ಕಳವು ಪ್ರಕರಣ:
ಪೂರ್ವ ಪೊಲೀಸ್ ಠಾಣೆ;
- ದಿನಾಂಕ 16-05-2013 ರಂದು 11-50 ಗಂಟೆಯಿಂದ 12-45 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಕದ್ರಿ ಮಲ್ಲಿಕಟ್ಟೆ ಉ್ಪಸ್ತೆಯಲ್ಲಿರುವ ಸಿಟಿ ಆಸ್ಪತ್ರೆಯ ಎದುರುಗಡೆ ಶಿ್ಭೂ. ನಾರಾಯಣ ಎಂಬ ಹೆಸರಿನ 15-9-472/1 ಡೋರ್,ನಂಬ್ರದ ಪಿರ್ಯಾದಿದಾರರಾದ ಶ್ರಿಮತಿ.ಮಮತ ಕೆ ಗಂಡ:ದಿ.ಕಮಲಾಕ್ಷ ಪ್ರಬಖ್ಪ್ಮ, ವಾಸ: ಆ.ಓಠ.15-9-472/1 ಶಿ್ಭೂ ನಾರಾಯಣ, ಸಿಟಿ ಆಸ್ಪತ್ರೆ ಎದುರುಗಡೆ, ಕದಿ ಬಾಬ್ತು ವಾಸ್ತವ್ಯದ ಮನೆಯ ಎದುರು ಬಾಗಿಲಿನ ಚಿಲಕದ ಕೊಂಡಿಯನ್ನು ತುಂಡರಿಸಿ ಒಳ ಪ್ರವೇಶಿಸಿ ಮಾಸ್ಟರ್ ಬೆಡ್ರೂಮಿನ ಕಪಾಟಿನಿಂದ ವಿವಿಧ ನಮೂನೆಯ 12 ಳ ಪವನ್ ಚಿನ್ನಾಭರಣ, ನಗದು ಹಣ ಉ್ಪ್ರ.20000/- ಹಾಗೂ ಸಾಮ್ಸಂಗ್ ಕಂಪನಿಯ ಮೊಬೈಲ್ ಸೆಟ್-1, ಹೀಗೆ ಒಟ್ಟು 2,67,240/-ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಶ್ರಿಮತಿ.ಮಮತ ಕೆ ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಮೊ.ನಂ.74/2013 ಕಲಂ. 454, 380 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಂಚನೆ ಪ್ರಕರಣ:
ಪೂರ್ವ ಪೊಲೀಸ್ ಠಾಣೆ;
- ಫಿಯರ್ಾದಿದಾರರಾದ .ಪ್ರವೀಣ್ ಕುಮಾರ್ ಶೆಟ್ಟಿ, ಸೂಪರವ್ಶೆಜರ್ ಎ.ಜೆ.ಆಸ್ಪತ್ರೆ, ಕುಂಟಿಕಾನ, ಮಂಗಳೂರು ರವರು ಎ.ಜೆ ಆಸ್ಫತ್ರೆಯಲ್ಲಿ ಸೂಪರ್ವೈಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ದಿನಾಂಕ 20.04.2013 ರಂದು ಈ ಮೇಲೆ ತಿಳಿಸಿದ ಶ್ರೀಮತಿ ಶಮಾ ಎಂಬುವರು ಸದ್ರಿ ಫಿಯರ್ಾದಿದಾರರು ಕೆಲಸ ನಿರ್ವಹಿಸುತ್ತಿರುವ ಎ.ಜೆ .ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿದ್ದು, ದಿನಾಂಕ:10.05.2013 ರಂದು ಚಿಕಿತ್ಸೆ ನೀಡಿದ್ದ ಹಣ ಆಸ್ಪತ್ರೆಯ ಬಿಲ್ ರ್ರೂ.79,851/-ವನ್ನು ಪಾವತಿಸದೇ ಅಲ್ಲಿಂದ ತಪ್ಪಿಸಿಕೊಂಡು ಹೋಗಿರುತ್ತಾರೆ ಪಿಯರ್ಾದಿದಾರರಿಗೆ ಹಣವನ್ನು ಪಾವತಿಸದೇ ಮೋಸ ಮಾಡಿರುವುದಾಗಿದೆ ಎಂಬುದಾಗಿ .ಪ್ರವೀಣ್ ಕುಮಾರ್ ಶೆಟ್ಟಿ ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಮೊ.ನಂ.75/2013 ಕಲಂ. 406 ಐಪಿಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ದಕ್ಷಿಣ ಠಾಣೆ;
- ಪಿರ್ಯಾದಿದಾರರಾದ ಗಿರೀಶ್ (27), ತಂದೆ: ಯು ಬಿ ಭಾಸಕರ, ವಾಸ: 3ನೇ ಕ್ರಾಸ್, ಸೂಟರ್ ಫೆಟೆ, ಮಂಗಳೂರು ರವರು ಕಟ್ಟಡದ ಪೈಂಟಿಂಗ್ ಕೆಲಸ ಮಾಡುತ್ತಿದ್ದು, ನಿನ್ನೆ ದಿನ ದಿನಾಂಕ:15-05-2013 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದುದಾರರು ತನ್ನ ಗೆಳೆಯ ಅಮರನಾಥ ಎಂಬವರೊಡನೆ ಕೆಲಸ ಮುಗಿಸಿ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಪಿರ್ಯಾದಿದಾರರ ನೆರೆಯ ಹಾಗೂ ಪರಿಚಯದವರಾದ ಧಿರಜ್, ಅಜಿತ್, ಚೇತು, ಮಿಥುನ್, ಪ್ರದೀಪ್, ರಂಜಿತ್ ಹಾಗೂ ಸಚಿನ್ ಎಂಬವರು ತಡೆದು ನಿಲ್ಲಿಸಿ, ಅವರಲ್ಲಿ ಧೀರಜ್ ಎಂಬಾತನು ತನ್ನ ಮುಖಕ್ಕೆ ಮತ್ತು ಬೆನ್ನಿಗೆ, ಅಜಿತ್ ಮತ್ತು ಚೇತು ರವರು ತನ್ನ ಶರೀರದ ಅಲ್ಲಲ್ಲಿ ಕೈಯಿಂದ ಹೊಡೆದುದಾಗಿಯೂ, ಅವರೊಂದಿಗೆ ಇದ್ದ ಮಿಥುನ್, ಪ್ರದೀಪ್ ಮತ್ತು ಸಚಿನ್ ಹಾಗೂ ರಂಜಿತ್ ರವರು ಬೇವಸರ್ಿ ರಂಡೇ ಮಕ್ಕಳೇ ನಿಮಗೆ ಬಾರೀ ಹಾಂಕರನ ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದುದಾಗಿಯೂ. ಇದರಿಂದ ಹೆದರಿದ ತಾವು ಬೊಬ್ಬೆ ಹಾಕಿದಾಗ ಅವರು ಅಲ್ಲಿಗೆ ಬರುವ ಜನರನ್ನು ಕಂಡು ಹೊರಟು ಹೋಗಿರುತ್ತಾರೆ. ಅಲ್ಲದೇ ಹೋಗುವ ಸಮಯ ಬ್ಯಾವಸರ್ಿ ರಂಡೆ ಮಕ್ಕಳೇ ಪೊಲೀಸರಿಗೆ ದೂರು ಕೊಟ್ಟರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಘಟನೆ ನಡೆಯುವ ಸಮಯ ರಾತ್ರಿ 10.00 ಗಂಟೆಯಾಗಿದ್ದು, ಅವರುಗಳನ್ನು ಉರಿಯುವ ದಾರಿದೀಪದ ಸಹಾಯದಿಂದ ನೋಡಿರುವುದಾಗಿಯೂ, ಆರೋಪಿಗಳು ಈ ಹಿಂದೆ ಅವರುಗಳ ಮೋಟಾರು ಸೈಕಲ್ಗಳನ್ನು ಸೂಟರ್ಪೇಟೆಯ ಪರಿಸರದಲ್ಲಿ ಅತೀ ವೇಗವಾಗಿ ಚಲಾಯಿಸಿದ್ದನ್ನು ಕಂಡ ಬಗ್ಗೆ ತಾವು ಹೇಳಿದ್ದರಿಂದ ಪೂರ್ವದ್ವೇಶದಿಂದ ಈ ಕೃತ್ಯ ವೆಸಗಿರುವುದಾಗಿದೆ ಎಂಬುದಾಗಿ ಗಿರೀಶ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಮೊ.ನಂ.134/13 ಕಲಂ143, 147, 341, 323, 504, 506 ಡಿ/ತಿ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
No comments:
Post a Comment