ದೈನಂದಿನ ಅಪರಾದ ವರದಿ.
ದಿನಾಂಕ 22.03.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 2 |
ಮಹಿಳೆಯ ಮೇಲಿನ ಪ್ರಕರಣ | : | 1 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-12-2008 ರಂದು ಶರ್ಮಿದಿ ಹಾಲ್ ಎಲ್ ಬಿ.ಎಸ್ ಮಾಗ್ ಮುಲ್ ನಾಡ್ ವೆಸ್ಟ್ ಮುಂಬೈ ಯಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಶಿಲ್ಪಾ ಶ್ರೀತಲ್ ರವರು ಶೀತಲ್ ಕೊಟ್ಯಾನ್ ಎಂಬವರೊಂದಿಗೆ ಮದುವೆಯಾಗಿದ್ದು, ಮದುವೆ ನಂತರ ಮುಂಬೈನಲ್ಲಿ ಗಂಡ ಮತ್ತು ಅವರ ತಂದೆ ತಾಯಿಯೊಂದಿಗೆ ವಾಸವಾಗಿದ್ದು, ಸ್ವಲ್ಪ ದಿನಗಳಲ್ಲಿ ಗಂಡ ಮತ್ತು ಅವರ ಮನೆಯವರು ನನ್ನೊಂದಿಗೆ ಏನೂ ಮಾತನಾಡದೇ ತನ್ನನ್ನು ಕೆಲಸದವಳಂತೆ ನೋಡುತ್ತಿದ್ದರು. ತನಗೆ ಹುಷಾರಿಲ್ಲದಾಗ, ಯಾವುದೇ ಚಿಕಿತ್ಸೆ ಕೊಡಿಸದೇ ತೊಂದರೆ ಮಾಡುತ್ತಿದ್ದು, ವಿನಾಕಾರಣ ತಪ್ಪುಗಳನ್ನು ಹುಡುಕಿ ಬಯ್ಯತ್ತಿದ್ದರು. ಗರ್ಭಿಣಿಯಾದಾಗ ಹೊಡೆದು ಬೈದು ತೊಂದರೆ ಮಾಡುತ್ತಿದ್ದರು. ಪಿರ್ಯಾದಿದಾರರು ಮಗುವಿನೊಂದಿಗೆ ತವರು ಮನೆಗೆ ಬಂದಿದ್ದು, ತನಗೂ ತನ್ನ ಮಗನಿಗೂ ತಿಂಗಳಿಗೆ 2000/- ರೂ ಖರ್ಚಿಗೆ ಕೊಡುತ್ತಿದ್ದರು, ಮಗುವನ್ನು ಸಹಾ ನೋಡಲು ಬಂದಿರುವುದಿಲ್ಲ. ಇದ್ದರಿಂದ ನ್ಯಾಯಾಲಯದಲ್ಲಿ ಎಂ.ಸಿ ಕೇಸ್ ನ್ನು ದಾಖಲಿಸಿದ್ದು, ನ್ಯಾಯಾಲಯವು ತಿಂಗಳಿಗೆ 3000 /- ರೂ ವನ್ನು ಪರಿಹಾರವನ್ನು ಸೂಚಿಸಿದ್ದು, ಅದನ್ನು ಸಹಾ ಕೊಟ್ಟಿರುವುದಿಲ್ಲ. ದಿನಾಂಕ 19-03-2014 ರಂದು ಎಂಸಿ ಕೇಸಿನ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ತನ್ನ ಗಂಡ ಮತ್ತು ಅವರ ತಾಯಿ ಅದೇ ದಿನ ಸಂಜೆ 6-15 ಗಂಟೆಗೆ 0824 4270282 ನಂಬರಿನಿಂದ ಫೋನ್ ಮಾಡಿ ಮಗುವನ್ನು ನನ್ನ ವಶಕ್ಕೆ ನೀಡಬೇಕು ಇಲ್ಲದಿದ್ದರೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ.
2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20.03.2014 ರಂದು ಪಿರ್ಯಾದಿದಾರರಾದ ಶ್ರೀ ಜನಾರ್ಧನ್ ಕೆ. ರವರು ತಮ್ಮ ಬಾಬ್ತು KA-19-W-9017ನೇ ನಂಬ್ರದ ಮೋಟಾರ್ ಸೈಕಲ್ಲನ್ನು ಮಂಗಳೂರು ನಗರದ ಕೋರಿರೊಟ್ಟಿ ಜಂಕ್ಷನ್ ಬಳಿಯ ಇಬ್ರೋಸ್ ಬಿಲ್ಡಿಂಗ್ ಕಡೆಯಿಂದ ಮಂಗಳೂರು ಮಹಾನಗರ ಪಾಲಿಕೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಮಧ್ಯಾಹ್ನ ಸಮಯ 14:15 ಗಂಟೆಗೆ ಕೋರಿರೊಟ್ಟಿ ಜಂಕ್ಷನ್ ರಸ್ತೆ ತಿರುವಿನಲ್ಲಿ ಬಲಬದಿಗೆ ತಿರುಗಿಸುವ ಸಮಯ ಅಂದರೆ ಡಿವೈಡರ್ ಬಳಿಗೆ ತಲುಪುವಾಗ್ಗೆ ಲಾಲ್ ಭಾಗ್ ಕಡೆಯಿಂದ KL-14-L-4932ನೇ ನಂಬ್ರದ ಮೊಟಾರ್ ಸೈಕಲನ್ನು ಅದರ ಸವಾರ ಇಬ್ರಾಹಿಂ ಆಶಿರ್ ಎಂಬವರು ಅತೀವೇಗ ಮತ್ತು ತೀರಾ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮತ್ತು ಆರೋಪಿ ಮೋಟಾರ್ ಸೈಕಲ್ ಸವಾರರಿಬ್ಬರೂ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಬಲಕಾಲಿನ ಪಾದಕ್ಕೆ ಗಂಭೀರ ತರಹದ ಗಾಯ ಮತ್ತು ಬಲಕೈಯ ಹೆಬ್ಬೆರಳಿನ ಪಕ್ಕದ 2ನೇ ಬೆರಳಿಗೆ ಗಾಯ ಹಾಗೂ ಎಡಕೈ ರಟ್ಟೆಗೆ ಗುದ್ದಿದ ತರಹದ ಗಾಯಗೊಂಡವರು ಚಿಕಿತ್ಸೆ ಬಗ್ಗೆ ನಗರದ ಯೇನೆಪೋಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಲ್ಲದೇ ಸದ್ರಿ ಅಪಘಾತದಿಂದ ಆರೋಪಿ ಇಬ್ರಾಹಿಂ ಆಶಿರ್ ರವರಿಗೂ ತರಚಿದ ಗಾಯ ಉಂಟಾಗಿದ್ದು ಎರಡೂ ಮೋಟಾರ್ ಸೈಕಲ್ಲುಗಳು ಜಖಂಗೊಂಡಿರುವುದು.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19/03/2014 ರಂದು ಸಂಜೆ ಸಮಯ 16:25 ಗಂಟೆಗೆ ಬೆಂದೂರು ಕಡೆಯಿಂದ ಜ್ಯೋತಿ ಕಡೆಗೆ ಕಪ್ಪು ಬಣ್ಣದ ನೋಂದಣಿ ಸಂಖ್ಯೆ ಆಗಿರದ ಬೈಕನ್ನು ಅದರ ಸವಾರ ಹಿಂಬದಿ ಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ಅತಿ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಬಂದು ಜ್ಯೋತಿ ಬಳಿಯ ಹೆಲ್ತ್ ಕೆರ್ ಮೆಡಿಕಲ್ಸ ಎದುರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ಲೂಯಿಸ್ ಜಾನ್ ಮಿನೇಜಸ್ ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ಲೂಯಿಸ್ ಜಾನ್ ಮಿನೇಜಸ್ ರಸ್ತೆಗೆ ಬಿದ್ದು ಎಡಕೋಲು ಕಾಲಿಗೆ ಮೂಳೆ ಮುರಿತದ ಗಂಭಿರ ಸ್ವರೂಪದ ಗಾಯವಾಗಿ ಕೆ ಎಂ ಸಿ ಆಸ್ತತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಡಿಕ್ಕಿ ಮಾಡಿದ ಆರೋಪಿ ಮೋಟರ್ ಸೈಕಲ್ ಸವಾರ ಪೊಲೀಸರಿಗೆ ಮಾಹಿತಿ ನಿಡದೆ ವಾಹನದೊಂದಿಗೆ ಪರಾರಿಯಾಗಿರುತ್ತಾರೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶಂಶುಲ್ ಅಂಬಿಯಾ ರವರು ಇಂಡಸ್ಟ್ರಿಯಲ್ ಕೆಮೆಸ್ಟ್ರಿ ಪದವೀಧರರಾಗಿದ್ದು, ಉದ್ಯೋಗವಿಲ್ಲದೇ ಇರುವುದರಿಂದ ದಿನಪತ್ರಿಕೆಯಲ್ಲಿ ಬಂದ ಪ್ರಕಟಣೆಯನ್ನು ಓದಿ ನೋಡಿ ದೇರಳಕಟ್ಟೆ ಎಂಬಲ್ಲ್ಲಿರುವ ಆಲ್ಫಾ ಟೂರ್ಸ್ & ಟ್ರಾವೆಲ್ಸ್‌ನ ಮಾಲಕ ಆರೋಪಿ ಮಹಮ್ಮದ್ ಶಾಫಿ ಎಂಬವರಲ್ಲಿ ದಿನಾಂಕ 21-11-2013 ರಂದು ವ್ಯವಹರಿಸಿದಲ್ಲಿ ವಿದೇಶವಾದ ಸೌದಿ ಅರೇಬಿಯಾದಲ್ಲಿ ಕೆಮಿಕಲ್ ವಾಟರ್ ಪ್ಯೂರಿಫಿಕೇಶನ್ ಕೆಲಸ ಕೊಡಿಸುವುದಾಗಿ ಹಾಗೂ ವೀಸಾ ಮಾಡಿಕೊಡುವುದಾಗಿ ಪಿರ್ಯಾದಿದಾರರನ್ನು ನಂಬಿಸಿ ರೂ. 75,000/- ಪಡಕೊಂಡು ಅದಕ್ಕೆ ರಶೀದಿ ನೀಡಿದ್ದು, ನಂತರ ಪಿರ್ಯಾದಿದಾರರು ಆರೋಪಿಯನ್ನು ಭೇಟಿ ಮಾಡಿಕೊಂಡು ಆರೋಪಿಯು ಪಿರ್ಯಾದಿದಾರರಿಗೆ ಕೆಲಸದ ಆಮಿಷವೊಡ್ಡಿ ವೀಸಾವನ್ನು ಕೊಡಿಸದೆ ಹಾಗೂ ಹಣವನ್ನೂ ವಾಪಸ್ಸು ನೀಡದೆ ನಂಬಿಸಿ ಮೋಸ ಮಾಡಿರುತ್ತಾರೆ.
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20.03.2014 ರಂದು ಪಿರ್ಯಾದಿದಾರರಾದ ಶ್ರೀ ಲೋಕೇಶ್ ಭಂಡಾರಿ ರವರು ತನ್ನ ಪತ್ನಿ ಹಾಗೂ ಮಗನ ಜೊತೆ ಮಗನ ಚಿಕಿತ್ಸೆಯ ಬಗ್ಗೆ ತಮ್ಮ ಬಾಬ್ತು KA-20-M-2143 ನಂಬ್ರದ ಮಾರುತಿ-800 ಕಾರಿನಲ್ಲಿ ಗುರುಪುರ ಕೈಕಂಬದಿಂದ ಮೂಡಬಿದ್ರೆ ಕಡೆ ಬರುತ್ತಾ, ಮಂಗಳೂರು ತಾಲೂಕು ಪುತ್ತಿಗೆ ಗ್ರಾಮದ ಹಂಡೇಲು ಸುತ್ತು ಎಂಬಲ್ಲಿಗೆ ತಲುಪುತ್ತಿದ್ದಾಗ, ಸುಮಾರು 11:45 ಗಂಟೆಗೆ, ಎದುರಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಬರುತ್ತಿದ್ದ, KA-18-M-9843 ನೇ ನಂಬ್ರದ ಪಿಕಪ್ ವಾಹನವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಪಿರ್ಯಾದಿದಾರರ ಕಾರು ಜಖಂಗೊಂಡು, ಅವರ ಸೊಂಟದ ಬಲಭಾಗ, ತೊಡೆಗೆ, ಎದೆಗೆ, ಬಲಕೆನ್ನೆಗೆ, ಮುಖಕ್ಕೆ ಹಾಗೂ ಮೂಗಿಗೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು, ಪಿರ್ಯಾದಿದಾರರ ಪತ್ನಿ ಶೋಭಾರವರ ಬಲಕಾಲಿನ ಪಾದದ ಮಣಿಗಂಟಿನ ಬಳಿ ಗುದ್ದಿದ ಗಾಯ, ಬಲಕಣ್ಣಿನ ಬಳಿ,ಮೂಗಿಗೆ, ಹಾಗೂ ಬಲಕಾಲಿನ ಕೋಲುಕಾಲಿನಲ್ಲಿ ರಕ್ತಗಾಯವಾಗಿದ್ದು, ಮಗ ಶ್ರೇಯಸ್ ರವರ ಹಣೆಗೆ, ಬಲಕಾಲಿನ ಪಾದದ ಮಣಿಗಂಟಿನ ಬಳಿ ಹಾಗೂ ಎಡಕೈ ಕೋಲು ಕೈಯಲ್ಲಿ ಗುದ್ದಿದ ಹಾಗೂ ರಕ್ತಗಾಯವಾಗಿದ್ದು, ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17-03-2014ರ ಸಂಜೆ 16-30 ಗಂಟೆಯಿಂದ ದಿನಾಂಕ 18-03-2014ರಂದು ಬೆಳಿಗ್ಗೆ 07-00 ಗಂಟೆಯ ಮಧ್ಯೆ ಪಿರ್ಯಾದಿದಾರರು ವಾಸ ಮಾಡಿಕೊಂಡಿರುವ ಮಂಗಳೂರು ನಗರದ ಫಳ್ನೀರಿನಲ್ಲಿರುವ ಯುನಿಟಿ ಹೆಲ್ತ್ ಕಾಂಪ್ಲೆಕ್ಸ್ ನ ವಸತಿಗೃಹದ ಬಳಿ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿದಾರರ ಬಾಬ್ತು KA 31 S 6199 ನೋಂದಣಿ ಸಂಖ್ಯೆಯ, ಚಾಸಿಸ್ ನಂಬ್ರ:MD2A11CZ8CCE84114, ಇಂಜಿನ್ ನಂಬ್ರ:DHZCCE80706ನೇ 2012ನೇ ಮಾಡೆಲಿನ ಕಪ್ಪು ಬಣ್ಣದ ಅಂದಾಜು ಮೌಲ್ಯ 45,000/- ರೂ ಬೆಲೆ ಬಾಳುವ ಬಜಾಜ್ ಪಲ್ಸರ್-150ಸಿಸಿ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ದಿನದಿಂದ ಇಲ್ಲಿಯತನಕ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.
7.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಸುಧೀರ್ ಆರ್.ಎಸ್. ರವರು ಮಂಗಳೂರು ನಗರದ ಬಜಿಲಕೇರಿಯಲ್ಲಿ ಸಭೆ ಸಮಾರಂಭದ ಬಂಟಿಂಗ್ಸ್ ಪ್ಲಾಗ್ ಗಳನ್ನು ಕಟ್ಟುವ ಕೆಲಸ ಮಾಡಿಕೊಂಡಿರುತ್ತಾರೆ. ಫಿರ್ಯಾದಿದಾರರು ಹೀರೋ ಹೊಂಡಾ ಫ್ಯಾಶನ್ ಪ್ರೋ. ಮೋಟಾರ್ ಸೈಕಲ್ ನ್ನು ಹೊಂದಿದ್ದು ದಿನಾಂಕ 19-03-2014 ರಂದು ರಾತ್ರಿ 10.00 ಗಂಟೆಯ ಸಮಯಕ್ಕೆ ಅವರ ಮನೆಯಾದ ಮಂಗಳೂರಿನ ಬಜಿಲಕೇರಿ ಸ್ಕೈಲೈನ್ ಬಿಲ್ಡಿಂಗ್ ಎದುರುಗಡೆ ಬಾಬ್ತು ಕೆಎ-19-ಇಎ-4517 ನೇ ಹೀರೋ ಹೋಂಡಾ ಫ್ಯಾಶನ್ ಪ್ರೋ. ಮೋಟಾರ್ ಸೈಕಲ್ ನ್ನು ಪಾರ್ಕ್ ಮಾಡಿದ್ದು, ಮರುದಿನ ದಿನಾಂಕ 20.03.2014 ರಂದು ಬೆಳಿಗ್ಗೆ 09.00 ಗಂಟೆಗೆ ವಾಪಾಸು ಬಂದು ನೋಡಲಾಗಿ ಪಾರ್ಕು ಮಾಡಿದ ಸ್ಥಳದಲ್ಲಿ ಬೈಕ್ ಇಲ್ಲದೇ ಇದ್ದು, ಆಸುಪಾಸಿನಲ್ಲಿ ವಿಚಾರಿಸಿಕೊಂಡು ಸಂಬಂಧಿಕರಲ್ಲಿ ವಿಚಾರಿಸಿಕೊಂಡು ಎಲ್ಲಾ ಕಡೆ ಹುಡುಕಾಡಿದ್ದು, ಎಲ್ಲೂ ಬೈಕ್ ಪತ್ತೆಯಾಗಿರುವುದಿಲ್ಲ. ಬೈಕಿಗೆ ಹ್ಯಾಂಡ್ ಲಾಕ್ ಮಾಡಿರುತ್ತಾರೆ. ಕಳವಾದ ಬೈಕಿನ ಅಂದಾಜು ಮೌಲ್ಯ ರೂ 35,000/- ಆಗಬಹುದು. ಕಳವಾದ ಬೈಕಿನ ವಿವರ: ಬಣ್ಣ – ನೀಲಿ-ಕಪ್ಪು, ನೊಂದಣಿ ಸಂಖ್ಯೆ- ಕೆಎ-19-ಇಎ-4517, ಮಾಡೆಲ್- 2009 ಚಾಸಿಸ್ ನಂ.- MBLHA10EP9GJ00434, ಇಂಜಿನ್ ನಂಬ್ರ - HA10ED9GJ07507.
8.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಕೆ. ಶಂಭು ಶರ್ಮಾ, ಬಿಜೆಪಿ ಚುನಾವಣಾ ಆಯೋಗ ಪ್ರಮುಖ್, ದ.ಕ. ಜಿಲ್ಲೆ ರವರು ದೂರಿನಂತೆ ಮೇಲಾಧಿಕಾರಿಗಳ ಮುಖಾಂತರ ಪ್ರಕರಣ ದಾಖಲಿಸುವಂತೆ ಠಾಣೆಗೆ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಕೇಂದ್ರ ಉಪವಿಭಾಗ ಕಛೇರಿಯಿಂದ ಬಂದ ಜ್ಞಾಪನ ನಂ. 41/ಸಿಆರ್.ಎಂ/ಸಿಎಸ್.ಡಿ/2014 ನೇಯದ್ದನ್ನು ಠಾಣೆಯಲ್ಲಿ ಸ್ವೀಕರಿಸಿಕೊಂಡಿದ್ದು, ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ನಳಿನ್ ಕುಮಾರ್ ಕಟೀಲ್ ಇವರ ಮೇಲೆ ಕೆಲವು ಭಾರತೀಯ ಜನತಾ ಪಾರ್ಟಿ ವಿರೋಧಿ ಶತ್ರುಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ದಿನಾಂಕ 17-03-2014 ರಂದು ಸಂಚಲಿತ ದೂರವಾಣಿ (ವಾಟ್ಸ್ ಅಪ್) ಮುಖಾಂತರ ಸುಳ್ಳು ಅಪಪ್ರಚಾರ ಮತ್ತು ಮಿಥ್ಯಾರೋಪವನ್ನು ಭಾರತೀಯ ಜನತಾ ಪಾರ್ಟಿಯ ವಿರೋಧಿಗಳು ಮಾಡಿದ್ದು, ಅಂತೇಯೆ ಸದ್ರಿ ಬರಹದ ನಂತರ ರಾಹುಲ್ ಶೆಟ್ಟಿ ಎಂಬಾತನು ಸಂಚಲಿತ ದೂರವಾಣಿ (ವಾಟ್ಸ್ ಅಪ್) ಯಲ್ಲಿ ನಳಿನ್ ಕುಮಾರ್ ಕಟೀಲ್ ರವರಿಗೆ ಚುನಾವಣೆಯಲ್ಲಿ ಹಿನ್ನಡೆಯಾಗಬೇಕೆಂಬ ದುರುದ್ದೇಶದಿಂದ ಇಂಗ್ಲೀಷ್ ನಲ್ಲಿ ಸಂದೇಶ ಕಳುಹಿಸಿದ್ದು, ಚುನಾವಣಾ ಹಿನ್ನಡೆಯಾಗಬೇಕೆಂಬ ದುರುದ್ದೇಶದಿಂದ ಜಾತಿಜಾತಿಗಳ ಮಧ್ಯ ವೈಶಮ್ಯ, ದ್ವೇಷ, ಮತ್ಸರ ಇತ್ಯಾದಿ ಭೇಧಬಾವಗಳನ್ನು ಉಂಟು ಮಾಡಿರುವುದಾಗಿದೆ.
9.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-03-2014 ರಂದು ಸಂಜೆ ಸಮಯ 17-45 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ, ಬಡಗುಳಿಪಾಡಿ ಗ್ರಾಮದ ಸುರಲ್ಪಾಡಿ ಎಂಬಲ್ಲಿ ಫಿರ್ಯಾದಿದಾರರಾದ ಶ್ರೀ ವೇದ ಪ್ರಕಾಶ್ ರವರ ಸಂಬಂಧಿ ದಯಾನಂಧ ಎಂಬವರು ಮೋಟಾರು ಸೈಕಲ್ ನಂ: ಕೆಎ 19 ಇಎ 5054 ರಲ್ಲಿ ಕೈಕಂಬ ಕಡೆಯಿಂದ ಎಡಪದವು ಕಡೆಗೆ ತಾನು ಸವಾರಿ ಮಾಡುತ್ತಿದ್ದ ಸ್ಕೂಟರನ್ನು ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿಮಾಡಿಕೊಂಡು ಹೋಗುತ್ತಿದ್ದಾಗ, ಎನ್.ಹೆಚ್. ರಸ್ತೆ ಸುರಲ್ಪಾಡಿಯಲ್ಲಿ ದನವೊಂದು ಮಾರ್ಗದಲ್ಲಿ ಅಡ್ಡ ದಾಟುತ್ತಿದ್ದ ಸಮಯ ಮೋಟಾರು ಸೈಕಲನ್ನು ಒಮ್ಮೆಲೇ ಬಲಬದಿಗೆ ತಿರುಗಿಸಿದ ಪರಿಣಾಮ ಮೋಟಾರು ಸೈಕಲ್ ಸವಾರನ ಹತೋಟಿ ತಪ್ಪಿ ಸ್ಕಿಡ್ ಆಗಿ ರಸ್ತೆ ಬದಿಯ ಚರಂಡಿಯೊಳಗೆ ಬಿದ್ದು, ಸವಾರ ಸ್ಕೂಟರ್ ನಿಂದ ರಸ್ತೆಗೆ ಎಸೆಯಲ್ಪಟ್ಟು ಅವರ ತಲೆ ಹಾಗೂ ದೇಹದ ಇತರ ಭಾಗಕ್ಕೆ ತೀವ್ರ ಜಖಂಗೊಂಡು ಸ್ಮೃತಿ ಇಲ್ಲದೇ ಇದ್ದವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 21-03-2014 ರಂದು ಬೆಳಿಗ್ಗೆ 05-45 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.
10.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮಾರುತಿ ರವರ ಚಿಕ್ಕಮ್ಮನ ಮಕ್ಕಳಾದ ಶ್ರೀದೇವಿ 22 ವರ್ಷ ಮತ್ತು ಶರಣಪ್ಪ 18 ವರ್ಷ ಎಂಬವರು ದಿನಾಂಕ 21/03/2014 ರಂದು 18.00 ಗಂಟೆಗೆ ಕೆಲಸ ಮುಗಿಸಿ ತಮ್ಮ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ಮತ್ತು ರೇಣುಕಾ ಎಂಬವರೊಂದಿಗೆ ನಂಬ್ರ ನೋಂದಣಿಯಾಗದ ಹೊಸ ಅಟೋರಿಕ್ಷಾವೊಂದರಲ್ಲಿ ಬರುತ್ತಿರುವಾಗ ಮಂಗಳೂರು ತಾಲೂಕು ಅಡ್ಡೂರು ಗ್ರಾಮದ ಕಾಜಿಲ ಮಿತ್ರಕೋಡಿ ರಸ್ತೆಯ ಸಮೀಪ ತಲುಪುತ್ತಿದ್ದಂತೆ ಅಟೋರಿಕ್ಷಾ ಚಾಲಕನು ತನ್ನ ಬಾಬ್ತು ಅಟೋರಿಕ್ಷಾವನ್ನು ಇಳಿಜಾರು ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋದ ಪರಿಣಾಮ ಅಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಸುಮಾರು 100 ಅಡಿ ಆಳಕ್ಕೆ ಉರುಳಿ ಬಿದ್ದ ಪರಿಣಾಮ ರಿಕ್ಷಾದಲ್ಲಿದ್ದ ಶ್ರೀದೇವಿ ಎಂಬವರು ತೀವೃ ತರಹದ ಏಟಿನಿಂದ ಮೃತಪಟ್ಟಿರುವುದಾಗಿಯೂ, ಶರಣಪ್ಪ, ಶಿವಣ್ಣ, ರೇಣುಕಾ ಎಂಬವರಿಗೆ ಹಾಗೂ ಅಟೋರಿಕ್ಷಾ ಚಾಲಕನಿಗೂ ಗಾಯಗಳಾಗಿದ್ದು, ಮಂಗಳೂರು ಎಸ್.ಸಿ.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20.03.2014ರಂದು ಬೆಳಿಗ್ಗೆ 8.00 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಗಣೇಶ್ ರವರು ಅವರ ಪತ್ನಿ ಮತ್ತು ಮಕ್ಕಳು ಮನೆಗೆ ಬೀಗ ಹಾಕಿಕೊಂಡು ತಮ್ಮ ತಮ್ಮ ಕೆಲಸದ ನಿಮಿತ್ತಾ ಹೋಗಿದ್ದವರು ಸಂಜೆ ಸುಮಾರು 5.00 ಗಂಟೆಗೆ ಪಿರ್ಯಾಧಿದಾರರ ಮಗಳು ಗೀತಾ ಎಂಬವಳು ಶಾಲೆಯಿಂದ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲಿನ ಬೀಗವನ್ನು ಮುರಿದು ಮನೆಯೊಳಗಡೆ ಇದ್ದ ಕಪಾಟಿನ ಬೀಗವನ್ನು ತೆರೆದು ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿ ಬಿಸಾಡಿದಂತಿದೆ ಎಂಬುದಾಗಿ ದೂರವಾಣಿ ಮೂಲಕ ಪಿರ್ಯಾಧಿದಾರರಿಗೆ ತಿಳಿಸಿದಂತೆ ಸದ್ರಿಯವರು ಮನೆಗೆ ಅವರ ಪತ್ನಿಯ ಜೊತೆಯಲ್ಲಿ ಬಂದು ನೋಡಿದಾಗ ಮನೆಯಲ್ಲಿದ್ದ, 2 ಪವನು ಬಂಗಾರ ಉಂಗೂರ-1 , ¼ ಪವನು ತೂಕದ ಚೈನು-1, ¼ ತೂಕದ ಮದ್ಯದಲ್ಲಿ ಒಂದು ಹವಳ ಇರುವ 1 ಜೊತೆ ಕಿವಿ ಬೊಂಡೇಲೆ , ¼ ಪವನು ತೂಕದ 1 ಜೊತೆ ಕಿವಿಯ ಓಲೆ, ½ ಪವನು ತೂಕದ ಹವಳದ ಕಿವಿಯ ತಾಂಗು 1 ಜೊತೆ, ½ ಪವನು ತೂಕದ ಕಿವಿಯ ಓಲೆ 1 ಜೊತೆ, ½ ಪವನು ತೂಕದ ಕಿವಿಯ ಓಲೆ 1 ಜೊತೆ, ½ ಪವನು ತೂಕದ ಲೋಲಾಕು 1 ಜೊತೆ ¼ ಪವನು ತೂಕದ ಜುಮುಕಿ 1 ಜೊತೆ , ರೂಪಾಯಿ 5,000/- ನಗದು ಹಣ ಮತ್ತು 9632706462ನೇ ನಂಬ್ರದ ಮೊಡೆಲ್ ನಂಬ್ರ 2752 ಸ್ಯಾಮ್ ಸಂಗ್ ಮೊಬೈಲ್ ಪೋನ್ -1 ಅಂದಾಜು ಮೌಲ್ಯ 86,500/- ರೂಪಾಯಿ ಆಗಹಬುದು.
12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19.03.2014 ರಂದು 11.30 ಗಂಟೆಗೆ ಸರಿಪಳ್ಳ ಪೆದಮಲೆ ಎಂಬಲ್ಲಿ ಆರೋಪಿಗಳಾದ ಜೈಸನ್ ಮತ್ತು ಇತರರು ತಕ್ಷೀರು ಮಾಡುವ ಸಮಾನ ಉದ್ಧೇಶದಿಂದ ಒಟ್ಟು ಸೇರಿ ಪಿರ್ಯಾಧಿದಾರರಾದ ಶ್ರೀ ರತ್ನಾಕರ ರವರಿಗೆ ಸೇರಿದ ಕಂಪೌಂಡ್ ಗೋಡೆಯನ್ನು ಕೆಡವಿ ಹುಡಿ ಮಾಡುತ್ತಿರುವುದನ್ನು ಕಂಡು ಇದನ್ನು ತಡೆಯಲು ಬಂದ ಪಿರ್ಯಾಧಿದಾರ ಮತ್ತು ಅವರ ಪತ್ನಿಯನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾಧಿದಾರರ ಪತ್ನಿಯನ್ನು ಆರೋಪಿ ಜೈಸನ್ ರವರ ತಾಯಿ ದೂಡಿ ಹಾಕಿದ್ದಲ್ಲದೆ ಆರೋಪಿ ಜೈಸನ್ ಒಂದು ಕಲ್ಲಿನಿಂದ ಪಿರ್ಯಾದಿದಾರರ ತಲೆಗೆ ಕೈಗೆ ಎದೆಗೆ ಗುದ್ದಿ ಗಾಯಪಡಿಸಿದ್ದು ಮತ್ತು ಇತರ ಆರೋಪಿಗಳು ಪಿರ್ಯಾದಿದಾರರ ಪತ್ನಿ ಯಶೋಧ ರವರ ಮೂಗಿನ ಬಳಿ ಗುದ್ದಿ ಗಾಯಪಡಿಸಿದ್ದು ಪಿರ್ಯಾದಿದಾರರನ್ನು ಉದ್ದೇಶಿಸಿ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ.
No comments:
Post a Comment