ದೈನಂದಿನ ಅಪರಾದ ವರದಿ.
ದಿನಾಂಕ 09.03.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 2 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02/03/2014 ರಂದು ಮುಂಜಾನೆ 00:15 ಗಂಟೆಗೆ ಮೋಟರ್ ಸೈಕಲ್ ನಂಬ್ರ KA-20-J-2664 ಅದರ ಸವಾರ ನಿತಿನ್ ಕುಮಾರ ಎಂಬುವರು ಅಶೋಕ ಕುಮಾರ ಎಂಬುವರನ್ನು ಹಿಂಬದಿ ಸವಾರರಾಗಿ ಕುಳ್ಳಿರಿಸಿಕೊಂಡು PVS ಕಡೆಯಿಂದ ಬಂಟ್ಸ ಹಾಸ್ಟೆಲ್ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಬಂದು VRL ಬಸ್ಸು ಕಛೆರಿ ಎದುರು ತಲುಪುವಾಗ ಬಂಟ್ಸ ಹಾಸ್ಟೆಲ್ PVS ಕಡೆಗೆ ಬರುತ್ತಿದ್ದ ಮೋ, ಸೈಕಲ್ ನಂಬ್ರ KA-18-W-6077 ನೇ ದ ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಎರಡು ಮೋಟರ್ ಸೈಕಲ್ ಸವಾರರು ರಸ್ತೆಗೆ ಬಿದ್ದು ನಿತಿನಕುಮಾರ ಮತ್ತು ಅಶೋಕ ಕುಮಾರ ಅವರಿಗೆ ಗಂಭಿರ ಸ್ವರೂಪದ ಗಾಯ ಹಾಗೂ ಅರ್ಪಿತ್ ಮತ್ತು ಅತುಲ ಅನಿಲರಾವ್ ರವರಿಗೆ ಸಾದಾ ಸ್ವರೂಪದ ಗಾಯ ಉಂಟಾಗಿರುತ್ತದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ವಾಲ್ಟರ್ ಸ್ಟೀಪನ್ ಮೆಂಡೀಸ್ ಇವರು ಭಾರತ್ ಮಾತಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಇದರ ಮ್ಯಾನೇಜಿಂಗ್ ಟ್ರಸ್ಟಿ ಆಗಿದ್ದು 1ನೇ ಆರೋಪಿ ಜೆ.ಬಿ ಸಿಕ್ವೇರಾ ಇವರು ಟ್ರಸ್ಟ್ ನ ಅಧ್ಯಕ್ಷರಾಗಿರುತ್ತಾರೆ. 2ನೇ ಆರೋಪಿ ಸ್ಟೀವನ್ ರಾಜೇಂದ್ರಾ ಸಿಕ್ವೇರಾ ಸದ್ರಿ ಟ್ರಸ್ಟಿನ ಅಜೀವ ಸದಸ್ಯರಾಗಿರುತ್ತಾರೆ. ಸದ್ರಿ ಟ್ರಸ್ಟ್ ನ ಅಡಿಯಲ್ಲಿ ಕಿನ್ನಿಗೋಳಿಯ ಲಾರೆನ್ಸ್ ಇಂಡಿಯನ್ ಸ್ಕೂಲ್ ಹಾಗೂ ಗುರುಪುರ ಕೈಕಂಬದ ಅವರ್ ಲೇಡಿ ಆಫ್ ಪಾಂಪೆ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಡೆಸುತ್ತಿದ್ದು ,ಸದ್ರಿ ಎರಡು ಶಾಲೆಯ ಸಂಪೂರ್ಣ ಮ್ಯಾನೆಜ್ ಮೆಂಟ್ ಮತ್ತು ಅಭಿವೃದ್ದಿಯ ಬಗ್ಗೆ ಫಿರ್ಯಾದಿದಾರರು ದಿನಾಂಕ 8.10.2013 ರ ಕರಾರು ಪತ್ರದಂತೆ ಅಧಿಕಾರ ಪಡೆದಿದ್ದು, ಸದ್ರಿ ಅಧಿಕಾರದ ಆಧಾರದಲ್ಲಿ ಶಾಲೆಯ ಅಭಿವೃದ್ದಿಗೆ ಬೇಕಾದ ರೂ 5 ಕೋಟಿ ಹೊಂದಿಸುವ ಜವಾಬ್ದಾರಿಯನ್ನು ಸಹ ಹೊಂದಿದ್ದು ಇದರಂತೆ ಈಗಾಗಲೇ ಶಾಲೆಯ ಅಭಿವೃದ್ದಿಗಾಗಿ ಅನೇಕ ಕಾಮಗಾರಿಯನ್ನು ನಡೆಸಿರುತ್ತಾರೆ. ಸದ್ರಿ ಟ್ರಸ್ಟ್ ನ ದಿನಾಂಕ 23.10.2013 ರ ನಿರ್ಣಯದಂತೆ ಶಾಲೆಯ ಹೊಸಕಟ್ಟಡದ ನಿರ್ಮಾಣಕ್ಕಾಗಿ ಚದರ್ ಅಡಿಗೆ ರೂ 2000/- ರಂತೆ ಪ್ರಕರಣದ ಫಿರ್ಯಾದಿದಾರರಿಗೆ ಅಧಿಕಾರ ನೀಡಿದ್ದು ಅದರಂತೆ ಈಗಾಗಲೇ 10,000/- ಚದರ್ ಅಡಿ ಶಾಲಾ ಕಟ್ಟಡ ಕಾಮಗಾರಿ ನಿರ್ಮಾಣಗೊಂಡು ಈಗಲೂ ಕಾಮಗಾರಿ ನಡೆಯುತ್ತಿದ್ದು, ಆದರೆ ಟ್ರಸ್ಟ್ ನ ಅಧ್ಯಕ್ಷರಾಗಿರುವ ಆರೋಪಿ 1ನೇಯವರು ಮೋಸ ಮಾಡುವ ಉದ್ದೇಶದಿಂದ ಶಾಲೆಗೆ ಸೇರಿದ ಜಾಗದ ಲೀಸ್ ಅನ್ನು ದಿನಾಂಕ 7.1.2014 ರಂದು ರದ್ದುಪಡಿಸಿ ಸದ್ರಿ ಶಾಲೆಯನ್ನು ಮಾರಾಟ ಮಾಡುವ ಬಗ್ಗೆ ಉದಯವಾಣಿ ಹಾಗೂ ವಿಜಯವಾಣಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದು ಆರೋಪಿತರು ಟ್ರಸ್ಟ ಮತ್ತು ಫಿರ್ಯಾದಿದಾರರಿಗೆ ಮೋಸ ವಂಚನೆ ಮಾಡುವ ಉದ್ದೇಶದಿಂದ ಕಾರ್ಯಪ್ರವೃತ್ತರಾಗಿದ್ದು ಅಲ್ಲದೇ ಟ್ರಸ್ಟಿನ ಲೆಕ್ಕ ಪತ್ರವನ್ನು ಸರಿಯಾಗಿ ತೋರಿಸದೇ ರೂಪಾಯಿ 20 ಲಕ್ಷಕ್ಕಿಂತಲೂ ಅಧಿಕ ಹಣವನ್ನು ಸ್ವಂತಕ್ಕೆ ಬಳಸಿ ದುರ್ಬಳಕೆ ಮಾಡಿ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುತ್ತಾರೆ. 1 ಮತ್ತು 2ನೇ ಆರೋಪಿತರು ಸದ್ರಿ ಟ್ರಸ್ಟಿಗೆ ಹಾಗೂ ಕಿನ್ನಿಗೋಳಿಯ ಲಾರೆನ್ಸ್ ಇಂಡಿಯನ್ ಸ್ಕೂಲ್ ಗೆ ಸಂಬಂಧಪಟ್ಟಂತ ದಾಖಲಾತಿ ಹಾಗೂ ಟ್ರಸ್ಟಿನ ನಿರ್ಣಯ ಪುಸ್ತಕವನ್ನು ಅನುಮತಿ ಇಲ್ಲದೇ ಕಾನೂನುಬಾಹಿರವಾಗಿ ಕೊಂಡುಹೋಗಿರುತ್ತಾರೆ. ಆರೋಪಿ ಜೆ.ಬಿ ಸಿಕ್ವೇರಾರವರು ತನ್ನ ಮಗ ಸ್ಟೀವನ್ ರಾಜೇಂದ್ರ ಸಿಕ್ವೇರಾ ಇವರೊಂದಿಗೆ ಸೇರಿಕೊಂಡು ಫಿರ್ಯದಿದಾರರಿಗೆ ನಂಬಿಕೆ ದ್ರೋಹ ಹಾಗೂ ಮೋಸ ಮಾಡುವ ಉದ್ದೇಶದಿಂದ ಈ ತಕ್ಷೀರನ್ನು ಮಾಡಿರುವುದಾಗಿದೆ.
3.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:24-02-2014 ರಂದು ಬೆಳಿಗ್ಗೆ 9-30 ಗಂಟೆಯಿಂದ ದಿನಾಂಕ: 07-03-2014ರಂದು 17-00 ಗಂಟೆಯ ಮಧ್ಯೆ ಯಾರೋ ಕಳ್ಳರು ಫಿರ್ಯಾದಿದಾರರಾದ ಶ್ರೀ ವಿಠಲ ಬಿ. ರವರ ಆರ್.ಸಿ ಮಾಲಕತ್ವದ 2003ನೇ ಮೋಡಲ್ ನ ಆರೋಂಜ್ ಮೆಟಾಲಿಕ್ ಬಣ್ಣದ ಅಂದಾಜು ರೂ.33,886/- ಮೌಲ್ಯದ HERO HONDA ಕಂಪೆನಿಯ PLEASURE ದ್ವಿಚಕ್ರ ವಾಹನವನ್ನು ಮನೆಯ ಕಂಪೌಂಡ್ ನಲ್ಲಿ ಪಾರ್ಕ್ ಮಾಡಿ ಇಟ್ಟಿರುವುದನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ದ್ವಿಚಕ್ರ ವಾಹನದ ಟೂಲ್ಸ್ ಬಾಕ್ಸ್ ನಲ್ಲಿ ದ್ವಿಚಕ್ರ ವಾಹನಕ್ಕೆ ಸಂಬಂಧಪಟ್ಟ ಆರ್.ಸಿ., ಇನ್ಶೂರೆನ್ಸ್ ನ ಝೆರಾಕ್ಸ್ ಪ್ರತಿಗಳು ಕೂಡಾ ಇರುತ್ತದೆ.
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-03-2014 ರಂದು ಬೆಳಿಗ್ಗೆ ಸುಮಾರು 08-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಶರತ್ ಕುಮಾರ್ ರವರು ತಮ್ಮ ಬಾಬ್ತು ಕೆ ಎ-19-ಎ-9169 ನೇ ಆಟೊ ರಿಕ್ಷಾ ವನ್ನು ಸುರತ್ಕಲ್ ಅಕ್ಷಯ ಹೋಟೆಲ್ ಎದುರು ಪ್ಲೈ ಓವರ್ ನ ಕೆಳಗಡೆ ನಿಲ್ಲಿಸಿ ಮಂಗಳೂರಿಗೆ ತೆರಳಿ ಸಂಜೆ ಸುಮಾರು 5-15 ಗಂಟೆಗೆ ವಾಪಾಸು ಬಂದು ನೋಡಿದಾಗ ಸದ್ರಿ ಸ್ಥಳದಲ್ಲಿ ಆಟೋ ರಿಕ್ಷಾ ಇಲ್ಲದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಆಟೋ ರಿಕ್ಷಾದ ಅಂದಾಜು ಮೌಲ್ಯ ಸುಮಾರು 30,000/- ಆಗಬಹುದು.
5.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಪ್ರಮೀಳಾ ರವರ ಗಂಡ ಕೃಷ್ಣ ಪೂಜಾರಿ ಎಂಬವರು ಮಂಗಳೂರು ಉರ್ವದಲ್ಲಿರುವ ಸ್ವಸ್ಥಿಕ್ ಗ್ಯಾಸ್ ಏಜೇನ್ಸಿ ಯಲ್ಲಿ ಗ್ಯಾಸ್ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದು ದಿನಾಂಕ 06-03-2014 ರಂದು ಬೆಳಿಗ್ಗೆ 06-30 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋದವರು ಈ ತನಕ ಮನೆಗೆ ಬಾರದೇ ಇದ್ದುದರಿಂದ ಈ ಬಗ್ಗೆ ಸ್ವಸ್ಥಿಕ್ ಗ್ಯಾಸ್ ಏಜೆನ್ಸಿಯಲ್ಲಿ ವಿಚಾರಿಸಿದಲ್ಲಿ ಸದ್ರಿಯವರು ಕೆಲಸಕ್ಕೆ ಬಂದಿರುವುದಿಲ್ಲ ಎಂಬುದಾಗಿ ತಿಳಿಸಿದ್ದು ಸಂಬಂದಿಕರಲ್ಲಿ ಹಾಗೂ ಇತರೆ ಎಲ್ಲಾ ಕಡೆಗಳಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು ಕಾಣೆಯಾಗಿರುವುದಾಗಿದೆ. ಕಾಣೆಯಾದವರ ಚಹರೆ: ಹೆಸರು: ಕೃಷ್ಣ ಪ್ರಸಾದ್, ಪ್ರಾಯ: 36 ವರ್ಷ. ಬಣ್ಣ: ಎಣ್ಣೆ ಕಪ್ಪು ಮೈ ಬಣ್ಣ, ಧರಿಸಿರುವ ಬಟ್ಟೆ: ಹಳದಿ ಮಿಶ್ರಿತ ಬಿಳಿ ಬಣ್ಣದ ಚೌಕಳಿ ಇರುವ ಉದ್ದ ತೋಳಿನ ಶರ್ಟ್ ಹಾಗೂ ಕಂದು ಬಣ್ಣದ ಪ್ಯಾಂಟ್, ಗುಂಗುರು ಕೂದಲು, ಗಡ್ಡ ಬಿಟ್ಟಿರುತ್ತಾರೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06.03.2014 ರಂದು ರಾತ್ರಿ ಸುಮಾರು 09.30 ಗಂಟೆಯಿಂದ ದಿನಾಂಕ: 07.03.2014 ರ 07.30 ಗಂಟೆಯ ಮಧ್ಯಾವಧಿಯಲ್ಲಿ ಮಂಗಳೂರು ನಗರದ ಜಪ್ಪಿನಮೊಗರು ಗ್ರಾಮದ ಕಡೆಕಾರ್ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀಮತಿ ರೇಶ್ಮಾ ಡಿ'ಸೋಜಾ ಎಂಬವರ ಬಾಬ್ತು ಮಾರುತಿ ಓಮ್ನಿ ಕಾರು ನಂಬ್ರ: KA19MC8040 ರ ಡಿಸ್ಕ್ ಸಮೇತ ನಾಲ್ಕು ಟಯರ್‌ಗಳು ಮುಂಭಾಗದ ಗ್ಲಾಸ್ ಹಾಗೂ ಚಾಲಕ ಹಾಗೂ ಚಾಲಕರ ಬಲಾಭಾಗದಲ್ಲಿರುವ ಎರಡೂ ಸೀಟುಗಳನ್ನು ಯಾರೋ ಕಳ್ಳರು ಕಳಚಿಕೊಂಡು ಕಳವುಮಾಡಿಕೊಂಡು ಹೋಗಿರುವುದಾಗಿಯೂ ಕಳವಾದ ಸೊತ್ತುಗಳ ಅಂದಾಜು ಮೌಲ್ಯ ರೂ 40000/- ಆಗಬಹುದು.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07.03.2014 ರಂದು ರಾತ್ರಿ ಸುಮಾರು 23.30 ಗಂಟೆಯಿಂದ ದಿನಾಂಕ: 08.03.2014 ರಂದು ಮುಂಜಾನೆ ಸುಮಾರು 03.30 ಗಂಟೆಯ ಮಧ್ಯಾವಧಿಯಲ್ಲಿ ಈ ಪ್ರಕರಣದ ಪಿರ್ಯಾಧಿದಾರರಾದ ಶ್ರೀ ನಿಶಾನ್ ಮತ್ತು ಅವರ ಮಿತ್ರರರು ಹಾಗೂ ಸಹೋದ್ಯೋಗಿಗಳಾದ ರಾಜೇಶ್ ಮತ್ತು ಸಿನಾನ್ ಎಂಬವರುಗಳು ಉಳಕೊಳ್ಳುವ ಮಂಗಳೂರು ನಗರದ ಕಣ್ಣೂರು ಎಂಬಲ್ಲಿರುವ ಹೈಸಮ್ ಸ್ಟೀಲ್ ಕಂಪೆನಿಯ ಪಕ್ಕದಲ್ಲಿದ್ದ ಅದೇ ಕಂಪೆನಿಗೆ ಸೇರಿದ ರೂಮ್ನೊಳಗಡೆ ಯಾರೋ ಕಳ್ಳರು ಬಾಗಿಲಿನ ಚಿಲಕವನ್ನು ಕೋಲಿನಲ್ಲಿ ತೆಗೆದು ಒಳಪ್ರವೇಶಿಸಿ ಮರದ ಬಾಗಿಲಿನಲ್ಲಿಯೇ ಇದ್ದ ಬೀಗದ ಕೀಯನ್ನೇ ಉಪಯೋಗಿಸಿ ಬಾಗಿಲು ತೆರೆದು ಕಪಾಟ್ನಲ್ಲಿ ಇಟ್ಟಿದ್ದ ಒಟ್ಟು 1,17000/- ರೂ ನಗದು ಹಣವನ್ನು ಮತ್ತು ಸ್ಯಾಮ್‌ಸಂಗ್ ಕಂಪೆನಿಯ- 3 ಮೊಬೈಲ್ , ನೋಕಿಯಾ ಕಂಪೆನಿಯ-1 ಮೊಬೈಲ್ ಹಾಗೂ ಹೆಚ್ಟಿಸಿ ಕಂಪೆನಿಯ-1 ಮೊಬೈಲ್ ಒಟ್ಟು-5 ಮೊಬೈಲ್ ಹ್ಯಾಂಡ್ಸೆಟ್ ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿಯೂ ಕಳವಾದ ಮೊಬೈಲ್ ಹ್ಯಾಂಡ್‌ಸೆಟ್‌ಗಳ ಅಂದಾಜು ಮೌಲ್ಯ ಸುಮಾರು 35000/- ರೂಪಾಯಿ ಆಗಿದ್ದು ನಗದು ಹಣ ಹಾಗೂ ಮೊಬೈಲ್ ಸೆಟ್‌ಗಳ ಒಟ್ಟು ಮೌಲ್ಯ 1,52,000/- ರೂಪಾಯಿ ಆಗಬಹುದು.
No comments:
Post a Comment