Tuesday, March 25, 2014

Daily Crime Report 25-03-2014

ದೈನಂದಿನ ಅಪರಾದ ವರದಿ.

ದಿನಾಂಕ 25.03.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ದಿಲ್ಶಾದ್ ಬಾಶಿತ ರವರು ದಿನಾಂಕ 07-05-2007 ರಂದು ಮಂಗಳೂರು ತಾಲೂಕು ಹರೇಕಳ ಗ್ರಾಮದ ಮಲಾರ್ ಎಂಬಲ್ಲಿ ಆರೋಪಿ ಉಮ್ಮರ್ ಫಾರೂಕ್ ಎಂಬಾತನನ್ನು ಸಾಂಪ್ರದಾಯಿಕವಾಗಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದು, ಒಂದು ಗಂಡು ಮಗು ಕೂಡಾ ಇರುತ್ತದೆ. ಮದುವೆ ವೇಳೆಯಲ್ಲಿ ಪಿರ್ಯಾದಿ ತವರು ಮನೆಯವರು 65 ಪವನ್ ಚಿನ್ನ ಮತ್ತು 3.5 ಲಕ್ಷ ರೂಪಾಯಿ ವರದಕ್ಷಿಣೆಯನ್ನು ಆರೋಪಿಗೆ ಕೊಟ್ಟಿದ್ದು, ತದ ನಂತರ ಆರೋಪಿಯು ಮತ್ತೆ ತವರು ಮನೆಯಿಂದ 10 ಲಕ್ಷ ರೂಪಾಯಿ ವರದಕ್ಷಿಣೆ ತರಬೇಕೆಂದು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ವರದಕ್ಷಿಣೆಗಾಗಿ ಒತ್ತಾಯ ಮಾಡುತ್ತಿರುವುದಾಗಿದೆ.

 

2.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ನಡುಪದವು ಎಂಬಲ್ಲಿರುವ ಪಿ. ಕಾಲೇಜಿನ ಹಾಸ್ಟೆಲ್ಕಟ್ಟಡದ ಪೈಂಟಿಂಗ್ ಕೆಲಸವನ್ನು ಹುಸೈನ್ ಅಹಮ್ಮದ್ ಮಜುಂದಾರ್ ರವರು ಮಾಡುತ್ತಿದ್ದು, ದಿನಾಂಕ 24-03-2014 ರಂದು ಮಧ್ಯಾಹ್ನ 2:45 ಗಂಟೆಗೆ ಸದ್ರಿ ಹಾಸ್ಟೆಲ್ 3ನೇ ಅಂತಸ್ತಿನ ಕಟ್ಟಡದಿಂದ ಹಗ್ಗದಿಂದ ಕೆಳಗೆ ಇಳಿಯುವಾಗ ಕೈತಪ್ಪಿ ಸುಮಾರು 60 ಅಡಿ ಎತ್ತರದಿಂದ ಕೆಳಗೆ ಬಿದ್ದು, ತಲೆಗೆ ತೀವ್ರ ಗಾಯವಾಗಿದ್ದವರನ್ನು ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 10:45 ಗಂಟೆಗೆ ಮೃತಪಟ್ಟಿರುತ್ತಾರೆ. ಗುತ್ತಿಗೆದಾರ ನಿತೇಶ್ ಮತ್ತು ಸಹಗುತ್ತಿಗೆದಾರ ಇಮ್ರಾನ್ರವರು ಯಾವುದೇ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳದೇ ಮತ್ತು ಕೆಲಸದ ಮುತುವರ್ಜಿಯನ್ನು ತೆಗೆದುಕೊಳ್ಳದೇ ಹಾಗೂ ಸುರಕ್ಷತಾ ಸಾಮಾಗ್ರಿಗಳನ್ನು ಕೂಡಾ ಕೊಡದೇ ಇರುವುದರಿಂದ ಘಟನೆ ಆಗಿರುತ್ತದೆ.

 

3.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಸರೋಜಾ ರವರು ಆರ್‌.ಸಿ. ಮಾಲಕರಾಗಿರುವ ಆಟೋ ರಿಕ್ಷಾ ನಂಬ್ರ ಕೆಎ-19ಸಿ-4764 ನೇಯದನ್ನು ಅವರ ಮಗ ರಾಜೇಶ ಎಂ(26) ಎಂಬಾತನು ದಿನಾಂಕ 22.03.2014 ರಂದು ಮಂಗಳೂರು ಕಡೆಯಿಂದ ಎಲ್ಯಾರ್ಕಡೆಗೆ ಪ್ರಯಾಣಿಕರನ್ನು ಕರೆದುಕೊಂಡು ಬಂದು ಪ್ರಯಾಣಿಕರನ್ನು ಇಳಿಸಿ ರಾತ್ರಿ ಸುಮಾರು 11:00 ಗಂಟೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದು ಮಂಗಳೂರು ತಾಲೂಕು ಹರೇಕಳ ಗ್ರಾಮದ ನ್ಯೂಪಡ್ಪು ಎಂಬಲ್ಲಿ ತಲುಪಿದಾಗ ನ್ಯೂಪಡ್ಪು ತಿರುವಿನಲ್ಲಿ ರಿಕ್ಷಾವು ಹತೋಟಿ ತಪ್ಪಿ ಮಗುಚಿ ಸುಮಾರು 50 ಅಡಿ ಆಳಕ್ಕೆ ಬಿದ್ದ ಪರಿಣಾಮ ರಾಜೇಶರವರ ಎರಡೂ ಕಾಲುಗಳಿಗೂ ಮೂಳೆ ಮುರಿತದ ಗಾಯವಾಗಿದ್ದು, ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿರುತ್ತಾರೆ.

 

4.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-03-2014 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ವಿ. ಶಶಿಕಲಾ ವಿ. ಸಾಲ್ಯಾನ್ ರವರು ಮನೆಗೆ ಬೀಗ ಹಾಕಿ ಸಸಿಹಿತ್ಲು ಕಡೆ ತರಳಿದ್ದು ದಿನಾಂಕ 25-03-2014 ರಂದು  ಬೆಳಿಗ್ಗೆ 11-30 ಗಂಟೆ ಸಮಯಕ್ಕೆ  ನೆರೆಕರೆಯವರು ಫೋನ್ ಮಾಡಿ ಮನೆಯ ಹಿಂದಿನ ಬಾಗಿಲು ಮುರಿದಿರುವುದಾಗಿ ತಿಳಿದಂತೆ, ಪಿರ್ಯಾದಿದಾರರು ಬೆಳಿಗ್ಗೆ  ಮನೆಗೆ ಬಂದು ನೋಡಲಾಗಿ ಯಾರೋ  ಕಳ್ಳರು ಪಿರ್ಯಾದಿದಾರರ ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿ ಮನೆಯ ಒಳಗಿನ ಮಲಗುವ ಕೋಣೆಯಿಂದ ಸುಮಾರು 16 ಗ್ರಾಂ ತೂಕದ 4 ಚಿನ್ನದ ಉಂಗುರಗಳನ್ನು ಹಾಗೂ ರೂ 25000/- ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸ್ವತ್ತಿನ ಒಟ್ಟು ಮೌಲ್ಯ ರೂ 75000/- ಆಗಿರುವುದಾಗಿದೆ.

 

5.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ವಾಸುದೇವ್ ಯು. ರವರು ಜನರಲ್ಮ್ಯಾನೆಜರ್ಆಗಿರುವ ಶ್ರೀ ಭಗವತಿ ಕೋ-ಅಪರೇಟಿವ್ಬ್ಯಾಂಕ್  ತೊಕ್ಕೋಟು ಶಾಖೆಯಲ್ಲಿ ಆರೋಪಿ ಕರುಣಾಕರ ಬಿ ಎಮ್ಎಂಬುವವರು ದಿನಾಂಕ 03-06-2010 ರಿಂದ ದಿನಾಂಕ 31-08-2011 ರತನಕ ಶಾಖಾಧಿಕಾರಿಯಾಗಿದ್ದು, ಸಮಯದಲ್ಲಿ ಸಿರಿಲ್ ಡಿಸೋಜಾ ಎಂಬುವವರು ಬ್ಯಾಂಕಿಗೆ ಕಟ್ಟಿದ್ದ ಹಣದಲ್ಲಿ ರೂ 50,000 ನ್ನು ಠೇವಣಿ ಇಡದೆ ಸ್ವಂತಕ್ಕೆ ದುರುಪಯೋಗ ಪಡಿಸಿಕೊಂಡಿದ್ದು ಹಾಗೆಯೇ ಆವಿನ್ಎಂಬುವವರ 54,922 ರೂ , ಗೋಪಾಲ್ಕೃಷ್ಣ ಎಂಬುವವರ 55,000 ಹಾಗೂ 40,000 ರೂ ಹಣ ಮತ್ತು  ಭವಾನಿ ಎಂಬುವವರ ಬಾಬ್ತು ಹಣವನ್ನು ಅವಧಿಗಿಂತ ಮೊದಲೆ ಠೇವಣಿದಾರರ ಅನುಮತಿ ಇಲ್ಲದೆ ಪಡೆದುಕೊಂಡು, ಸ್ವಂತಕ್ಕೆ ಉಪಯೋಗಿಸಿಕೊಂಡು ನಂಬಿಕೆದ್ರೋಹ ಮತ್ತು ಮೋಸ ಮಾಡಿರುತ್ತಾರೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀಮತಿ ಕುಶಾಲಾ ರವರ ಗಂಡ ಕುಮಾರ್‌‌ ಯಾನೆ ರತ್ನಾಕರ್‌‌ ಪ್ರಾಯ ಸುಮಾರು 33 ವರ್ಷ,  ರವರು ದಿನಾಂಕ: 22.03.2014 ರಂದು 16.00 ಗಂಟೆಗೆ ಶಕ್ತಿನಗರ ತನ್ನ ಮನೆಯಿಂದ ಪಿರ್ಯಾಧಿದಾರರ ತಂಗಿಯ  ಗಂಡ ಹರೀಶ್‌‌ ರವರ ಟಿಪ್ಪರ್‌‌ನಲ್ಲಿ ಡ್ರೈವಿಂಗ್‌‌ ಕಲಿಯಲೆಂದು ಮನೆಯಿಂದ ಹೋದವರು ರಾತ್ರಿ 9.30 ಗಂಟೆಯಾದರೂ ಹಿಂತಿರುಗಿ  ಮನೆಗೆ ಬಾರದೆ ಕಾಣೆಯಾಗಿರುವುದಾಗಿಯೂ, ಕಾಣೆಯಾದ ಕುಮಾರ್‌‌ ರವರ ಪತ್ತೆಯ ಬಗ್ಗೆ  ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ  ಮತ್ತು ಇತರ ಕಡೆಗಳಲ್ಲಿ ವಿಚಾರಿಸಿದಲ್ಲಿ ವರೆಗೂ ಪತ್ತೆಯಾಗದೇ ಇದ್ದು, ಕಾಣೆಯಾದವರ ಚಹರೆ : ಕುಮಾರ್‌‌ ಯಾನೆ ರತ್ನಕುಮಾರ್‌‌, ಪ್ರಾಯ ಸುಮಾರು 40 ವರ್ಷ, ಎತ್ತರ 171 ಸೆಂ.ಮೀ, ಎಣ್ಣೆ ಕಪ್ಪು ಮೈಬಣ್ಣ, ಫ್ರೆಂಚ್‌‌ ಗಡ್ಡದಾರಿಯಾಗಿರುತ್ತಾರೆ, ಕಪ್ಪು ಪ್ಯಾಂಟ್‌‌ ಮತ್ತು ಬಿಳಿ ಶರ್ಟ್ಧರಿಸಿರುತ್ತಾರೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16.03.2014 ರಂದು  ಪಿರ್ಯಾಧಿದಾರರಾದ ಶ್ರೀ ಸುರೇಶ್ ರವರು ತನ್ನ ಬಾಬ್ತು ಕೆಎ-19-ಇಸಿ-2027 ನೇ ಬಜಾಜ್‌‌ ಡಿಸ್ಕವರಿ ಮೋಟಾರ್‌‌ ಸೈಕಲನ್ನು ಕಾಪೆಟ್ಟು ಸೈಟ್‌‌ ಬಿತ್ತುಪಾದೆ ಎಂಬಲ್ಲಿ ತನ್ನ ಮನೆಗೆ ಹೋಗುವ ರಸ್ತೆಯಲ್ಲಿ ನಿಲ್ಲಿಸಿದ್ದು ಸದ್ರಿ ಬೈಕನ್ನು ಅದೇ ದಿನ ರಾತ್ರಿ 8.30 ಗಂಟೆಗೆ ನೋಡಿದ್ದು ದಿನಾಂಕ: 17.03.2014 ರಂದು ಬೆಳಿಗ್ಗೆ  06.00 ಗಂಟೆಗೆ ಪಿರ್ಯಾಧಿದಾರರ ಪತ್ನಿ ಶ್ರೀಮತಿ ಗೀತಾ ರವರು ಎದ್ದು ನೋಡಿದಾಗ  ಸದ್ರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬಜಾಜ್‌‌‌ ಡಿಸ್ಕವರ್‌‌ ಮೋಟಾರ್‌‌ ಸೈಕಲ್‌‌  ಕಾಣೆಯಾಗಿದ್ದು, ಮೋಟಾರ್‌‌ ಸೈಕಲ್‌‌ ಪತ್ತೆಯ ಬಗ್ಗೆ ಆಸುಪಾಸಿನಲ್ಲಿ  ಮತ್ತು ಪಣಂಬೂರು, ಮಂಗಳೂರು ನಗರ, ತೊಕ್ಕೊಟ್ಟು, ಬಂಟ್ವಾಳ ಮುಂತಾದ ಕಡೆಗಳಲ್ಲಿ  ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ಸದ್ರಿ ಮೋಟಾರ್‌‌ ಸೈಕಲನ್ನು ದಿನಾಂಕ: 16/17.03.2014 ರಾತ್ರಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿಯೂ ಕಳವಾದ ಮೋಟಾರ್‌‌ ಸೈಕಲ್‌‌ ಅಂದಾಜು ಮೌಲ್ಯ  25000/- ಆಗಬಹುದು.

No comments:

Post a Comment