Tuesday, May 14, 2013

Daily Crime Incidents for May 14, 2013


ಅಪಘಾತ ಪ್ರಕರಣ

ಸುರತ್ಕಲ್ ಠಾಣೆ


  • ಪಿರ್ಯಾದಿದಾರರಾದ ಅಬ್ದುಲ್ ಖಾದರ್ ಪ್ರಾಯಃ 28 ವರ್ಷ ತಂದೆಃ ಹೆಚ್.ಎ. ಇದ್ದಿನಬ್ಬ ವಾಸಃ ಕೋಡಿಕೆರೆ ಹೌಸ್ ಕುಳಾಯಿ ಅಂಚೆ  ಮಂಗಳೂರು ರವರು ದಿನಾಂಕ 12-05-13 ರಂದು ಅವರ ಹೆಂಡತಿ ಅಸ್ಮಾ ಮತ್ತು ಮಗುವಿನ ಜೊತೆಗೆ ಅವರ ಬಾಬ್ತು ಹೋಂಡಾ ಆ್ಯಕ್ಟಿವಾ ನಂಬ್ರ ಕೆಎ-19-ಯು- 4403 ರಲ್ಲಿ ಕಾಟಿಪಳ್ಳದ ಸಂಬಂದಿಕರ ಮನೆಗೆ ಹೋಗಿದ್ದು ಅಲ್ಲಿಂದ ವಾಪಾಸ್ಸು ಕೈಕಂಬ ಸುರತ್ಕಲ್ ರಸ್ತೆಯಲ್ಲಿ ಬರುತ್ತಾ ಅಪರಾಹ್ನ 12-10 ಗಂಟೆಗೆ ಹೆಚ್ಪಿಸಿಎಲ್ ಗೇಟ್ ಬಳಿಗೆ ತಲುಪುತ್ತಿದ್ದಂತೆ ಎದುರು ಕಡೆಯಿಂದ ಅಂದರೆ ಸುರತ್ಕಲ್ ರಸ್ತೆಕಡೆಯಿಂದ ಕೈಕಂಬ ರಸ್ತೆ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ-19-ವಿ- 4732 ನೇಯದ್ದನ್ನು ಅದರ ಸವಾರ ವೆಂಕಟೇಶಕೆಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಹೆಚ್ಪಿಸಿಎಲ್ ಗೇಟ್ ಕಡೆಗೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರ ಆ್ಯಕ್ಟಿವಾ ಹೋಂಡಾಕ್ಕೆ ಮೋಟಾರ್ ಸೈಕಲ್ ಡಿಕ್ಕಿಯಾಗಿ ಪಿರ್ಯಾದಿ ಹಾಗೂ ಡಿಕ್ಕಿ ಪಡಿಸಿದ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಮೂಗಿಗೆ ಗಲ್ಲಕ್ಕೆ ತಲೆಗೆ ಗಾಯವಾಗಿದ್ದು ಪಿರ್ಯಾದಿದಾರರ ಹೆಂಡತಿ ಹಾಗೂ ಮಗುವಿಗೆ ಯಾವುದೇ ಗಾಯವಾಗಿರುವುದಿಲ್ಲ ಅಲ್ಲದೇ ಮೋಟಾರ್ ಸೈಕಲ್ ಸವಾರ ವೇಂಕಟೇಶರವರಿಗೆ ಕೂಡಾ ಗಾಯವಾಗಿರುತ್ತದೆ. ಬಳಿಕ ಪಿರ್ಯಾದಿದಾರರನ್ನು ಚಿಕಿತ್ಸೆಗೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿಂದ ಹೆಚ್ಚಿನ ಚಿಕತ್ಸೆಗೆ ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬುದಾಗಿ ಅಬ್ದುಲ್ ಖಾದರ್  ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣಾ ಅ.ಕ್ರ. 132/2013 ಕಲಂ: 279-337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ದಕ್ಷಿಣ ಠಾಣೆ


  • ದಿನಾಂಕ 12-05-2013 ರಂದು ರಾತ್ರಿ ಸುಮಾರು 11-45 ಗಂಟೆ ಸಮಯಕ್ಕೆ ಮಂಗಳೂರು ಸವರ್ೀಸ್ ಬಸ್ಸು ನಿಲ್ದಾಣದ ಒಳಗಡೆ ಫಿಯರ್ಾದುದಾರರಾದ ವಿಜಯಗಿರಿ ಮಹಾರಾಜ ಸ್ವಾಮೀಜಿ (56), ಗುರು, ಶ್ರೀ ರಾಮಗಿರಿ ಮಹಾರಾಜ ಕುಟೀರ ನಂಬ್ರ 3, ಕೈಕಂಬ ಆಶ್ರಮ, ಬದ್ರಿನಾಥ್ ಹಿಮಾಲಯ, ಚಾಮೋರಿ ಜಿಲ್ಲೆ, ಉತ್ತರಾಂಚಲ ರವರು ಕುಳಿತುಕೊಂಡಿದ್ದಾಗ, ಆರೋಪಿಗಳಾದ ಎರಡು ಜನ ಅಪರಿಚಿತ ವ್ಯಕ್ತಿಗಳು ಫಿಯರ್ಾದುದಾರರ ಬಳಿಗೆ ಬಂದು, ಫಿಯರ್ಾದುದಾರರ ಕೈಯಲ್ಲಿದ್ದ ಮೊಬೈಲ್ ಫೋನನ್ನು ಕೊಡುವರೇ ಕೇಳಿದಾಗ, ಫಿಯರ್ಾದುದಾರರು ನನ್ನ ಮೊಬೈಲ್ ಫೋನು ನಿಮಗೆ ಯಾಕೆ ಬೇಕು ಎಂದು ಕೇಳಿದಾಗ, ಆರೋಪಿಗಳ ಪೈಕಿ ಒಬ್ಬಾತನು ಫಿಯರ್ಾದುದಾರರಿಗೆ ಕೈಯಿಂದ ಕೆನ್ನೆಗೆ ಹೊಡೆದಿದ್ದು, ನಂತರ ಆರೋಪಿಗಳು ಫಿಯರ್ಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಫಿಯರ್ಾದುದಾರರನ್ನು ಬೆದರಿಸಿ, ಅಪ್ರಮಾಣಿಕತನದಿಂದ ಅವರ ವಶದಲ್ಲಿದ್ದ ಮೊಬೈಲ್ ಫೋನ್ನ್ನು  ಬಲತ್ಕಾರದಿಂದ ಕಸಿದುಕೊಳ್ಳಲು  ಪ್ರಯತ್ನಿಸಿರುವುದಾಗಿದೆ. ಆರೋಪಿಯು ಫಿಯರ್ಾದುದಾರರಿಗೆ ಕೆನ್ನೆಗೆ ಹೊಡೆದ ಪರಿಣಾಮ ಫಿಯರ್ಾದುದಾರರಿಗೆ ನೋವು ಉಂಟಾಗಿದ್ದು, ಈ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಅಸ್ಪತೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ವಿಜಯಗಿರಿ ಮಹಾರಾಜ ಸ್ವಾಮೀಜಿ  ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ  ಮೊ.ನಂ.131/2013 ಕಲಂ  393, 504, 323 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮೂಡಬಿದ್ರೆ ಠಾಣೆ


  • ದಿನಾಂಕ : 11-05-2013 ರಂದು 3-00 ಗಂಟೆಗೆ ಆರೋಪಿತರಾದ ದಿನೇಶ, ಹರೀಶ, ಸಂತೋಷ ಹಾಗೂ ಗೋಪಾಲ ನಾಯ್ಕ್ ಹಾಗೂ ಇತರ 6 ಜನ ಒಟ್ಟು ಸೇರಿ ಸಮಾನ ಉದ್ದೇಶಿತರಾಗಿ ಪಿರ್ಯಾದಿ ಜೋನ್‌ ಅಗಸ್ಟಿನ್‌ರವರನ್ನು ಕುರಿತು ಬೇವಾರ್ಸಿ ನೀನು ಕೇರಳದವನು ನಮ್ಮ ಊರಿನಲ್ಲಿ ಬಂದು ಗತ್ತು ತೋರಿಸುವುದು ಬೇಡ ಎಂಬಿತ್ಯಾದಿಯಾಗಿ ಅವಾಚ್ಯವಾಗಿ ಬೈದು ಇವರ ಪೈಕಿ ದಿನೇಶನು ಕೈಯಿಂದ ಹಲ್ಲೆ ಮಾಡಿ ದೂಡಿ ಹಾಕಿ ಕಾಲಿನಿಂದ ಒದ್ದುದಲ್ಲದೇ ಇತರರು ಕೈಗಳಿಂದ ಹಲ್ಲೆ ಮಾಡಿ ಪಿರ್ಯಾದಿದಾರರ ತಲೆಗೆ, ಹಣೆಗೆ, ಬೆನ್ನಿಗೆ, ಕೈಕಾಲುಗಳಿಗೆ ಗುದ್ದಿದ ನೋವು ಹಾಗೂ ತರಚಿದ ಗಾಯ ಉಂಟು ಮಾಡಿರುವುದಲ್ಲದೇ ಮನೆಯ ಗೇಟನ್ನು ಕಿತ್ತು ಬಿಸಾಡಿರುತ್ತಾರೆ. ಈ ಕೃತ್ಯಕ್ಕೆ ಪಿರ್ಯಾದಿಯ ಮನೆಯ ಪೈಂಟಿನ ಕೆಲಸದ ಲೆಕ್ಕಚಾರದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಈ ಕೃತ್ಯ ನಡೆದಿರುವುದಾಗಿದೆ ಎಂಬುದಾಗಿ ಜೋನ್‌ ಅಗಸ್ಟಿನ್‌ (54) ತಂದೆ : ದಿ/ ಅಗಸ್ಟಿನ್‌, ವಾಸ : ಜೆ ಬಿ ಗಾರ್ಡನ್‌ , ಕೆಲ್ಲಪುತ್ತಿಗೆ  5 ಸೆಂಟ್ಸ್‌ ಕಾಲೋನಿ, ಧರೆಗುಡ್ಡೆ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾ ಅ.ಕ್ರ 103/2013 ಕಲಂ : 143, 147, 148, 323, 504, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 



  • ದಿನಾಂಕ : 11-05-2013 ರಂದು 15-00 ಗಂಟೆಗೆ ದರೆಗುಡ್ಡೆ ಗ್ರಾಮದ 5 ಕಾಲೋನಿ ಜೆ.ಪಿ ಗಾರ್ಡನ್ ಕೆಲ್ಲಪುತ್ತಿಗೆ ಎಂಬಲ್ಲಿ  ಆರೋಪಿ ಜೋನ್‌ ಅಗಸ್ಟಿನ್‌ ಎಂಬವರ   ಮನೆಯ ಪೈಂಟಿಗ್‌ ಗುತ್ತಿಗೆ ವಿಚಾರದಲ್ಲಿ ಪಿರ್ಯಾದಿದಾರರಾದ  ದಿನೇಶ, ಮತ್ತು ಪಿರ್ಯಾದಿಯ ತಮ್ಮನು ಕೇಳಲು ಹೋದಾಗ ಆರೋಪಿ ಜೋನ್‌ ಅಗಸ್ಟಿನ್‌ ಎಂಬಾತನು ಬೇವರ್ಸಿ ಬೊಳಿ ಮಗ ನೀನು ಭಾರಿ ಹಣ ಕೇಳುತ್ತಿಯ ಎಂದು ಮರದ ದೊಣ್ಣೆಯಿಂದ ಪಿರ್ಯಾದಿಯ ಕೈಗೆ ಹಾಗೂ ತಮ್ಮನ ಬಲ ಕಾಲಿಗೆ ಹೊಡೆದುದಲ್ಲದೇ ಪಿರ್ಯಾದಿಯ ಬೈಕಿನ ಡೂಮ್‌ಗೆ ಹೊಡೆದಿರುತ್ತಾನೆ ಎಂಬುದಾಗಿ ದಿನೇಶ (28), ತಂದೆ : ಕರುಣಾಕರ, ವಾಸ : ಪೂಜಾ ನಿವಾಸ, ಮೂಡುಮಾರ್ನಾಡು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 104/2013 ಕಲಂ : 324, 504, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 

No comments:

Post a Comment