ಅಸ್ವಾಭಾವಿಕ ಮರಣ ಪ್ರಕರಣ
ಮಂಗಳೂರು ಪೂರ್ವ ಠಾಣೆ
- ದಿನಾಂಕ: 11-05-2013 ರಂದು ಪಿರ್ಯಾದಿದಾರರಾದ ಶ್ರೀ. ಅಶೀಸ್ ಗೋಜ್ (45) ತಂದೆ: ಹರೀಶ್ಚಂದ್ರ ಗೋಜ್ ವಾಸ: 108,ಪಿ ಡಿ ರಸ್ತೆ, ಕಕನರ ಕಲ್ಕತ್ತಾ 24 ಪಾರಾಗನ್, ಪಶ್ಚಿಮಬಂಗಾಳ. ಎಂಬವರು ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರರ ಊರಿನವರಾದ ಬಿಸು ಗೋಜ್ ಪ್ರಾಯ:45 ವರ್ಷ ಇವರು ಪಿರ್ಯಾದಿದಾರರೊಂದಿಗೆ ಹೆಲ್ಪರ್ ಕೆಲಸ ಮಾಡಿಕೊಂಡಿದ್ದು, ರಾತ್ರಿ ವೇಳೆಯಲ್ಲಿ ಬಿಲ್ಡಿಂಗ್ ನ ಕಟ್ಟಡದ ಮಾಳಿಗೆಯಲ್ಲಿ ಮಲಗುತ್ತಿದ್ದು ದಿನಾಂಕ 10-05-2013ರಂದು ತನಗೆ ಜ್ವರ ಬರುತ್ತಿದೆ ಎಂದು ಹೇಳಿ ಪಿರ್ಯಾದಿದಾರರು ಉಳಿದುಕೊಳ್ಳುವ ರೂಂನಲ್ಲಿ ಮಲಗಿದ್ದು ಈ ದಿನ ಬೆಳಿಗ್ಗೆ 06.00 ಗಂಟೆಗೆ ಬಿಸು ಗೋಜ್ ಮಲಗಿದ್ದವನು ಏಳದೇ ಇದ್ದುದರಿಂದ ಪಿರ್ಯಾದಿದಾರರು ಹೋಗಿ ನೋಡಲಾಗಿ ರಾತ್ರಿ ವೇಳೆಯಲ್ಲಿ ಮಲಗಿದ್ದವನು ಯಾವುದೋ ಖಾಯಿಲೆ ಉಲ್ಬಣಗೊಂಡು ಮಲಗಿದ್ದಲ್ಲಿಯೇ ಆಕಸ್ಮಿಕವಾಗಿ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ಅಶೀಸ್ ಗೋಜ್(45) ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣೆ ಯು.ಡಿ.ಆರ್.ನಂಬ್ರ. 17/2013 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಂಚನೆ ಪ್ರಕರಣ
ಮಂಗಳೂರು ದಕ್ಷಿಣ ಠಾಣೆ
- ಫಿಯರ್ಾದುದಾರರಾದ ವಿನೋದ್ ನಾಯರ್ರವರು ಮೀನು ವ್ಯಾಪಾರಿಯಾಗಿದ್ದು, ದಿನಾಂಕ 20-09-2012 ರಂದು ರತ್ನಗಿರಿಯಿಂದ ಮಂಗಳೂರು ದಕ್ಕೆಗೆ ಫೈಝಲ್ ಎಂಬವರ ಹೆಸರಿನಲ್ಲಿ ಫಾರೂಕ್ ಎಂಬ ವ್ಯಕ್ತಿ ಫೋನ್ ಮಾಡಿ ಮೀನಿಗೆ ಆರ್ಡರ್ ಮಾಡಿದ್ದು, ಅದರಂತೆ ಫಿರ್ಯಾದುದಾರರು 29 ಬಾಕ್ಸ್ ಮೀನುಗಳನ್ನು ಎಂ.ಹೆಚ್ 11 ಎಜಿ 6345 ನೇ ಲಾರಿಯಲ್ಲಿ ದಿನಾಂಕ 24-09-2012 ರಂದು ಹಾಗೂ ದಕ್ಷಿಣ ರೈಲ್ವೆ ಗಾಡಿಯಲ್ಲಿ 12 ಬಾಕ್ಸ್ ಮೀನುಗಳನ್ನು ಬೇರೆ ಬೇರೆ ದಿನಗಳಲ್ಲಿ ಕಳುಹಿಸಿಕೊಟ್ಟಿರುತ್ತಾರೆ. ಇದರ ಬಾಬ್ತು ಫಿರ್ಯಾದುದಾರರ ಫೆಡರಲ್ ಬ್ಯಾಂಕ್ ಆಫ್ ಲಿಮಿಟೆಡ್ನ ಖಾತೆ ನಂಬ್ರ 13670200002009 ನೇದಕ್ಕೆ 22-09-2012 ರಂದು 49,999/- ರೂ ಗಳನ್ನು ಹಾಗೂ ದಿನಾಂಕ 26-09-2012 ರಂದು ರೂ 20,000/- ನ್ನು ಜಮೆ ಮಾಡಿರುತ್ತಾರೆ. ಬಾಕಿ ಉಳಿದ 11,07,201/- ರೂ ಗಳನ್ನು ಆರೋಪಿಗಳು ನೀಡದೇ ನಂಬಿಸಿ ಮೋಸ ಮಾಡಿದ್ದು, ಇವರ ವಿವರ ತಿಳಿಯಲಾಗಿ ಆಸೀಫ್ ಮಂಜೇಶ್ವರ ಹಾಗೂ ಅಫ್ತಾಬ್ ಎಂಬವರು ಫೈಝಲ್ ಎಂಬುದಾಗಿ ನಂಬಿಸಿ ನನಗೆ ಹಣ ನೀಡದೇ ಮೋಸ ಮಾಡಿರುತ್ತಾರೆ ಎಂಬುದಾಗಿ ವಿನೋದ್ ನಾಯರ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಕ್ರ 128/2013 ಕಲಂ 406-420 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
- ದಿನಾಂಕ 11-05-2013 ರಂದು 21-15 ಗಂಟೆಗೆ ನಗರದ ಕೇಂದ್ರ ರೈಲ್ವೇ ನಿಲ್ದಾಣದ ಮುಖ್ಯ ದ್ವಾರದ ಎದುರು ರಸ್ತೆಯಲ್ಲಿ ಫಿಯರ್ಾದುದಾರರದ ಹರೀಶ್ ಪೂಜಾರಿ (22) ತಂದೆ: ಸುಂದರ ಪೂಜಾರಿ, ವೈದ್ಯನಾಥ ನಗರ, ಅತ್ತಾವರ ಮಂಗಳೂರು ರವರು ಅರೋಪಿ ಅಪರಿಚಿತ ಪ್ರಯಾಣಿಕನನ್ನು ಮಂಗಳೂರು ರೈಲ್ವೇ ನಿಲ್ದಾಣದಿಂದ ಅತ್ತಾವರ ಪ್ರಶಾಂತ್ ಬಾರ್ಗೆ ಕರೆದುಕೊಂಡು ಹೋಗಿ, ನಂತರ ವಾಪಾಸು 21-55 ಗಂಟೆಗೆ ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಬಂದಾಗ, ಅಪರಿಚಿತ ಪ್ರಯಾಣಿಕ ಮತ್ತು ಫಿಯರ್ಾದಿ ರಿಕ್ಷಾ ಚಾಲಕನ ಮಧ್ಯೆ ಬಾಡಿಗೆ ವಿಚಾರದಲ್ಲಿ ಚಚರ್ೆ ನಡೆದಿದ್ದು ಆ ವೇಳೆ ಅಪರಿಚಿತ ಪ್ರಯಾಣಿಕನು ಫಿಯರ್ಾದುದಾರರು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ಬಾಡಿಗೆ ಹಣ ನೀಡದೆ ಓಡಿ ಹೋಗುತ್ತಿದ್ದಾಗ, ರಿಕ್ಷಾ ಚಾಲಕ ಫಿಯರ್ಾದಿಯ ಬೊಬ್ಬೆ ಕೇಳಿ, ರೈಲ್ವೇ ನಿಲ್ದಾಣದಲ್ಲಿದ್ದ ಆತನ ಸ್ನೇಹಿತ ವಸಂತನು ಅಪರಿಚಿತ ಪ್ರಯಾಣಿಕನನ್ನು ಹಿಡಿಯಲು ಪ್ರಯತ್ನಿಸಿದಾಗ, ಆರೋಪಿ ಅಪರಿಚಿತ ಪ್ರಯಾಣಿಕನು ವಸಂತನಿಗೆ ಕೈಯಿಂದ ಹೊಡೆದು ದೂಡಿದಾಗ, ಆತನು ರಸ್ತೆಗೆ ಬಿದ್ದಿದ್ದು, ಪರಿಣಾಮ ವಸಂತನ ತಲೆಯ ಹಿಂಬದಿಗೆ ರಸ್ತೆಯಲ್ಲಿದ್ದ ಕಲ್ಲು ತಾಗಿ ರಕ್ತ ಬರುತ್ತಿದ್ದು, ಫಿಯರ್ಾದುದಾರರು ಮತ್ತು ಇತತರು ಆತನ ಆರೈಕೆ ಮಾಡುತ್ತಿದ್ದಂತೆ ಹಲ್ಲೆಗೈದ ಆರೋಪಿ ಆಗ ತಾನೆ ರೈಲ್ವೇ ನಿಲ್ದಾಣದಿಂದ ಹೊರಡುತ್ತಿದ್ದ ವೆಸ್ಟ್ಕೊಸ್ಟ್ ರೈಲು ಹತ್ತಿ ಪರಾರಿಯಾಗಿರುತ್ತಾನೆ ಎಂಬುದಾಗಿ ಹರೀಶ್ ಪೂಜಾರಿ (22) ತಂದೆ: ಸುಂದರ ಪೂಜಾರಿ, ವೈದ್ಯನಾಥ ನಗರ, ಅತ್ತಾವರ ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಕ್ರ 129/2013 ಕಲಂ 341-504-323 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಪಣಂಬೂರು ಠಾಣೆ
- ಪಿರ್ಯಾದಿದಾರರಾದ ಸಾಜೀರ್ ಪ್ರಾಯ 25 ವರ್ಷ ತಂದೆ: ಅಬ್ಬಾಸ್ ವಾಸ: ಹೇಡಿಯ ಮನೆ ಕಡೂರು ದೇವರ ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ: 12-05-13 ರಂದು 00-04 ಗಂಟೆಗೆ ತನ್ನ ಬಾಬ್ತು ಬೈಕಂಪಾಡಿ ಜಂಕ್ಷನ್ನಲ್ಲಿರುವ ಹೋಟೇಲಿನ ಕೆಲಸ ಮಾಡಿ ಶುಚಿಗೊಳಿಸಿ ಹೋಟೇಲ್ ಬಂದ್ ಮಾಡಿ ಹೊಟೇಲ್ ಪಕ್ಕದ ರೂಮಿಗೆ ಹೋಗುತ್ತಿರುವ ಸಮಯ ರಾ ಹೆ -66ರಲ್ಲಿ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ಇನ್ನೋವಾ ಕಾರೊಂದನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಲಾರಿಯೊಂದನ್ನು ಓವರ್ ಟೇಕ್ ಮಾಡಿ ರಸ್ತೆ ದಾಟಲು ನಿಂತಿದ್ದ ಓರ್ವ ವ್ಯಕ್ತಿಗೆ ಡಿಕ್ಕಿಹೊಡೆದ ಪರಿಣಾಮ ಆ ವ್ಯಕ್ತಿ ರಸ್ತೆಗೆ ಎಸೆಯಲ್ಪಟ್ಟಿದ್ದು ಸದ್ರಿ ವ್ಯಕ್ತಿಯ ಬಳಿಗೆ ಪಿರ್ಯಾದಿದಾರರು ಹೋಗಿ ನೋಡಲಾಗಿ ಮೃತ ವ್ಯಕ್ತಿಯ ತಲೆಯ ಮೇಲೆ ಇನ್ನೋವಾ ಕಾರಿಯ ಟಯರು ಹರಿದು ಸಂಪೂರ್ಣವಾಗಿ ಜಖಂಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಅಪಘಾವನ್ನುಂಟು ಮಾಡಿದ ಇನ್ನೋವಾ ಕಾರನ್ನು ಅದರ ಚಾಲಕ ಸ್ಥಳದಲ್ಲಿ ನಿಲ್ಲಿಸದೇ, ಅಪಘಾತ ನಡೆದ ಬಗ್ಗೆ ಪೊಲೀಸರಿಗೆ ತಿಳಿಸದೇ, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನು ಮಾಡದೇ ವಾಹನ ಸಮೇತ ಪರಾರಿಯಾಗಿರುವುದಾಗಿದೆ ಎಂಬುದಾಗಿ ಸಾಜೀರ್ ರವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆ ಮೊ.ನಂ.73/2013 ಕಲಂಃ 279-304 (ಎ) ಐಪಿಸಿ & 134 (ಎ) (ಬಿ) & 187 ಐ.ಎಮ್.ವಿ ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment