ಕಾಣೆ ಪ್ರಕರಣ
ದಕ್ಷಿಣ ಠಾಣೆ
- ದಿನಾಂಕ 24-04-2013 ರಂದು ಸಂಜೆ 18-30 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ಕವಿತಾ ಸುವರ್ಣ (29) ಗಂಡ ಶಫೀಕ್ ಅಹ್ಮದ್, ವಾಸ: ಮಂಗಳಾ ಕಂಪೌಂಡು, ಜ್ಯೋತಿ ಗ್ಯಾರೇಜ್ ಬಳಿ, ಮುಳಿಹಿತ್ಲು, ಮಂಗಳೂರು ರವರು ಕೆಲಸ ಮುಗಿಸಿ ವಾಪಾಸು ಮನೆಗೆ ಬಂದಾಗ ತನ್ನ ಮಗಳಾದ ಮೆಹಕ್ ಕಂತುನ್ ಪ್ರಾಯ: 4ಳಿ ವರ್ಷ, ಮನೆಯಲ್ಲಿ ಕಾಣಲಿಲ್ಲ. ಈ ಬಗ್ಗೆ ತಾಯಿಯಲ್ಲಿ ವಿಚಾರಿಸಿದಾಗ ಪಕ್ಕದಲ್ಲಿ ಆಡುತ್ತಿರಬಹುದೆಂದು ಹೇಳಿದರು. ಆದುದರಿಂದ ಪಕ್ಕದ ಮನೆಯಲ್ಲಿ ವಿಚಾರಿಸಿದಾಗ ಪತ್ತೆಯಾಗಲಿಲ್ಲ. ಫಿರ್ಯಾದುದಾರರಿಗೆ ಅವರ ಗಂಡನ ಮದ್ಯೆ ಸಂಸಾರದಲ್ಲಿ ವಿರಸವಿದ್ದು, ತನ್ನ ಗಂಡನು ಮಗುವನ್ನು ಕರೆದುಕೊಂಡು ಹೋಗಿರಬಹುದೆಂದು ಸಂಶಯ ಇದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಫಿರ್ಯಾದುದಾರರಿಗೆ ಯಾವುದೇ ಮಾಹಿತಿ ದೊರೆಯಲಿಲ್ಲ. ಆದುದರಿಂದ ಸದ್ರಿ ಹೆಣ್ಣು ಮಗುವನ್ನು ಹುಡುಕಿಕೊಡುವಂತೆ ಶ್ರೀಮತಿ ಕವಿತಾ ಸುವರ್ಣ ರವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣಾ ಅಕ್ರ 136/2013 ಕಲಂ ಮಗು ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
ಬರ್ಕೆ ಠಾಣೆ
- ದಿನಾಂಕ 21-05-2013 ರಂದು ಬೆಳಿಗ್ಗೆ 11-30ಗಂಟೆ ಸಮಯ ಆರೋಪಿತನಾದ ಸಿಆರ್. ಅಬೂಬಕ್ಕರ್ ಮತ್ತು ಪಿರ್ಯಾದಿದಾರರಾದ ಅಕ್ಕಾಫ್ (27)ತಂದೆ: ಎಂ.ಎ. ರಹಮಾನ್, ವಾಸ: 'ದಿಲ್ಮನ್ ನೆಹರೂ ಅವೆನ್ಯೂ, ಲಾಲ್ಭಾಗ್, ಮಂಗಳೂರು ರವರಿಗೂ ಅಂಗಡಿಗಳನ್ನು ಬಾಡಿಗೆ ನೀಡುವ ವಿಚಾರದಲ್ಲಿ ತಕರಾರು ಇರುವ ಹಿನ್ನಲೆಯಲ್ಲಿ ಆರೋಪಿತನು ಪೂರ್ವದ್ವೇಷದಿಂದ ಪಿರ್ಯಾದಿದಾರರ ತಲೆ ಹಾಗೂ ಎಡ ಗಲ್ಲಕ್ಕೆ ಕೈಯಿಂದ ಹೊಡೆದು ಸೂಳೆ ಮಗನೇ ಪೊಲೀಸಿಗೆ ಹೇಳಿದರೆ ನಿನ್ನನ್ನು ಜೀವ ಸಮೇತ ಬಿಡಲಾರೆ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಅಕ್ಕಾಫ್ ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣಾ ಮೊನಂ. 70/2013 ಕಲಂ. 323,504,506 ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಾಹನ ಕಳವು ಪ್ರಕರಣ
ಪೂರ್ವ ಠಾಣೆ
- ದಿನಾಂಕ 03-04-2013ರಂದು ಮಧ್ಯಾಹ್ನ 15-00 ಗಂಟೆಯಿಂದ ದಿನಾಂಕ 20-05-2013ರಂದು ಬೆಳಿಗ್ಗೆ 10-00 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ಆನಂದ್ ಅಪಾಟರ್್ಮೆಂಟ್ನ ಪಾಕರ್ಿಂಗ್ ಸ್ಥಳದಲ್ಲಿ ಪಾಕರ್್ ಮಾಡಿದ್ದ ಪಿರ್ಯಾದಿದಾರರಾದ ಗೌರವ್.ಎನ್(19) ತಂದೆ: ದಿ|| ನಾಗೇಶ್,ವಾಸ: ಡೋರ್.ನಂಬ್ರ. 8-31/4, ಕಮಲ ನಿವಾಸ್, ಗಟ್ಟಿ ಕಂಪೌಂಡ್, ಬಿ.ಸಿ.ಎಂ. ಹಾಸ್ಟೇಲ್ ಬಳಿ, ಶೇಡಿಗುರಿ, ಅಶೋಕನಗರ, ಮಂಗಳೂರು ರವರ ಆರ್. ಸಿ. ಮಾಲಕತ್ವದ 1996ನೇ ಮೊಡಲ್ನ ಕಪ್ಪು ಬಣ್ಣದ ಅಂದಾಜು ರೂ 18000/- ಬೆಲೆ ಬಾಳುವ ಕೆಎ 19 ಕೆ 3918 ನೊಂದಣೆ ಸಂಖ್ಯೆಯ ಯಮಹಾ ವೈಬಿಎಕ್ಸ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನದ ಡ್ಯಾಶ್ ಬಾಕ್ಸ್ನಲ್ಲಿ ವಾಹನಕ್ಕೆ ಸಂಬಂಧಪಟ್ಟ ಆರ್.ಸಿ. ಜೆರಾಕ್ಸ್ ಪ್ರತಿ ಕೂಡ ಇರುತ್ತದೆ. ಕಳವಾದ ಬೈಕ್ನ್ನು ಕಳವಾದ ದಿನದಿಂದ ಈ ದಿನದವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಗೌರವ್.ಎನ್ ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಮೊ.ನಂಬ್ರ. 77/2013 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment