Monday, March 17, 2014

Daily Crime Reports 17-03-2014

ದೈನಂದಿನ ಅಪರಾದ ವರದಿ.

ದಿನಾಂಕ 17.03.201409:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-02-1999 ರಂದು ಪಿರ್ಯಾದಿದಾರರಾದ ಶ್ರೀಮತಿ ಸುಜಾತಾ ರವರಿಗೆ ದೇರೆಬೈಲ್ ಚರ್ಚ್ ಹಾಲಿನಲ್ಲಿ ರವಿಪೊಜಾರಿಯೊಂದಿಗೆ ಮದುವೆಯಾಗಿದ್ದು, ಮದುವೆ ನಂತರ ಪಿರ್ಯಾದಿದಾರರು ತನ್ನ ಗಂಡನ ಮನೆಯಲ್ಲಿ ವಾಸವಾಗಿದ್ದು, ಆರೋಪಿ ಪಿರ್ಯಾದಿದಾರರನ್ನು ಅನಾವಶ್ಯಕವಾಗಿ ಹಿಂಸಿಸಿಅವ್ಯಾಚ್ಯ ಶಬ್ದಗಳಿಂದ ಬೈದು, ಹೊಡೆದು ಮಾನಸಿಕವಾಗಿ ಕಿರುಕುಳವನ್ನು ನೀಡಿ ನೀನು ಮನೆ ಬಿಟ್ಟು ಹೋಗು ಎಂದು ಮನೆಯ ಬಾಗಿಲನ್ನು ತೆರೆಯದೇ ಹಿಂಸೆ ನೀಡುತ್ತಿದ್ದರು. ದಿನಾಂಕ 15-03-2014 ರಂದು ಸಂಜೆ 7 ಗಂಟೆಗೆ ಪಿರ್ಯಾದಿದಾರರು ಮನೆಗೆ ಹೋದಾಗ ಬಾಗಿಲನ್ನು ತೆರೆಯದೇ ಇದ್ದಾಗ ಪಕ್ಕದ ಮನೆಯವರು ವಿಚಾರಿಸಿದ್ದಕ್ಕೆ ಬಾಗಿಲು ತೆರೆದು ನನ್ನ ಮೈ ಮೇಲೆ ಪೆಟ್ರೋಲ್ ಸುರಿದು, ಅವಾಚ್ಯ ಶಬ್ದಗಳಿಂದ ಬೈದು ಇವತ್ತು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 14.03.2014 ರಂದು ರಾತ್ರಿ 20.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಜಯರಾಮ್ ಸಿ.ಆರ್. ರವರು ಮಂಗಳೂರು ನಗರದ ಬಲ್ಲಾಳ್ ಭಾಗ್ ಬಳಿ ಇರುವ  ಪಿ.ಸಿ. ಜ್ಯುವೆಲ್ಲರ್ಸ್ ಎದುರು ರಸ್ತೆಯನ್ನು ದಾಟುವರೇ ಎಂದು ರಸ್ತೆಯ ಡಿವೈಡರ್ ಬಳಿ ನಿಂತುಕೊಂಡಿರುವಾಗ ಆರೋಪಿ ಮೋಟಾರು ಸೈಕಲ್ ಸವಾರ ಮೋಟಾರು ಸೈಕಲ್ ನಂಬ್ರ ಕೆಎ.19.ಆರ್.6818ನೇಯದನ್ನು ಸಾರ್ವಜನಿಕ ಕಾಂಕ್ರೀಟು ರಸ್ತೆಯಾದ ಲಾಲ್ ಭಾಗ್ - ಪಿ.ವಿ.ಎಸ್ ರಸ್ತೆಯಲ್ಲಿ ಲಾಲ್ ಭಾಗ್ ಕಡೆಯಿಂದ  ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಮೋಟಾರು ಸೈಕಲ್ ಸವಾರ  ರಸ್ತೆಗೆ ಬಿದ್ದುದರಿಂದ ಪಿರ್ಯಾದಿದಾರರಿಗೆ  ತಲೆಯ ಹಿಂದುಗಡೆ, ಬಲ ಕೈ ತಟ್ಟಿಗೆ ರಕ್ತಗಾಯ ಮತ್ತು ಬಲ ಕಾಲಿನ ಮೊಣ ಗಂಟಿಗೆ ಗುದ್ದಿದ ಗಾಯವಾಗಿರುತ್ತದೆ ಅಲ್ಲದೆ ಆರೋಪಿ ಬೈಕ್ ಸವಾರನಿಗೂ ಗಾಯವಾಗಿರುತ್ತದೆ. ಗಾಯಾಳು ಪಿರ್ಯಾದಿ ನಗರದ ಜ್ಯೋತಿ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ.

 

3.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14.03.2014  ರಂದು  ಸಂಜೆ  ಸಮಯ ಸುಮಾರು  4.45 ಗಂಟೆಗೆ  ಫಿರ್ಯಾದಿದಾರರಾದ  ಶ್ರೀ ಶಿವಾನಂದ  ಕಾಮತ್ ಇವರ ತಂದೆ ಧ್ರುವ  ಕಾಮತ್   ರವರು ತನ್ನ ಬಾಬ್ತು  ಕೆಎ  19 EA 1302ನೇ  ಆಕ್ಟಿವ್  ಹೊಂಡಾ  ಸ್ಕೂಟರ್ ನ್ನು  ತನ್ನ ಮನೆ ಕೆಂಚನಕೆರೆಯಿಂದ  ಮುಲ್ಕಿ ಕಡೆಗೆ  ಸವಾರಿ ಮಾಡಿಕೊಂಡು ಬರುತ್ತಿರುವಾಗ್ಗೆ  ಮಂಗಳೂರು ತಾಲೂಕು ಕಿಲ್ಪಾಡಿ  ಗ್ರಾಮದ  ಕೆಂಚನಕೆರೆ ತಿರುವು ರಸ್ತೆ ಬಳಿ  ಅತೀ ವೇಗ ಮತ್ತು ಅಜಾಗರೂಕತೆಯಿಂದ  ಸ್ಕೂಟರನ್ನು ಚಲಾಯಿಸಿಕೊಂಡು ಬಂದು   ಸ್ಕೂಟರನ್ನು ನಿಯಂತ್ರಿಸಲು ಸಾಧ್ಯವಾಗದೇ  ಸ್ಕಿಡ್ ಆಗಿ  ಸ್ಕೂಟರ್ ಸಮೇತ ರಸ್ತೆಗೆ  ಬಿದ್ದು ಪರಿಣಾಮ  ತಲೆಗೆ  ತೀವ್ರ ತರಹದ  ಗಾಯವಾಗಿ  ಚಿಕಿತ್ಸೆ  ಬಗ್ಗೆ  ಮಂಗಳೂರು ಎಜೆ ಆಸ್ಪತ್ರೆಗೆ  ದಾಖಲಾಗಿದ್ದು  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುವುದಾಗಿದೆ.

 

 

4.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-03-2014 ರಂದು ಪಿರ್ಯಾದಿದಾರರಾದ ಶ್ರೀ ಐವನ್ ಡಿ'ಸೋಜಾ ರವರು ಯವರು ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಘೋಷಣೆಯಾದ ಅಭ್ಯರ್ಥಿ ಮಾಜಿ ಕೇಂದ್ರ ಸಚಿವ ಶ್ರೀ ಬಿ. ಜರ್ನಾಧನ ಪೂಜಾರಿ ಯವರ ಬಗ್ಗೆ ಯಾರೋ ವ್ಯಕ್ತಿಗಳು ಅಂತರ್ ಜಾಲದ ಮಾಧ್ಯಮಗಳಾದ ಪೇಸ್ ಬುಕ್, ವಾಟ್ಸ್ ಆಪ್ ಮತ್ತು ಟ್ವಿಟರ್ ಗಳಲ್ಲಿ ಅವಹೇಳನಕಾರಿ ಸಂದೇಶಗಳನ್ನು ಭಿತ್ತರಿಸುವುದು ಸಾರ್ವಜನಿಕವಾಗಿ ಅವರ ಗೌರವಕ್ಕೆ ಚ್ಯುತಿ ತರುವಂತೆ ಹಾಗೂ ಭಾವಚಿತ್ರಿಗಳನ್ನು ತಿರುಚಿ ಪ್ರಕಟಿಸಿ ತಪ್ಪು ಕಲ್ಪನೆ ಮೂಡಿಸಿ ಮಾನಹಾನಿಕಾರವಾಗಿ  ಪ್ರಕಟಿಸಿ ಪ್ರಸಾರ ಮಾಡುತ್ತಿರುವವರ ಬಗ್ಗೆ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವರೇ ಪಿರ್ಯಾದಿ ನೀಡಿರುವುದಾಗಿದೆ.

 

5.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-03-2014 ರಂದು ಫಿರ್ಯಾದುದಾರರಾದ ಶ್ರೀ ಕೃಷ್ಣ ಮೂರ್ತಿಯವರು ರಾತ್ರಿ ತನ್ನ ಕೆಲಸದ ನಿಮಿತ್ತ ಕೂಳೂರು ಕಡೆಯಿಂದ ಪಣಂಬೂರು ಕಡೆಗೆ ನಡೆದುಕೊಂಡು ಹೋಗುತ್ತಾ ರಾತ್ರಿ ಸುಮಾರು 9-30 ಗಂಟೆಗೆ ಕೂಳೂರು ಸೇತುವೆಯ ಬಲಬದಿಯ ತುದಿಯಲ್ಲಿಗೆ ತಲುಪುವಾಗ್ಯೆ ಅವರ ಹಿಂದಿನಿಂದ ಅಂದರೆ ಕೂಳೂರು ಕಡೆಯಿಂದ ನಂಬರ್ ತಿಳಿಯದ ಮೋಟಾರು ಸೈಕಲ್ ನ್ನು ಅದರ ಸವಾರನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧುದಾರರ ಸೊಂಟದ ಎಡ ಬದಿಗೆ ತಾಗಿಸಿಕೊಂಡು ಮುಂದಕ್ಕೆ ಹೋದ ಪರಿಣಾಮ ಫಿರ್ಯಾಧುದಾರರು ರಸ್ತೆಗೆ ಬಿದ್ದು, ಅವರ ಸೊಂಟದ ಎಡಬದಿಯಲ್ಲಿ ಗುದ್ದಿದ ನೋವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರಿನ ಯೂನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಅಲ್ಲದೆ ಅಫಘಾತ ಪಡಿಸಿದ ಮೋಟಾರು ಸೈಕಲ್ ಸವಾರರು ತನ್ನ ಮೋಟಾರು ಸೈಕಲ್ ನ್ನು ನಿಲ್ಲಿಸದೆ ಫಿರ್ಯಾಧುದಾರರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡದೆ, ಪೊಲೀಸರಿಗೂ ಮಾಹಿತಿ ನೀಡದೆ ಪರಾರಿಯಾಗಿರುತ್ತಾರೆ.

 

6.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 9-03-2014 ರಂದು ಪಿರ್ಯಾದಿದಾರರಾದ ಶ್ರೀ ರಾಮ್ ಬಹೇತಿ ರವರು ತಮ್ಮ ಕಂಪೆನಿಯ ಕೋಲ್ ನ್ನು  ರೈಲ್ವೆ ರೇಕ್ ಟ್ರಾನ್ಸ್ ಪೋರ್ಟಿಂಗ್ ಮೂಲಕ ಕಳುಹಿಸಲು ಪೋರ್ಟ್ ಒಳಗೆ ಸ್ಟೋರ್ ಮಾಡಿ ಇಟ್ಟಿದ್ದನ್ನು ಹೊರಗಡೆ ತಂದಿದ್ದು ಅದರಲ್ಲಿ ಸುಮಾರು 400 ಟನ್ ಕೋಲ್ ನ್ನು ರೈಲ್ವೆ ಮಾರ್ಷಲಿಂಗ್ ಯಾರ್ಡ್ ಪಣಂಬೂರು ನಲ್ಲಿ  ಶೇಖರಿಸಿ ಇಟ್ಟಿದ್ದು . ಈ ಮೆಟೀರಿಯಲ್ ನ್ನು ಪೈಕಿ 20 ಟನ್ ಕೋಲ್  ನ್ನು ದಿನಾಂಕ 9-03-2014 ರ ರಾತ್ರಿ 23-00 ಗಂಟೆಯ ನಂತರ ಬೆಳಿಗ್ಗೆ 10-30 ಗಂಟೆ ಮದ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಅಂದಾಜು ಮೌಲ್ಯ 70,000/- ( ಎಪ್ಪತ್ತು ಸಾವಿರ ರೂಪಾಯಿ) .    ದಿನಾಂಕ 15-03-2014 ರಂದು ಬೆಳಿಗಿನ ಜಾವ 5-25 ಗಂಟೆ ಸಮಯಕ್ಕೆ ನಮ್ಮ ಸೆಕ್ಯೂರಿಟಿ ವಿಶ್ವನಾಥ ಮತ್ತು ರಾಜೇಶ್ ಹಾಗೂ  ಹ್ಯಾಂಡಲಿಂಗ್ ಮ್ಯಾನೇಜರ್ ಲೋಹಿತ್ ರವರು ಪೋರ್ಟ್  ಒಳಗೆ ಹೋಗಿದ್ದವರು , ಸ್ಟೋರ್ಡ್ ಮೆಟೀರಿಯಲ್ ಇದ್ದ ಸ್ಥಳಕ್ಕೆ ಬರುತ್ತಿದ್ದಾಗ ಭಾರತ್ ಬೆನ್ಸ್ ಕಂಪನಿ ಎಂದು ಹೆಸರಿದ್ದ ಕೆಎ-19-ಎಎ-2831 ಲಾರಿಗೆ ನಂಬರ್ ಹಾಕಿರದ ಜೆಸಿಬಿ ಒಂದರಲ್ಲಿ ನಮ್ಮ ಕಂಪೆನಿಯ ಸುಮಾರು 10 ಟನ್ ಕೋಲ್ ಕಳವು ಮಾಡಿರುತ್ತಾರೆ. ಇದರ ಅಂದಾಜು ಮೌಲ್ಯ 35,000/-  ಆಗಿರುತ್ತದೆ. ದಿನಾಂಕ 9-03-2014 ರಂದು ಮತ್ತು ಇವತ್ತು ಕೂಡ  ಕಳವಾದ ನಮ್ಮ ಕಂಪೆನಿಯ ಕೋಲ್  ಒಟ್ಟು 30 ಟನ್ ಅಂದಾಜು ಮೌಲ್ಯ 1,05,000 ( ಒಂದು ಲಕ್ಷ ಐದು ಸಾವಿರ ) ಆಗಿರುತ್ತದೆ. ಕೆಎ-19-ಎಎ-2831 ಲಾರಿ ಚಾಲಕ ಹಾಗೂ ಜೆಸಿಬಿ ಆಪರೇಟರ್ ಮತ್ತು ಕೆಎ-19-ಎಎ-2831 ಲಾರಿ ಮಾಲಕ , ಜೆಸಿಬಿ ಮಾಲಕ ಹಾಗೂ ಇತರರರು ಸೇರಿ ಕಂಪೆನಿಯ ಕೋಲ್ ಮೆಟೀರಿಯಲ್ ನ್ನು ಅಪ್ರಾಮಾಣಿಕ ರೀತಿಯಿಂದ ಕಳವು ಮಾಡಿರುತ್ತಾರೆ.

 

7.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮಲ್ಲಣ್ಣ ಗೊಡಾ ಹೆಚ್. ಬಿರದಾರ್ ರವರು ಕೆಎಸ್ ಆರ್ ಟಿಸಿ ನೋರ್ತ್ ಈಸ್ಟ್ ಸಂಸ್ಥೆಯಲ್ಲಿ ಕಂಟ್ರೋಲರ್ ಆಗಿ ಉದ್ಯೋಗದಲ್ಲಿ ಇದ್ದವರು ವಯೋ ನಿವೃತ್ತಿ ಹೊಂದಿದ ನಂತರ ಸಿಕ್ಕಿದ ಹಣವನ್ನು ಮತ್ತು ಸಾಲವಾಗಿ ಪಡೆದುಕೊಂಡಿದ್ದ ಹಣವನ್ನು ಒಟ್ಟು 25 ಲಕ್ಷ ರೂಪಾಯಿ ಹಣವನ್ನು ಆರೋಪಿತರುಗಳ ಆದರ್ಶ್ ಎಂಟರ್ ಪ್ರೈಸಸ್ ಎಂಬ ಕಂಪೆನಿಯಲ್ಲಿ ಮಾರ್ಬಲ್ ಬಿಸಿನೆಸ್ ಮಾಡಲು ಪಿರ್ಯಾದಿದಾರರ ಮಗ ಆನಂದನನ್ನು ಅದರಲ್ಲಿ ಪಾರ್ಟ್ನರ್ ಶಿಪ್ ಮಾಡುವ ಸಲುವಾಗಿ 2010ನೇ ವರ್ಷದ ಕೊನೆಯಲ್ಲಿ ಕೊಟ್ಟಿರುತ್ತಾರೆ. ಆರೋಪಿತರಾದ ವಿನಿಶ್ & ನಿತೀಶ್ ಎಂಬವರು ಪಿರ್ಯಾದಿದಾರರ ಮಗನನ್ನು ಮತ್ತು ಪಿರ್ಯಾದಿದಾರರು ನೀಡಿದ ಹಣವನ್ನು ವಾಪಾಸು ನೀಡದೇ ಆದರ್ಶ್ ಎಂಟರ್ ಪ್ರೈಸಸ್ ಎಂಬ ನಕಲಿ ಕಂಪೆನಿಯ ಹೆಸರನ್ನು ಸೃಷ್ಟಿಸಿ, ವಿಶ್ವಾಸದಿಂದ ಹಣ ಪಡೆದುಕೊಂಡು ವಿಶ್ವಾಸ ದ್ರೋಹ ಎಸಗಿ ಹಣ ಪಾವತಿಸದೇ ಮೋಸ ಮಾಡುವ ಉದ್ದೇಶದಿಂದ ನಂಬಿಕೆ ದ್ರೋಹ ಎಸಗಿ ವಂಚನೆ ಮಾಡಿರುತ್ತಾರೆ. ಅಲ್ಲದೇ ದಿನಾಂಕ: 04-03-14ರಂದು ಆರೋಪಿ ನಿತೀಶ್ ಮತ್ತು ಇತರರು ಪಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿ ತೊಂದರೆ ಉಂಟು ಮಾಡಿರುತ್ತಾರೆಇತರ ಆರೋಪಿಗಳು ಕೂಡ ಆರೋಪಿತರ ಕೃತ್ಯಕ್ಕೆ ಸಹಕರಿಸಿರುತ್ತಾರೆ.

 

8.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸುರೇಶ್ ಆಚಾರ್ಯ ರವರು ಮಂಗಳೂರು ಸಿಟಿ ಸೆಂಟರ್ ಮಾಲ್ ನ ನೆಲಮಹಡಿಯಲ್ಲಿರುವ ರಿಯಲನ್ಸ್ ರಿಟೈಲ್ ಲಿಮಿಟೆಡ್ ಶೋರೂಮ್ ನ ಮ್ಯಾನೇಜರ್ ಆಗಿದ್ದು, ದಿನಾಂಕ 14-03-2014 ರಂದು ಮದ್ಯಾಹ್ನ ಸುಮಾರು 12:50 ಗಂಟೆಗೆ ಓರ್ವ ಗಂಡಸು ಮತ್ತು ಇಬ್ಬರು ಹೆಂಗಸರು ಚಿನ್ನಾಭರಣ ಖರೀದಿಸಲು ಶೋ ರೂಮ್ ಗೆ ಬಂದಿದ್ದು, ಸೇಲ್ಸ್ ಎಕ್ಸಿಕ್ಯೂಟಿವ್ ರವರಲ್ಲಿ ಚಿನ್ನದ ಬಳೆಗಳನ್ನು ತೋರಿಸುವಂತೆ ಕೇಳಿದ್ದು, ಅದರಂತೆ ಸೇಲ್ಸ್ ಎಕ್ಸಿಕ್ಯೂಟಿವ್ ಚಿನ್ನದ ಬಳೆಗಳ ಕೌಂಟರ್ ಗೆ ಕರೆದುಕೊಂಡು ಹೋಗಿ ಟ್ರೇಯನ್ನು ತೆಗೆದು ಚಿನ್ನದ ಬಳೆಗಳನ್ನು ತೋರಿಸಿದ್ದುಸುಮಾರು 5 ನಿಮಿಷಗಳ ನಂತರ ಚಿನ್ನದ ಬೆಲೆ ಮತ್ತು ಡಿಸೈನ್ ಗಳ ಬಗ್ಗೆ ಮಾಹಿತಿ ಕೇಳಿದ್ದು, ನಂತರ ತಮಗಾಗುವ ಗಾತ್ರದ ಬಳೆ ಇಲ್ಲ ಎಂದು ಹೇಳಿ ಹೆಸರು ಮತ್ತು ದೂರವಾಣಿ ನಂಬ್ರ ನೀಡಿ ಚಿನ್ನಾಭರಣ ಖರೀದಿಸದೇ ಹೊರಟು ಹೋಗಿದ್ದು, ನಂತರ ವಾಪಾಸ್ಸು ಬಂದಿರುವುದಿಲ್ಲ. ರಾತ್ರಿ ಸಮಯ 8:30 ಗಂಟೆಗೆ ಅಂಗಡಿ ಮುಚ್ಚುವ ಸಮಯ ದಿನದ ವಹಿವಾಟು ಮತ್ತು ಸ್ಟಾಕ್ ಪರಿಶಶೀಲಿಸುವ ಸಮಯ 4 ಬಳೆಗಳು ವ್ಯತ್ಯಾಸ ಕಂಡು ಬಂದಿದ್ದು, ಸಿಸಿ ಟಿವಿಯ ದೃಶ್ಯಾವಳಿಗಳನ್ನು ಪರಿಶೀಲಿಸಿಕೊಂಡಾಗ ಮದ್ಯಾಹ್ನ ಗ್ರಾಹಕರ ಸೋಗಿನಲ್ಲಿ ಬಂದ  ಓರ್ವ ಗಂಡಸು ಮತ್ತು ಇಬ್ಬರು ಹೆಂಗಸರು ಸಮಯ ಸುಮಾರು 12:56 ಗಂಟೆಗೆ ಸೇಲ್ಸ್ ಎಕ್ಸಿಕ್ಯೂಟಿವ್ ರವರ ಗಮನಕ್ಕೆ ಬಾರದಂತೆ 4 ಚಿನ್ನದ ಬಳೆಗಳನ್ನು ಕಳವು ಮಾಡಿದ್ದು, ಕಳವು ಮಾಡಿದ 4 ಚಿನ್ನದ ಬಳೆಗಳು ಒಟ್ಟು 49.28 ಗ್ರಾಂ ಆಗಿದ್ದು, ಅಂದಾಜು ಬೆಲೆ ರೂ. 1,69,341.00 ಆಗಿದ್ದು, ಆರೋಪಿತರಲ್ಲಿ ಗಂಡಸು ಸುಮಾರು 30 ವರ್ಷ ಪ್ರಾಯದವನಾಗಿದ್ದು, ಒರ್ವಳು ಸಾಧಾರಣ ಮೈಕಟ್ಟು ಹೊಂದಿದ್ದು, ಕಪ್ಪು ಸೀರೆ ಧರಿಸಿದ್ದು, ಸುಮಾರು 35 ವರ್ಷ ಪ್ರಾಯದವಳಾಗಿದ್ದು, ಇನ್ನೊರ್ವಳು ಸಾಧಾರಣ ಮೈಕಟ್ಟು ಹೊಂದಿದ್ದು, ಸೀರೆ ಧರಿಸಿದ್ದು, ಸುಮಾರು 35 ರಿಂದ 40 ವರ್ಷ ಪ್ರಾಯದವರಾಗಿರುತ್ತಾರೆ.

 

9.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-03-2014 ರಂದು ಪಿರ್ಯಾದುದಾರರಾದ ಶ್ರೀ ತಂಝೀಲ್ ರವರು ತನ್ನ ತಮ್ಮ ಅಬ್ದುಲ್ಸತ್ತಾರ್ರವರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್ನಂಬ್ರ ಕೆಎ 19 ಡಬ್ಲ್ಯೂ 4456 ನೇದರಲ್ಲಿ ಸಹ ಸಹಸವಾರನಾಗಿ ಕುಳಿತುಕೊಂಡು ಕೊಣಾಜೆ ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಾ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಬೆಳಿಗ್ಗೆ 10-30 ಗಂಟೆ ಸಮಯಕ್ಕೆ ತಲುಪುತ್ತಿದ್ದಂತೆ ಅವರ ಎದುರಿನಿಂದ ಓಮಿನಿ ಕಾರನ್ನು ಅದರ ಚಾಲಕ ಸಂಪೂರ್ಣ ರಾಂಗ್ಸೈಡಿನಿಂದ ಬಂದು ಪಿರ್ಯಾದುದಾರರ ಬಲಕಾಲಿಗೆ ಡಿಕ್ಕಿ ಹೊಡೆದುದರಿಂದ, ಅವರ ಬಲ ಕಾಲಿನ ಮೂಳೆ ಮುರಿತವಾಗಿರುತ್ತದೆ. ಬಲಕೈಯ ಎರಡು ಬೆರಳುಗಳಿಗೆ ತರಚಿದ ಗಾಯವಾಗಿರುತ್ತದೆ. ಮೋಟಾರು ಸೈಕಲ್ಜಖಂಗೊಂಡಿರುತ್ತದೆ. ಅಪಘಾತ ನಡೆಸಿದ ಒಮಿನಿ ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಗಾಯಗೊಂಡ ಪಿರ್ಯಾದುದಾರರು ಯೆನೆಫೋಯ ಮೆಡಿಕಲ್ಕಾಲೇಜು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ.

 

10.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-03-2014 ರಂದು ಅರ್ಕುಳ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀಮತಿ ರಹಮ್ಮತ್ ರವರು ತನ್ನ ಮಾವ ಮೃತಪಟ್ಟಿದ್ದರಿಂದ, ಸದ್ರಿ ಮನೆಗೆ ಭೇಟಿ ನೀಡಿ ಬಳಿಕ ತನ್ನ ಮನೆಗೆ ಹೋಗುವರೇ ರಾತ್ರಿ ಸುಮಾರು 8-30 ಗಂಟೆ ವೇಳೆಗೆ ಅರ್ಕುಳ ದ್ವಾರದ ಬಳಿ ಮಂಗಳೂರಿಗೆ ಬರುವ ಬಸ್ಸಿಗಾಗಿ ರಾ.ಹೆ 73 ನೇ ರಸ್ತೆಯನ್ನು ದಾಟುತ್ತಿದ್ದಾಗ, ಬಿಸಿ ರೋಡ್ಕಡೆಯಿಂದ ಮಂಗಳೂರು ಕಡೆಗೆ KA 19 EF 3028 ನೇ ಆಕ್ಟೀವಾ ಸ್ಕೂಟರನ್ನು ಅದರ ಸವಾರ ರಿಜ್ವಾನ್ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ತಲೆಯ  ಎಡ ಭಾಗಕ್ಕೆ ರಕ್ತಗಾಯ, ಎದೆಯ ಎಡ ಭಾಗಕ್ಕೆ ಗುದ್ದಿದ ಗಾಯ, ಶರೀರದ ಅಲ್ಲಲ್ಲಿ ತರಚಿದ ಗಾಯ ಹಾಗೂ ಮೋಟಾರ್ಸೈಕಲಿನ ಹಿಂಭಾಗದಲ್ಲಿ ಕುಳಿತ್ತಿದ್ದ ಅಬ್ದುಲ್ಹಮೀದ್ಎಂಬವರಿಗೆ ಎಡಕಾಲಿನ ಪಾದಕ್ಕೆ ರಕ್ತಗಾಯವಾಗಿರುತ್ತದೆ.

No comments:

Post a Comment