ದಿನಾಂಕ 04.03.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 3 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 4 |
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-03-2014ರಂದು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗಮಹಲ ಜಂಕ್ಷನ್ ಬಳಿ ಇರುವ ವಿಶ್ವಕಿರಣ ವೈನ್ಶಾಪ್‌ನಿಂದ ಬಿರ್ ಖರೀದಿಸಿ ಹೊರಹೋಗುತ್ತಿದ್ದ ಪ್ರದೀಪ್ ಎಂಬಾತನಿಗೂ ಅದೇ ವೇಳೆಗೆ ಒಳಬರುತ್ತಿದ್ದ ಓರ್ವ ಅಳಕೆಯ ಕಪ್ಪನೆಯ ವ್ಯಕ್ತಿಗು ಮಾತುಕತೆಯಾಗಿ,ಬಳಿಕ ಅವರುಗಳು ಹೊರಹೋದ ಸ್ವಲ್ಪ ಸಮಯದಲ್ಲಿ ಮೂರು ಬೈಕ್ಗಳಲ್ಲಿ ಮರದ ಸೊಂಟೆಗಳನ್ನು ಹಿಡಿದುಕೊಂಡು ಬಂದ ಆರೋಪಿತರು ಪಿರ್ಯಾದಿದಾರರಾದ ಶ್ರೀ ಸುರೇಶ್ ಹೆಗ್ಡೆ ರವರೊಡನೆ ಎಲ್ಲಿ ಪ್ರದೀಪ್ ಎಂಬ ಬಗ್ಗೆ ಕೇಳಿದಾಗ ಪಿರ್ಯಾದಿದಾರರು ತನಗೆ ತಿಳಿಯದು ಎಂದಾಗ ಕೋಪಗೊಂಡ ಅವರುಗಳು ತಮ್ಮಲ್ಲಿದ್ದ ಮರದ ಸೊಂಟೆಗಳಿಂದ ವೈನ್ಶಾಫ್ನ ಶೋಕೇಸ್ಗಳನ್ನು ಪುಡಿಮಾಡಿದಲ್ಲದೇ ಖಾಲಿ ಸೋಡಾ ಬಾಟಲಿಗಳನ್ನು ವೈನ್ಶಾಪ್ನ ಒಳಗಡೆ ಎಸೆದು ಬೆಲೆಬಾಳುವ ವಿಸ್ಕಿ ವಗೈರೆ ಮದ್ಯ ತುಂಬಿದ ಬಾಟಲಿಗಳನ್ನು ಪುಡಿಮಾಡಿ ಸುಮಾರು 50000/- ರೂಗಳಷ್ಟು ನಷ್ಟವನ್ನುಂಟು ಮಾಡಿರುವದಾಗಿದೆ.
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಕಲ್ಕಾರು ಎಂಬಲ್ಲಿ ದಿನಾಂಕ 03.03.2014 ರಂದು ಸಂಜೆ 4:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಕೃಷ್ಣ ರವರು ಕೂಲಿ ಕೆಲಸ ಮಾಡಿ ವಾಪಾಸ್ಸು ಮನೆಗೆ ಬರುವರೇ ನಡೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಆರೋಪಿ ದಾಮೋದರ ಗಟ್ಟಿ ಎದುರಿನಿಂದ ಕಾಣ ಸಿಕ್ಕಿ, ಫಿರ್ಯಾದಿದಾರರು ಮುಂದೆ ಹೋಗದಂತೆ ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದದಿಂದ ಬೈದು ಕೈಯಲ್ಲಿದ್ದ ಚೂರಿಯಿಂದ ಫಿರ್ಯಾದಿದಾರರ ಎಡ ಕುತ್ತಿಗೆಯ ಬಳಿ ಎರಡು ಬಾರಿ ಗೀರಿದ್ದು, ಘಟನೆ ನೋಡಿದ ವನಜ ಎಂಬಾಕೆಯು ಅಲ್ಲಿಗೆ ಬಂದಾಗ ಆರೋಪಿಯು ಚೂರಿಯನ್ನು ಅಲ್ಲೇ ಬಿಸಾಡಿ ಜೀವ ಸಹಿತ ಬಿಡುವುದಿಲ್ಲ ಎಂದು ಫಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿರುತ್ತಾನೆ. ಆರೋಪಿಯು ಮೂರು ದಿನದ ಹಿಂದೆ 30 ರೂಪಾಯಿ ಸಾಲವನ್ನು ಫಿರ್ಯಾದಿದಾರರಲ್ಲಿ ಕೇಳಿದ್ದು, ಕೊಡದೇ ಇದ್ದ ದ್ವೇಷದಿಂದ ಆರೋಪಿಯು ಈ ಕೃತ್ಯ ಎಸಗಿರುವುದಾಗಿದೆ. ಗಾಯಾಳು ಫಿರ್ಯಾದಿದಾರರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01/03/2014 ರಂದು ಸಮಯ ಸುಮಾರು19:30 ಗಂಟೆಗೆ ಶೈಲೆಶ ಎಂಬುವರು ಮೋಟರ್ ಸೈಕಲ್ ನಂಬ್ರ KA-19-X-8734 ರಲ್ಲಿ ಹಿಂಬದಿ ಸವಾರರಾಗಿ ತನ್ನ ತಾಯಿ ನಯನಾ ಎಂಬುವರನ್ನು ಕುಳ್ಳಿರಿಸಿಕೊಂಡು ಹಂಪನಕಟ್ಟೆ ಕಡೆಯಿಂದ A B ಶೆಟ್ಟಿ ವೃತ್ತದ ಕಡೆಗೆ U P ಮಲ್ಯ ರಸ್ತೆಯಲ್ಲಿ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತ RTO ಕಛೇರಿ ಬಳಿ ಇರುವ ಬಸ್ ನಿಲ್ದಾಣದ ಎದುರು ತಲುಪುವಾಗ ಮೋಟರ್ ಸೈಕಲ್ ಗೆ ಒಮ್ಮಲೆ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಸವಾರರಾಗಿದ್ದ ಶ್ರಿಮತಿ ನಯನಾ ಎಂಬುವರು ರಸ್ತೆಗೆ ಬಿದ್ದು ತಲೆಯ ಬಲಭಾಗಕ್ಕೆ ಮತ್ತು ಬಲಭುಜಕ್ಕೆ ಗಂಭೀರ ಸ್ವರೂಪದ ಗಾಯಗೊಂಡು ಅಥೆನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 3.3.2014 ರಂದು ಬೆಳಿಗ್ಗೆ 11.15 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ವಾಣಿ ರವರು ತನ್ನ ಬಾಬ್ತು ಸ್ಕೂಟರ್ ಕೆಎ 19 EJ 7570 ನೇದರಲ್ಲಿ ತನ್ನ ಮಗ ಸುಜನ್ ಪ್ರಾಯ 8ವರ್ಷ ರವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಬಿರಿಯಾನಿ ಪಾಯಿಂಟ್ ಹೋಟೆಲ್ ಹತ್ತಿರ ತಲುಪುವಾಗ್ಗೆ ಹಿಂಬದಿಯಿಂದ ಕೆಎ 01 Z 1840 ನೇ ಓಮಿನಿ ಕಾರಿನ ಚಾಲಕ ಮೊಹಮದ್ ಹುಸೈನ್ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತನ್ನ ಬಾಬ್ತು ಕಾರನ್ನು ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ ಫಿರ್ಯಾದಿದಾರರ ಸ್ಕೂಟರ್ ನ್ನು ಓವರ್ ಟೇಕ್ ಮಾಡಿ ಎದುರಿನಿಂದ ಬರುತ್ತಿದ್ದ ವಾಹನವೊಂದನ್ನು ತಪ್ಪಿಸುವ ಯತ್ನದಲ್ಲಿ ಪಿರ್ಯಾದಿದಾರರ ಸ್ಕೂಟರ್ ನ ಹ್ಯಾಂಡಲ್ ಗೆ ಢಿಕ್ಕಿಪಡಿಸಿ ರಸ್ತೆ ಎಡಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿಪಡಿಸಿದ್ದು ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆ ಬಿದ್ದು ಬಲಕೈ ಭುಜಕ್ಕೆ ಬಲ ಕೋಲು ಕೈ ಹಣೆಯ ಬಲಬದಿಗೆ ರಕ್ತಗಾಯವಾಗಿದ್ದು ಸಹಸವಾರ ಸುಜನ್ ನ ಕಾಲಿನ ಪಾದ ಬಲಕೈಯ ಕೈ ಬೆರಳಿಗೆ ಸೊಂಟಕ್ಕೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಜೆರಾಲ್ಡ್ ಕ್ರಾಸ್ತಾ ರವರು ಉದ್ಯಮಿಯಾಗಿದ್ದು, ಕಳೆದ 30 ವರ್ಷಗಳಿಂದ ದುಬೈಯಲ್ಲಿ ವ್ಯವಹಾರ ಮಾಡಿಕೊಂಡಿದ್ದು, ಈಗ ಕಾರ್ಕಳ ತಾಲೂಕಿನ ಸಾಣೂರು ಎಂಬಲ್ಲಿ ಪ್ರಕೃತಿ ಎಂಬ ವಿದ್ಯಾ ಸಂಸ್ಥೆಯ ಸಂಚಾಲಕರಾಗಿದ್ದು, ಈ ವಿದ್ಯಾಸಂಸ್ಥೆಯ ಕಟ್ಟಡದ ಕಾಮಗಾರಿಯನ್ನು ಮಾಡಿದ ಆರೋಪಿಗಳಾದ ಪದ್ಮನಾಭ ರೈ ಮಂಗಳೂರು, ರೋಹಿತಾಕ್ಷ, ಮಂಗಳೂರು, ನವೀನ್ ರೈ ಪ್ರಸಾದ್ ಪುತ್ತೂರುರವರು ಹೆಚ್ಚು ಹಣ ಪಡೆದು ಕಳಪೆ ಕಾಮಗಾರಿ ನಡೆಸಿ ಈಗ ಇನ್ನೂ ಹಣ ಕೊಡಬೇಕೆಂದು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಾ ರೌಡಿಗಳಿಂದ ಬೆದರಿಸಿ ಹಣ ವಸೂಲು ಮಾಡುವ ಕುತಂತ್ರ ಮಾಡುತ್ತಿರುವುದಾಗಿಯೂ, ದಿನಾಂಕ 19-02-2014 ರಂದು ಪಿರ್ಯಾದಿದಾರರು ದುಬೈಯಲ್ಲಿರುವಾಗ ಸಂಜೆ 5.45 ಗಂಟೆ ಹೊತ್ತಿಗೆ ಕುಖ್ಯಾತ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಎಂದು ಹೇಳಿ ಆತನ ಮೊಬೈಲ್ ನಿಂದ ಪಿರ್ಯಾದಿದಾರರ ಮೊಬೈಲ್ ಗೆ ದೂರವಾಣಿ ಮಾಡಿ ಒಂದು ಕೋಟಿ ಎಂಭತ್ತು ಲಕ್ಷ ರೂ ಹಣವನ್ನು ನೀಡಬೇಕೆಂದು ಇಲ್ಲದಿದ್ದರೆ, ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿಯೂ, ಆರೋಪಿಗಳಾದ ಪದ್ಮನಾಭ ರೈ, ನವೀನ್ ಪ್ರಸಾದ್ ರೈ ಹಾಗೂ ರೋಹಿತಾಕ್ಷ ರವರ ಕುಮ್ಮಕ್ಕಿನಿಂದ ಆರೋಪಿ ವಿಕ್ಕಿ ಶೆಟ್ಟಿ ಈ ಕೃತ್ಯ ಮಾಡಿರುವುದಾಗಿದೆ.
6.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03-03-2014 ರಂದು ಬೆಳಿಗ್ಗೆ ಸುಮಾರು 10:01:30 ಗಂಟೆಯ ಸಮಯಕ್ಕೆ ಮಾನ್ಯ ನ್ಯಾಯಾಯಲದ ಅಧಿಕಾರ ವ್ಯಾಪ್ತಿಗೊಳಪಟ್ಟ ಕಾವೂರು ಪೊಲೀಸ್ ಠಾಣಾ ಸರಹದ್ದಿನ ಪಡುಕೋಡಿ ಗ್ರಾಮದ ಬಂಗ್ರಕೂಳೂರು ಎಂಬಲ್ಲಿರುವ ವಿ.ಕೆ ಟವರ್ಸ್ ಎಂಬ ಹೆಸರಿನ ಕಟ್ಟಡದ ಮಾಲಿಕತ್ವವನ್ನು ಹೊಂದಿರುವ ಸದ್ರಿ ಕಟ್ಟಡದಲ್ಲಿರುವ ಡೆಲ್ಟ ಇನ್ಪ್ರಾಲಾಜೆಸ್ಟಿಕ್ಸ್ ( ವಲ್ಡ್ ವೈಡ್) ಲಿಮಿಟೇಡ್ ಎಂಬ ಹೆಸರಿನ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ರಾಗಿರುವ ಪ್ರಕರಣದ ಪಿರ್ಯಾದುದಾರರಾದ ಶ್ರೀ ಅಹ್ಮದ್ ಮೊಹಿಯುದ್ದೀನ್ ಎಂಬವರ ಬಾಬ್ತು ಕಛೇರಿ ಕೋಣೆಯ ಬಳಿಗೆ ಕಪ್ಪು ಬಣ್ಣದ ಬಟ್ಟೆ ಬರೆಗಳನ್ನು ಧರಿಸಿದ ವ್ಯಕ್ತಿಯೋರ್ವನು ಅಕ್ರಮ ಪ್ರವೇಶವನ್ನು ಮಾಡಿ ಜೀವಬೆದರಿಕೆಯ ಸಂದೇಶವನ್ನು ಬರೆದಿರುವ ಇಸ್ವೀಟ್ ಎಲೆಯ ನಾಲ್ಕು ಇಸ್ವೀಟ್ ಕಾರ್ಡ್ಗಳನ್ನು ಕಛೇರಿ ಕೋಣೆಯ ಮುಂಭಾಗದಲ್ಲಿರುವ ಸೆಕ್ಯೂರಿಟಿಯ ಬಳಿಯಲ್ಲಿ ಎಸೆದು ಪರಾರಿಯಾಗಿದ್ದು, ಬಳಿಕ ಬೆಳಿಗ್ಗೆ ಸುಮಾರು 10-30 ಗಂಟೆಗೆ ಹಾಗೂ ಆ ಬಳಿಕ ಸತತವಾಗಿ ಎರಡು ಇಂಟರ್ನೆಟ್ ಪೋನ್ ಕರೆ ನಂಬ್ರ:004049 ಮತ್ತು 004044 ನೇಯದ್ದರಿಂದ ಕಛೇರಿ ಸ್ಥಿರ ದೂರವಾಣಿ ಸಂಖ್ಯೆ: 0824-2454811 ನೇಯದ್ದಕ್ಕೆ ರವಿ ಪೂಜಾರಿ ಬಾಯಿ ಎಂಬ ಹೆಸರನ್ನು ಹೇಳಿದ ವ್ಯಕ್ತಿಯು ಕರೆಗಳನ್ನು ಮಾಡಿ ಪಿರ್ಯಾದುದಾರರಿಗೆ ಜೀವ ಬೆದರಿಕೆಯನ್ನು ಒಡ್ಡಿರುವುದಾಗಿದೆ.
7.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02/03/2014 ರಂದು ರಾತ್ರಿ ಸುಮಾರು 11-50 ಗಂಟೆ ಸಮಯಕ್ಕೆ ತೋಕೂರು ಗ್ರಾಮದ ಕೆ.ಬಿ.ಎಸ್ ಜೋಕಟ್ಟೆ ಹಳೆ ಮಸೀದಿಯ ಹತ್ತಿರ ಬಂಡಸಾಲೆ ಹೌಸ್ ಶಬನಾ ಮಂಜಲ್ ತನ್ನ ವಾಸದ ಮನೆಯಲ್ಲಿ ಪಿರ್ಯಾದಿದಾರರಾದ ಶ್ರೀ ಜಿ.ಎಂ. ಇಸ್ಮಾಯಿಲ್ ರವರು ಇದ್ದ ವೇಳೆ ಮನೆಯ ಕಿಟಕಿಗಳಿಗೆ ಕಲ್ಲು ಬಿಸಾಡುತ್ತಿರುವುದನ್ನು ಕಂಡು ಪಿರ್ಯಾದಿ , ಪಿರ್ಯಾದಿದಾರರ ಹೆಂಡತಿ ಹಮಿದಾ ಬಾನು, ಅಣ್ಣನ ಹೆಂಡತಿ ನೆಬಿಸಾ ಹಾಗೂ ತಾಯಿ ಬೀವಿಯಮ್ಮ ಯಾರೆಂದು ನೋಡಲು ಹೊರಗೆ ಬಂದಿದ್ದು, ಮನೆಯ ಮುಂದಿನ ಗೇಟ್ ಹಾಕದೆ ಇದ್ದುದನ್ನು ಕಂಡು ಪಿರ್ಯಾದಿ ಗೇಟ್ ಹಾಕಲು ಹೋದಾಗ ಗೇಟ್ ಹತ್ತಿರ ಪರಿಚಯದ ಹಾಗೂ ಸಂಬಂಧಿಕರಾದ 1. ಶರೀಫ್ 2. ಮೊಹಿಯುದ್ದೀನ್ 3. ಮೊಹಮ್ಮದ್ 4. ಹಮೀದ್ 5. ಹುಸೈನಬ್ಬ ಇದ್ದುದಲ್ಲದೇ ಅವರ ಬಳಿ ಒಂದು ಹಸಿರು ಬಿಳಿ ಬಣ್ಣ ಮಿಶ್ರಿತ ಇನೋವಾ ಕಾರು ನಿಂತಿದ್ದು ಅದರಲ್ಲಿ ಕೂಡಾ ಒಬ್ಬ ವ್ಯಕ್ತಿ ಇದ್ದು, ಪಿರ್ಯಾದಿಯು ಅವರಲ್ಲಿ ವಿಷಯವೇನೆಂದು ಕೇಳಿ ಮನೆಯ ಎದುರಿನ ಗೇಟ್ ಹಾಕುತ್ತಿದಂತೆ ಅವರೆಲ್ಲರೂ ಪಿರ್ಯಾದಿಯನ್ನು ತಡೆದು ನಿಲ್ಲಿಸಿ ಅಣ್ಣ ಸಂಶುದ್ದೀನ್ ಎಲ್ಲಿ ಎಂದು ಕೇಳಿದಾಗ ಪಿರ್ಯಾದಿ ಗೊತ್ತಿಲ್ಲ ಎಂದು ಹೇಳಿದ್ದು, ಆ ವೇಳೆ ಶರೀಫ್ ನು ಕೈಯಲ್ಲಿದ್ದ ಮರದ ಸೋಂಟೆಯಿಂದ ಪಿರ್ಯಾದಿದಾರರ ಎಡಕಾಲಿನ ಕೋಲು ಕಾಲು ಹಿಂಬದಿಗೆ ಹೊಡೆದು ನೋವುಂಟು ಮಾಡಿದ್ದು , ಮೊಹಮ್ಮದ್ ಎಂಬಾತನು ಚೂರಿಯಿಂದ ಪಿರ್ಯಾದಿಯ ತಲೆಯ ಎಡಬದಿಗೆ ಗೀರಿ ರಕ್ತ ಬರುವ ಗಾಯ ಉಂಟು ಮಾಡಿದ್ದು ಆ ಮೇಲೆ ಮೊಹಿಯುದ್ದೀನ್, ಹಮೀದ್, ಹುಸೈನಬ್ಬ, ಮತ್ತು ಕಾರಿನಲ್ಲಿ ಇದ್ದ ವ್ಯಕ್ತಿ ಎಲ್ಲರೂ ಸೇರಿ ಕೈಯಿಂದ ಹೊಡೆದು 2 ದಿನಗಳೊಳಗೆ ನಿನ್ನ ಅಣ್ಣ ಸಂಶುದ್ದೀನ್ ಸಿಗದೇ ಇದ್ದಲ್ಲಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಗೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈ ಘಟನೆಗೆ ದಿನಾಂಕ 02/03/2014 ರಂದು ಸಂಜೆ ಜೋಕಟ್ಟೆ ಕೋಡಿಕಲ್ ಸಂಕದ ಬಳಿ ಮೊಹಮ್ಮದ್ ಮುಸ್ತಾಫ ಹಾಗೂ ಆಸೀಫ್ ಎಂಬವರಿಗೆ ಯಾರೋ ಹಲ್ಲೆ ನಡೆಸಿದ್ದು ಈ ಹಲ್ಲೆಯನ್ನು ಪಿರ್ಯಾದಿಯ ಅಣ್ಣ ಸಂಶುದ್ದೀನ್ ಮಾಡಿರ ಬಹುದು ಎಂಬ ಕಾರಣದಿಂದ ಈ ಕೃತ್ಯ ನಡೆಸಿರುತ್ತಾರೆ.
8.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಇಸ್ಮಾಯಿಲ್ ರವರು ಎಂದಿನಂತೆ ಕೆಲಸ ನಿಮಿತ್ತ ಮಂಗಳೂರಿಗೆ ತೆರಳುವರೇ ದಿನಾಂಕ 03-03-2014 ರಂದು ಬೆಳಿಗ್ಗೆ ಮನೆಯಿಂದ ಹೊರಟು ಸುರತ್ಕಲ್ ಮಯ್ಯ ಎಲೆಕ್ಟ್ರಾನಿಕ್ಸ್ ಎದುರು 09-30 ಗಂಟೆಗೆ ತಲುಪಿದಾಗ ಹಲವಾರು ಜನ ರಸ್ತೆಯನ್ನು ಬ್ಲಾಕ್ ಘೋಷಣೆ ಕೂಗುತ್ತಿದ್ದರು. ಪಿರ್ಯಾದಿದಾರರು ಮುಂದೆ ಹೋಗಲು ಯತ್ನಿಸಿದಾಗ ಆಪಾದಿತ ಕಬೀರ್ ಎಂಬವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕಪಾಳಕ್ಕೆ ಕೈಯಿಂದ ಹೊಡೆದು ನೀನು ಮುಂದೆ ಹೋದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ.
9.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 3-3-2014 ರಂದು ಕರಾವಳಿ ಜೀವನದಿ- ನೇತ್ರಾವತಿ ರಕ್ಷಣಾ ಸಮಿತಿಯ ವತಿಯಿಂದ ನೇತ್ರಾವತಿ ತಿರುವು ಮತ್ತು ಎತ್ತಿನಹೊಳೆ ಯೋಜನೆ ಶಿಲಾನ್ಯಾಸ ಕಾರ್ಯಕ್ರಮ ಖಂಡಿಸಿ ಸುರತ್ಕಲ್ನಲ್ಲಿ ಬಳಕೆದಾರರ ಹಿತ ರಕ್ಷಣಾ ವೇದಿಕೆಯ ಹೆಸರಿನಲ್ಲಿ ವಿವಿಧ ರಾಜಕೀಯ ಪಕ್ಷಗಳ, ದಾರ್ಮಿಕ ಸಂಘಟನೆಗಳ ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು, ಪದಾಧಿಕಾರಿಗಳು ಅಲ್ಲದೇ ಇತರೆ ಸಾರ್ವಜನಿಕ ವ್ಯಕ್ತಿಗಳಾದ ವಿಜಯ್ ಕುಮಾರ್ ಶೆಟ್ಟಿ, ಸತ್ಯಜೀತ್ ಸುರತ್ಕಲ್, ರೋಹಿತಾಕ್ಷ, ಅಬ್ದುಲ್ ಸತ್ತಾರ್, ಪುರುಷೋತ್ತಮ್ ಬೈಕಂಪಾಡಿ, ಶ್ರೀಮತಿ ಪ್ರತಿಭಾ ಕುಲಾಯಿ, ಅಯಾಜ್, ಗುಣಶೇಖರ, ಸತೀಶ್ ಮಂಚೂರು, ಟಿ.ಎನ್. ಶಶಿಧರ್, ಕಿಶಾನ್, ಹಬೀಬ್, ಬಾಲು, ಕಬೀರ್, ನಿಹಾರ್, ಡೆನ್ನಿಸ್, ಕಬೀರ್, ಗೊಪಿನಾಥ್ ಪೈ, ಹಮ್ಜಾ ಇಡ್ಯಾ, ಜೋಸೇಫ್ ಪಿಂಟೋ, ಸಿರಾಜ್ ಇಜ್ಜಬಾಕ ಎಂಬ ಆರೋಪಿಗಳು ಹಾಗೂ ಇತರ ಸುಮಾರು 70-80 ಜನರು ಅಕ್ರಮ ಕೂಟ ಕಟ್ಟಿ ಕೊಂಡು ಸುರತ್ಕಲ್ ಪಟ್ಟಣದಲ್ಲಿ ಹಾದು ಹೋಗುವ ರಾ.ಹೆ 66 ರಲ್ಲಿನ ಗೋವೀಂದದಾಸ್ ಕಾಲೇಜು ಎದುರು ಜಂಕ್ಷಣ್ ಕ್ರಾಸ್‌ನಲ್ಲಿ ಹಾದು ಹೋಗುವ ವಾಹನಗಳನ್ನು ಅಡ್ಡಗಟ್ಟಿ ಹಳೆ ಟಯರ್‌ಗಳಿಗೆ ರಸ್ತೆ ಮದ್ಯೆ ಬೆಂಕಿಹಚ್ಚುವ ಮೂಲಕ ಪ್ರಯಾಣಿಕರಲ್ಲಿ ಮತ್ತು ಚಾಲಕರುಗಳಲ್ಲಿ ಭಯದ ವಾತಾವರಣ ನಿರ್ಮಿಸಿದ್ದು, ಸದ್ರಿಯವರುಗಳಿಗೆ ವಾಹನಗಳನ್ನು ಅಡ್ಡಗಟ್ಟುವ ಮೂಲಕ ಸಂಚಾರಕ್ಕೆ ಅಡ್ಡಿ ಪಡಿಸದಂತೆ ಪೊಲೀಸರು ನೀಡಿದ ಎಚ್ಚರಿಕೆಯನ್ನು ದಿಕ್ಕರಿಸಿ ಚತುಸ್ಫಥ ರಾ.ಹೆ ರಸ್ತೆಯಲ್ಲಿ ನೂರಾರು ಜನರನ್ನು ಸೇರಿಸಿಕೊಂಡು ಬೆಳಿಗ್ಗೆ 09-00 ಗಂಟೆಯಿಂದ 10-15 ಗಂಟೆಯವರೆಗೆ ಪುನಃ 11-00 ಗಂಟೆಯಿಂದ 11-15 ಗಂಟೆಯವರೆಗೆ ರಸ್ತೆ ತಡೆ ನಡೆಸಿದಲ್ಲದೇ, ರಸ್ತೆಯ ಮದ್ಯದಲ್ಲಿಯೆ ಸಭೆ ನಡೆಸಿ, ಸಾರ್ವಜನಿಕರಿಗೆ ಹಾಗೂ ದೇಶದ ವಿವಿಧ ಭಾಗಗಳಿಂದ ಬರುತ್ತಿದ್ದ ಪ್ರಯಾಣಿಕರಿಗೆ ಹಾಗೂ ಸರಕುಸಾಗಾಟದ ವಾಹನಗಳಿಗೆ ಅದರಲ್ಲಿ ಯೂ ವಿಶೇಷವಾಗಿ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ತೀವ್ರ ತೊಂದರೆ ಮಾಡಿರುತ್ತಾರೆ.
10.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-02-14 ರಂದು ಬೆಳಿಗ್ಗೆ 11-00 ಗಂಟೆ ಸಮಯಕ್ಕೆ ಮಂಗಳೂರು ತಾ. ಚೇಳ್ಯಾರ್ ಗ್ರಾಮದ ಚೇಳಾರ್ ರೈಲ್ವೇ ಬ್ರಿಡ್ಜ್ ಬಳಿಯ ಬಸ್ಸ್ ನಿಲ್ದಾಣದಲ್ಲಿ ಕೆ.ಎ-19/ ಡಿ 34 39 ನೇ ನೊಂದಣಿ ಸಂಖ್ಯೆಯ ಬಸ್ಸ್ ನಿಂದ ಸುರೇಂದ್ರ ಎಂಬವರು ಇಳಿಯುತ್ತಿರುವಾಗ ಸದ್ರಿ ಬಸ್ಸ್ ನ ನಿರ್ವಾಹಕ ಸದ್ರಿ ಬಸ್ಸ್ ನ್ನು ಮುಂದಕ್ಕೆ ಚಲಾಯಿಸಲು ವಿಸೀಲ್ ಯಾ ಯಾವುದೇ ಸೂಚನೆ ನೀಡುವ ಮೋದಲೇ ಸದ್ರಿ ಬಸ್ಸ್ ನ್ನು ಚಾಲಕ ವಾಮನರವರು ನಿರ್ಲಕ್ಷತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಬಸ್ಸ್ ನಿಂದ ಸುರೇಂದ್ರ ರವರು ಜಾರಿ ಕೆಳಗೆ ಬಿದ್ದು ಸುರೇಂದ್ರರವರ ತಲೆಗೆ ಹಾಗೂ ಕೈ – ಕಾಲುಗಳಿಗೆ ರಕ್ತಗಾಯಗೊಂಡಿದ್ದು ನಂತರ ಸುರೇಂದ್ರವರನ್ನು ಸದ್ರಿ ಬಸ್ಸ್ ನ ಚಾಲಕನೊಂದಿಗೆ ಫಿರ್ಯಾಧಿ ಪ್ರಶಾಂತರವರು ಚಿಕಿತ್ಸೆ ಬಗ್ಗೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೆಚ್ಚಿನ ಚಿಕತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ.
11.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-03-2014 ರಂದು ಬೆಳಿಗ್ಗೆ 11-30 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ನವೀನ್ ಕುಮಾರ್ ರವರು ತನ್ನ ಬಾಬ್ತು ಕೆಎ 19 ಇಬಿ 1701 ನೇ ಮೋಟಾರು ಸೈಕಲ್ನಲ್ಲಿ ಸವಾರಿ ಮಾಡಿಕೊಂಡು ಮಂಗಳೂರು ತಾಲೂಕು, ಸೋಮೇಶ್ವರ ಗ್ರಾಮದ ಕಾಪಿಕಾಡ್, ಭಾರತ್ ಗ್ಯಾಸ್ ಬಳಿ ರಾ.ಹೆ. 66 ರಲ್ಲಿ ತಲುಪುತ್ತಿದ್ದಂತೆ ಅವರ ಎದುರಿನಿಂದ ಆರೋಪಿತ ರಾಜೇಶ್ ಎಂಬವರು ಕೆಎ 19 ಡಿ 9172 ನೇ ಆಶೋಕ ಲೈಲ್ಯಾಂಡ್ ದೋಸ್ತ್ ವಾಹನವನ್ನು ಅತೀವೇಗ ಮತ್ತು ತೀರಾ ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ಇನ್ನೊಂದು ವಾಹನವನ್ನು ಓವರ್ಟೇಕ್ ಮಾಡುವ ಭರದಲ್ಲಿ ಪಿರ್ಯಾದುದಾರರ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದುದರಿಂದ ರಸ್ತೆಗೆ ಬಿದ್ದ ಪಿರ್ಯಾದುದಾರರ ಬಲ ಕಾಲಿನ ಮೊಣಗಂಟಿನ ಮೂಳೆ ಮುರಿತವಾಗಿರುತ್ತದೆ. ಗಾಯಾಳು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ.
No comments:
Post a Comment