ದಿನಾಂಕ 08.03.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 2 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 3 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 04-03-2014 ರಂದು ಪಿರ್ಯಾದುದಾರರಾದ ಶ್ರೀ ವಸಂತ ಕೆ. ರವರು ತಮ್ಮ ಕೆಲಸವನ್ನು ಮುಗಿಸಿ ಬಿಜೈ ಬಾಳಿಗಾ ಸ್ಟೋರ್ನಿಂದ ಕೆಲ ಸಾಮಾನುಗಳನ್ನು ಖರೀದಿಸಿಕೊಂಡು ಮನೆಯ ಕಡೆಗೆ ಹೋಗಲೆಂದು ಬಿಜೈ ಕಾಪಿಕಾಡ್‌ನ 4 ನೇ ಅಡ್ಡ ರಸ್ತೆಯ ಆ ಕಡೆಯಿಂದ ರಸ್ತೆಯನ್ನು ದಾಟಿಕೊಂಡು, 4 ನೇ ಅಡ್ಡ ರಸ್ತೆಯ ಎದುರಿಗೆ ತಲುಪುತ್ತಿದ್ದಂತೆ, ಸಂಜೆ ಸಮಯ ಸುಮಾರು 7:15 ಗಂಟೆಗೆ , ಬಿಜೈ ಕಡೆಯಿಂದ ಕುಂಟಿಕಾನ ಕಡೆಗೆ ಒಂದು ಮೋಟಾರು ಸೈಕಲ್ ನಂಬ್ರ ಕೆ.ಎ-12-ಕೆ-3271 ನೇದನ್ನು ಅದರ ಸವಾರನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ನನ್ನ ತಲೆಯ ಹಿಂಭಾಗಕ್ಕೆ ರಕ್ತ ಬರುವ ಗಾಯ ಮತ್ತು ಬಲಭುಜದಲ್ಲಿ ಗುದ್ದಿದ ತರಹದ ಗಾಯವಾಗಿರುತ್ತದೆ, ಅಲ್ಲದೆ ಸದ್ರಿ ಮೋಟಾರು ಸೈಕಲಿನ ಸವಾರನಿಗೂ ಗಾಯವಾಗಿರುತ್ತದೆ. ಬಳಿಕ ಗಾಯಾಳುಗಳಿಬ್ಬರನ್ನು ಅಲ್ಲಿದ್ದ ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ.
2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03.03.2014 ರಂದು ಫಿರ್ಯಾದಿದಾರರಾದ ಶ್ರೀ ಸುರೇಶ್ ಕೊಟ್ಯಾನ್ ರವರು ತಮ್ಮ ಕಾರಿನಲ್ಲಿ ಕಿನ್ನಿಗೋಳಿಯಿಂದ ಮೂಡಬಿದ್ರೆಗೆ ಬರುತ್ತಾ, ಮಂಗಳೂರು ತಾಲೂಕು, ಪುತ್ತಿಗೆ ಗ್ರಾಮದ ಸಂಪಿಗೆ ಹಳೆ ನೀರು ಸೇತುವೆ ಬಳಿಗೆ ತಲುಪಿದಾಗ ಸುಮಾರು 20:00 ಗಂಟೆಗೆ ಪಿರ್ಯಾದಿದಾರರ ಕಾರಿನ ಮುಂದಿನಿಂದ ಮೂಡಬಿದ್ರೆ ಕಡೆ ಬರುತ್ತಿದ್ದ, KA-20-X-7507 ನೇ ನಂಬ್ರದ ಮೋಟಾರು ಸೈಕಲನ್ನು ಅದರ ಸವಾರನು, ಸಹಸವಾರರೋರ್ವರನ್ನು ಕುಳ್ಳಿರಿಸಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದವರು, ಎದುರಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ರಸ್ತೆಯ ಬಲಬದಿಯಲ್ಲಿ ಬರುತ್ತಿದ್ದ ಟೆಂಪೋವೊಂದಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸಲು ಮೋಟಾರು ಸೈಕಲನ್ನು ರಸ್ತೆಯ ತೀರಾ ಎಡಕ್ಕೆ ಚಲಾಯಿಸಿದ ಕಾರಣ, ಮೋಟಾರ್ ಸೈಕಲ್ ರಸ್ತೆಯ ಅಂಚಿಗೆ ಸಿಲುಕಿ ಸಹಸವಾರನು ಒಮ್ಮೆಲೆ, ರಸ್ತೆ ಎಡಕ್ಕೆ ಎಸೆಯಲ್ಪಟ್ಟಿದ್ದು, ಪರಿಣಾಮ ಅವರ ತಲೆಯ ಹಿಂದುಗಡೆ ರಕ್ತ ಗಾಯವಾಗಿ, ಎಡಕೋಲು ಕೈಗೆ ರಕ್ತ ಗಾಯವಾಗಿದ್ದು, ಗಾಯಾಳು ಶಶಿಧರರನ್ನು ಪಿರ್ಯಾದಿದಾರರು, ಮೋಟಾರು ಸೈಕಲ್ ಸವಾರ ವಿನ್ಸ್ಟನ್ ಫೆರ್ನಾಂಡಿಸ್ ಹಾಗೂ ಇತರರು ಸೇರಿ ಚಿಕಿತ್ಸೆಗೆ ಆಳ್ವಾಸ್ ಆಸ್ಪತ್ರೆಗೆ ತಂದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಿಸಿದ್ದು, ಈ ಅಪಘಾತಕ್ಕೆ ಮೋಟಾರ್ ಸೈಕಲ್ ಸವಾರನ ಅತೀವೇಗ ಹಾಗೂ ಅಜಾಗರೂಕತೆಯ ಸವಾರಿಯೇ ಕಾರಣವಾಗಿರುತ್ತದೆ.
3.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 06-03-2014ರಂದು ಪಿರ್ಯಾದಿದಾರರಾದ ಶ್ರೀಮತಿ ಪಾತುಮ್ಮಾ ರವರು ಬೈಕಂಪಾಡಿ ಗ್ರಾಮದ ಅಂಗರಗುಂಡಿ ಎಂಬಲ್ಲಿರುವ ಅವರ ಮಗನ ಮನೆಯ ಜಗುಲಿಯಲ್ಲಿ ರಾತ್ರಿ 8-30ಗಂಟೆಗೆ ಕುಳಿತ್ತುಕೊಂಡಿದ್ದು, ರಾತ್ರಿ 8-58ಗಂಟೆಗೆ ಅವರ ಮನೆಯ ಮುಂದೆ ಇದ್ದ ರಸ್ತೆಯಲ್ಲಿ ಒಂದು ಬೈಕಿನಲ್ಲಿ ಬಂದ ಆರೋಪಿತ ಇಲ್ಯಾಸ್ ಮತ್ತು ಇನ್ನೊಬ್ಬರು ಪಿರ್ಯಾದಿದಾರರ ಗೇಟಿನ ಮುಂದೆ ಬೈಕ್ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಉಸ್ಮಾನ್ ಎಲ್ಲಿ ಅವನನ್ನು ಕೊಲ್ಲದೇ ಬಿಡುವುದಿಲ್ಲ, ನಿಮಗೆಲ್ಲಾ ಒಂದು ಗತಿ ಕಾಣಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿ ತೊಂದರೆ ಉಂಟು ಮಾಡಿರುತ್ತಾರೆ.
4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಲಿಖಿತ್ ಶೆಟ್ಟಿ ರವರು ಕರಾವಳಿ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ & ಕಮ್ಯೂನಿಕೇಶನ್ 2 ನೇ ವರ್ಷದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ವಿದ್ಯಾಬ್ಯಾಸದ ಖರ್ಚಿಗೆ ನಗರದಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದು, ಮನೆಗೆ ಹೋಗಲು ತಡವಾದರೆ ನಗರದ ರಥಬೀದಿ ಯಲ್ಲಿರುವ ಶ್ರೀನಿವಾಸ ಚಿತ್ರಮಂದಿರದ ಹಿಂಬದಿಯಲ್ಲಿರುವ ವೆಂಕಟೇಶ್ ಕಟ್ಟಡದಲ್ಲಿ ಉಳಕೊಳ್ಳುತ್ತಿದ್ದು, ದಿನಾಂಕ 07-03-2014 ರಂದು ಬೆಳಿಗ್ಗೆ 07:30 ಗಂಟೆಗೆ ನಗರದ ರಥಬೀದಿ ಯಲ್ಲಿರುವ ಶ್ರೀನಿವಾಸ ಚಿತ್ರಮಂದಿರ ಹಿಂಬದಿಯಲ್ಲಿರುವ ವೆಂಕಟೇಶ್ ಕಟ್ಟಡದಲ್ಲಿರುವ ರೂಮ್ ನಲ್ಲಿರುವ ಸಮಯ ಆರೋಪಿಗಳಾದ ವಿನೋದ್ ಮತ್ತು ನಿತಿನ್ ಎಂಬವರು ರೂಮ್ ಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರ ಕಾಲರ್ ಹಿಡಿದು ನಿತಿನ್ ಎಂಬವರ ಸಹಾಯದಿಂದ ಆರೋಪಿಗಳು ತಾವು ಬಂದಿರುವ ಸ್ಕೂಟರ್ ನಲ್ಲಿ ಒಟ್ಟಿಗೆ ಮೂರು ಜನ ಕುಳಿತುಕೊಂಡು ಮಂಗಳೂರು ಸೆಂಟ್ರಲ್ ಮಾರ್ಕೆಟ್ ನಲ್ಲಿರುವ ಆರೋಪಿ ಕಿರಣ್ ಎಂಬಾತನ ಹಣ್ಣುಹಂಪಲು ಅಂಗಡಿ ಎದುರು ನಿಲ್ಲಿಸಿದ್ದು, ಆ ಸಮಯ ಕಿರಣ್ ರವರು ಸಾಲದ ಹಣವನ್ನು ಕೇಳಿದ್ದು, ಅದಕ್ಕೆ ಪಿರ್ಯಾದಿದಾರರು "ನನ್ನಲ್ಲಿ ಕೊಡಲು ಈಗ ಹಣವಿಲ್ಲ" ಎಂದು ಹೇಳಿದಕ್ಕೆ, ಕಿರಣ್ ರವರು ಯಾರಿಗೋ ಫೋನ್ ಮಾಡಿ ಒಂದು ಆಲ್ಟೊ ಕಾರ ನಂಬ್ರ ಕೆಎ-19-ಎಂಡಿ-4479 ನೇದನ್ನು ತರಿಸಿ, ಅದರಲ್ಲಿ ಪಿರ್ಯಾದಿದಾರರನ್ನು ಬಲಾತ್ಕಾರವಾಗಿ ಕೂಡಿ ಹಾಕಿ ನಗರದ ಲೇಡಿಹಿಲ್ ನ ಯಾವುದೋ ಒಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಾರಿನಿಂದ ಇಳಿಸಿ, ಆರೋಪಿ ಕಿರಣ್ ನು ಕಾರಿನಲ್ಲಿದ್ದ ಮರದ ರೀಪಿನಿಂದ ಪಿರ್ಯಾದಿದಾರರ ಬಲಭುಜಕ್ಕೆ ಮತ್ತು ಬಲಕಾಲಿನ ಮೊಣಗಂಟಿಗೆ ಹೊಡೆದಿದ್ದು, ವಿನೋದ್ ಮತ್ತು ನಿತನ್ ರವರು ಮುಖಕ್ಕೆ ಮತ್ತು ಬೆನ್ನಿಗೆ ಕೈಯಿಂದ ಗುದ್ದಿದ್ದು, ಅಲ್ಲದೇ ಪಿರ್ಯಾದಿದಾರರ ಕಿಸೆಯಲ್ಲಿದ್ದ ರೂ. 500/- ನ್ನು ಬಲಾತ್ಕಾರವಾಗಿ ಕಸಿದುಕೊಂಡು ಮದ್ಯಾಹ್ನ 14:00 ಗಂಟೆಯವರೆಗೆ ಹೊಡೆದಿದ್ದು, ನಂತರ ಪಿರ್ಯಾದಿದಾರರನ್ನು ನಗರದ ರಥಬೀದಿ ಬಾಲಾಜಿ ಜಂಕ್ಷನ್ ನಲ್ಲಿ ಬಿಟ್ಟು ಹೋಗಿದ್ದು, ನಂತರ ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಸ್ನೇತರೊಬ್ಬರ ಸಹಾಯದಿಂದ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದು, ಈ ಕೃತ್ಯಕ್ಕೆ ಪಿರ್ಯಾದಿದಾರರು ಕಿರಣ್ ಎಂಬವರಿಂದ ಈ ಹಿಂದೆ ಪಡೆದು ಸಾಲದ ಹಣ ರೂ. 60,000/ ನ್ನು ಮರುಪಾವತಿಸಿಲ್ಲವೆಂದು ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿ ಪಿರ್ಯಾದಿದಾರರಿಂದ ಹಣವನ್ನು ಸುಲಿಗೆ ಮಾಡಿರುವುದಾಗಿದೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07-03-2014 ರಂದು 14.00 ಗಂಟೆ ಸಮಯಕ್ಕೆಮಂಗಳೂರು ನಗರದ ಬಂದರು ಧಕ್ಕೆಯ ಹಳೆ ಫೋರ್ಟ್ ರಸ್ತೆಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ದಿನಕರ ಶೆಟ್ಟಿ ರವರು ಸಿಬ್ಬಂದಿಗಳಾದ ಹೆಚ್.ಸಿ.742, ಪಿ.ಸಿ.819, ಪಿ.ಸಿ. 391 ರವರ ಕರೆದುಕೊಂಡು ವಾಹನ ತಪಾಸಣೆ ಮಾಡಿಕೊಂಡಿದ್ದ ಸಮಯದಲ್ಲಿ ದಕ್ಷಿಣ ದಕ್ಕೆ ಕಡೆಯಿಂದ ಆರೋಪಿ (1) ಎಸ್.ಎಂ. ಹಸೈನಾರ್ ಎಂಬಾತನು ಕೆಎ-19-ಸಿ.4343 ಅಟೋ ರಿಕ್ಷಾ ಟೆಂಪೋದಲ್ಲಿ 5 ಪೈಬರ್ ಡ್ರಮ್ ಗಳಲ್ಲಿ ತಲಾ 200ಲೀಟರ್ ನಂತೆ ಒಟ್ಟು 1000 ಲೀಟರ್ ನಷ್ಟು ದಹ್ಯವಸ್ತುವಾದ ಡೀಸೆಲ್ ಎಂಬ ಇಂಧನವನ್ನು ಆರೋಪಿ (2) ಮೊಹಮ್ಮದ್ ನಿಯಾಜ್ ಎಂಬಾತನು ಕೆಎ-19-ಡಿ-4674 ನೇ ಅಟೋ ಟೆಂಪೋದಲ್ಲಿ 4 ಪೈಬರ್ ಡ್ರಮ್ ಗಳಲ್ಲಿ ತಲಾ 200 ಲೀಟರ್ ಒಟ್ಟು 800 ಲೀಟರ್ ನಷ್ಟು ಮಾನವ ಜೀವಕ್ಕೆ ಅಪಾಯಕಾರಿ ದಹ್ಯ ವಸ್ತುವಾದ ಡೀಸೆಲ್ ಇಂಧನವನ್ನು ಯಾವುದೇ ಮುಂಜಾಗರೂಕತೆ ಕ್ರಮ ವಹಿಸದೇ ಅಪಾಯಕರ ರೀತಿಯಲ್ಲಿ ಅಕ್ರಮ, ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದುದ್ದು ಅಲ್ಲದೇ ಸದ್ರಿ ದಹ್ಯ ವಸ್ತುವಾದ ಇಂಧನವನ್ನು ಇತರ ಆರೋಪಿಗಳಾದ (3) ನೇ .ಕೆ. ಉಸ್ಮಾನ್ ಬಿನ್ ಕೆ.ಆದಂ, (4) ಮೊಹಮ್ಮದ್ ಶರೀಫ್ ಬಿನ್ ಅಬ್ದುಲ್ ರಹಿಮಾನ್ ಎಂಬವರು ಧಕ್ಕೆಯಲ್ಲಿರುವ ರೇಶ್ಮಾ ಫ್ಯೂವೆಲ್ಸ್ ನಿಂದ ಮತ್ತು ನೇತ್ರಾವತಿ ಸರ್ವಿಸ್ ಸ್ಟೇಷನ್ ಗಳಿಂದ ಲಕ್ಷದ್ವೀಪಕ್ಕೆ ಅಕ್ರಮವಾಗಿ ಆನಧಿಕೃತವಾಗಿ ಮಂಜಿನ ಮುಖಾಂತರ ಸಾಗಿಸುವ ಉದ್ದೇಶದಿಂದ ಖರೀದಿಸಿ ಆರೋಪಿ 1 ಮತ್ತು 2 ನೇ ಯವರ ಸದ್ರಿ ಅಟೋ ಟೆಂಪೋಗಳಲ್ಲಿ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೆ ಅಕ್ರಮವಾಗಿ ಸಾಗಾಟ ಮಾಡುತ್ತಿದುದ್ದನ್ನು ಪತ್ತೆ ಮಾಡಿ ಸ್ವಾಧೀನಪಡಿಸಿಕೊಂಡು ಕ್ರಮ ಕೈಗೊಂಡಿರುವುದಾಗಿದೆ.
6.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-03-2014 ರಂದು ಬೆಳಿಗ್ಗೆ 10-00 ಗಂಟೆಗೆ ಹಾಗೂ ತದ ನಂತರ ಮಂಗಳೂರು ತಾಲೂಕು ಕಳವಾರು ಗ್ರಾಮದ ಎಂ.ಆರ್.ಪಿ.ಎಲ್ 3ನೇ ಹಂತದ ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗುವರೇ ಪಿರ್ಯಾದಿದಾರರಾದ ಶ್ರೀ ಸಂಜಯ್ ದೀಕ್ಷಿತ್, ಜನರಲ್ ಮ್ಯಾನೇಜರ್ ಸೆಕ್ಯೂರಿಟಿ, ಎಂ.ಆರ್.ಪಿ.ಎಲ್. ಕುತ್ತೇತ್ತೂರು, ಮಂಗಳೂರು ರವರು ಜೋಕಟ್ಟೆ ಗೇಟ್ ಎಂಬಲ್ಲಿ ಜೋಕಟ್ಟೆ ಹಾಗೂ ಅಸುಪಾಸಿನ ಸುಮಾರು 30 ಜನರ ಗುಂಪು ಅಕ್ರಮ ಕೂಟ ಸೇರಿಕೊಂಡು ಗೇಟಿನ ಮುಂದೆ ಜಮಾಯಿಸಿ ಕಂಪೆನಿಯ ವಾಹನ ಹಾಗೂ ಕೆಲಸಗಾರರನ್ನು ತಡೆದು ತೊಂದರೆ ಉಂಟು ಮಾಡಿದ್ದು ಅಲ್ಲದೇ ದಿನಾಂಕ 28-02-2014 ರಂದು ಕೂಡಾ ಇದೇ ರೀತಿ ತಡೆಯೊಡ್ಡಿರುವುದಾಗಿ ಪಿರ್ಯಾದಿ ನಿಡಿರುವುದಾಗಿದೆ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07.03.2014 ರಂದು ಮಧ್ಯಾಹ್ನ 01.45 ಗಂಟೆಗೆ ಅರ್ಕುಳ ವಳಚ್ಚಿಲ್ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಎಫ್. ಮಹಮ್ಮದ್ ರವರು ತನ್ನ ಬಾಬ್ತು ಕೆಎ-19-ಎಂಡಿ-8483 ನೇ ಮಾರುತಿ ಕಾರಿನಲ್ಲಿ ಫರಂಗಿಪೇಟೆಗೆಂದು ಹೋಗುತ್ತಿದ್ದ ವೇಳೆ ಪಿರ್ಯಾದಿದಾರರ ಮನೆಯ ಬಳಿಯ ಪುತ್ತು ಬಾವ ಯಾನೆ ಖಾದರ್ ಎಂಬಾತನು ಕೈಯಲ್ಲಿ ದೊಡ್ಡ ಕಲ್ಲೊಂದನ್ನು ಹಿಡಿದುಕೊಂಡು ಪಿರ್ಯಾದಿದಾರರ ಕಾರಿಗೆ ಅಡ್ಡ ನಿಂತು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಪಿರ್ಯಾದಿದಾರರ ಮುಖಕ್ಕೆ ಎರಡು ಬಾರಿ ಬಲವಾಗಿ ಹೊಡೆದು ಎಡಕೆನ್ನೆಗೆ ಮತ್ತು ಎಡಕಣ್ಣಿನ ಬಳಿ ರಕ್ತಗಾಯ ಉಂಟುಮಾಡಿ ಪಿರ್ಯಾಧಿದಾರರನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವಬೆದರಿಕೆ ಹಾಕಿರುತ್ತಾರೆ.
No comments:
Post a Comment