Saturday, March 8, 2014

Daily Crime Report 05-4-2014

ದಿನಾಂಕ 05.03.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

3

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು, ಬೆಳ್ಮ ಗ್ರಾಮದ ದೇರಳಕಟ್ಟೆ ಕಣಚೂರು ಶಾಲೆಯ ಎದುರುಡಗೆ ಜಲಾಲ್ ಬಾಗ್ ಎಂಬಲ್ಲಿ ದಿನಾಂಕ: 04-03-2014 ರಂದು ರಾತ್ರಿ 10-55ಗಂಟೆಗೆ ನಾಟೆಕಲ್ ಕಡೆಯಿಂದ ದೇರಳಕಟ್ಟೆ ಕಡೆಗೆ ಬೈಕು ನಂಬ್ರ ಕೆಎ19-ಆರ್-9532ರ ಸವಾರ ಅಬ್ದುಲ್ ಜಲೀಲ್ ಎಂಬವನು ಬೈಕನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಬಂದು ಬೆಳ್ಮ ಗ್ರಾಮದ ದೇರಳಕಟ್ಟೆ ಕಣಚೂರು ಶಾಲೆಯ ಎದುರುಡಗೆ ಜಲಾಲ್ ಬಾಗ್ ಎಂಬಲ್ಲಿ ಕಚ್ಚಾ ರಸ್ತೆಯಲ್ಲಿ ದೇರಳಕಟ್ಟೆ ಕಡೆಗೆ ಮುಖಮಾಡಿ  ನಿಂತ ವಾಟರ್ ಟ್ಯಾಂಕರ್ ಲಾರಿ ನಂಬ್ರ ಕೆಎ-03-ಬಿ-5570 ಕ್ಕೆ ಹಿಂದುಗಡೆ ಬಾಡಿಗೆ ಢಿಕ್ಕಿ ಹೊಡೆದು ಬೈಕು ಸವಾರ ಮತ್ತು ಬೈಕಿನ ಸಹಸವಾರ ಲಾರಿ ಟಿಪ್ಪರ್ ಬಾಡಿಗೆ  ಎಸೆದು ಬಿದ್ದು ಸಹ ಸವಾರ ಮಹಮ್ಮದ್ ಮುಸ್ತಾಪ್ ರವರು ತಲೆಗೆ ತೀವ್ರಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಬೈಕು ಸವಾರ ಅಬ್ದುಲ್ ಜಲೀಲ್ ರವರಿಗೆ ಮೈಕೈಗೆ ಅಲ್ಲಲ್ಲಿ ಗಾಯವಾಗಿರುತ್ತದೆ.ಮಹಮ್ಮದ್ ಮುಸ್ತಾಫ್ ರವರ ಶವವನ್ನು ಕೆ ಎಸ್ ಹೆಗ್ಡೆ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು ಬೈಕು ಸವಾರ ಆರೋಪಿ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

2.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-03-2014 ರಂದು ಪಿರ್ಯಾದಿದಾರರಾದ ಮೊಹಮ್ಮದ್ ಶರೀಫ್ ರವರು ಮಂಗಳೂರಿನಿಂದ ಕಾಪುಗೆ ತನ್ನ ಬಾಬ್ತು KA-19-ED-9230 ನೇ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿರುವಾಗ್ಗೆ ಸಮಯ ಸುಮಾರು 16:30 ಗಂಟೆಯ ವೇಳೆಗೆ ಮುಲ್ಕಿ ಬಸ್ಸು ನಿಲ್ದಾಣದಿಂದ ಸ್ವಲ್ಪ ಮುಂದೆ ಆರ್ ಆರ್ ಟವರ್ ಬಳಿ ತಲುಪುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಎದುರಿನಿಂದ ಅಂದರೆ ಉಡುಪಿ ಕಡೆಯಿಂದ - ಮಂಗಳೂರು ಕಡೆಗೆ ನ್ಯಾನೋ  ಕಾರು KA-20-P-6621 ನೇ ಯದ್ದನ್ನು ಅದರ ಚಾಲಕ ಶಿವರಾಮ್  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ KA-19-ED-9230 ನೇ ಮೋಟಾರ್ ಸೈಕಲ್ ಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಹಣೆಗೆ ಗುದ್ದಿದ ಹಾಗೂ ತರಚಿದ ಗಾಯ, ಬಲ ಕಾಲಿನ ತೊಡೆಗೆ ಗುದ್ದಿದ ಗಾಯ ಹಾಗೂ ಬಲಕೈ ಮೊಣಗಂಟಿಗೆ ತರಚಿದ ಗಾಯವಾಗಿದ್ದು, ಅಪಘಾತಪಡಿಸಿದ ಕಾರಿನ ಚಾಲಕರು ಹಾಗೂ ಅಲ್ಲಿ ಸೇರಿದ ಜನರು ಸೇರಿ ಒಂದು ಕಾರಿನಲ್ಲಿ ಹಾಕಿಕೊಂಡು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ, ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ,ಜೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

3.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-03-14 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ 04-03-14 ರಂದು ಬೆಳಿಗ್ಗೆ 05.30 ಗಂಟೆಯ ಮಧ್ಯಾವಧಿಯಲ್ಲಿ ಮಂಗಳೂರು ತಾಲೂಕು ಪ್ರಾಂತ್ಯ ಗ್ರಾಮದ ಕೋರ್ಪಸ್ ಚರ್ಚ್ ನ ಕಟ್ಟಡದ ಪಕ್ಕದಲ್ಲಿರುವ ಕನ್ಯಾಮತಿಯಮ್ಮರವರ ಗ್ರೊಟ್ಟೋಗೆ ಹಾಕಿದ ಗ್ಲಾಸ್ ನ್ನು ಹಾಗೂ ಬಾಲ ಏಸು ಸ್ವಾಮಿಯ ಗ್ರೊಟ್ಟೋಗೆ ಹಾಕಿದ ಗ್ಲಾಸ್ ನ್ನು ಯಾರೋ ಕಳ್ಳರು ಒಡೆದು ಒಳಗಡೆ ಇರಿಸಿದ್ದ ಕಾಣಿಕೆ ಡಬ್ಬಿಗಳ ಬೀಗವನ್ನು ಒಡೆದು  ಅದರಲ್ಲಿದ್ದ ಸುಮಾರು 300 ರೂ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

4.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 04-03-2014ರಂದು ಬೆಳಿಗ್ಗೆ 09-30ಗಂಟೆ ಸಮಯಕ್ಕೆ ಮಾನ್ಯ ನ್ಯಾಯಾಲಯದ ಪರಿಮಿತಿಯ ಬೈಕಂಪಾಡಿ ಗ್ರಾಮದ ಅಂಗರಗುಂಡಿ ರಫೀಕ್ ಎಂಬವರ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಆಪಾದಿತರುಗಳಾದ 1) ರಫೀಕ್ 2) ಉಸ್ಮಾನ್ 3) ಯೂನಾಸ್ ಇವರುಗಳು ಸಮಾನ ಉದ್ದೇಶದಿಂದ ಮಸೀದಿಯ ಮಹಾ ಸಭೆಯ ಬಗ್ಗೆ ಪಿರ್ಯಾದಿದಾರರಾದ ಶ್ರೀ ಇಲ್ಯಾಸ್ ರವರನ್ನು ಉದ್ದೇಶಿಸಿ ನೀನು ಭಾರಿ ಮಾತನಾಡುತ್ತೀಯಾ ಎಂದು ಅವಾಚ್ಯ ಬೈದು ಉಸ್ಮಾನ್ ನು ಆತನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಪಿರ್ಯಾದಿಗೆ ಹೊಡೆದು ಕಿವಿ, ಎಡಕೈ, ಕೋಲುಕೈ ಮತ್ತು ಎಡಕಾಲಿಗೆ ಗಾಯವುಂಟು ಮಾಡಿರುವುದಲ್ಲದೇ ರಫೀಕ್ ಮತ್ತು ಯುನಾಸ್ ಕೈಗಳಿಂದ ಪಿರ್ಯಾದಿಗೆ ಹೊಡೆದು ಕಾಲಿನಿಂದ ತುಳಿದು ಕೃತ್ಯವೆಸಗಿ ಗಾಯಗೊಂಡ ಪಿರ್ಯಾದಿ ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

5.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 04-03-2014 ಬೆಳಿಗ್ಗೆ 09-30ಗಂಟೆ ಸಮಯಕ್ಕೆ ಮಾನ್ಯ ನ್ಯಾಯಾಲಯದ ಪರಿಮಿತಿಯ ಬೈಕಂಪಾಡಿ ಗ್ರಾಮದ ಅಂಗರಗುಂಡಿ ಶರ್ಫುದ್ದೀನ್ ಎಂಬವರ ಮನೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಆಪಾದಿತರುಗಳಾದ 1) ಇಲ್ಯಾಸ್ 2)ಇಬ್ಬ ಯಾನೆ ಇಬ್ರಾಹಿಂ ಇವರುಗಳು ಹಣದ ವಿಚಾರದಲ್ಲಿ ಪೂರ್ವದ್ವೇಷದಿಂದ ಸ್ಕೂಟರ್ ನಲ್ಲಿ ಬಂದು ಪಿರ್ಯಾದಿದಾರರಾದ ಶ್ರೀ ಉಸ್ಮಾನ್ ಎನ್.ಬಿ. ರವರನ್ನು ತಡೆದು  ತಾಗಿಸಿದಾಗ ಕೆಳಗೆ ಬಿದ್ದ ಪಿರ್ಯಾದಿದಾರರಿಗೆ ಇಬ್ಬ ಯಾನೆ ಇಬ್ರಾಹಿಂನು ಅವಾಚ್ಯ ಶಬ್ದಗಳಿಂದ ಬೈದು ಇಲ್ಯಾಸನು ಮರದ ಕೋಲಿನಿಂದ ಮತ್ತು ಇಬ್ಬ ಯಾನೆ ಇಬ್ರಾಹಿಂನು ಬಾಳೆಗೊನೆಯ ಒಣಗಿದ ದಂಟಿನಿಂದ ಹೊಡೆದು, ಕುತ್ತಿಗೆಯನ್ನು ಒತ್ತಿ ಹಿಡಿದು ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ. ಗಾಯಗೊಂಡ ಪಿರ್ಯಾದಿ ಮಂಗಳೂರು ಎಸ್.ಸಿ.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

 

6.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀಮತಿ ಶಾರದಾ ಕೆ., ರವರು ಮಂಗಳೂರು ನಗರದ ಕಂಕನಾಡಿ ಈಶ್ವರಾನಂದ ಮಹಿಳಾ ಸೇವಾಶ್ರಮ ಸೊಸೈಟಿಯಲ್ಲಿ ಗೃಹಮಾತೆಯಾಗಿ ಸೇವೆ ಸಲ್ಲಿಸುತ್ತಿರುವ ಆಶ್ರಮದಲ್ಲಿ ದಿನಾಂಕ 17/02/2014 ರಂದು ಬಾಲನ್ಯಾಯ ಮಂಡಳಿಯಿಂದ ಸೇರ್ಪಡೆಯಾಗಿದ್ದ ಪುಷ್ಪ (16) ಎಂಬವಳು ದಿನಾಂಕ 03/03/2014 ರಂದು 13:30 ಗಂಟೆಗೆ ಆಶ್ರಮದಿಂದ ಇದಕ್ಕಿದ್ದ ಹಾಗೆ ಹೇಳದೇ ಕೇಳದೆ ಕಾಣೆಯಾಗಿರುತ್ತಾಳೆ. ಈಕೆಯು ಮೂಡುಶೆಡ್ಡೆಯವಳಾಗಿದ್ದು, ತಂದೆ ತಾಯಿ ಇಲ್ಲದೇ ಬಾಲನ್ಯಾಯ ಮಂಡಳಿಗೆ ಸೇರ್ಪಡೆಯಾಗಿರುತ್ತಾಳೆ.

 

7.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 04-03-2014ರಂದು ಮಧ್ಯಾಹ್ನ ಸಮಯ ಸುಮಾರು 12-40ಗಂಟೆಗೆ ಪಿರ್ಯಾದಿದಾರರಾದ ಮೊಹಮ್ಮದ್ ಇಮ್ರಾನ್ ರವರು ಹಾಗೂ ಪಿರ್ಯಾದಿ ಸ್ನೇಹಿತ ಹೈದರ್ ರವರು ಅಂಗಾರಗುಂಡಿ ಮಸೀದಿಗೆ ಹೋಗುವಾಗ ಮಸೀದಿಗೆ ಸಂಬಂಧಿಸಿದ ಅಂಗಡಿ ಬಳಿ ತಲುಪುತ್ತಿದ್ದಂತೆ ಕಾರನ್ನು ಅಡ್ಡವಾಗಿ ನಿಲ್ಲಿಸಿ ಆರೋಪಿಗಳಾದ ಇಸಾಕ್, ಎನ್.ಬಿ. ಅಬೂಬಕ್ಕರ್, ರಫೀಕ್, ಹಮೀದ್, ತಾಲೆ ರಫೀಕ್, ಮೌಸೂಕ್, ಮೆಹರೂಫ್, ಉಮ್ಮರಬ್ಬಾ, ಎನೊಸ್, ಮಯ್ಯದ್ದಿ ಎಂಬವರೆಲ್ಲರೂ ಸಮಾನ ಉದ್ದೇಶದಿಂದ ಅಕ್ರಮಕೂಟ ಸೇರಿ ಪಿರ್ಯಾದಿ ಹಾಗೂ ಅವರ ಸ್ನೇಹಿತ ಹೈದರ್ ನ್ನು ಉದ್ದೇಶಿಸಿ ಮಸೀದಿಯ ಮಹಾ ಸಭೆಯ ವಿಚಾರದಲ್ಲಿ ಹಣ ತಿಂದಿದ್ದೀರಿ ಎಂದು ಹೇಳಿ ಇಬ್ಬರಿಗೆ ಎಲ್ಲರೂ ಸೇರಿ ಕೈಗಳಿಂದ ಹೊಡೆದು ಕಾಲುಗಳಿಂದ ತುಳಿದು ಹಲ್ಲೆ ನಡೆಸಿರುತ್ತಾರೆ.

 

8 ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-03-2014 ರಂದು ಸುಮಾರು ಸಂಜೆ 6.45  ಗಂಟೆಗೆ ಪಿರ್ಯಾದುದಾರರಾದ ಶ್ರೀ ಆಸ್ಟಿನ್ ಪೆರೇರಾ ರವರ ತಂದೆಯಾದ ಶ್ರೀ ಮಾರ್ಸೆಲ್ ಪಿರೇರಾ (87) ಎಂಬವರು  ಮಂಗಳೂರು ನಗರದ ಕದ್ರಿ ಟೋಲ್ ಗೇಟ್ ನಲ್ಲಿರುವ ಪಿರ್ಯಾದುದಾರರ ವಾಸ್ತವ್ಯದ ಮನೆಯಿಂದ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಕಾಣೆಯಾದವರನ್ನು ಪಿರ್ಯಾದುದಾರರು ಸಂಬಂಧಿಕರ ಮನೆಯಲ್ಲಿ, ನಗರದ ಎಲ್ಲಾ ಕಡೆಯಲ್ಲಿ ಹುಡುಕಾಡಿ ಪತ್ತೆಯಾಗದ ಕಾರಣ ನಂತರ ಪಿರ್ಯಾದಿ ನೀಡಿರುವುದಾಗಿದೆ.

 

9.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ ಭವಂತಿ ರಸ್ತೆಯ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಅಂಗಡಿಗಳಲ್ಲಿ ಸ್ಯಾಮಸಂಗ್ ಮೊಬೈಲ್ ನ ಪರಿಕರಗಳನ್ನು ನಕಲಿ ಮಾಡಿ , ನಕಲಿ ಸ್ಯಾಮಸಂಗ್ ಪರಿಕರಗಳನ್ನು ಅಸಲಿ ಎಂದು ಮಾರಾಟ ಮಾಡುವವರ ಬಗ್ಗೆ ಕ್ರಮಕೈಗೊಳ್ಳುವಂತೆ ಪಿರ್ಯಾದಿದಾರರಾದ ಶ್ರೀ ಸ್ಟೀಪನ್ ರಾಜ್, ತನಿಖಾಧಿಕಾರಿ, ಮೆ. ಇ.ಐ.ಪಿ.ಆರ್. (ಇಂಡಿಯಾ) ಲಿಮಿಟೆಡ್ ಬೆಂಗಳೂರು ರವರು ನೀಡಿದ ಪಿರ್ಯಾದಿಯಂತೆ ಮಂಗಳೂರು ನಗರದ ಭವಂತಿ ರಸ್ತೆಯ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಅಂಗಡಿಗಳಾದ 1. ವಿಜಯಲಕ್ಷ್ಮೀ ಮೊಬೈಲ್, ಮಹಾಲಕ್ಷ್ಮೀ ಮೊಬೈಲ್, 3. ಮಾಯಾ ಮೊಬೈಲ್, 4. ಸಿದ್ದಿವಿನಾಯಕ ಮೊಬೈಲ್, 5. ಶಿವಶಕ್ತಿ ಮೊಬೈಲ್, 6. ದಿ ಮೊಬೈಲ್ ಶಾಪ್ ನೇದರಲ್ಲಿನ ನಕಲಿ ಮೊಬೈಲ್ ಪರಿಕರಗಳನ್ನು ಸ್ವಾಧಿನಪಡಿಸಿಕೊಂಡು ಕ್ರಮಕೈಗೊಂಡಿದ್ದಾಗಿರುತ್ತದೆ.

 

10.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19/01/2014 ರಂದು ರಾತ್ರಿ 10.00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಅಬ್ದುಲ್ ಸಲೀಮ್ ರವರು ತನ್ನ ಬಾಬ್ತು ಕೆಎ 19 ಇಬಿ 3994 ನೇ ಹೋಂಡಾ ಆಕ್ಟಿವಾ ಸ್ಕೂಟರ್ ನ್ನು ತಾನು ವಾಸವಿರುವ ಹುದ ಟವರ್ಸ ಪ್ಲಾಟ್ ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ತನ್ನ ಪ್ಲಾಟ್ ಗೆ ಹೋಗಿದ್ದು, ದಿನಾಂಕ 20/01/2014 ರ ಬೆಳಗ್ಗೆ 07.00 ಗಂಟೆ ಸಮಯಕ್ಕೆ ಸ್ಕೂಟರ್ ಪಾರ್ಕ ಮಾಡಿದ್ದ ಸ್ಥಳಕ್ಕೆ ಬಂದಾಗ ಸ್ಕೂಟರ್ ಅಲ್ಲಿ ಇರದೇ ಇದ್ದು ಅದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಸ್ಕೂಟರ್ ನ ಅಂದಾಜು ಮೌಲ್ಯ ರೂ 25.000 ಆಗಬಹುದು.

 

11.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದದಿದಾರರಾದ ಶ್ರೀ ಭೀಮಪ್ಪ ಕೊಡಗನ್ನೂರು ರವರ ಮಗ  ಪರ್ಸಪ್ಪ ಎಂಬವನು  ಮಂಗಳೂರು ತಾಲೂಕು  ಪಚ್ಚನಾಡಿ  ಖಾದರ್ಎಂಬವರ ಜೊತೆಯಲ್ಲಿ  ಡಾಮಾರು  ಹಾಕುವ  ಕೆಲಸಮಾಡಿಕೊಂಡ್ಡಿದ್ದು ಅಲ್ಲಿಯೇ ಶೆಡ್ಡಿನಲ್ಲಿ  ವಾಸ್ತವ್ಯದಲ್ಲಿ  ಇದ್ದವನು ದಿನಾಂಕ 02.09.2013  ರಂದು ಊರಿಗೆ ಹೋಗಿ  ಬರುತ್ತೇನೆಂದು ಹೇಳಿ ಹೋದವನು  ಊರಿಗೂ ಹೋಗದೇ, ವಾಪಾಸ್ಸು  ಪಚ್ಚನಾಡಿಗೂ ಬಾರದೇ  ಕಾಣೆಯಾಗಿರುತ್ತಾನೆ  ವರೆಗೆ ಆತನನ್ನು  ಸಂಬಂದಿಕರ ಮನೆಯಲ್ಲಿ ಹುಡುಕಾಡಿ  ಪತ್ತೆಯಾಗದೇ ಇದ್ದು, ಕಾಣೆಯಾದ ಪರ್ಸಪ್ಪನ ಚಹರೆ ವಿವರ : ಸುಮಾರು 5 ರಿಂದ 6 ಅಡಿ  ಎತ್ತರ, ಕಪ್ಪು ಮೈಬಣ್ಣ, ಉದ್ದ ಕೂದಲು, ಕಡ್ಡಿ ಮೈಬಣ್ಣ, ಹೋಗುವಾಗ ಅರ್ದತೋಲಿನ ಬಿಳಿ ಅಂಗಿ  ಧರಿಸಿರುತ್ತಾನೆ. ಕನ್ನಡ ಬಾಷೆ  ಮಾತನಾಡುತ್ತಾನೆ.

 

No comments:

Post a Comment