ಜುಗಾರಿ ಆಡುತ್ತಿದ್ದವರ ಬಂಧನ
ಬರ್ಕೆ ಠಾಣೆ
ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ
ಬಜಪೆ ಠಾಣೆ
ಗಂಡಸು ಕಾಣೆ ಪ್ರಕರಣ
ದಕ್ಷಿಣ ಠಾಣೆ
ಅಸ್ವಾಭಾವಿಕ ಮರಣ ಪ್ರಕರಣ
ದಕ್ಷಿಣ ಠಾಣೆ
ಬರ್ಕೆ ಠಾಣೆ
- ದಿನಾಂಕ:25-05-2013 ರಂದು ಬಕರ್ೆ ಠಾಣಾ ವ್ಯಾಪ್ತಿಯ ಹಿಂದುಸ್ತಾನ್ ಲಿವರ್ ಫ್ಯಾಕ್ಟರಿಯ್ ಎದುರುಭಾಗದಿಂದಾಗಿ ಹೋಗುವ ಬೊಕ್ಕಪಟ್ಟಣ ಕಡವಿನ ಬಳಿ ಪೊದೆಗಿಡಗಳ ಮಧ್ಯೆ ಖಾಲಿ ಜಾಗದಲ್ಲಿ 5 ರಿಂದ 6 ಜನರು ಸೇರಿಕೊಂಡು ಜುಗಾರಿ ಆಡುತ್ತಿದ್ದಾರೆ ಎಂದು ದೊರೆತ ಖಚಿತ ವರ್ತಮಾನದ ಮೇರೆಗೆ ಪಿರ್ಯಾದಿದಾರರಾದ ಬಾಬು ಬಂಗೇರ ಸಹಾಯಕ ಉಪ ನಿರೀಕ್ಷಕರು ಬಕರ್ೆ ಪೊಲೀಸ್ ಠಾಣೆ ಮಂಗಳೂರು ರವರು ಠಾಣಾ ಸಿಬ್ಬಂದಿಗಳನ್ನು ಹಾಗೂ ಪಂಚರನ್ನು ಕರೆದುಕೊಂಡು ಇಲಾಖಾ ಜೀಪಿನಲ್ಲಿ ಸಂಜೆ 15-30 ಗಂಟೆಗೆ ಮಾಹಿತಿ ದೊರೆತ ಸ್ಥಳವಾದ ಬೊಕ್ಕಪಟ್ಟಣ ಕಡವಿನ ಸಮೀಪ ತಲುಪಿ ನೋಡಲಾಗಿ ಕಡವಿನ ಬಳಿ ಪೊದೆಗಿಡಗಳ ಮಧ್ಯೆ ಖಾಲಿ ಜಾಗದಲ್ಲಿ 5ರಿಂದ 6 ಜನರು ವೃತ್ತಾಕಾರವಾಗಿ ಕುಳಿತು ನೆಲದ ಮೇಲೆ ಬೈರಾಸ್ ಹಾಸಿ ಹಣವನ್ನು ಪಣವಾಗಿ ಇಟ್ಟುಕೊಂಡು ಇಸ್ಟೀಟು ಎಲೆಗಳಿಂದ ಉಲಾಯಿ ಪಿದಾಯಿ ಎಂದು ಹೇಳುತ್ತಾ ಜುಗಾರಿ ಆಟವಾಡುವುದು ಕಂಡುಬಂತು. ಸದ್ರಿ ಅರೋಪಿತರನ್ನು ವಶಕ್ಕೆ ಪಡೆದು ಹೆಸರು ವಿಳಾಸವನ್ನು ವಿಚಾರಿಸಿ ದಸ್ತಗಿರಿ ಮಾಡಿ ಆಟಕ್ಕೆ ಬಳಸಿದ ಸೊತ್ತುಗಳಾದ ನೀಲಿ ಕಂದು ಬಣ್ಣದ ಬೈರಾಸ್ೆ -1 ಇಸ್ಪೀಟ್ ಎಲೆಗಳು -44 ಮತ್ತು ರೂ 1470/-ನ್ನು ಪಂಚರ ಸಮಕ್ಷಮ ಸ್ವಾಧೀನ ಪಡಿಸಿಕೊಂಡು ನಂತರ ಸೊತ್ತು ಸಮೇತ ಠಾಣೆಗೆ ಬಂದಿರುತ್ತೇನೆ ಆರೋಪಿತರುಗಳು ಕಲಂ 87 ಕನರ್ಾಟಕ ಪೊಲೀಸ್ ಕಾಯ್ದೆಯಂತೆ ತಕ್ಷೀರು ಎಸಗಿದ್ದು ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದು ಮತ್ತು ಬಕರ್ೆ ಪೊಲೀಸ್ ಠಾಣಾ ಮೊ ನಂಬ್ರ 73/2013 ಕಲಂ 87 ಕೆಪಿ ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ,
ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ
- ದಿನಾಂಕ: 25-05-2013 ರಂದು ಸಮಯ ಬೆಳಿಗ್ಗೆ ಸುಮಾರು 07.00 ಗಂಟೆಗೆೆ ಮೆಲ್ಲಿಸ್ ರೇಗೋ ಎಂಬವರು ಕಾರು ನಂಬ್ರ ಏಂ-31 ಒ-5735 ರಲ್ಲಿ ಚಾಲರಾಗಿದ್ದುಕೊಂಡು ತನ್ನ ತಂದೆ ಶ್ರೀ ಬೆನ್ವೆಂಚರ್ ರೇಗೊ ಎಂಬವರನ್ನು ಚಾಲಕರ ಪಕ್ಕದ ಸೀಟಿನಲ್ಲಿ ಕುಳ್ಳಿರಿಸಿಕೊಂಡು ಕದ್ರಿ ಗ್ರೌಂಡ್ ಕಡೆಯಿಂದ ಕದ್ರಿ-ಕಂಬ್ಳ ಜಂಕ್ಷನ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ, ಕದ್ರಿ ಗ್ರೌಂಡ್ ಬಳಿ ಪಾದಾಚಾರಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವಿಶ್ವನಾಥ್ ಎಂಬವರಿಗೆ ಡಿಕ್ಕಿ ಮಾಡಿದ ಪರಿಣಾಮ ವಿಶ್ವನಾಥ್ರವರು ರಸ್ತೆಗೆ ಬಿದ್ದು ಮುಖಕ್ಕೆ ರಕ್ತಗಾಯವಾಗಿ ಮಂಗಳಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಕುಮಾರಿ ಕಾವ್ಯ (23) ತಂದೆ: ವಿಶ್ವನಾಥ. ವಾಸ: ಶ್ರೀ ಮಾತಾ , ಕೆಂಚನಕೆರೆ, ಮುಲ್ಕಿ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 91/13 ಕಲಂ- 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಜಪೆ ಠಾಣೆ
- ದಿನಾಂಕ: 25-05-2013 ರಂದು ಫಿರ್ಯಾದಿದಾರರಾದ ಬ್ರಯಾನ್, 25 ವರ್ಷ, ತಂದೆ: ಜಾನ್ ವಿಲಿಯಂ ರೇಗೋ, ಸನ್ ವಿವ್, (ಮೆಗ್ದಲಿನ್), ಓಲ್ಡ್ ಕಾನ್ವೆಂಟ್ ರೋಡ್, ಬಜಪೆ ಗ್ರಾಮ ಮತ್ತು ಅಂಚೆ, ಮಂಗಳೂರು ತಾಲೂಕು ರವರು ತನ್ನ ತಂದೆ ಜಾನ್ ವಿಲಿಯಂ ರೇಗೋ ಮತ್ತು ತಾಯಿ ಲೂಯಿಜಾ ರೇಗೋ, ಹಾಗೂ ಚಿಕ್ಕಮ್ಮನ ಮಗನಾದ ವಿವೇಕ್ ಎಂಬವರು ಆಲ್ಟೋ ಕಾರು ನಂ: ಕೆಎ 19 ಪಿ 9322 ರಲ್ಲಿ ಮಂಗಳೂರು ಕಡೆಯಿಂದ ಬಜಪೆ ಕಡೆಗೆ ಬರುತ್ತಾ ಜಾನ್ ವಿಲಿಯಂ ರೇಗೋ ರವರು ಕಾರನ್ನು ಚಲಾಯಿಸುತ್ತಿದ್ದು, ಕಾರು ಮಂಗಳೂರು ತಾಲೂಕಿನ, ಮಳವೂರು ಗ್ರಾಮದ , ಅಂತೋನಿ ಕಟ್ಟೆ ತಿರುವು ತಲುಪುತ್ತಿದ್ದಂತೇ ಸಂಜೆ ಸುಮಾರು 17-00 ಗಂಟೆ ಸಮಯಕ್ಕೆ ಎದುರಿನಿಂದ ಅಂದರೆ, ಬಜಪೆ ಕಡೆಯಿಂದ ಟಿಪ್ಪರ್ ಲಾರಿ ನಂ: ಕೆಎ 19 ಡಿ 7659 ನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡದಲ್ಲದೇ ಕಾರು ಚಾಲಕರಾದ ಜಾನ್ ವಿಲಿಯಂ ರೇಗೋ ರವರ ಕುತ್ತಿಗೆಗೆ ಮತ್ತು ಎಡ ಕೈಗೆ ಜಖಂ ಆಗಿದ್ದು, ಅಲ್ಲದೇ ತಾಯಿ ಲೂಯಿಜಾ ರೇಗೋರವರ ಎಡಕಾಲು ಜಖಂ ಆಗಿರುತ್ತದೆ. ಗಾಯಾಳುಗಳು ಚಿಕಿತ್ಸೆಯ ಕುರಿತು ಮಂಗಳೂರು ಎ.ಜೆ. ಅಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ಬ್ರಯಾನ್ ರವರು ನೀಡಿದ ದೂರಿನಂತೆ ಬಜಪೆ ಪೊಲೀಸ್ ಠಾಣಾ ಅ.ಕ್ರ: 155/2013 ಕಲಂ:279, 338 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗಂಡಸು ಕಾಣೆ ಪ್ರಕರಣ
ದಕ್ಷಿಣ ಠಾಣೆ
- ಫಿಯರ್ಾದುದಾರರಾದ ಶ್ರೀಮತಿ ಕಮಲ ರವರ ಗಂಡನಾದ ಶಾಂತಪ್ಪ, ಪ್ರಾಯ: 55 ವರ್ಷ, ರವರು ಶ್ವಾಸಕೋಶದ ಖಾಯಿಲೆಯಿಂದ ಬಳಲುತ್ತಿದ್ದು, ಇವರನ್ನು ದಿನಾಂಕ 19-05-13 ರಂದು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಅರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ದಿನಾಂಕ 22-05-13 ರಂದು ಸಂಜೆ 5-30 ಗಂಟೆಗೆ ಇವರ ಆರೈಕೆ ನೋಡಿಕೊಳ್ಳುತ್ತಿದ್ದ ಶ್ರೀಮತಿ ಕಮಲರವರು ಶೌಚಲಯಕ್ಕೆ ಹೋಗಿ ವಾಪಸು ಬರುವಾಗ ಮಂಚದ ಮೇಲೆ ಮಲಗಿದ್ದ ತನ್ನ ಗಂಡನಾದ ಶಾಂತಪ್ಪ ರವರು ಕಾಣೆಯಾಗಿರುತ್ತಾರೆ. ಈ ಬಗ್ಗೆ ಸಂಬಂದಿಕರ ಮನೆಗಳಲ್ಲಿ ಹಾಗೂ ಇತರ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಣೆಯಾದ ಶಾಂತಪ್ಪ ರವರನ್ನು ಪತ್ತೆ ಮಾಡಿಕೊಡುವಂತೆ ಕಮಲ ರವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣಾ 138/2013 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
ದಕ್ಷಿಣ ಠಾಣೆ
- ಫಿಯರ್ಾದಿದಾರರಾದ ಜಿವಾದ್ ರೆಹಮಾನ್ ಎಂಬವರು ದಿನಾಂಕ 25-05-2013 ರಂದು ಮಂಗಳೂರು ನಗರದ ಮಾರ್ನಮಿಕಟ್ಟೆ ಕುಡ್ಪಾಡಿ ಎಂಬಲ್ಲಿರುವ ತನ್ನ ಚಿಕ್ಕಮ್ಮನಾದ ಫರೀದಾ ಸತ್ತರ್ರವರ ಮನೆಯಲ್ಲಿದ್ದು, ಚಿಕ್ಕಮನ ಮನೆಯವರೆಲ್ಲರೂ ಹೊರಗಡೆ ಹೋಗಲು ತಯಾರಿ ನಡೆಸುತ್ತಿದ್ದಂತೆ ಸಂಜೆ 5-50 ಗಂಟೆ ಸಮಯಕ್ಕೆ ತನ್ನ ಚಿಕ್ಕಮ್ಮನಾದ ಫರೀದಾ ಸತ್ತರ್ರವರ ಮಗನಾದ ನದೀಮ್ ಹುಸೈನ್ ಪ್ರಾಯ 9 ವರ್ಷ ಎಂಬವನು ಅಂಗಳದಲ್ಲಿ ನಿಂತು ಆಟ ಆಡುತ್ತಾ ಇದ್ದವನು, ಮನೆಯ ಎದುರುಗಡೆ ಇರುವ ಟ್ರಾನ್ಸ್ಫಾಮರ್್ನ ಸುತ್ತ ಹಾಕಿದ ಕಬ್ಬಿಣದ ಗ್ರೀಲ್ನ ಮೇಲೆ ಹತ್ತಿ ಟ್ರಾನ್ಸ್ಪಾಮರ್್ನ ಒಂದು ವಯರ್ನ್ನು ಹಿಡಿದಾಗ, ದೊಡ್ಡ ಶಬ್ದವಾದಾಗ ಫಿಯರ್ಾದುದಾರರು ನೋಡಿದಾಗ, ನದೀಮ್ ಹುಸೈನ್ನು ಟ್ರಾನ್ಸ್ಫಾಮರ್್ನ ವಯರ್ನಲ್ಲಿ ನೇತಾಡಿಕೊಂಡಿದ್ದವನನ್ನು ನೆರೆಕರೆಯವರ ಸಹಾಯದಿಂದ ನದೀಮ್ ಹುಸೈನ್ನ್ನು ಕೆಳಗೆ ಇಳಿಸುವಾಗ, ಬಲಕೈಯ ಮಣಿಗಂಟಿನಿಂದ ಬಲ ಕೈ ಬೇರ್ಪಟ್ಟಿದ್ದು, ನಂತರ ಆತನನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಯುನಿಟಿ ಅಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ಪರಿಕ್ಷೀಸಿದಾಗ ನದೀಮ್ ಹುಸೈನ್ ಮೃತಪಟ್ಟಿರುವುದಾಗಿದೆ ಎಂಬುದಾಗಿ ಜಿವಾದ್ ರೆಹಮಾನ್ ರವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಯು.ಡಿ.ಆರ್. ನಂ: 47/2013 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮೂಡಬಿದ್ರೆ
ಠಾಣೆ
- ದಿನಾಂಕ : 25-05-2013 ರಂದು ಮಧ್ಯಾಹ್ನ ಸುಮಾರು 13-00 ಗಂಟೆಗೆ ಪಿರ್ಯಾದಿದಾರರಾದ ಸಂತೋಷ (20), ತಂದೆ : ಜಗನ್ನಾಥ, ವಾಸ : ಕವಿಶ್ ನಿಲಯ ಬಾರಾಡಿ , ಕಾಂತಾವರ ಗ್ರಾಮ, ಕಾರ್ಕಳ ತಾಲೂಕು ರವರು ಮೂಡಬಿದ್ರೆ ಕಡೆಗೆ ಬರುವರೇ ಕೆಎ 19 ಸಿ 4549 ನೇ ಬಸ್ಸಿನಲ್ಲಿ ಪ್ರಯಾಣಿಸುವಾಗ ಬೆಳುವಾಯಿ ಗ್ರಾಮದ ಚಿಲಿಂಬಿ ಎಂಬಲ್ಲಿ ಬಸ್ಸನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಮೂಡಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಕೆಎ 19 ಎಎ 288 ನೇ ನಂಬ್ರದ ಬಸ್ಸಿಗೆ ಡಿಕ್ಕಿ ಪಡಿಸಿದ ಪರಿಣಾಮ ಕೆಎ 19 ಸಿ 4549 ನೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 10 ರಿಂದ 12 ಜನರಿಗೆ ನಾನಾ ರೀತಿಯ ಗಾಯವಾಗಿರುತ್ತದೆ, ಪಿರ್ಯಾದಿದಾರರಿಗೆ ಎದುರಿನ ಎರಡು ಹಲ್ಲುಗಳು ತುಂಡಾಗಿದ್ದು ತುಟಿಗೆ ಗಾಯವಾಗಿದ್ದು. ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಪಘಾತದಿಂದ ಎರಡು ಬಸ್ಸುಗಳ ಮುಂಭಾಗ ಜಖಂಗೊಂಡಿರುತ್ತದೆ ಎಂಬುದಾಗಿ ಸಂತೋಷ (20) ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 111/2013 ಕಲಂ ; 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ
ಪ್ರಕರಣ
ಕಾವೂರ್ ಠಾಣೆ
- ತಾರೀಕು 24-05-2013 ರಂದು ರಾತ್ರಿ 10-30 ಗಂಟೆಗೆ ಪಿರ್ಯಾದಿದಾರರಾದ ಪ್ರದೀಪ್ ಕುಮಾರ್ ಎಂಬವರು ತನ್ನ ಗೆಳೆಯ ಶೀಬಿನ್ ಪಡಿಕ್ಕಳ್ ಎಂಬವರೊಂದಿಗೆ ಕೂಳೂರುನಲ್ಲಿರುವ ರತ್ನಾ ಬಾರ್ ನಲ್ಲಿ ಊಟ ಮಾಡುತ್ತಿದ್ದಾಗ ಎದುರಿನ ಟೇಬಲ್ ನಲ್ಲಿದ್ದ ಸಂಪತ್ ಭಂಡಾರಿ ಎಂಬವನ್ನು ಪಿರ್ಯಾದಿದಾರರನ್ನು ಉದ್ದೇಶೀಸಿ “ಬೇವಾರ್ಸಿಗಳೇ ನೀವು ಯಾರು, ಇದು ನಮ್ಮ ಎರಿಯಾ, ನೀವು ಇಲ್ಲಿ ಎನು ಮಾಡುವುದು” ಎಂಬುವುದಾಗಿ ಬೈದು, ಸಂಪತ್ ಬಿಯರ್ ಬಾಟ್ಲಿಯಿಂದ ಪಿರ್ಯಾದಿದಾರರ ಎಡ ಹಣೆಯ ಬಳಿ ಹೊಡೆದಾಗ ಹಣೆಗೆ ತಾಗಿ ಗಾಯವಾಗಿರುತ್ತದೆ. ಪಿರ್ಯಾದಿದಾರರು ಎ.ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ಪ್ರದೀಪ್ ಕುಮಾರ್ ರವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆ ಅ.ಕ್ರ: 114/2013 ಕಲಂ 504, 324 ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment