ದೈನಂದಿನ ಅಪರಾದ ವರದಿ.
ದಿನಾಂಕ 20.03.2014 ರ 13:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 2 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 2 |
1.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಮಂಗಳದಾಸ್ ಗುಪ್ತ ಎಂಬವರ ಮನೆಯಲ್ಲಿ ಮನೆಕೆಲಸ ಮತ್ತು ಚಾಲಕ ಕೆಲಸ ಮಾಡುತ್ತಿದ್ದ ರಾಣಿಬೆನ್ನೂರು ತಾಲೂಕು ಹಾವೇರಿ ಜಿಲ್ಲೆಯ ನಿಟ್ಟೂರು ವಾಸಿ ಶಂಕರ್ (29 ವರ್ಷ) ಎಂಬಾತನು ದಿನಾಂಕ 13-03-2014ರಂದು ರಾತ್ರಿ 10-00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರ ಮಹೇಂದ್ರ ಝೈಲೋ ಕಾರು ನಂಬ್ರ ಕೆಎ-19-ಎಂ.ಬಿ-125 ನೇದನ್ನು ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಪೂಜೆ ಪುನಸ್ಕಾರ ಮಾಡುವುದಕ್ಕೆ ಇದೆ ಎಂದು ಕಾರನ್ನು ಪಡೆದುಕೊಂಡು ಒಂದು ದಿನ ಬಿಟ್ಟು ಬರುವುದಾಗಿ ಹೇಳಿ ಹೋಗಿದ್ದು, ಮರುದಿನ ಪಿರ್ಯಾದಿದಾರರ ಮೊಬೈಲಿಗೆ ಫೋನ್ ಮಾಡಿ ತಾನು ಮುಟ್ಟಿರುತ್ತೇನೆ ಎಂದು ತಿಳಿಸಿದ್ದು, ಅದರೆ ಶಂಕರರವರು ಇದುವರೆಗೂ ಕೂಡಾ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.
2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಪಂಜಿಮೊಗೆರು ಗ್ರಾಮದ ಹಮೀದ್ ಎಂಬವರ ಬಾಡಿಗೆ ರೂಂನಲ್ಲಿ ಪಿರ್ಯಾದಿದಾರರಾದ ಶ್ರೀ ವಿಜೇಯ್ ರವರು ವಾಸವಿದ್ದು, ದಿನಾಂಕ 17-03-2014 ರಂದು ಹೋಳಿ ಹಬ್ಬದ ಪ್ರಯುಕ್ತ ರಜೆಯ ನಿಮಿತ್ತ ರೂಮಿನಲ್ಲಿದಾಗ ಸಂಜೆ ಸುಮಾರು 4-00 ಗಂಟೆಗೆ ರೂಂನ ಅಂಗಳದಲ್ಲಿ ತನ್ನ ಗೆಳೆಯಯೊಂದಿಗೆ ಹೋಳಿ ಹಬ್ಬ ಆಚರಿಸಿ ಗೆಳೆಯರು ತೆರಳಿದ ನಂತರ ಅವರಲ್ಲಿ ಅಮರನಾಥ ಮತ್ತು ಅಪರಿಚಿತ ಒಬ್ಬನು ವಿನಾಃ ಕಾರಣ ಪಿರ್ಯಾದಿದಾರರಿಗೆ ರೇಗಿಸಿ, ಗಲಾಟೆ ಮಾಡಿ ಪಕ್ಕದಲ್ಲಿದ್ದ ಕಬ್ಬಿಣದ ರಾಡಿನಿಂದ ಪಿರ್ಯಾದಿದಾರರ ತಲೆಗೆ ಬಿಸಿದಾಗ ಅವರ ತಲೆ ಎಡಬದಿಗೆ ತಾಗಿ ರಕ್ತಗಾಯವಾಗಿದ್ದು, ಈ ಘಟನೆ ನಡೆಯುವಾಗ ಸಂಜೆ ಸುಮಾರು 5-00 ಗಂಟೆಯಾಗಿದ್ದು, ನಂತ್ರ ಚಿಕಿತ್ಸೆ ಬಗ್ಗೆ ಅಣ್ಣ ರಾಜೇಶ್ ನು ಕೆ.ಎಂ.ಸಿ ಆಸ್ಪತ್ರೆ,ಮಂಗಳೂರುಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲುಮಾಡಿರುವುದಾಗಿದೆ.
3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19/03/2014 ರಂದು ಮಂಗಳೂರು ತಾಲೂಕು ಪಡುಕೋಡಿ ಗ್ರಾಮದ ಮೇಲುಕೊಪ್ಪಲು ಬಳಿ ಕಾಡುಗಿಡ ಪೊದೆಗಳ ಮಧ್ಯೆ ಇರುವ ಖಾಲಿ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿಯಂತೆ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಉಮೇಶ್ ಕುಮಾರ್ ಎಂ.ಎನ್. ರವರು ಸಿಬ್ಬಂದಿಯವರೊಂದಿಗೆ ರಾತ್ರಿ 19-45 ಗಂಟೆಗೆ ಧಾಳಿ ನಡೆಸಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ (ಉಲಾಯಿ ಪಿದಾಯಿ) ಎಂಬ ನಸಿಬಿನ ಜೂಜಾಟ ಆಡುತ್ತಿದ್ದ ಆರೋಪಿಗಳಾದ ಜಗದೀಶ್ ಪೂಜಾರಿ, ನಿತಿನ್ ಫೆರಾವೋ, ಗ್ಯಾಟಿನ್, ಪ್ರಸನ್ನ ಕುಮಾರ್, ರಾಜು ಎಂಬವರನ್ನು ವಶಕ್ಕೆ ತೆಗೆದುಕೊಂಡು ಸ್ಥಳದಲ್ಲಿದ್ದ ಒಟ್ಟು ರೂಪಾಯಿ 4020/-, ಇಸ್ಪೀಟ್, ಕ್ಲೆವರ್, ಡೈಮಂಡ್ ಆಟೀನ್ ಹೀಗೆ ಒಟ್ಟು 52 ಇಸ್ಪೀಟ್ ಎಲೆಗಳು ಹಾಗೂ ನೆಲದ ಮೇಲೆ ಹಾಸಿದ್ದ ಪೇಪರ್ ಹಾಗೂ ಅರ್ಧ ಉರಿದ 6 ಮೇಣದ ಬತ್ತಿಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.
4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19-03-2014 ರಂದು 19-10 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ರಾಘವ ಪಡೀಲ್ ರವರಿಗೆ ಬಂದ ಖಚಿತ ವರ್ತಮಾನದಂತೆ ಸಿಬ್ಬಂದಿಗಳೊಂದಿಗೆ ಸಮಯ ಸುಮಾರು 19-20 ಗಂಟೆಗೆ ಮಂಗಳೂರು ನಗರದ ಫಳ್ನೀರು ಎಂಬಲ್ಲಿರುವ ಮಹಾರಾಜ ಹೈಟ್ಸ್ ಅಪಾರ್ಟ್ ಮೆಂಟ್ ನ ಪ್ಲಾಟ್ ನಂ: 1203 ನೇದಕ್ಕೆ ದಾಳಿ ನಡೆಸಿದಾಗ ಸದ್ರಿ ಪ್ಲಾಟ್ ನಲ್ಲಿ 20 ಮಂದಿ ಇಸ್ಫೀಟು ಕಾರ್ಡ್ ಗಳನ್ನು ಉಪಯೋಗಿಸಿಕೊಂಡು ಹಣವನ್ನು ಪಣವಾಗಿ ಇಟ್ಟುಕೊಂಡು ಉಲಾಯಿ ಪಿದಾಯಿ ಎಂಬ ಜುಗಾರಿ ಆಟವನ್ನು ಆಡುತ್ತಿದ್ದವರನ್ನು ವಶಕ್ಕೆ ಪಡೆದು ಅವರಿಲ್ಲಿದ್ದ 20910/- ನಗದು ರೂಪಾಯಿ ಹಾಗೂ ಆಟಕ್ಕೆ ಬಳಸಿದ ಸೊತ್ತು ಹಾಗೂ ಇಪ್ಸೀಟು ಎಲೆಗಳನ್ನು ಮತ್ತು ಅವರಲ್ಲಿದ್ದ ಮೊಬೈಲ್ ಸ್ವಾಧೀನಪಡಿಸಿಕೊಂಡು ಕ್ರಮ ಜರುಗಿಸಿರುವುದಾಗಿದೆ.
5.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-03-2014 ರಂದು ಶ್ರೀ ತಾಕ್ಕರ ಮಹೇಶ ಕುಮರ್ CISF ಪಣಂಬೂರು ಘಟಕದ ಕಾನಸ್ಟೇಬಲ್ ಜಿ.ಡಿ 894651997 ರವರು K.I.O.C.L ಬ್ಲಾಸ್ಟ ಪರನಾನ್ಸ್ ಯುನೀಟ್ ನ ವಾಚ್ ಟವರ ಬಳಿ ಕರ್ತವ್ಯದಲ್ಲಿದ್ದ ಸಮಯ ಮಧ್ಯಾಹ್ನ ಸುಮಾರು 12-20 ಗಂಟೆಗೆ BFU ಏರಿಯಾದ ಬಳಿ ಯಾರೋ 3 ಜನ ಅಪರಿಚಿತ ವ್ಯಕ್ತಿಗಳು ಹಳೆಯ ಗುಜರಿ ಸೂತ್ತುಗಳನ್ನು ಕಳವು ಮಾಡುವುದನ್ನು ನೋಡಿ ಅವರನ್ನು ಹಿಡಿಯಲು ಹೋಗಿರುತ್ತಾರೆ. ಆ ಸಮಯ 2 ಜನ ತಪ್ಪಿಸಿಕೊಂಡು ಶೇಖರ @ ಶೇಖರಪ್ಪ ನಾರಿನಾಳ ಎಂಬ ವ್ಯಕ್ತಿಯನ್ನು ಕಳವು ಸೊತ್ತುಗಳೊಂದಿಗೆ ಹಿಡಿದಿರುತ್ತಾರೆ. ಸ್ವಾಧೀನ ಪಡಿಸಿಕೊಂಡ ಹಳೆ ಗುಜರಿ ಕಬ್ಬಿಣದ ಅಂದಾಜು ಮೌಲ್ಯ 350 ರಿಂದ 400 /- ರೂ ಆಗಬಹುದು.
6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-03-2014 ರಂದು 22-23 ಗಂಟೆಗೆ ಮಂಗಳೂರು ನಗರದ ಎ.ಬಿ ಶೆಟ್ಟಿ ಸರ್ಕಲ್ ನಲ್ಲಿರುವ ಏರ್ ಟೆಲ್ ಕಛೇರಿಯಲ್ಲಿ SIS ಸೆಕ್ಯೂರಿಟಿ ಕಂಪೆನಿ ವತಿಯಿಂದ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಮುಖೇಶ್ ಶ್ರೀ ವಾಸ್ತವ್ ಎಂಬಾತನು ಕೀಯ ಸಹಾಯದಿಂದ KIOSK ಮಿಶನ್ ನ ಲಾಕ್ ತಗೆದು ರೂ 2,30,540/- ಕಳವು ಮಾಡಿಕೊಂಡು ಹೋಗಿರುವುದಾಗಿದೆ.
7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-03-2014 ರಂದು ಬೆಳಿಗ್ಗೆ 9-30 ಗಂಟೆ ಸಮಯಕ್ಕೆ, ಪೆರ್ಮನ್ನೂರು ಗ್ರಾಮದ ಕಲ್ಲಾಪು,ಕಣಚೂರು ಮಿಲ್ ಬಳಿ ರಾ.ಹೆ 66 ರಲ್ಲಿ ಕೆಎ 19 ಇಇ 2855 ನೇ ಮೋಟಾರು ಸೈಕಲ್‌ನ್ನು ಮಿಥೇಶ್ ಎಂಬವರು ಸವಾರಿ ಮಾಡುತ್ತಾ ಮಂಗಳೂರು ಕಡೆಗೆ ಹೋಗುತ್ತಿದ್ದು, ಅವರ ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ಈಶ್ವರ ಎಂಬವರು ಕೆಎ 19 ಎ 3886 ನೇ ನಂಬ್ರ ಲಾರಿಯನ್ನು ಅತೀ ವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದುದರಿಂದ ಮೋಟಾರು ಸೈಕಲ್ ಸಮೇತ ರಸ್ತೆ ಬಿದ್ದ ಮಿಥೇಶ್ರವರು ಗಂಭೀರ ಗಾಯಗೊಂಡಿರುತ್ತಾರೆ. ಗಾಯಾಳು ಮಿಥೇಶ್ರವರು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
No comments:
Post a Comment