ಮನೆ ಕಳವು ಪ್ರಕರಣ:
ಮೂಲ್ಕಿ ಠಾಣೆ;
- 2012ನೇ ಜುಲೈ ತಿಂಗಳಲ್ಲಿ ಮಂಗಳೂರು ತಾಲೂಕು ಕಾನರ್ಾಡು ಗ್ರಾಮದ ಕಾನರ್ಾಡು ಬೈಪಾಸ್ ಬಳಿ ಇರುವ ಪಿರ್ಯಾದಿ ಶೋಭಾ ಅಮೀನ್ ರವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಹಿಂಬದಿಯ ಗೋಡೆಗೆ ದೊಡ್ಡದಾದ ರಂಧ್ರ ಕೊರೆದು ಮನೆಯೊಳಗಿದ್ದ ದೇವರ ದೀಪದ ಸಾಮಗ್ರಿಗಳು, ತಾಮ್ರದ 4 ಹಂಡೆಗಳು, ಹೊಸ ಬಟ್ಟೆಬರೆಗಳು, ಇಂಡೇನ್ ಗ್ಯಾಸ್ ರೆಗ್ಯುಲೇಟರ್ ಹಾಗೂ ಬಚ್ಚಲು ಮನೆಯಲ್ಲಿದ್ದ ಒಂದು ಹಿತ್ತಾಳೆಯ ಹಂಡೆಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ , ಕಳವಾದ ಸೊತ್ತುಗಳ ಅಂದಾಜ್ಟು ಮೌಲ್ಯ ರೂ 10,000/- ಆಗಬಹುದು ಎಂಬುದಾಗಿ ಶೋಭಾ ಅಮೀನ್ (51) ಸಾಯಿಕೃಪಾ ಡೋರ್ ನಂಬ್ರ 17-67ಡಿ, ಕಾನರ್ಾಡು ಬೈಪಾಸ್, ಕಾನರ್ಾಡು ಗ್ರಾಮ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಲ್ಕಿ ಠಾಣೆ ಅಪರಾದ ಕ್ರಮಾಂಕ 75/2013 454-457-380 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಸಂಚಾರ ಪೂರ್ವ ಠಾಣೆ;
- ದಿನಾಂಕ 06-05-2013 ರಂದು ಸಮಯ ಸುಮಾರು 14.30 ಗಂಟೆಗೆೆ ಪಿರ್ಯಾದುದಾರರು ತನ್ನ ಅಕ್ಕ ಲವೀನಾ ಮತ್ತು ತಂಗಿ ಆಶಾ ರವರೊಂದಿಗೆ ಅಟೋ ರಿಕ್ಷಾ ನಂಬ್ರ ಏಂ-19 ಆ-1144 ರಲ್ಲಿ ಪ್ರಯಾಣಿಕರಾಗಿ ಫಳ್ನೀರ್ ಕಡೆಯಿಂದ ಹಂಪನಕಟ್ಟೆ ಕಡೆಗೆ ಹೋಗುತ್ತಿರುವಾಗ, ಅಟೋ ರಿಕ್ಷಾ ಚಾಲಕ ಹಂಪನಕಟ್ಟೆ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮಿಲಗ್ರಿಸ್ ಚಚರ್್ ಬಳಿ ತಲುಪುವಾಗ ರಿಕ್ಷಾದ ವೇಗವನ್ನು ನಿಯಂತ್ರಿಸಲಾಗದೆ ಅಟೋ ರಿಕ್ಷಾ ಎಡ ಭಾಗಕ್ಕೆ ಮಗುಚಿ ಬಿದ್ದ ಪರಿಣಾಮ ಪಿರ್ಯಾದುದಾರರ ಎಡ ಕೈಗೆ ಗುದ್ದಿದ ಗಾಯ ಲವೀನಾರ ಎಡ ಕೈಗೆ ಗಂಭೀರ ಸ್ವರೂಪದ ಗಾಯ ಉಂಟಾಗಿ ಯೆನಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಆಶಾಳ ಬಲಕೈಗೆ ತರಚಿದ ಗಾಯ ಉಂಟಾಗಿ ಯೆನಪೋಯ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬುದಾಗಿ ಸಿಲ್ವಿಯಾ (22) ತಂದೆ: ಫೆಡ್ರಿಕ್ ಮೌರಿಸ್ ವಾಸ: ಅಲ್ಲಿ ಪಾದೆ ಮನೆ ಮತ್ತು ಅಂಚೆ, ಸರಪಾಡಿ ಗ್ರಾಮ, ಬಂಟ್ವಾಳ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 86/13 ಕಲಂ 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗಂಡಸು ಕಾಣೆ;
ದಕ್ಷಿಣ ಠಾಣೆ;
'
- ಫಿಯರ್ಾದುದಾರರಾದ ಶ್ರೀ ವಿಷ್ಣು ನಾರಾಯಣ ಮೊಗೇರ ಎಂಬವರು ವಿಷ್ಣು ಪ್ರಸಾದ್ ಎಂಬ ಹೆಸರಿನ ಬೋಟಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಇದೇ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಈರಯ್ಯ ಕುಪ್ಪು ಮೊಗೇರ ಪ್ರಾಯ 62 ವರ್ಷ ಎಂಬವರು ದಿನಾಂಕ 04-05-2013 ರಂದು ಸಂಜೆ 17-00 ಗಂಟೆಗೆ ಮಂಗಳೂರು ದಕ್ಕೆಯಲ್ಲಿ ಇದ್ದವರು ಚಹಾ ಕುಡಿದು ಬರುತ್ತೇನೆಂದು ಫಿಯರ್ಾದುದಾರರಲ್ಲಿ ಹೇಳಿ ಹೋದವರು ತನ್ನ ಮನೆಯಾದ ಭಟ್ಕಳಕ್ಕೂ ಹೋಗದೆ ಬೋಟಿಗೂ ಕೆಲಸಕ್ಕೆ ಬಾರದೆ ಕಾಣೆಯಾಗಿರುತ್ತಾರೆ. ಆದುದರಿಂದ ಕಾಣೆಯಾದ ಈರಯ್ಯ ಕುಪ್ಪು ಮೊಗೇರ ರವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಫಿರ್ಯಾದಿಯಾಗಿದೆ ಎಂಬುದಾಗಿ ವಿಷ್ಣು ನಾರಾಯಣ ಮೊಗೇರ (53) ತಂದೆ: ನಾರಾಯಣ ವಾಸ: ಮಾಹಮಾಯಿ ಕೃಪಾ ಭಟ್ಕಳ, ಉತ್ತರ ಕನ್ನಡ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 126/13 ಕಲಂ ಗಂಡಸು ಕಾಣೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment