ಅಕ್ರಮ ತಡೆದು, ಹಲ್ಲೆ ನಡೆಸಿದ ಪ್ರಕರಣ:
ಬಜಪೆ ಠಾಣೆ;
- ದಿನಾಂಕ: 08-05-2013 ರಂದು 21-30 ಗಂಟೆಗೆ ಮಂಗಳೂರು ತಾಲೂಕು ಅಡ್ಡೂರು ಗ್ರಾಮದ ಕಾಂಜಿಲಕೋಡಿ ಮಸೀದಿಯಿಂದ ಫಿರ್ಯಾದಿದಾರರಾದ ಅಬ್ದುಲ್ ರಶೀದ್ ಎಂ.ಎ. ಎಂಬವರು ನಡೆದುಕೊಂಡು ಹೋಗುತ್ತಿರುವಾಗ ಕಾಂಜಿಲಕೋಡಿ ಮಸೀದಿಯ ಎದುರುಗಡೆ ರಸ್ತೆಯಲ್ಲಿ ಅವರ ಹಿಂದಿನಿಂದ ಬರುತಿದ್ದ ಕಾರು ನಂ: ಕೆಎ 19 ಎಂಸಿ 3282 ರಲ್ಲಿದ್ದ ಆರೋಪಿಗಳಾದ ರಿಯಾಜ್ ಎ.ಕೆ. ಎದ್ರಿಸ್ , ಮನ್ಸೂರ್, ಇಕ್ಬಾಲ್ ಕಮಾಲ್ ಎಂಬವರು ಕಾರಿನಿಂದ ಇಳಿದು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಆರೋಪಿ ಎದ್ರಿಸ್ ಎಂಬವನು ರಂಡೇ ಮಗನೇ, ಸೂಳೇ ಮಗನೇ ನಿನ್ನನ್ನು ನಿನ್ನ ಅಪ್ಪನನ್ನು ಕೊಲ್ಲದೇ ಬಿಡುವುದಿಲ್ಲ, ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಆರೋಪಿ ರಿಯಾಜ್ ಎ.ಕೆ. ಎಂಬವರು ಕೈಯಿಂದ ಹಾಗೂ ಕಾಲಿನಿಂದ ತುಳಿದು, ಆರೋಪಿ ಕಮಾಲ್ ಎಂಬಾತನು ಕೈಯಿಂದ ಫಿರ್ಯಾದಿದಾರರ ಎದೆಗೆ, ಭುಜಕ್ಕೆ ಕಾಲುಗಳಿಂದ ಸೊಂಟದ ಎರಡೂ ಬದಿಗಳಿಗೆ ತುಳಿದ ಪರಿಣಾಮ ತೀವ್ರ ತರಹದ ಒಳ ನೋವು ಉಂಟಾಗಿರುವುದರಿಂದ, ಎಡ ಭುಜಕ್ಕೆ ಗಾಯ ಉಂಟಾಗಿರುತ್ತದೆ. ಅಲ್ಲದೇ ಉರುಡಾಟದ ಸಮಯ ಫಿರ್ಯಾದಿಯ ಎಡ ಕೈಯ ಮಧ್ಯದ ಬೆಳಿಗೆ ಗಾಯ ವಾಗಿದ್ದು, ಅವರು ಧರಿಸಿದ್ದ ಶರ್ಟನ್ನು ಆರೋಪಿಗಳು ಹರಿದು ಹಾಕಿದ್ಲಲ್ಲದೇ ಕಿಸೆಯಲ್ಲಿದ್ದ ನಗದು ಹಣ ರೂ. 5000/- ಬಿದ್ದು ಹೋಗಿರುತ್ತದೆ ಎಂಬುದಾಗಿ ಅಬ್ದುಲ್ ರಶೀದ್ ಎಂ.ಎ., 26 ವರ್ಷ, ತಂದೆ: ಆದಂಮುಸ್ಲಿಯಾರ್ ಎಂ.ಎ., ವಾಸ: ಪೊನನೆಲಾ ಹೊಉಸೆ, ಅಡ್ಡೂರು ಗ್ರಾಮ ಮತ್ತು ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 138/2013 ಕಲಂ: 143, 147, 341, 323, 54, 506 ಜತೆಗೆ 149 ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಸಂಚಾರ ಪೂರ್ವ ಠಾಣೆ;
- ದಿನಾಂಕ: 08-05-2013 ರಂದು ಸಮಯ ಸುಮಾರು 22.00 ಗಂಟೆಗೆೆ ಪಿರ್ಯಾದುದಾರರು ಮೊ,ಸೈಕಲ್ ನಂಬ್ರ ಏಂ-19 ಇಈ- 1961 ರಲ್ಲಿ ಗಣೇಶ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಡಾ|| ಅಂಬೇಡ್ಕರ್ ಸರ್ಕಲ್ ಕಡೆಯಿಂದ ಹಂಪನಕಟ್ಟೆ ಸರ್ಕಲ್ ಕಡೆಗೆ ಬಲ್ಮಠ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ವೀನು ಇಂಟರ್ನ್ಯಾಷನಲ್ ಹೋಟೆಲ್ ಎದುರು ತಲುಪುವಾಗ ಡಾ|| ಅಂಬೇಡ್ಕರ್ ಸರ್ಕಲ್ ಕಡೆಯಿಂದ ಕಾರು ನಂಬ್ರ ಏಂ-05 ಒಘ- 7777ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ವೀನು ಇಂಟರ್ನ್ಯಾಷನಲ್ ಹೋಟೆಲ್ ಎದುರು ಯಾವುದೇ ಸೂಚನೆ ನೀಡದೆ ಒಮ್ಮೆಲೆ ಬಲಕ್ಕೆ ಅಂದರೆ, ವೀನು ಇಂಟರ್ ನ್ಯಾಷನಲ್ ಹೋಟೆಲ್ ಕಡೆಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರ ಮೊ,ಸೈಕಲ್ಗೆ ಕಾರು ಡಿಕ್ಕಿಯಾಗಿ ಪಿರ್ಯಾದುದಾರರು ಮತ್ತು ಗಣೇಶ ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಹಣೆಯ ಎಡಭಾಗಕ್ಕೆ, ಮತ್ತು ಬೆನ್ನಿಗೆ ರಕ್ತಗಾಯವಾಗಿ ಮುಖಕ್ಕೆ ತೀವೃ ಸ್ವರೂಪದ ನೋವಿನ ಗಾಯವಾಗಿ ಸಕರ್ಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 88/13 ಕಲಂ 279, 338 ಐಪಿಸಿ ಮತ್ತು ಅರ್ ಅರ್ ರೂಲ್ 13 ಮೋ.ವಾ ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಬಜಪೆ ಠಾಣೆ;
- ದಿನಾಂಕ: 09-05-2013 ರಂದು 15-45 ಗಂಟೆಗೆ ಫಿರ್ಯಾದಿದಾರರು ಮಂಗಳೂರು ತಾಲೂಕಿನ, ಮೂಡುಪೆರಾರ ಗ್ರಾಮದ, ಈಶ್ವರ ಕಟ್ಟೆ ಬಸ್ಸು ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿರುವಾಗ, ಕೈಕಂಬ ಕಡೆಯಿಂದ ಬಜಪೆ ಕಡೆಗೆ ಮಾರುತಿ ಓಮ್ನಿ ಕಾರು ನಂ: ಕೆಎ 19 ಎನ್ 6331 ನೇದ್ದನ್ನು ಅದರ ಚಾಲಕ ರಮೇಶ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಮೋಹಿನಿ ದಾಸ್ (45 ವರ್ಷ) ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ರೀತಿಯ ಗಾಯಗೊಂಡಿದ್ದು, ಸದ್ರಿಯವರನ್ನು ಫಿರ್ಯಾದಿದಾರರು ಮತ್ತು ಕಾರಿನ ಚಾಲಕರು ಅದೇ ಓಮ್ನಿ ಕಾರಿನಲ್ಲಿ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ದಾಖಲಿಸಿದ್ದು, ಸದ್ರಿಯಹವರು ಚಿಕಿತ್ಸೆಯಲ್ಲಿರುತ್ತಾ ರಾತ್ರಿ 20-30 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬುದಾಗಿ ತುಕರಾಮ, ಪ್ರಾಯ: 29 ವರ್ಷ, ತಂದೆ: ಬಿ.ಕೆ. ಸಕೇತ್, ವಾಸ: ತಿಲಕ್ ನಿವಾಸ, ಮುಂಡಬೆಟ್ಟು ಶಾಲೆಯ ಬಳಿ, ಮೂಡುಪೆರಾರ ಗ್ರಾಮ, ಮಂಗಳೂರು ತಾಲೂಕುರ ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 139/2013 ಕಲಂ: 279, 304 (J) ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment