Wednesday, May 29, 2013

Daily Crime Incidents for May 29, 2013

ಮಹಿಳಾ ಠಾಣೆ

ಹಲ್ಲೆ ಪ್ರಕರಣ


  • ದಿನಾಂಕ: 28-05-2013 ರಂದು ಸಂಜೆ 5-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ದೂರನ್ನು ಪಡೆದಿದ್ದು, ಸಾರಂಶವೇನೆಂದರೆ, ಪಿರ್ಯಾದಿದಾರರಾದ ಶಶಿಕಲಾ ಇವರು ಈಗ್ಗೆ 10 ವರ್ಷಗಳ ಹಿಂದೆ ಆರೋಪಿ ಗಣೇಶ ಇವರನ್ನು ಮದುವೆಯಾಗಿದ್ದು, ಎರಡು ಹೆಣ್ಣು ಮಕ್ಕಳು ಇರುತ್ತಾರೆ. ಸದ್ರಿ ಆರೋಪಿಯು ಪದೇ ಪದೇ ಚಾಕುವಿನಿಂದ ಕೊಲೆ ಬೆದರಿಕೆ ಹಾಕುತ್ತಿದ್ದು, ಹೆಣ್ಣು ಮಕ್ಕಳು ಶಾಲೆಗೆ ಹೋಗುವಾಗ ದಾರಿ ಮಧ್ಯದಲ್ಲಿ ಮಕ್ಕಳ ಕೂದಲನ್ನು ಕತ್ತರಿಯಿಂದ ಕತ್ತರಿಸುವುದು ಶಾಲೆಗೆ ಹೋಗದಂತೆ ತಡೆಯುತ್ತಿದ್ದು, ದಿನಾಂಕ 22-05-2013 ರಂದು ಆರೋಪಿಯು ಕುಡಿದು ಪಿರ್ಯಾದಿ ಕೆಲಸ ಮಾಡುವ ಜಾಗದಲ್ಲಿ  ಹೋಗಿ ವಿನಾಕಾರಣ ಪಿರ್ಯಾದಿಯ ಕೆನ್ನೆಗೆ ಹೊಡೆದು ತೊಂದರೆ ಮಾಡಿರುತ್ತಾರೆ. ಮತ್ತು ಅವ್ಯಾಛ್ಯ ಶಬ್ದಗಳಿಂದ ಬೈದು ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆ. ಅಲ್ಲದೇ ಈದು ವರ್ಷಗಳ ಹಿಂದೆ ಕರಿಮಣಿ ಸರವನ್ನು ಸಹಾ ಕಿತ್ತು ಬಿಸಾಕಿರುತ್ತಾನೆ ಎಂಬುದಾಗಿ ಶಶಿಕಲಾ  ರವರು ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣಾ ಅ,ಕ್ರ 09/2013 ಕಲಂ 498(ಎ), 506, ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಬಲಾತ್ಕಾರ ಪ್ರಕರಣ

ಮಹಿಳಾ ಠಾಣೆ


  • ಪಿರ್ಯಾದಿದಾರರಾದ(ಹೆಸರು ತಿಳಿದಿರುವುದಿಲ್ಲ) ಪ್ರಾಯ 28 ವರ್ಷ ದವರಾದ ಇವರು ಸುಮಾರು 5 ತಿಂಗಳ ಹಿಂದೆ ಮುಲ್ಕಿಯ ಕನರ್ಿರೆ ಎಂಬಲ್ಲಿ ಅಂಗಡಿಗೆ ಸಾಮಾನು ತರಲು ಹೋಗುತ್ತಿದ್ದಾಗ ತನ್ನ ನೆರೆಕರೆಯವನಾದ  ಆರೋಪಿ ಸುಧಾಕರ ಎಂಬುವವನು ದಾರಿಯಲ್ಲಿ ಅಡ್ಡಗಟ್ಟಿ  ಕೈ ಹಿಡಿದು ಹತ್ತಿರದ ಕಾಡಿಗೆ ಎಳೆದುಕೊಂಡು ಹೋಗಿ ಬಲಾತ್ಕಾರವಾಗಿ ಲೈಂಗಿಕ ಸಂಪರ್ಕ ಮಾಡಿ ಮನೆಯವರಿಗೆ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ನಂತರ ಪುನಃ ಒಂದು ವಾರದ ಬಳಿಕ ಅದೇ ರೀತಿ ಎಳೆದುಕೊಂಡು ಹೋಗಿ ಬಲಾತ್ಕಾರ ಮಾಡಿದ್ದು ಪಿರ್ಯಾದಿದಾರರು ಈಗ 5 ತಿಂಗಳ  ಗಬರ್ಿಣಿಯಾಗಿರುತ್ತಾರೆ ಮತ್ತು ಮಹಿಳಾ ಪೊಲೀಸ್ ಠಾಣಾ ಅ,ಕ್ರ 08/2013 341,376,506  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment