ಬಲಭುಜಕ್ಕೆ ಬಲವಾದ ಗುದ್ದಿದ ನೋವುಂಟಾದವರು ಚಿಕಿತ್ಸೆಯ ಬಗ್ಗೆ ನಗರದ ಯೇನೆಪೋಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದು ಅಲ್ಲದೇ ಸದ್ರಿ ಅಪಘಾತದಿಂದ ಆರೋಪಿ ಮೋಟಾರ್ ಸೈಕಲ್ ಸವಾರ ದೀಕ್ಷಿತ್ ರವರೂ ಕೂಡಾ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಸಣ್ಣಪುಟ್ಟ ಗಾಯಗೊಂಡಿರುವುದು.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-03-2014 ರಂದು ಬೆಳಿಗ್ಗೆ 10:30 ಗಂಟೆಗೆ ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ದುಗ್ಗಜ್ಜರ ಕಟ್ಟೆ ಎಂಬಲ್ಲಿ ಕಾರು ನಂಬ್ರ ಕೆಎ-19-ಎಂಡಿ-7437 ನೇದನ್ನು ಅದರ ಚಾಲಕ ಗುರುರಾಜ ಭಟ್ ಎಂಬವರು ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡ ಬದಿಯಲ್ಲಿ ಚಲಾಯಿಸಿಕೊಂಡು ಬಂದು, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್ ನಂಬ್ರ ಕೆಎ-19-ಎಲ್-6411 ನೇದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸದಾಶಿವ ಭಟ್ ಎಂಬವರು ಸ್ಕೂಟರ್ ಸಮೇತ ಕೆಳಗೆ ಬಿದ್ದು, ಅವರ ಎದೆಯ ಬಲಭಾಗಕ್ಕೆ, ಬಲ ಭುಜಕ್ಕೆ ಹಾಗೂ ಎಡ ಮುಂಗೈಗೆ ಗುದ್ದಿದ ಗಾಯ ಉಂಟಾಗಿದ್ದು, ಸದ್ರಿಯವರನ್ನು ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರಾದ ಶ್ರೀ ಪ್ರಕಾಶ್ ಭಟ್ ಡಿ. ರವರು ಹಾಗೂ ಇತರರು ಸೇರಿ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-03-2014 ರಂದು ಪಿರ್ಯಾದಿದಾರರಾದ ಶ್ರೀ ಕೆ. ರಾಮಚಂಧ್ರ ನಾಯಕ್, ಮುಲ್ಕಿ ಠಾಣಾ ಪೊಲಿಸ್ ನಿರೀಕ್ಷಕರು, ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ದೊರೆತ ಖಚಿತ ವರ್ತಮಾನದಂತೆ ಸಂಜೆ 16-00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಮಾರ್ಕೆಟ್ ಬಳಿ ಆರೋಪಿ ಗಣೇಶ್ ಎಂಬಾತನು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜೂಜಾಟ ನಡೆಸುತ್ತಿದ್ದು, ಆತನನ್ನು ದಸ್ತಗಿರಿ ಮಾಡಿ ಮಟ್ಕಾ ಜೂಜಾಟದ ರೂ 4,600/-, ಒಂದು ಪೆನ್ನು , ಮಟ್ಕಾ ಚೀಟಿಯ ಮತ್ತು ಒಂದು ಮೊಬೈಲ್ ಪೋನ್ ಸೆಟ್ಟನ್ನು ಸ್ವಾಧೀನಪಡಿಸಿದ್ದು, ಅಲ್ಲದೆ ಆತನು ಈ ಮಟ್ಕಾ ಜೂಜಾಟದ ಬಗ್ಗೆ ಮೊಬೈಲ್ ಮೂಲಕ ಉಡುಪಿಯ ಸುಧೀರ್ ಎಂಬವನೊಂದಿಗೆ ವ್ಯವಹರಿಸುತ್ತಿದ್ದುದಾಗಿ ತಿಳಿಸಿರುತ್ತಾನೆ. ಆರೋಪಿ ಗಣೇಶನನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿದ್ದಾಗಿದೆ.
6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸದಾಶಿವ ಪೂಜಾರಿ ರವರ ಅಣ್ಣ ದಿನೇಶ್ ಪೂಜಾರಿಯು ದಿನಾಂಕ 26-03-14 ರಂದು ಬೆಳಿಗ್ಗೆ 7.30 ಗಂಟೆಯ ಸಮಯಕ್ಕೆ ತನ್ನ ಹೆಂಡತಿ ರೇಖಾಳಲ್ಲಿ ತನಗೆ ಜ್ವರ ಹಾಗೂ ಕಾಲು ನೋವು ಇದೆ ಮದ್ದು ತರುವರೇ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ತನ್ನ ಮನೆಯಾದ ಮಂಗಳೂರು ತಾಲೂಕು ಕಲ್ಲಮುಂಡ್ಕೂರು ಗ್ರಾಮದ ಪಂಜಾಡಿ ಮನೆ ಎಂಬಲ್ಲಿಂದ ಹೊರಟು ಹೋದವರು ಮಧ್ಯಾಹ್ನ ಸುಮಾರು 11.45 ಗಂಟೆಗೆ ರೇಖಾಳ ಮೊಬೈಲ್ ನಂಬ್ರಕ್ಕೆ ಕರೆ ಮಾಡಿ ಸ್ಕ್ಯಾನಿಂಗ್ ಗೆ ಹೋಗಲಿಕ್ಕಿದೆ ಇನ್ನು ನನಗೆ ಫೋನ್ ಮಾಡುವುದು ಬೇಡ ಎಂದು ಹೇಳಿದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದು, ವೆನ್ಲಾಕ್ ಆಸ್ಪತ್ರೆ, ಕೆಎಂಸಿ ಅತ್ತಾವರ, ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗಳಲ್ಲಿ ವಿಚಾರಿಸಿದಾಗಲೂ ಪತ್ತೆಯಾಗಿರುವುದಿಲ್ಲ. ಕಾಣೆಯಾದ ಗಂಡಸಿನ ಚಹರೆ:- ದಿನೇಶ ಪೂಜಾರಿ, ಪ್ರಾಯ-45 ವರ್ಷ, ಎತ್ತರ- 5 ಅಡಿ 6 ಇಂಚು, ಎಣ್ಣೆ ಕಪ್ಪು ಮೈ ಬಣ್ಣ, ದೃಡಕಾಯ ಶರೀರ, ನೀಲಿ ಪ್ಯಾಂಟ್ ಬಿಳಿ ಶರ್ಟು ಧರಿಸಿರುತ್ತಾರೆ. ಸದ್ರಿಯವರ ಎರಡೂ ಕಾಲುಗಳ ಮೊಣಗಂಟಿನ ಕೆಳಗೆ ದಪ್ಪ ನರಗಳು ಎದ್ದು ಕಾಣಿಸುತ್ತವೆ.
7.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಕೆ. ಅಶೋಕ್ ಕುಮಾರ್ ರೈ ರವರು ಬೆಂಗಳೂರು ಮತ್ತು ಮುಂಬಯಿಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದು, ದಿನಾಂಕ: 21-03-2014ರಂದು 13-30 ಗಂಟೆಗೆ ಮುಂಬಯಿಯಿಂದ ಮಂಗಳೂರು ನಗರದ ಶಿವಭಾಗ್ ನಲ್ಲಿರುವ ಅಶೋಕ್ ಮ್ಯಾನರ್ ಎಂಬ ತನ್ನ ವಾಸದ ಮನೆಗೆ ಬಂದು ತಂಗಿದ್ದು, ಬರುವ ಸಮಯ ತನ್ನ ಸೂಟ್ ಕೇಸಿನಲ್ಲಿ ನಗದು ಹಣ ರೂ. 5,50,000/- ಗಳನ್ನು ತಂದಿದ್ದು, ವಾಪಾಸು ದಿನಾಂಕ 22-03-2014ರಂದು ಬೆಳಿಗ್ಗೆ ಸಮಯ ಸುಮಾರು 11-15 ಗಂಟೆಗೆ ವಿಮಾನದಲ್ಲಿ ಮುಂಬಯಿಗೆ ತೆರಳಿರುವುದಾಗಿದೆ, ಸದ್ರಿಯವರು ಮುಂಬಯಿಗೆ ತಲಿಪಿದ ನಂತರ ತನ್ನ ಸೂಟ್ ಕೇಸನ್ನು ತೆರದು ನೋಡಲಾಗಿ ಕೇವಲ 3,00,000/- ರೂ. ಮಾತ್ರ ಕಂಡು ಬಂದಿದ್ದು, ಇನ್ನುಳಿದ 2,50,000/- ರೂ. ನಗದು ಹಣ ಕಾಣದೇ ಇದ್ದು, ಮಂಗಳೂರಿನಲ್ಲಿ ತನ್ನ ಮನೆಯಲ್ಲಿ ತಂಗಿದ್ದ ಸಮಯ ತನ್ನೊಂದಿಗೆ ಇದ್ದ ಫ್ಲಾಟ್ ಸಹಾಯಕ ವಿಜಯ್ ಕುಮಾರ್ ರೈ ಕಳ್ಳತನ ಮಾಡಿರುವುದಾಗಿ ತಿಳಿಸಿರುವುದಾಗಿದೆ.
8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26/03/2014 ರಂದು ಪಿರ್ಯಾದಿದಾರರಾದ ಶ್ರೀ ಸದಾಶಿವ ಕೆ. ರವರು ತನ್ನ ನೆರೆ ಮನೆಯ ರಾಜೇಶ್ ಶೆಟ್ಟಿ ಎಂಬವರ ಮನೆಗೆ ತನ್ನ ಬಾಬ್ತು ರಿಕ್ಷಾ ಟೆಂಪೋದಲ್ಲಿ ಮನೆ ಸಾಮಾಗ್ರಿಗಳನ್ನು ಕೊಂಡು ಹೋಗಿ ಹಿಂತಿರುಗಿ ಬರುವಾಗ ಮಂಗಳೂರು ತಾಲೂಕು ಕೆಲಿಂಜಾರು ಗ್ರಾಮದ ಉಳಿಪಾಡಿ ಎಂಬಲ್ಲಿ ಆರೋಪಿ ರತ್ನಾಕರ ಶೆಟ್ಟಿಯು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಬೆದರಿಕೆ ಒಡ್ಡಿದ್ದಲ್ಲದೇ, ಈ ಹಿಂದೆ ಕೂಡಾ ಪಿರ್ಯಾದಿದಾರರು ಮನೆಗೆ ವಿದ್ಯುತ್ ಕಂಬ ಕೊಂಡು ಹೋಗುವಾಗ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬಿಡದೇ ಪಿರ್ಯಾದಿದಾರರ ಮನೆಯ ವಿದ್ಯುತ್ ಸಂಪರ್ಕಕ್ಕೆ ಅಡ್ಡಪಡಿಸಿರುತ್ತಾರೆ.
9.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22/03/2014 ರಂದು ಪಿರ್ಯಾದಿದಾರರಾದ ಶ್ರೀಮತಿ ರಾಧಾ ರವರ ಮಗ ಜಗದೀಶ್ 28 ವರ್ಷ ಎಂಬವರು ಅವರ ನೆರೆಕರೆಯ ಮನೆಯ ಸೀತಾರಾಮ್ ಸಾಲ್ಯಾನ್ ಎಂಬವರ ಜೊತೆಯಲ್ಲಿ ಕೇರಳ ರಾಜ್ಯದ ಕ್ಯಾಲಿಕಟ್ ನ ರಾಮನಟ್ ಗರ್ ಎಂಬಲ್ಲಿಗೆ ಟೋಲ್ ಸರ್ವೇ ಕೆಲಸಕ್ಕೆ ಹೋಗಿದ್ದು, ಹಾಗೆ ಹೋದವನು ದಿನಾಂಕ: 24/03/2014 ರಂದು ಕ್ಯಾಲಿಕಟ್ ನಿಂದ ತನ್ನ ಮಗ ಜಗದೀಶನು ಸೀತಾರಾಮ್ ಸಾಲ್ಯಾನ್ ರಿಂದ ಸಂಬಳದ ಹಣ ರೂ. 500/- ತೆಗೆದುಕೊಂಡು ಊರಿಗೆ ಹೋಗುವುದಾಗಿ ಹೇಳಿ ರೈಲ್ವೇ ಸ್ಟೇಷನ್ ಬಳಿ ಅನುಮಾನಾಸ್ಪದವಾಗಿ ಇದ್ದವನನ್ನು ಕೇರಳ ಪೊಲೀಸರು ಸ್ಟೇಷನ್ ಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿ ಅಲ್ಲಿಂದ ಅದೇ ದಿನ ರಾತ್ರಿ ಕಳುಹಿಸಿದ್ದು, ಹಾಗೆ ಹೋದ ಸದ್ರಿ ಜಗದೀಶನು ವಾಪಾಸು ಊರಿಗೆ ಬಾರದೇ ಹಾಗೂ ಕೆಲಸ ಮಾಡುವ ಸ್ಥಳಕ್ಕೂ ಹೋಗದೇ ಮೊಬೈಲ್ ಗೆ ಕೂಡಾ ಸಿಗದೇ ಕಾಣೆಯಾಗಿದ್ದು, ಇದುವರೆಗೆ ಹುಡುಕಿದಲ್ಲಿ ಪತ್ತೆಯಾಗದಿರುದಾಗಿದೆ.
10.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಪೈಜಲ್ ಎಲ್.ಕೆ. ಎಂಬವರ ಬಾಬ್ತು ಕೆಎಲ್ 53- 7777 ನಂಬ್ರದ ಕಾರನ್ನು ದಿನಾಂಕ: 28-03-2014 ರಂದು ಆರೋಪಿ ನಸೀಫ್ ಎಂಬವರು ಮೂಡಬಿದ್ರಿ ಕಾಲೇಜಿಗೆ ಚಲಾಯಿಸಿಕೊಂಡು ಹೋದವರು ವಾಪಾಸು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಮಧ್ಯಾಹ್ನ 2-00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ, ಮೂಳೂರು ಗ್ರಾಮದ ಪೊಳಲಿ ದ್ವಾರದಿಂದ ಸ್ವಲ್ಪ ಮುಂದೆ ಕಾರು ರಸ್ತೆ ಬದಿಯ ಕಲ್ಲಿಗೆ ಡಿಕ್ಕಿಯಾಗಿ ಕಾರು ಸಂಪೂರ್ಣ ಜಖಂಗೊಂಡಿರುವುದು.
11.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ದಿಲ್ ಷಾದ್ ಎಂಬವರು ದಿನಾಂಕ: 28-03-2014 ರಂದು 11-00 ಗಂಟೆ ಸಮಯಕ್ಕೆ ಫಿರ್ಯಾದಿದಾರರು ತನ್ನ ಮಾವ ಮೈಯ್ಯದ್ದಿ, ತಂದೆ ಮೊಹಮ್ಮದ್ ಮತ್ತು ಮೈದುನ ಕೆ. ಇಮಾಮ್ ರವರು ಮತ್ತು ತನ್ನ ಪತಿ ಆಸಿಫ್ ನೊಂದಿಗೆ ಜೋಕಟ್ಟೆಯಿಂದ ಬಜಪೆ ಕಡೆಗೆ ಕಾರು ನಂ: ಕೆಎ 19 ಎಂಬಿ 8308 ರಲ್ಲಿ ಬರುತ್ತಿದ್ದಾಗ, ಬಜಪೆ ಕಡೆಯಿಂದ ಟಿಪ್ಪರ್ ಲಾರಿ ನಂ: ಕೆಎ 19 ಸಿ 332 ರ ಚಾಲಕ ಶಶಿಧರ ಎಂಬವರು ತನ್ನ ಬಾಬ್ತು ಟಿಪ್ಪರ್ ಲಾರಿಯನ್ನು ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ, ಕೆಂಜಾರು ಗ್ರಾಮದ ಪೊರ್ಕೋಡಿ ತಿರುವಿನಲ್ಲಿ ಫಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂದಿನ ಸೀಟಿನ ಎಡಬದಿಯಲ್ಲಿ ಕುಳಿತ್ತಿದ್ದ ಫಿರ್ಯಾದದಿದಾರರ ತಲೆಯ ಬಲಭಾಗಕ್ಕೆ, ಬಲಭುಜಕ್ಕೆ ಗಾಯವುಂಟಾಗಿ ಫಿರ್ಯಾದಿದಾರರನ್ನು ಮಂಗಳೂರು ಎ.ಜೆ. ಆಸ್ಪತ್ತೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ.
12.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-03-2014 ರಂದು ರಾತ್ರಿ 11-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಮುರುಗನಂದಮ್ ರವರು ಮನೆಯ ಮುಂದಿನ ಹಾಗೂ ಹಿಂದಿನ ಬಾಗಿಲನ್ನು ಭದ್ರಪಡಿಸಿ ಹೆಂಡತಿ ಮಕ್ಕಳೊಂದಿಗೆ ಮಲಗಿದ್ದು ಈ ದಿನ ದಿನಾಂಕ 28-03-2014 ರಂದು ಬೆಳಿಗ್ಗೆ 5-00 ಗಂಟೆ ಸಮಯಕ್ಕೆ ಎದ್ದು ನೋಡಿದಾಗ ಹಿಂಬದಿ ಬಾಗಿಲು ತೆರೆದಿದ್ದು, ಬಂಗಾರ ಇಡುವ ಬಾಕ್ಸ್ ಅಡುಗೆ ಕೋಣೆಯಲ್ಲಿ ಬಿದ್ದಿದ್ದು ಅಲ್ಲದೇ ರೋಮಿನೊಳಗಡೆ ಇದ್ದ ಕಬ್ಬಿಣದ ಹಾಗೂ ಮರದ ಕಪಾಟು ತೆರೆದ ಸ್ಥಿತಿಯಲ್ಲಿದ್ದು ಪರಿಶೀಲಿಸಲಾಗಿ ಸುಮಾರು 88 ಗ್ರಾಂ ತೂಕದ ಬಂಗಾರದ ಒಡವೆಗಳು ಹಾಗೂ ನಗದು ಹಣ ರೂ 55000/- ಕಾಣೆಯಾಗಿದ್ದು ಅವುಗಳ ಅಂದಾಜು ಮೌಲ್ಯ ರೂ 2,00,000/- ಆಗಿರಬಹುದಾಗಿ ಯಾರೋ ಕಳ್ಳರು ದಿನಾಂಕ 27-03-2014 ರಾತ್ರಿ 11-00 ಗಂಟೆಯಿಂದ ದಿನಾಂಕ 28-03-2014 ರಬೆಳಿಗ್ಗೆ 05-00 ಗಂಟೆ ಮದ್ಯೆ ಮನೆಯ ಹಿಂದಿನ ಬಾಗಿಲ ಮುಖೇನಾ ಒಳಗಡೆ ಬಂದು ಮೇಲಿನ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
13.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಕೆ. ಮೋಹನದಾಸ್ ನಾಯ್ಕ್ ರವರ ತಮ್ಮ ಅರುಣ್ ನಾಯ್ಕ್ ಎಂಬವರು ದಿನಾಂಕ 26-03-2014 ರಂದು ಆತರ ಮೊಬೈಲ್ ನಂಬ್ರದಿಂದ ಪಿರ್ಯಾದಿದಾರರ ಮೊಬೈಲ್ ನಂಬ್ರಕ್ಕೆ ಕರೆ ಮಾಡಿ ತಾನು ಬೆಂಗಳೂರಿಗೆ ಹೋಗುವುದಾಗಿ ತಿಳಿಸಿದ್ದು, ದಿನಾಂಕ 28-03-2014 ರಂದು ಬೆಳಿಗ್ಗೆ ಪಿರ್ಯಾದಿದಾರರು ಆತನ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆತನನ್ನು ಹುಡುಕಾಡಿದಾಗ ಆತನು ಚಲಾಯಿಸುತ್ತಿದ್ದ ಮೋಟಾರ್ ಬೈಕ್ ನೇತ್ರಾವದಿ ಬ್ರಿಡ್ಜಿನ ಆಚೆ ಬದಿ ಅಂದರೆ ಮಂಗಳೂರಿನ ಕಡೆ ನಿಂತಿರುವುದು ಕಂಡು ಬಂದಿರುತ್ತದೆ. ಅಲ್ಲಿನ ಆಸುಪಾಸು ವಠಾರದಲ್ಲಿ ವಿಚಾರಿಸಿಕೊಂಡಲ್ಲಿ ಆತನ ಬಗ್ಗೆ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ದಿನಾಂಕ 26-03-2014 ರಂದು ರಾತ್ರಿ 8:30 ಗಂಟೆಯ ನಂತರದಿಂದ ಪಿರ್ಯಾದಿದಾರರ ತಮ್ಮ ಅರುಣ್ ನಾಯ್ಕ್ ಎಂಬಾತನು ತನ್ನ ಮನೆಗೂ ಹೋಗದೇ, ಬೆಂಗಳೂರಿಗೆ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾನೆ. ಆತನನ್ನು ಮಂಗಳೂರು ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ.
14.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಉಮೇಶ್ ರವರು ದಿನಾಂಕ 28-03-2014 ರಂದು ತಾನು ಚಾಲಕನಾಗಿರುವ ಲಾರಿ ನಂಬ್ರ KA 19 A 7885 ನೇದರಲ್ಲಿ ಮಂಗಳೂರು ಬೈಕಂಪಾಡಿಯಿಂದ ಕಂಟೈನರನ್ನು ಲೋಡ್ ಮಾಡಿಕೊಂಡು ಕುಶಾಲನಗರಕ್ಕೆ ಹೊರಟವರು, ಮಂಗಳೂರು ಬೆಂಗಳೂರು ರಾ.ಹೆ 73 ರಲ್ಲಿ ಸಂಜೆ ಸುಮಾರು 6-15 ಗಂಟೆಗೆ ಕಣ್ಣೂರು ಕೊಡಕ್ಕಲ್ ಸಲ್ಡಾನಾ ಗ್ಯಾರೇಜ್ ಮುಂದೆ ತಲುಪಿದಾಗ ಬಿಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಒಂದು ಪಿಕ್‌ಅಪ್ ವಾಹನ ಸದ್ರಿ ರಸ್ತೆಯ ಬದಿಯಲ್ಲಿ ನಿಂತಿದ್ದ ಒಬ್ಬ ವ್ಯಕ್ತಿಗೆ ಡಿಕ್ಕಿ ಹೊಡೆದದನ್ನು ನೋಡಿದ ಪಿರ್ಯಾದಿದಾರರು ತಮ್ಮ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ ಬಂದು ನೋಡಿದಾಗ ಸದ್ರಿ ವ್ಯಕ್ತಿಯು ಅವರ ಪರಿಚಯದ ಬೈಕಂಪಾಡಿಯಲ್ಲಿ ಲಾರಿ ಚಾಲಕನಾಗಿರುವ ತಿಲಕೇಶ್ ಎಂಬವರಾಗಿದ್ದು, ಅವರಿಗೆ ಪಿಕ್ಅಪ್ ವಾಹನ ಡಿಕ್ಕಿಯಾದ ಪರಿಣಾಮ ತಲೆಗೆ, ಹಣೆಯಲ್ಲಿ, ಕಿವಿಯಲ್ಲಿ ಗಾಯವಾಗಿ ರಕ್ತ ಬರುತ್ತಿತ್ತು, ಡಿಕ್ಕಿ ಹೊಡೆದ ವಾಹನ ಪಕ್ಕದಲ್ಲೇ ಇದ್ದು KA 19 C 9979 ನೇ ನಂಬ್ರದ ಪಿಕ್‌ಅಪ್ ಆಗಿದ್ದು ಅದರ ಚಾಲಕನ ಹೆಸರು ದೊಂಬಯ್ಯ ಎಂಬುದಾಗಿ ಆಗಿರುತ್ತದೆ. ಗಾಯಾಳು ತಿಕೇಶ್ನನ್ನು ಚಿಕಿತ್ಸೆ ಬಗ್ಗೆ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಸದ್ರಿ ಪಿಕ್‌ಅಪ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದು ವೈದ್ಯರು ಗಾಯಾಳುವನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಅಪಘಾತಕ್ಕೆ ಪಿಕ್‌ಅಪ್ ವಾಹನ KA 19 C 9979ನೇದನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದೇ ಕಾರಣವಾಗಿರುತ್ತದೆ.
No comments:
Post a Comment