ಅಕ್ರಮ ಅಯುಧ
ಸಾಗಾಟ ಪ್ರಕರಣ:
ಉರ್ವಾ
ಠಾಣೆ;
- ದಿನಾಂಕ 29.05.2013 ರಂದು 22.15 ಗಂಟೆಗೆ ಪಿರ್ಯದಿದಾರರು ತನ್ನ ಬಾಬ್ತು ಹುಂಡೈ ಕಾರು ಕೆಎಲ್ 18 ಎಚ್ 9184 ನೇದನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಏಂ.ಜಿ.ರಸ್ತೆಯಿಂದ ಹಿಂಬಾಲಿಸಿಕೊಂಡು ಬರುತ್ತಿದ್ದ ಕೆಎ19, 9906 ನೇ ಸ್ವೀಪ್ಟ್ ಕಾರ್ ನೇದರ ಚಾಲಕ ಆರೋಪಿ ನಿಹಾಲ್ ಅಹ್ಮದ್ ಎಂಬಾತನು ಕಾರಿನಲ್ಲಿದ್ದ ಇನ್ನಿಬ್ಬರೊಂದಿಗೆ ಸೇರಿ ಮಂಗಳೂರು ನಗರದ ಚಿಲಿಂಬಿ ಸೋನಿ ಶೋರೂಂ ಹತ್ತಿರ ಪಿರ್ಯಾದಿದಾರರ ಕಾರನ್ನು ತಡೆದು ನಿಲ್ಲಿಸಲು ಯತ್ನಿಸಿದ್ದು ಪಿರ್ಯಾದಿ ಕಾರನ್ನು ನಿಲ್ಲಿಸದೇ ಇದ್ದಾಗ ಆರೋಪಿ ನಿಹಾಲ್ ಅಹ್ಮದ್ ತನ್ನ ಬಳಿ ಇದ್ದ ರಿವಾಲ್ವರ್‌ನ್ನು ಕಾರಿನಿಂದ ಹೊರತೋರಿಸಿ ಗಾಳಿಯಲ್ಲಿ ಪೈರ್ ಮಾಡಿ ಹೋಗಿರುತ್ತಾರೆ ಎಂಬುದಾಗಿ ನಯನಾಜ್ ಅಬ್ದುಲ್ (24) ವಾಸ; ಫ್ಲಾಟ್ ನಂ ಎಫ್ 2 ಕಪ್ರ ಗುಡ್ಡ ಮಂಗಳೂರು ರವರು ನೀಡಿದ ದೂರಿನಂತೆ ಉರ್ವಾ ಠಾಣೆ ಅಪರಾದ ಕ್ರಮಾಂಕ 0042/2013 PÀ®A U/S-341, 34 IPC 1860 U/S-2, 25(3) ARMS ACT 1959 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಸಂಚಾರ ಪೂರ್ವ ಠಾಣೆ;
- ದಿನಾಂಕ: 28-05-2013 ರಂದು ಸಮಯ ಸುಮಾರು 11.30 ಗಂಟೆಗೆೆ ಟಾಟಾ ಸುಮೊ ಕಾರು ನಂಬ್ರ ಏಂ-19 ಃ- 3626 ನ್ನು ಅದರ ಚಾಲಕ ರಂಜಿತ್ ಎಂಬವರು ನಂತೂರು ಸರ್ಕಲ್ ಕಡೆಯಿಂದ ಮಹಾವೀರ ವೃತ್ತದ ಕಡೆಗೆ ಎನ್ಎಚ್-66 ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಮುಂದಿನಿಂದ ಹೋಗುತ್ತಿದ್ದ ವಾಹನಗಳನ್ನು ಓವರ್ಟೇಕ್ ಮಾಡಿ ಚಲಾಯಿಸಿಕೊಂಡು ಹೋಗುತ್ತಾ ಬೈಕ್ ಮೆಂಟನೆನ್ಸ್ ಗ್ಯಾರೇಜ್ ಎದುರು ತಲುಪುವಾಗ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಫರ್ಾನ್ ಮತ್ತು ತಂಜಿಲ್ ಎಂಬವರಿಗೆ ಡಿಕ್ಕಿ ಮಾಡಿ ನಂತರ ಮುಂದಕ್ಕೆ ಚಲಿಸಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮೊ,ಸೈಕಲ್ ನಂಬ್ರ ಏಂ-19 ಇಃ-9884 ಕ್ಕೆ ಡಿಕ್ಕಿ ಮಾಡಿದ್ದರಿಂದ, ಡಿಕ್ಕಿಯ ರಭಸಕ್ಕೆ ಮೊ,ಸೈಕಲ್ ಮುಂದಕ್ಕೆ ಎಸೆಯಲ್ಪಟ್ಟು, ರಸ್ತೆ ಬದಿಯಲ್ಲಿ ನಿಂತಿದ್ದ ಕಾರು ನಂಬ್ರ ಏಂ-01 ಒಅ- 1460 ರ ಹಿಂಭಾಗಕ್ಕೆ ಡಿಕ್ಕಿಯಾಗಿ ಕಾರಿನ ಹಿಂಭಾಗ ಮತ್ತು ಮೊ,ಸೈಕಲ್ ಸಂಪೂರ್ಣ ಜಖಂಗೊಳ್ಳಲು ಕಾರಣರಾಗಿರುತ್ತಾರೆ. ಅಪಘಾತದಿಂದ ಇಫರ್ಾನ್ ಮತ್ತು ತಂಜಿಲ್ರವರ ಸೊಂಟಕ್ಕೆ ಗುದ್ದಿದ ನೋವುಂಟಾಗಿ ಫಾ|| ಮುಲ್ಲರ್ ಆಸ್ಪತ್ರೆಯಲ್ಲಿ ಹೋರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬುದಾಗಿ ಪ್ರವೀಣ ಟಿ (34) ತಂದೆ: ತಿಮ್ಮಪ್ಪ. ವಾಸ: ತುಪ್ಪೇಕಲ್ಲು ಹೌಸ್, ಫರಂಗಿಪೇಟೆ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 95/13 ಕಲಂ- 279, 337 ಐಪಿಸಿ, ಆರ್ ಆರ್.ರೂಲ್-2 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment