ಕಳವು ಪ್ರಕರಣ:
ಬಕರ್ೆ ಠಾಣೆ;
- ದಿನಾಂಕ 07-05-2013 ರಂದು ರಾತ್ರಿ 20-30ಗಂಟೆಗೆ ಪಿರ್ಯಾದಿದಾರರು ಮಂಗಳೂರಿನಿಂದ ಬೆಂಗಳೂರಿಗೆ ಹೋಗುವರೇ ಬಿಜೈ ಕೆಎಸ್ಆರ್ಟಿಸಿ ನಿಲ್ದಾಣದಿಂದ ಕೆಎ-01-ಎಫ್-9063 ಓಲ್ವೋ ಬಸ್ಸಿನ ಸೀಟ್ ನಂಬ್ರ 13ರ ಮೇಲ್ಗಡೆಯ ಲಗೇಜ್ ಕ್ಯಾರಿಯರ್ನಲ್ಲಿ ಇಟ್ಟು ಬಸ್ಸಿನಿಂದ ಕೆಳಗೆ ಹೋಗಿ 2-3 ನಿಮಿಷದ ಬಳಿಕ ವಾಪಾಸು ಬಂದು ನೋಡುವ ಮಧ್ಯೆ ಸದ್ರಿ ಬ್ಯಾಗನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು.ಸದ್ರಿ ಕಳವಾದ ಬ್ಯಾಗಿನಲ್ಲಿ ಲ್ಯಾಪ್ಟಾಪ್, ಆಪೀಸಿಗೆ ಸಂಬಂಧಪಟ್ಟ ದಾಖಲಾತಿಗಳು, ಬಟ್ಟೆ, ಡೈರಿ ಸ್ಟೇಟ್ ಬ್ಯಾಂಕ್ನ ಚೆಕ್ ಬುಕ್ ಇತ್ಯಾದಿ ಸೊತ್ತುಗಳಿತ್ತು ಲ್ಯಾಪ್ಟಾಪ್ನ ಮೌಲ್ಯ ಅಂದಾಜು ರೂ. 32,000/- ಆಗಬಹುದು ಎಂಬುದಾಗಿ ಮದುಸೂದನ್ (51) ವಾಸ:ಕೇರಳ ರಾಜ್ಯ ರವರು ನೀಡಿದ ದೂರಿನಂತೆ ಬಕರ್ೆ ಠಾಣೆ ಅಪರಾದ ಕ್ರಮಾಂಕ 67/2013 ಕಲಂ 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಬಜಪೆ ಠಾಣೆ;
- ದಿನಾಂಕ: 07-05-2013 ರಂದು 20-00ಗಂಟೆ ಹೊತ್ತಿಗೆ ಬಜಪೆ ಪೆಟ್ರೋಲ್ಬಂಕ್ ಬಳಿಯ ಬಜಾಜ್ ಆಟೋ ಗ್ಯಾರೇಜ್ ಎದುರು ಪಿರ್ಯಾದಿದಾರರು ತನ್ನ ಬಾಬ್ತು ಏಂ19ಂ4832ನೇ ನಂಬ್ರದ ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯ, ಆಟೋ ರಿಕ್ಷಾದಲ್ಲಿ ಪೆಟ್ರೋಲ್ ಖಾಲಿಯಾದ ಪರಿಣಾಮ, ಸದ್ರಿ ರಿಕ್ಷಾವನ್ನು ಬಜಾಜ್ ಆಟೋ ಗ್ಯಾರೇಜ್ ಎದುರು, ಮಣ್ಣು ರಸ್ತೆಯಲ್ಲಿ ನಿಲ್ಲಿಸಿ ರಿಕ್ಷಾಕ್ಕೆ ಪೆಟ್ರೋಲ್ ಹಾಕುತ್ತಿದ್ದ ಸಮಯ ಬಜಪೆ ಕಡೆಯಿಂದ ಮಂಗಳೂರು ಕಡೆಗೆ ಏಂ19ಆ2432 ನೇ ನಂಬ್ರದ ಆಟೋ ರಿಕ್ಷಾವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ನಿಲ್ಲಿಸಿದ ರಿಕ್ಷಾಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಮುಂದೆ ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದ್ದು, ಅಲ್ಲದೆ ಇದರ ಪರಿಣಾಮ ಪಿರ್ಯಾದಿದಾರರು ನೆಲಕ್ಕೆ ಬಿದ್ದು, ಅವರಿಗೆ ಮೂಗಿಗೆ ಗುದ್ದಿದ ಗಾಯವಾಗಿರುತ್ತದೆ. ಅಲ್ಲದೆ ಪಿರ್ಯಾದಿದಾರರ ರಿಕ್ಷಾಕ್ಕೆ ಡಿಕ್ಕಿ ಹೊಡೆದ ರಿಕ್ಷಾ- ಏಂ19ಆ2432 ವು ಮಗುಚಿ ಬಿದ್ದ ಪರಿಣಾಮ ಅದರ ಚಾಲಕ ರಿಕ್ಷಾದ ಅಡಿಗೆ ಬಿದ್ದು ಅವರಿಗೆ ತೀವ್ರ ತರಹದ ಜಖಂ ಆಗಿದ್ದು ಹಾಗೂ ಈ ಅಪಘಾತದಿಂದ ಎರಡೂ ರಿಕ್ಷಾಗಳು ಜಖಂಗೊಂಡಿವೆ ಎಂಬುದಾಗಿ ಜಾಕೀರ್ ಹುಸೈನ್ (44), ತಂದೆ: ಟಿ.ಎಂ ಮಹವ್ಮ್ಮದ್, ಹಾರಿಸ್ ಕ್ಫಟೇಜ್ ಕಿನ್ನಿಪದವು, ಬಜಪೆ ಮಂಗಳೂರು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಪರಾದ ಕ್ರಮಾಂಕ 136/2013, ಕಲಂ: 279, 337, 338 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment