ಕಾಣೆ
ಪ್ರಕರಣ
ಕಾವೂರ್
ಠಾಣೆ
- ಫಿರ್ಯಾದಿದಾರರಾದ ಸಿದ್ದಪ್ಪ ಎಂಬವರ ತಂಗಿ ಕುಮಾರಿ ನೀಲಮ್ಮ ಎಂಬವರು ತಾರೀಕು 17-05-2013 ರಂದು ಬೆಳಿಗ್ಗೆ 11-30 ಗಂಟೆಗೆ ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಬ್ಯಾಗ್ ಹಿಡಿದುಕೊಂಡು ಮನೆಯಿಂದ ಹೊರಗೆ ಹೋದವಳು ವಾಪಾಸು ಮನೆಗೆ ಬಾರದೇ ಇದ್ದು, ಸಂಬಂಧಿಕರ ಮನೆಯಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇದ್ದು, ಕಾಣೆಯಾಗಿರುತ್ತಾಳೆ ಎಂಬಿತ್ಯಾದಿಯಾಗಿರುತ್ತದೆ. ಕಾಣೆಯಾದ ನೀಲಮ್ಮಳ ಚಹರೆ ವಿವರ: 1] ಎತ್ತರ 4 ಅಡಿ 6 ಇಂಚು 2] ಬಿಳಿ ಮೈಬಣ್ಣ 3] ಸಪೂರ ಶರೀರ 4] ಪ್ರಾಯ 22 ವರ್ಷ 4] ಕೆಂಪು ಚೂಡಿದಾರ ಧರಿಸಿರುತ್ತಾಳೆ 5] ಚಿನ್ನದ ಸರ, ಬೆಂಡೋಲೆ ಧರಿಸಿರುತ್ತಾಳೆ 6] ಕನ್ನಡ, ತುಳು, ಇಂಗ್ಲೀಷ್. ಹಳೆಗನ್ನಡ ಮಾತನಾಡುತ್ತಾಳೆ ಎಂಬುದಾಗಿ ಸಿದ್ದಪ್ಪ ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 111/2013 ಕಲಂ ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಫಿರ್ಯಾದಿದಾರರಾದ ಹನುಮಂತ ರವರ ಮಗಳಾದ ಕುಮಾರಿ ಶೋಭಾ ಎಂಬವರು ತಾರೀಕು 20-05-2013 ರಂದು ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯಿಂದ ಎಲ್ಲೋ ಹೋಗಿದ್ದು, ವಾಪಾಸು ಮನೆಗೆ ಬಾರದೇ ಇದ್ದು, ಈ ವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇದ್ದು, ಕಾಣೆಯಾಗಿರುತ್ತಾಳೆ ಎಂಬಿತ್ಯಾದಿಯಾಗಿರುತ್ತದೆ. ಕಾಣೆಯಾದ ನೀಲಮ್ಮಳ ಚಹರೆ ವಿವರ: 1] ಎತ್ತರ 4 ಅಡಿ 6 ಇಂಚು 2] ಬಿಳಿ ಮೈಬಣ್ಣ 3] ದೃಢಕಾಯ ಶರೀರ 4] ಪ್ರಾಯ 14 ವರ್ಷ 4] ನೀಲಿ ಲಂಗ, ಕಪ್ಪು ರವಿಕೆ ಧರಿಸಿರುತ್ತಾಳೆ 5] ಕಿವಿಯಲ್ಲಿ ಬಂಗಾರದ ಒಲೆ ಧರಿಸಿರುತ್ತಾಳೆ ಎಂಬುದಾಗಿ ಹನುಮಂತ ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಅ.ಕ್ರ. 112/2013 ಕಲಂ ಹುಡುಗಿ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ
ಪ್ರಕರಣ
ಕಾವೂರ್
ಠಾಣೆ
- ಫಿರ್ಯಾದಿದಾರರಾದ ಶ್ರೀ ಟಿ.ವಿ ಮ್ಯಾಥ್ಯುರವರು ರೋಹಿತ್ ರವರಿಗೆ ರೂ. 2,50,000.00 ಕೊಡಲು ಬಾಕಿ ಇದ್ದು, ನಿನ್ನೆ ರಾತ್ರಿ ರೋಹಿತ್ ಫಿರ್ಯಾದಿದಾರರಿಗೆ ಫೋನ್ ಮಾಡಿ ಹಣವನ್ನು ಈಗಲೇ ಕೊಡುವಂತೆ ಒತ್ತಾಯ ಮಾಡಿದಾಗ ಅವರೊಳಗೆ ಮಾತಿನ ಚಕಮುಕಿ ಆಗಿದ್ದು, ನಂತರ ರಾತ್ರಿ 10-30 ಗಂಟೆಗೆ ರೋಹಿತ್ ಫಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರನ್ನು ಬೇವರ್ಷಿ, ರಂಡೇ ಮಗ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದ, ಕೈಯಿಂದ ಫಿರ್ಯಾದಿದಾರರ ತಲೆಗೆ ಹೊಡೆದು ರಭಸದಿಂದ ದೂಡಿದಾಗ ಫಿರ್ಯಾದಿದಾರರು ಕುಸಿದು ಮಂಚದ ಅಂಚು ಫಿರ್ಯಾದಿದಾರರ ಎಡಕಾಲಿನ ಮೊಣಗಂಟಿಗೆ ತಾಗಿ ನೋವಾಗಿರುತ್ತದೆ, ಜಗಳ ಬಿಡಿಸಲು ಬಂದ ಫಿರ್ಯಾದಿದಾರರ ತಾಯಿಯನ್ನು ಸಹ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ ಎಂಬುದಾಗಿ ಶ್ರೀ ಟಿ.ವಿ ಮ್ಯಾಥ್ಯುರವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆ ಅ.ಕ್ರ: 113/2013 ಕಲಂ 448, 504, 323 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಾಹನ ಕಳವು ಪ್ರಕರಣ
ಬಜಪೆ ಠಾಣೆ
- ದಿನಾಂಕ 18/05/2013 ರಂದು ಪಿಯರ್ಾದಿದಾರರಾದ ಜಯಪ್ರಕಾಶ್ ಕೆ. 38 ವರ್ಷ ತಂದೆ: ರಾಮಯ್ಯ ಆಚಾರ್ ಕೆ. ವಾಸ: ಡೋರ್ ನಂ. 1-17/81, ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ದೇರೆಬೈಲು ಕೊಂಚಾಡಿ, ದೇರೆಬೈಲು ಗ್ರಾಮ, ಮಂಗಳೂರು ತಾಲೂಕುರವರು ಕೆಲಸದ ನಿಮಿತ್ತ ತನ್ನ ಬಾಬ್ತು ಮೋ. ಸೈಕಲ್ ನಂ. ಏಂ 19 ಇಅ 7659 ನೇದರಲ್ಲಿ ಮಂಗಳೂರು ತಾಲೂಕು ಪೆಮರ್ುದೆ ಗ್ರಾಮದ ಒ.ಎಂ.ಪಿ.ಎಲ್. ಗೆ ಬಂದು ಒ.ಎಂ.ಪಿ.ಎಲ್. ನ ಮುಖ್ಯ ಗೇಟಿನ ಹೊರಗೆ ಮೋ. ಸೈಕಲನ್ನು ನಿಲ್ಲಿಸಿ ಒಳಗೆ ಹೋಗಿದ್ದು, ಪಿಯರ್ಾದಿದಾರರು ಕೆಲಸ ಮುಗಿಸಿ ವಾಪಾಸು ಹೊರಗೆ ಬಂದಾಗ ಅವರ ಬಾಬ್ತು ಮೋ. ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಕಾಣೆಯಾಗಿದ್ದು, ಸದ್ರಿ ಮೋ. ಸೈಕಲ್ ನಂ. ಏಂ 19 ಇಅ 7659 ನೇದ್ದನ್ನು ಬೆಳಿಗ್ಗೆ 11.30 ಗಂಟೆಯಿಂದ 13.45 ಗಂಟೆ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋ. ಸೈಕಲ್ ನ ಅಂದಾಜು ಮೌಲ್ಯ ರೂ. 30,000/- ಆಗಬಹುದು ಎಂಬುದಾಗಿ ಜಯಪ್ರಕಾಶ್ ಕೆ.ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 151/2013 ಕಲಂ: 379 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment