ದೈನಂದಿನ ಅಪರಾದ ವರದಿ.
ದಿನಾಂಕ 12.03.2014 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 1 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11.03.2014 ರಂದು 17.10 ಗಂಟೆಗೆ ಕಾರು ನಂಬ್ರ KA-19-MM-3504ನ್ನು ಅದರ ಚಾಲಕಿ ರಂಜನ್ ಕುಮಾರ್ ವಕೀಲರ ಮನೆಗೆ ಹೋಗುವ ರಸ್ತೆಯ ಬಳಿ ಇರುವ ವಾಸ್ತವ್ಯದ ಮನೆಯ ಕಾಂಪೌಂಡ್ ಗೇಟಿನ ಒಳಗಿನಿಂದ ಮುಖ್ಯ ರಸ್ತೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮುಖ್ಯ ರಸ್ತೆಗೆ ಪ್ರವೇಶಿಸುವ ವೇಳೆ ಪಾಲಿಸಬೇಕಾದ ನಿಯಮವನ್ನು ಪಾಲಿಸದೇ ಏಕಾಏಕಿ ನುಗ್ಗಿಸಿದ ಪರಿಣಾಮ ಬಂಟ್ಸ್ ಹಾಸ್ಟೆಲ್ ಕಡೆಯಿಂದ ಜ್ಯೋತಿ ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾ ನಂಬ್ರ KA-19-A-3464 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ರಿಕ್ಷಾ ದಲ್ಲಿ ಪ್ರಯಾಣಿಕರಾಗಿದ್ದ ಶ್ರೀ ಮತಿ ಗಾಯಿತ್ರಿ ರವರ ಬಲಕಾಲಿಗೆ ಗಂಭೀರ ಸ್ವರೊಪದ ಗಾಯ ಹಾಗೂ ಅವರ ಗಂಡ ಅಶೋಕ್ ಕುಮಾರ್ ರವರಿಗೆ ಗುದ್ದಿದ ಗಾಯ ಉಂಟಾಗಿ ಶ್ರೀ ಮತಿ ಗಾಯಿತ್ರಿರವರು ಕೊಲಾಸೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿ ಚಿಕೆತ್ಸೆಯಲ್ಲಿರುತ್ತಾರೆ.
2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಎಸ್.ಪಿ.ಗೀತಾ ರವರನ್ನು ಉದ್ದೇಶಿಸಿ ನೆರೆಯ ಶೋಭಾ ಆಚಾರ್ಯ ಎಂಬವರು ಉದ್ದೇಶ ಪೂರಕವಾಗಿ ಕಳೆದ 15 ವರ್ಷದಿಂದ ಅವಾಚ್ಯ ಶಬ್ದದಿಂದ ಬೈದು, ಜಾತಿ ನಿಂದನೆ ಮಾಡುತ್ತಿದ್ದು, ದಿನಾಂಕ 10-03-2014 ರಂದು ಸಮಯ 12-00 ಗಂಟೆಗೆ ಆರೋಪಿ ಶೋಭಾರವರು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಗಂಡನ ಬಗ್ಗೆ ಕೆಟ್ಟದಾಗಿ ಮಾತನಾಡಿ, ಪಿರ್ಯಾದಿದಾರರನ್ನು ಉದ್ದೇಶಿಸಿ "ನಿನಗೆ ಸುರೇಶನ ಮುಖಾಂತರ ರೌಡಿಗಳನ್ನು ತಂದು ಹಲ್ಲೆ ಮಾಡಿ ಕೊಲೆ ಮಾಡಿಸಬೇಕು" ಎಂದು ಆರೋಪಿ ಮತ್ತು ಆರೋಪಿಯ ಮಗಳು ದಿನನಿತ್ಯ ಕಿರುಕುಳ ನೀಡುತ್ತಿರುವುದಾಗಿದೆ.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:11-03-2014 ರಂದು ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ತಿಲಕಚಂದ್ರ ಕೆ. ರವರಿಗೆ ಬಂದ ಖಚಿತ ವರ್ತಮಾನದಂತೆ ಸಿಬ್ಬಂದಿಗಳೊಂದಿಗೆ ಮಂಗಳೂರು ನಗರದ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ, ಅಕ್ಷರಾ ರೆಸಿಡೆನ್ಸಿಯಾ ಒಂದನೇ ಮಹಡಿಯಲ್ಲಿರುವ ಪ್ಲಾಟ್ ನಂಬ್ರ 004 ರಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ ಬಾಹರ್ ಎಂಬ ಜುಗಾರಿ ಆಟ ವನ್ನು ಆಡುತ್ತಿದ್ದ ಸ್ಥಳಕ್ಕೆ 20.00 ಗಂಟೆಗೆ ಧಾಳಿ ನಡೆಸಿ, 18 ಮಂದಿ ಆರೋಪಿಗಳಾದ ಜಿ.ಟಿ. ರಾಘವೇಂದ್ರ, ಕೆ.ಆರ್. ಜನಾರ್ಧನ, ಅಬ್ದುಲ್ ರಹಿಮಾನ್, ಫಾರೂಕ್, ನವೀನ್, ಅಬ್ದುಲ್ ಸಲಾಂ, ಆರ್. ಸುರೇಶ್, ಆರ್. ಅಚ್ಚುತ್ ಭಟ್, ಗೋಪಾಲ ಜೋಷಿ, ಕಿರಣ್ ಕುಮಾರ್, ಯಶವಂತ, ಉಮೇಶ್ ಕುಮಾರ್, ಎ. ಅಬ್ದುಲ್ ಕುಟ್ಟಿ, ಅಬ್ದುಲ್ ಲತೀಫ್, ವಿನ್ಸೆಂಟ್ ಡಿ'ಸೋಜಾ, ರಘುರಾಮ, ಅನಿಲ್, ಗಣೇಶ್ ಕುಮಾರ್ ಎಂಬವರನ್ನು ದಸ್ತಗಿರಿ ಮಾಡಿ , ಆಟಕ್ಕೆ ಉಪಯೋಗಿಸಿದ ನಗದು ಹಣ 1,10,965 ರೂಪಾಯಿ, ಜುಗಾರಿ ಆಟಕ್ಕೆ ಉಪಯೋಗಿಸಿದ ನೀಲಿ ಹಸಿರು ಬಣ್ಣದ ಬಟ್ಟೆಗಳು, ಇಸ್ಪೀಟ್ ಎಲೆಗಳು ತಲಾ 44 ರಂತೆ 88 ಎಲೆಗಳು, ಹಾಗೂ ಹುಂಡೈ ಐ 10 ಕೆಎಲ್ -14-ಎಂ -498 ಕಾರು, ಸುಜುಕಿ ಆಕ್ಸಸ್ ಕೆ.ಎ 19-ಇಎಚ್- 9546 ನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿದೆ.
4.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಕಾವೂರು ಪೊಲೀಸ್ ಠಾಣಾ ಸರಹದ್ದಿನ ಮೇರಿಹಿಲ್ ಕಿಂಗ್ಸ್ ಪಾರ್ಕ್ ಲೇ ಔಟ್ ನಲ್ಲಿರುವ ದಿಯಾ ಸಿಸ್ಟಮ್ ಪ್ರೈ.ಲಿ ಎಂಬ ಖಾಸಗಿ ಸಂಸ್ಥೆಯಲ್ಲಿ ಎಡ್ಮಿನಿಸ್ಟ್ರೇಟಿವ್ ಲೆವೆಲ್ ಒನ್ ಚಾರ್ಟ್ ಸಪೋಟ್ ಎಜೆಂಟ್ ಆಗಿ ಅಂತರ್ ಜಾಲ ತಾಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರೋಪಿಗಳ ಪೈಕಿ ವಿನೋದ್ ಕುಮಾರ್ ಬಂಗೇರ ಎಂಬಾತನು ಕಂಪೆನಿಗೆ ಮೋಸದಿಂದ ವಂಚನೆಯನ್ನು ಮಾಡುವ ದುರುದ್ದೇಶದಿಂದಲೇ 15,450 ಡಾಲರ್ ಅಂದರೆ 9,27,000/- ರೂ ಹಾಗೂ ಆರೋಪಿ ರಾಘವೇಂದ್ರ ರತನ್ ಎಂಬಾತನು 10,255 ಡಾಲರ್ ಅಂದರೆ 6,15,300/- ರೂ ಹಾಗೂ ಆರೋಪಿ ಅಶ್ವಿನ್ ಮೋಹನ್ ಪೈ ಎಂಬಾತನು 10,865 ಡಾಲರ್ ಅಂದರೆ 6,51, 900/- ರೂ ಅಂದರೆ ಒಟ್ಟು 21,94,200/- ರೂಪಾಯಿಯಷ್ಟು ಹಣವನ್ನು ಸಂಸ್ಥೆಗೆ ವಂಚಿಸಿ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡಿದಲ್ಲದೆ ವಂಚನೆ ಮಾಡಿದ ಅಂತಾಹ ದಸ್ತಾವೇಜುಗಳನ್ನು ಸುಳ್ಳು ಸೃಷ್ಟನೆ ಎಂದು ತಿಳಿದು ಕೂಡಾ ಅವುಗಳನ್ನು ಆರೋಪಿಗಳು ನೈಜ್ಯವಾದುದೆಂದು ಮೋಸದಿಂದ ಬಳಸಿ ಸಂಸ್ಥೆಯಲ್ಲಿ ಶೇಖರಿಸಿ ಇಟ್ಟುಕೊಂಡು ನಂಬಿಕೆ ದ್ರೋಹ ವನ್ನು ಮಾಡಿರುವುದಲ್ಲದೆ, ಆರೋಪಿಗಳು ಸಂಸ್ಥೆಗೆ ಇನ್ನೂ ಹೆಚ್ಚಿನ ವಂಚನೆಯನ್ನು ಮಾಡಿರುವ ಸಾಧ್ಯತೆಗಳಿರುವುದಾಗಿದೆ.
5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-05-2010 ರಂದು ಪಿರ್ಯಾದುದಾರರಾದ ಶ್ರೀಮತಿ ಆಯಿಷಾ ರವರು ಮಂಜೇಶ್ವರ ಬಳ್ಳಾಕೂರು, ಬದ್ರಿಯಾ ಮಂಜಿಲ್ ಹೊಸಂಗಡಿಯ ಇಮ್ತಿಯಾಜ್‌ರವರನ್ನು ವಿವಾಹವಾಗಿದ್ದು, ಅವರಿಗೆ 3 ವರ್ಷದ ಹೆಣ್ಣು ಮಗು ಇರುತ್ತದೆ. ಮದುವೆಯಾದದ್ದಿನಿಂದ ಪಿರ್ಯಾದುದಾರರ ಗಂಡ ಇಮ್ತಿಯಾಜ್ ಪಿರ್ಯಾದುದಾರರೊಂದಿಗೆ ಸರಿಯಾಗಿ ನಡೆದುಕೊಳ್ಳದೇ ಇದ್ದು, ಪಿರ್ಯಾದುದಾರರು ವಿಚಾರಿಸಿದರೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು. ಇದರಿಂದ ಬೇಸತ್ತ ಪಿರ್ಯಾದುದಾರರು ಅವರ ತಾಯಿ ಮನೆಗೆ ಬಂದು ವಾಸಿಸುತ್ತಿದ್ದು, ಅಲ್ಲಿಯೂ ಇಂಮ್ತಿಯಾಜ್ ಬಂದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿರುವುದಾಗಿದೆ.
No comments:
Post a Comment