ದೈನಂದಿನ ಅಪರಾದ ವರದಿ.
ದಿನಾಂಕ 24.03.2014 ರ 10:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 1 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 2 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 6 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 3 |
1.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-03-2014 ರಂದು ಫಿರ್ಯಾಧುದಾರರಾದ ಶ್ರೀ ಮುತ್ತಪ್ಪ ರವರು ಕೆಲಸದ ನಿಮಿತ್ತ ಪಣಂಬೂರು ಕಡೆಗೆ ಕೂಳೂರಿನಿಂದ ನಡೆದುಕೊಂಡು ಹೋಗುತ್ತಿದ್ದಾಗ ರಾತ್ರಿ ಸುಮಾರು 8-30 ಗಂಟೆ ಸಮಯಕ್ಕೆ ಕೂಳೂರು ಸೇತುವೆ ತಲುಪುವಷ್ಟರಲ್ಲಿ ಪಿರ್ಯಾದಿದಾರರ ಹಿಂದಿನಿಂದ ಬಂದ ಕೆಎ-19-ಇಇ-7872 ನಂಬ್ರದ ಮೋಟಾರ್ ಸೈಕಲ್ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲಹಣೆ, ಬಲಕೆನ್ನೆಗೆ ತರಚಿದ ಗಾಯ ಮತ್ತು ಎರಡೂ ಕಾಲುಗಳಿಗೆ ಮೂಳೆ ಮುರಿತದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಸೂರಿಂಜೆ ಪಂಚಾಯತ್ ವತಿಯಿಂದ ಕುಡಿಯುವ ನೀರು ಬಿಡುವರೇ ನೇಮಕಗೊಂಡ ಹಸನಬ್ಬ ಎಂಬವರು ಪಿರ್ಯಾದಿದಾರರಾದ ಶ್ರೀ ಪಿ.ಎಸ್. ಅಬೂಬಕ್ಕರ್ ರವರ ಮನೆಗೆ ದಿನಾಂಕ 22-03-2014 ರಂದು ಬೆಳಿಗ್ಗೆ 11-00 ಗಂಟೆಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ಉದ್ದೇಶಿಸಿ ನೀವು ಪಂಚಾಯತಿಗೆ ಬಾರಿ ದೂರು ನೀಡುತ್ತೀರಾ ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದು ಹಲ್ಲೆಗೊಳಗಾದ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ದಾಖಲಾಗಿದ್ದು ಈ ಘಟನೆಗೆ ಪಿರ್ಯಾದಿದಾರರ ಮನೆಗೆ ಪಂಚಾಯತ್ ವತಿಯಿಂದ ಬರುವ ಹಾಳಾಗಿರುವ ನೀರಿನ ಪೈಪನ್ನು ಸರಿ ಮಾಡಿಕೊಡುವಂತೆ ದೂರು ನೀಡಿದ್ದು ಅದೇ ಕಾರಣಕ್ಕೆ ಆರೋಪಿ ಹಸನಬ್ಬ ರವರು ಕೋಪಗೊಂಡು ಹಲ್ಲೆ ನಡೆಸಿರುವುದಾಗಿದೆ.
3.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21.03.2014 ರಂದು 11.30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಅಳಪೆ ಗ್ರಾಮದ ಪಡೀಲ್ ಜಂಕ್ಷನ್ ಬಳಿ ಪಿರ್ಯಾದಿದಾರರಾದ ಶ್ರೀಮತಿ ದೇವಕಿ ರವರು ರಾಹೆ-73 ನ್ನು ದಾಟುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಬಿ.ಸಿ ರೋಡ್ ಕಡೆಗೆ ಕೆಎ-18-ಎ-224 ನೇ ಮಾರುತಿ ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾಧಿದಾರರು ರಸ್ತೆಗೆ ಬಿದ್ದು ಅವರ ಎಡಕಾಲಿನ ಪಾದದ ಮೊಣಗಂಟಿನ ಬಳಿ ರಕ್ತಬರುವ ಗಾಯವಾಗಿರುವುದಾಗಿಯೂ ಅಪಘಾತ ಉಂಟುಮಾಡಿ ಕೆಎ-18-ಎ-224 ನೇ ಓಮ್ನಿ ಕಾರನ್ನು ಅದರ ಚಾಲಕ ನಿಲ್ಲಿಸದೇ ಪರಾರಿಯಾಗಿರುತ್ತಾರೆ.
4.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-03-2014 ರಂದು ಬೆಳಿಗ್ಗೆ 8-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಜಯಾ ಕೊಟ್ಯಾನ್ ರವರು ತನ್ನ ಮನೆಯಿಂದ ತನ್ನ ಬಾಬ್ತು ಸ್ಕೂಟರ್ ನಲ್ಲಿ ಕೂಳೂರಿಗೆ ಹೋಗುತ್ತಿದ್ದ ಸಮಯ ತಣ್ಣಿರುಬಾವಿ ಎನ್.ಎಮ್.ಪಿಟಿ ಗೆಸ್ಟ್ ಹೌಸ್ ನಿಂದ ಮುಂದೆ ಬಂದಾಗ ಐ.ಒ.ಸಿ. ಟರ್ಮಿನಲ್ ನ ರಸ್ತೆಯಿಂದ ಸ್ವಲ್ಪ ಹಿಂದೆ ತಲುಪಿದಾಗ ಸಮಯ ಸುಮಾರು ಬೆಳಿಗ್ಗೆ 08-05 ಗಂಟೆಗೆ ತಣ್ಣೀರುಬಾವಿ ರಸ್ತೆಯ ಪಡ್ಡಯಿ (ಪಶ್ವಿಮದ) ಬದಿಯಲ್ಲಿ ರಸ್ತೆಯ ದಂಡೆಯಿಂದ ಕೆಳಗಿನ ಚರಂಡಿಯಲ್ಲಿ ಬೈಕ್ ಒಂದು ಅಡ್ಡಬಿದ್ದಿರುವುದು ಕಂಡುಬಂತು. ಪಿರ್ಯಾದಿದಾರರು ಕೂಡಲೇ ಸ್ಕೂಟರ್ ನ್ನು ರಸ್ತೆಯ ಬದಿಗೆ ನಿಲ್ಲಿಸಿ ರಸ್ತೆಯ ಬದಿಯಿಂದ ಕೆಳಗೆ ಇಳಿದು ಬೈಕ್ ಬಿದ್ದದ್ದ ಸ್ಥಳಕ್ಕೆ ಹೋಗಿ ನೋಡಿದೆ. ಬೈಕ್ ನಂಬ್ರ ಕೆಎಲ್-25-ಬಿ-7445 ಪಲ್ಸರ್ ಆಗಿತ್ತು. ಬೈಕ್ ನಿಂದ ಸ್ವಲ್ಪ ದೂರದಲ್ಲಿ ಯುವಕನ ದೇಹ ನೆಲದ ಕಡೆ ಕವಚಿ ಬಿದ್ದಿತ್ತು. ರಕ್ತ ಮತ್ತು ಕೆಲವು ಮಾಂಸದ ತುಂಡುಗಳು ದೇಹದದಿಂದ ಹೊರಗಡೆ ಬಂದು ಹತ್ತಿರದಲ್ಲಿ ನೆಲದ ಮೇಲೆ ಬಿದ್ದುಕೊಂಡಿತ್ತು ದೇಹ ಬಿದ್ದಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ತಲೆಯ ಭಾಗ ಅಡ್ಡವಾಗಿ ಬಿದ್ದಿತ್ತು ಹಾಗೂ ಚಪ್ಪಳಿಗಳು ಸ್ವಲ್ಲ ದೂರದಲ್ಲಿ ಬಿದ್ದಿತ್ತು ಬಾಡಿ ಬಿದ್ದಿದ್ದ ಸ್ಥಳದಿಂದ ಸ್ವಲ್ಲ ದೂರ ಇರುವ ಎರಡು ಮೇಪ್ಲವರ್ ಮರಗಳಲ್ಲಿ ರಕ್ತ ಕಲೆಗಳಿರುವುದು ಕಂಡುಬಂತು. ಪಿರ್ಯಾದಿದಾರರು ಅಲ್ಲಿಂದ ಕೂಡಲೇ ಮೇಲೆ ಬಂದು ರಸ್ತೆಗೆ ಬಂದಾಗ ಕಾಂಟ್ರೀಟ್ ರಸ್ತೆಯ ದಂಡೆಯ ಬದಿಯಲ್ಲಿ ವಾಹನ ಗುದ್ದಿ ಜಾರಿಕೊಂಡು ಹೋದ ಮಾರ್ಕ್ ಗಳಿರುವುದು ಕಂಡುಬಂದಿರುತ್ತದೆ. ಅಲ್ಲಿ ಬಿದ್ದಿದ್ದ ಬೈಕ್ ಮತ್ತು ಬೈಕ್ ನಿಂದ ಬಿದ್ದು ಮೃತಪಟ್ಟಿದ್ದ ಯುವಕನ ಬಗ್ಗೆ ಕೇಳಿದಾಗ ಆತನ ಪರಿಚಯವಿರುವುದಿಲ್ಲ ಸ್ಥಳೀಯ ವ್ಯಕ್ತಿಯಾಗಿರುವುದಿಲ್ಲ ಎಂದು ತಿಳಿಯಿತು. ಹಾಗೆಯೇ ಬಂದ ಯಾರೋ ಪೊಲೀಸರಿಗೆ ಪೋನ್ ಮಾಡಿದರು. ಸ್ವಲ್ಪ ಹೊತ್ತಿನಲ್ಲಿ ಪೊಲೀಸರು ಕೂಡಾ ಸ್ಥಳಕ್ಕೆ ಬಂದು ನೋಡಿರುತ್ತಾರೆ. ಆ ಸಮಯ ಸೇರಿದ್ದ ಯಾರೋ ಯುವಕರು ಮೃತಪಟ್ಟಿರುವ ಯುವಕ ಎ,ಜೆ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿ ರೋಹಿತ್ ರಾಧಾಕೃಷ್ಣನ್ ಎಂದು ಹೇಳುತ್ತಿದ್ದರು. ರಸ್ತೆಯ ದಂಡೆ ಮೇಲೆ ವಾಹನ ಗೀರಿರುವ ಗುರುತು, ಮೃತ ದೇಹ ಬಿದ್ದಿರುವ ಸ್ಥಳವನ್ನು ಹಾಗೂ ವಾಹನವನ್ನು ನೋಡಿದಾಗ ಬೈಕ್ ಅಪಘಾತಗೊಂಡು ಯುವಕ ಮೃತಪಟ್ಟಿರುವ ಸಾದ್ಯತೆ ಇರುವುದು ಕಂಡುಬರುತ್ತದೆ. ಯಾವ ರೀತಿ ಅಪಘಾತ ಘಟಿಸಿರ ಬಹುದು ಎಂಬುದು ತಿಳಿದಿಲ್ಲವಾಗಿ, ದಿನಾಂಕ 23-03-2014 ರಂದು ಬೆಳಗಿನ ಜಾವ ಈ ಅಪಘಾತ ಗೊಂಡಿರುವ ಸಾದ್ಯತೆ ಇರುವುದು ತಿಳಿದುಬರುತ್ತದೆ. ವಾಹನವನ್ನು ರಸ್ತೆಯಲ್ಲಿ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಅಪಘಾತಗೊಂಡ ಕಾರಣದಿಂದ ಈ ಘಟನೆ ಸಂಭವಿಸಿರುವ ಸಾದ್ಯತೆ ಇರುತ್ತದೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ದಾಸರಿ ರಾಜ್ ಎಂಬವರು ತನ್ನ ಮಗಳಾದ ಶ್ರೀಮತಿ ಸೌಮ್ಯ ಪ್ರಾಯ 26 ವರ್ಷ ಎಂಬವರನ್ನು 2006 ರಲ್ಲಿ ಕಿರಣ್ ಕುಮಾರ್ ಎಂಬವರ ಜೊತೆ ವಿವಾಹ ಮಾಡಿಕೊಟ್ಟಿದ್ದು, ಅಳಿಯ ಕಿರಣ್ ಕುಮಾರ್ ಮಂಗಳೂರು ಮಾರ್ಗನ್ಸ್ ಗೇಟ್ ಬಳಿ ಇರುವ ಎಂಫಾಸ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರು ತನ್ನ ಹೆಂಡತಿ ಮಗುವಿನೊಂದಿಗೆ ಮಂಗಳೂರು ನಗರದ ಮಾರ್ಗನ್ಸ್ ಗೇಟ್ ಬಳಿಯ ನಾರಣಪ್ಪ ಕಂಪೌಂಡ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಸುಮಾರು ಒಂದೂವರೆ ವರ್ಷಗಳಿಂದ ವಾಸ್ತವ್ಯ ಇರುತ್ತಾರೆ. ದಿನಾಂಕ 19-03-14 ರಂದು ಅಳಿಯ ಕಿರಣ್ ಕುಮಾರ್ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದು, ದಿನಾಂಕ 22-03-14 ರಂದು ಬೆಳಿಗ್ಗೆ 6-00 ಗಂಟೆಗೆ ಮಂಗಳೂರಿನ ಬಾಡಿಗೆ ಮನೆಗೆ ಬಂದು ಮನೆಯ ಕಾಲ್ ಬೆಲ್ ಮಾಡಿದಾಗ ಒಳಗಿಂದ ಪ್ರತಿಕ್ರಿಯೆ ಬಾರದೇ ಇರುವುದರಿಂದ ತನ್ನ ಬಳಿ ಇದ್ದ ಕೀಯನ್ನು ಉಪಯೋಗಿಸಿ ಬಾಗಿಲು ತೆರೆದು ಒಳಗೆ ನೋಡಿದಾಗ ಮನೆಯ ಒಳಗಡೆ ಹೊಗೆ ತುಂಬಿಕೊಂಡಿದ್ದು, ತನ್ನ ಹೆಂಡತಿ ಸೌಮ್ಯಳು ಬೆಂಕಿ ತಗುಲಿ ಸುಟ್ಟ ಗಾಯಗಳಿಂದಾಗಿ ಮೃತಪಟ್ಟಿರುವುದಾಗಿ ಅಳಿಯ ಕಿರಣ್ ಕುಮಾರ್ ರವರು ದೂರವಾಣಿಯಲ್ಲಿ ತಿಳಿಸಿದಂತೆ ತಾನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಬಂದು ಶವಾಗಾರದಲ್ಲಿದ್ದ ಮೃತಶರೀರವನ್ನು ನೋಡಿರುತ್ತಾರೆ. ನಂತರ ತನ್ನ ಮಗಳು ಬಾಡಿಗೆ ಮನೆಯಲ್ಲಿ ವಾಸ್ತವ್ಯ ಇದ್ದ ಮನೆಗೆ ಹೋಗಿ ಕೃತ್ಯ ಸ್ಥಳವನ್ನು ನೋಡಿದ್ದು, ಮನೆಯ ಬೆಡ್ ರೂಮಿನಲ್ಲಿ ಇದ್ದ ಮಂಚ, ಹಾಸಿಗೆ ಅರ್ಧ ಸುಟ್ಟು ಹೋಗಿರುತ್ತದೆ. ಈ ಬಗ್ಗೆ ನೆರೆಕರೆಯವರಲ್ಲಿ ವಿಚಾರಿಸಿಕೊಳ್ಳಲಾಗಿ ಕಿರಣ್ ಕುಮಾರ್ ರವರ ಜೊತೆ ಮಂಗಳೂರಿನ ಎಂಫಾಸಿಸ್ ನಲ್ಲಿ ಕೆಲಸಮಾಡುತ್ತಿದ್ದ ಶ್ರದ್ದಾ ಎಂಬಾಕೆಯು ದಿನಾಂಕ 21-03-2014 ರಂದು ಮದ್ಯಾಹ್ನ ಸಮಯ ಬಂದು ಹೋಗಿರುವುದನ್ನು ಹಾಗೂ 19-45 ಗಂಟೆ ಸಮಯಕ್ಕೆ ಪುನಃ ಮನೆಗೆ ಬಂದು ರಾತ್ರಿ ಸುಮಾರು 23-30 ಗಂಟೆ ಸಮಯಕ್ಕೆ ಮನೆಗೆ ಬೀಗ ಹಾಕಿ ಸೌಮ್ಯಳ ಮಗುವನ್ನು ಎತ್ತಿಕೊಂಡು ಬಹಳ ತರಾತುರಿಯಲ್ಲಿ ಹೋಗಿರುವುದನ್ನು ಗಮನಿಸಿರುವುದಾಗಿ ತಿಳಿಸಿರುತ್ತಾರೆ. ಆದುದರಿಂದ ಕಿರಣ್ ಕುಮಾರ್ ನ ಪ್ರಿಯತಮೆಯಾದ ಶ್ರದ್ದಾಳು ಈ ಕೃತ್ಯವನ್ನು ಮಾಡಿರುತ್ತಾಳೆ ಎಂಬುದಾಗಿ ಸಂಶಯವಿರುವುದಾಗಿದೆ.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22-03-2014 ರಂದು ಸಂಜೆ ಸುಮಾರು 4-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶೇಖರ ರವರ ನಾದಿನಿ ಶೀಮತಿ ರಜನಿ ಮತ್ತು ಅವರ ಮಗಳು ಬಿಂದ್ಯಾ ಎಂಬುವರು ತನ್ನ ತಾಯಿ ಮನೆ ಕಡೆಗೆ ರಸ್ತೆ ಬದಿ ನಡೆದು ಕೊಂಡು ಬರುತ್ತಿರುವಾಗ ಕುಪ್ಪೆಪದವು ಮರೈನ್ ಕಾಲೇಜು ಬಳಿ ತಲುಪುತ್ತಿರುವಾಗ ಗಾಯಾಳುಗಳ ಹಿಂಬದಿಯಿಂದ ಅಂದರೆ ಕುಪ್ಪೆಪದವು ಕಡೆಯಿಂದ ಕಲ್ಲಾಡಿ ಕಡೆಗೆ ಹೋಗುವ ರಸ್ತೆಯಲ್ಲಿ ಒಂದು ದ್ವಿ ಚಕ್ರ ವಾಹನ ನಂಬ್ರ ಕೆ.ಎ 19.ಇ.ಎಚ್. 3849 ಸ್ಕೂಟರ್ ನೇದರ ಚಾಲಕ ರಫೀಕ್ ಎಂಬುವರು ತನ್ನ ಸ್ಕೂಟರ್ ನ್ನು ಅತಿವೇಗ ಹಾಗೂ ದುಡುಕುತನದಿಂದ ಚಲಾಯಿಸಿಕೊಡು ಬಂದು ರಸ್ತೆ ಬದಿ ನಡೆದು ಕೊಂಡು ಹೋಗುತ್ತಿದ್ದ ಗಾಯಾಳುಗಳಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೂ ತೀವ್ರ ಜಖಂ ಉಂಟಾಗಿದ್ದು ಈ ವಿಷಯ ತಿಳಿದ ಪಿರ್ಯಾದಿದಾರರು ಸ್ಥಳಕ್ಕೆ ಬಂದು ಗಾಯಾಳುಗಳನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿ ಗಾಯಾಳುಗಳಿಗೆ ಮಾತಾನಾಡಲು ಆಗದಿರುವುದರಿಂದ ತಾನು ದೂರು ನೀಡಿರುವುದಾಗಿದೆ. ಗಾಯಾಳುಗಳಾದ ನಾದಿನಿ ರಜಿನಿ ಹಾಗೂ ಮಗಳು ಬಿಂದ್ಯಾ ರವರು ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
7.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-03-2014 ರಂದು ಬೆಳಿಗ್ಗೆ 11-15 ಗಂಟೆಗೆ ಸೂರಿಂಜೆ ನಿವಾಸಿ ಪಿ.ಎಸ್.ಅಬೂಬಕ್ಕರ್ ರವರ ಮಗ ಅಬ್ದುಲ್ ಮಜೀದ್ ಹಾಗೂ ರಹೀಂ ಎಂಬವರುಗಳು ಕಿನ್ನಿಗುಡ್ಡೆ ಸೂರಿಂಜೆ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಹಸನಬ್ಬಾ ರವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದು ಈ ಘಟನೆಗೆ ನೀರಿನ ವಿಚಾರದಲ್ಲಿ ಅವರುಗಳ ನಡುವೆ ಉಂಟಾದ ತಕರಾರು ಕಾರಣವಾಗಿರುತ್ತದೆ.
8.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-03-2014 ರಂದು ಅಪರಾಹ್ನ 12-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಕೆ. ಇಬ್ರಾಹಿಂ ರವರು ಅವರ ಬಾಬ್ತು ದ್ವಿಚಕ್ರ ವಾಹನ ನಂಬ್ರ ಕೆ.ಎ 19.ಆರ್.3887 ನೇದರಲ್ಲಿ ಸವಾರರಾಗಿ, ನಜೀರ್ ಎಂಬಾತನನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿ ಬಾಳಾ ಕಡೆಯಿಂದ ಸುರತ್ಕಲ್ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ್ಗೆ ಕಾಟ್ಲ ಅಲೆಕ್ಸ್ ಬಿಲ್ಡಿಂಗ್ ಬಳಿ ತಲುಪುತ್ತಿದಂತೆ ಹಿಂದಿನಿಂದ ಅಂದರೆ ಕೈಕಂಬ ಕಡೆಯಿಂದ ಸುರತ್ಕಲ್ ಕಡೆಗೆ ಕೆ.ಎ. 19.ಇ.ಜೆ 4665 ನೇ ಪಲ್ಸರ್ ಮೋಟಾರು ಸೈಕಲ್ ಸವಾರ ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿ ದ ಪರಿಣಾಮ ಪಿರ್ಯಾದಿ ಹಾಗೂ ಸಹಸವಾರ ವಾಹನ ಸಮೇತಾ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಜಗಜೀವನ್ ದಾಸ್ ರವರು ಮಾನ್ಯ ಜಿಲ್ಲಾಧಿಕಾರಿಯವರ ಆದೇಶ ನಂಬ್ರ ELN/(1) CR 5H 13,14 ದಿನಾಂಕ 18-3-2014 ರಂತೆ ಚುನಾವಣಾ ಕರ್ತವ್ಯ ನಿಮಿತ್ತ ತಲಪಾಡಿ ಚೆಕ್ಪೋಸ್ಟ ನಲ್ಲಿ ಪೊಲೀಸ್ ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ನಡೆಸುತ್ತಿರುವ ಸಮಯ ವಾಹನ ನಂಬ್ರ ಕೆಎಲ್ 14 ಜಿ 9052 ನಲ್ಲಿ ದಾಖಲಾತಿ ಇಲ್ಲದೆ 2 ಲಕ್ಷ ರೂ ಮೊತ್ತವನ್ನು ಸಾಗಿಸುತ್ತಿದ್ದನ್ನು ವಶಪಡಿಸಿಕೊಂಡದ್ದನ್ನು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು, ಆದೇಶದಂತೆ ಪ್ರಕರಣವನ್ನು ದಾಖಲಿಸಲಾಗಿದೆ.
10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಜಗಜೀವನ್ ದಾಸ್ ರವರು ಮಾನ್ಯ ಜಿಲ್ಲಾಧಿಕಾರಿಯವರ ಆದೇಶ ನಂಬ್ರ ELN/(1) CR 5H 13,14 ದಿನಾಂಕ 18-3-2014 ರಂತೆ ಚುನಾವಣಾ ಕರ್ತವ್ಯ ನಿಮಿತ್ತ ತಲಪಾಡಿ ಚೆಕ್ಪೋಸ್ಟ ನಲ್ಲಿ ಪೊಲೀಸ್ ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ನಡೆಸುತ್ತಿರುವ ಸಮಯ ವಾಹನ ನಂಬ್ರ ಕೆಎಲ್ 11 ಎಇ 2882 ನಲ್ಲಿ ದಾಖಲಾತಿ ಇಲ್ಲದೆ 1.5 ಲಕ್ಷ ರೂ ಮೊತ್ತವನ್ನು ಸಾಗಿಸುತ್ತಿದ್ದನ್ನು ವಶಪಡಿಸಿಕೊಂಡದ್ದನ್ನು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು, ಆದೇಶದಂತೆ ಪ್ರಕರಣವನ್ನು ದಾಖಲಿಸಲಾಗಿದೆ.
11.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಜಗಜೀವನ್ ದಾಸ್ ರವರು ಮಾನ್ಯ ಜಿಲ್ಲಾಧಿಕಾರಿಯವರ ಆದೇಶ ನಂಬ್ರ ELN/(1) CR 5H 13,14 ದಿನಾಂಕ 18-3-2014 ರಂತೆ ಚುನಾವಣಾ ಕರ್ತವ್ಯ ನಿಮಿತ್ತ ತಲಪಾಡಿ ಚೆಕ್ಪೋಸ್ಟ ನಲ್ಲಿ ಪೊಲೀಸ್ ಸಿಬ್ಬಂದಿಯವರೊಂದಿಗೆ ವಾಹನ ತಪಾಸಣೆ ನಡೆಸುತ್ತಿರುವ ಸಮಯ ವಾಹನ ನಂಬ್ರ ಕೆಎ 19 ಎಂಸಿ 3262 ನಲ್ಲಿ ಚುನಾವಣಾಧಿಕಾರಿಗಳ ಅನುಮತಿ ಇಲ್ಲದೆ 39 ಕಾಂಗ್ರೇಸ್ ಪಕ್ಷದ ಬಾವುಟಗಳನ್ನು ಸಾಗಿಸುತ್ತಿದ್ದುದ್ದನ್ನು ವಶಪಡಿಸಿಕೊಂಡದ್ದನ್ನು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು, ಆದೇಶದಂತೆ ಪ್ರಕರಣವನ್ನು ದಾಖಲಿಸಲಾಗಿದೆ.
12.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-03-2014 ರಂದು ಪಿರ್ಯಾದುದಾರರಾದ ಶ್ರೀ ಯತೀಶ್ ರವರು ತನ್ನ ಬಾಬ್ತು ಅಟೋ ರಿಕ್ಷಾದಲ್ಲಿ ಬಾಡಿಗೆ ಮುಗಿಸಿ ಉಳ್ಳಾಲದಿಂದ ಸೊಮೇಶ್ವರ ಕಡೆಗೆ ಹೋಗುತ್ತಿದ್ದು, ರಾತ್ರಿ ಸಮಯ ಸುಮಾರು 11-15 ಗಂಟೆಗೆ, ಉಳ್ಳಾಲ ಒಂಬುತ್ತುಕೆರೆ ರಾಜಗುಳಿಗ ಬನದ ಸಮೀಪ ತಲುಪುತ್ತಿದ್ದಂತೆ ಅವರ ಎದುರಿನಿಂದ ಕೆಎ 19 ಇಸಿ 7846 ನೇ ಆಕ್ಟಿವ್ ಹೊಂಡಾದಲ್ಲಿ ದಿನೇಶ್ ಮತ್ತು ಮುನ್ನಾ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದು, ಅವರ ಎದುರಿನಿಂದ ಕೆಎ 19 ಸಿ 9418 ಟ್ಯಾಂಕರ್ನ್ನು ಅದರ ಚಾಲಕ ಅತೀವೇಗವಾಗಿ ತೀರಾ ನಿರ್ಲಕ್ಷ್ಯತನಿಂದ ಚಾಲಾಯಿಸಿಕೊಂಡು ಹೋಗುತ್ತಾ ಒಮ್ಮಲೇ ಯಾವುದೇ ಸೂಚನೆಯನ್ನು ನೀಡದೇ ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದರಿಂದ ಅಕ್ಟಿವ್ ಹೊಂಡಾ ಟ್ಯಾಂಕರ್ ಹಿಂಬದಿಗೆ ಡಿಕ್ಕಿ ಹೊಡೆಯಿತು. ಕೂಡಲೇ ಪಿರ್ಯಾದುದಾರರು ಹೋಗಿ ನೋಡಿದಾಗ ಸವಾರರಿಬ್ಬರ ತಲೆಗೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಈ ಅಪಘಾತಕ್ಕೆ ಕೆಎ 19 ಸಿ 9418 ನೇ ಟ್ಯಾಂಕರ್ನ್ನು ಅದರ ಚಾಲಕನು ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನಿಂದ ಚಾಲಾಯಿಸಿಕೊಂಡು ಹೋಗುತ್ತಾ ಯಾವುದೇ ಸೂಚನೆಯನ್ನು ನೀಡದೇ ಒಮ್ಮಲೇ ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದರಿಂದ ಅಕ್ಟಿವ್ ಹೊಂಡಾ ಹಿಂಬದಿಗೆ ಡಿಕ್ಕಿ ಹೊಡೆದು ಅಗಿರುತ್ತದೆ. ಸ್ಥಳಕ್ಕೆ ಬಂದ 108 ಅಂಬ್ಯುಲೆನ್ಸ್ನಲ್ಲಿ ಮೃತಪಟ್ಟ ಇಬ್ಬರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.
No comments:
Post a Comment