ಅಪಘಾತ ಪ್ರಕರಣ
ಬಜಪೆ ಠಾಣೆ
- ದಿನಾಂಕ: 11-05-2013 ರಂದು 21-30 ಗಂಟೆಗೆ ಫಿರ್ಯಾದಿದಾರರಾದ ನಾರಾಯಣ ಸಪಲಿಗ, 50 ವರ್ಷ, ತಂದೆ: ದಿ: ರಅಮ ಸಪಲಿಗ, ವಾಸ:ಬೀಬಿ ಲಚ್ಚಿಲ್ ಮನೆ, ಅದ್ಯಪಾಡಿ ಗ್ರಾಮ, ಮಂಗಳೂರು ತಾಲೂಕು ರವರು ತನ್ನ ಮಿತ್ರನಾದ ಮಂಜುನಾಥ ಎಂಬವರ ಮೋಟಾರು ಸೈಕಲ್ನಲ್ಲಿ ಬಜಪೆಯಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ಅವರ ಎದುರಿನಿಂದ ಸುಧಾಕರನ್ ಎಂಬವರು ಅವರ ಬಾಬ್ತು ಮೋಟಾರು ಸೈಕಲ್ ನಂ:ಕೆಎ 19 ಕೆ 7163 ನೇದರಲ್ಲಿ ಕೈಕಂಬ ಕಡೆಗೆ ಹೋಗುತ್ತಿದ್ದು, ಮಂಗಳೂರು ತಾಲೂಕಿನ ಪಡುಪೆರಾರ ಗ್ರಾಮದ ಬಲವಂಡಿ ದ್ವಾರದ ಬಳಿ ತಲುಪುತ್ತಿದ್ದಂತೇ ಎದುರಿನಿಂದ ಅಂದರೆ, ಕೈಕಂಬ ಕಡೆಯಿಂದ ಬಜಪೆ ಕಡೆಗೆ ಪಿಕ್ ಅಪ್ ವಾಹನ ನಂ: ಕೆಎ 19 ಡಿ 7744 ನ್ನು ಅದರ ಚಾಲಕರು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸುಧಾಕರನ್ ರವರ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ತೀವ್ರ ತರದ ಗಾಯವಾಗಿದ್ದು, ಗಾಯಾಳುವನ್ನು ಅದೇ ಪಿಕ್ ಅಪ್ ವಾಹನದಲ್ಲಿ ಕುಳ್ಳಿರಿಸಿ ಮಂಗಳೂರು ಎ.ಜೆ. ಆಸ್ಪತ್ರೆಗೆ ಚಿಕಿತ್ಸೆಯ ಕುರಿತು ಸಾಗಿಸಿದ್ದಲ್ಲಿ ಸದ್ರಿಯವರು ರಾತ್ರಿ 22-10 ಗಂಟೆಗೆ ಮೃತಪಟ್ಟಿರುತ್ತಾರೆ ಎ<ಬುದಾಗಿ ನಾರಾಯಣ ಸಪಲಿಗ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ. 142/2013 ಕಲಂ: 279, 304 (ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ 12/05/2013 ರಂದು ಪಿರ್ಯಾದಿದಾರರಾದ ಗಣೇಶ್ ಶೆಟ್ಟಿ (26), ತಂದೆ: ಜಯರಾಮ ಶೆಟ್ಟಿ, ವಾಸ: ಗಂಡೊಟ್ಟು ಮನೆ, ಕೆಂಜಾರು ಅಂಚೆ, ಮಳವ್ರರು ಗ್ರಾಮ, ಮಂಗಳೂರು ತಾಲೂಕು ರವರು ತನ್ನಶಿಪ್ಟ್ ಕಾರು ನಂಬ್ರ ಕೆ.ಎ.19 ಎಂ.ವಿ.2496 ನೇಯದರಲ್ಲಿ ಕುಡುಪಿನಿಂದ ಕಟೀಲಿಗೆ ಹೋಗುತ್ತಿರುವಾಗ ಸಮಯ ಸುಮಾರು ಮದ್ಯಾಹ್ನ 3.30 ಗಂಟೆಗೆ ಪೆಮರ್ುದೆ ಗ್ರಾಮದ ಪೆಮರ್ುದೆ ಪೆಟ್ರೋಲ್ ಬಂಕ್ ಬಳಿ ತಲುಪಿದಾಗ ಎದುರಿನಿಂದ ಬಂದ ಪಲ್ಸರ್ ಬೈಕ್ ನಂಬ್ರ ಕೆ.ಎ.19 ಇ.ಇ. 1819 ನೇಯದರ ಸವಾರನು ತನ್ನ ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀರ ಬಲಬದಿಗೆ ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಗ್ಲಾಸ್, ಸೈಡ್ ಮಿರರ್, ಹಾಗೂ ಎರಡೂ ಡೋರ್ ಗಳು ಜಖಂ ಗೊಂಡಿರುತ್ತದೆ ಎಂಬುದಾಗಿ ಗಣೇಶ್ ಶೆಟ್ಟಿ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ. 143/13 ಕಲಂ: 279 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಹಲ್ಲೆ ಪ್ರಕರಣ
ಕಾವೂರ್ ಠಾಣೆ
- ಪಿರ್ಯಾದಿದಾರರಾದ ನವೀನ್ ಕೆ.ಎಸ್, ವಾಸ: ದೇರೆಬೈಲು ಕೊಂಚಾಡಿ, ಮಂಗಳೂರು ರವರು ತನ್ನ ಕುಟುಂಬದ ಕಾರ್ಯದ ನಿಮಿತ್ತ ಸೋದರಿಯ ಮನೆಯಾದ ಮೂಡುಶೆಡ್ಡೆಗೆ ದಿನಾಂಕ 11-05-2013 Rm ರಂದು ರಾತ್ರಿ 10-00 ಗಂಟೆಗೆ ಕಾರನ್ನು ನೆರೆಮನೆಯ ಪೂರ್ಣಿಮಾ ಎಂಬವರ ಮನೆಯ ಗೇಟಿನ ಮುಂದೆ ಪಾರ್ಕ್ ಮಾಡಿದ್ದು, ಈ ಬಗ್ಗೆ ಪೂರ್ಣಿಮಾ ಎಂಬವರು ಅವಾಚ್ಯ ಶಬ್ದಗಳಿಂದ ಬೈದು, ನಂತರ ಹರೀಶ್ , ಜಯಂತಾ, ಮತ್ತು ಇತರರು ಬಂದು ಪಿರ್ಯದಿದಾರರಿಗೆ ಹಲ್ಲೆ ನಡಸಿರುತ್ತಾರೆ. ಈ ಬಗ್ಗೆ ಪಿರ್ಯದಿದಾರರ ಪತ್ನಿ ಶ್ರೀಮತಿ ಭವಾನಿರವರು ತಡೆಯಲು ಬಂದಾಗ ಅವರ ಮೇಲೂ ಹಲ್ಲೆ ನಡೆಸಿ, ಹೊರಗಿನಿಂದ ಜನವನ್ನು ಕರೆಯಿಸಿ ಪಿರ್ಯಾದಾರರ ಭಾವ ಜನಾರ್ಧನ ರವರಿಗೆ ಮಾರಣಾಂತಿಕ ಹಲ್ಲೆ ಗೊಳಿಸಿ , ಪಿರ್ಯಾದಿದಾರರ ವಾಹನವನ್ನು ಜಖಂ ಗೊಳಿಸಿರುತ್ತಾರೆ. ಜನಾರ್ಧನರವರಿಗೆ ಬಲಕೈ ಹೆಬ್ಬರಳಿಗೆ ಗಾಯವಾಗಿದ್ದು, ಕೆ.ಎಂ.ಸಿ ಆಸ್ಪತ್ರೆಯ ವೈದ್ಯರು ಹೊರರೋಗಿ ಚಿಕಿತ್ಸೆ ನೀಡಿರುತ್ತಾರೆ. ಪಿರ್ಯಾದಿದಾರರ ಕಾರಿಗೆ ಸುಮಾರು ರೂ 5000/- ನಷ್ಟ ಉಂಟಾಗಿರುತ್ತದೆ ಎಂಬುದಾಗಿ ನವೀನ್ ಕೆ.ಎಸ್ ರವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆ ಅ.ಕ್ರ: 102/2013 ಕಲಂ 323, 324, 354, 504, 427 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ 12-05-2013 ರಂದು ಸಂಜೆ 5-45 ಗಂಟೆಗೆ ಮನೆಯ ಅಂಗಳದಲ್ಲಿ ಮನೆಯವರೊಂದಿಗೆ ಕುಳಿತಿದ್ದ ಸಮಯ ಪಿರ್ಯಾದಿದಾರರಾದ ಮೋಹಿನಿ (25 ವರ್ಷ), ತಂದೆ: ಚಂದ್ರಶೇಖರ, ವಾಸ: ಕೃತಿಕಾ ನಿಲಯ, ಗೆಡುಕಲ್ಲು ಬಳಿ, ದೇರೆಬೈಲು, ಕೊಂಚಾಡಿ, ಮಂಗಳೂರು ರವರ ಪರಿಚಯದ ಅವಿನಾಶ್, ಆಶಿಶ್, ಕಿರಣ್, ಜೆ.ಪಿ, ಬಿಜ್ಜು, ಅಮರ್, ಕಿರಣ್, ಚೇತನ್ ಎಂಬ ಹೆಸರಿನ 2 ಜನ, ಕೋಟಿ ಹಾಗೂ ಇತರ ಇಬ್ಬರು ವ್ಯಕ್ತಿಗಳು ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಅದರಲ್ಲಿ ಅವಿನಾಶ್ ಎಂಬವರು ತುಕರಾಮ ಎಲ್ಲಿದ್ದಾನೆ ಎಂದು ಕೇಳಿದರು. ಪಿರ್ಯಾದಿದಾರರು ನಿವ್ಯಾರು ಎಂದು ಕೇಳಿದಾಗ ಪಿರ್ಯಾದಿದಾರನ್ನು ದೂಡಿ, ತಲವಾರು ತೋರಿಸಿ “ಸೂಳೆಮಗನೆ, ನಾಯಿಮಗ ತುಕರಾಮ್ ನೀನು ಹೊರಗೆ ಬಾ” ಎಂದು ಅವಾಚ್ಯ ಶಬ್ದದಿಂದ ಬೈದು ಮನೆಯ ಒಳಗೆ ಬರಲು ಪ್ರಯತ್ನಿಸಿದಾಗ ಪಿರ್ಯಾದಿದಾರರು ಮತ್ತು ಮನೆಯವರು ಬಾಗಿಲನ್ನು ಮುಚ್ಚಿದರು. ಈ ಸಮಯ ಪಿರ್ಯಾದಿದಾರರ ಮಾವ ಹರಿಯಪ್ಪ ಪೂಜಾರಿ ಹಾಗೂ ಅತ್ತೆ ಗುಲಾಬಿರವರು ಈ ರೀತಿ ಯಾಕೆ ಮಾಡುತ್ತೀರಿ ಎಂದು ಕೇಳಿದಾಗ ಅವರಿಗೆ ಕೈಯಿಂದ ಹೊಡೆದಿರುತ್ತಾರೆ. ಈ ಸಮಯ ಮನೆಯ ಎದುರಿನ 3 ಕಿಟಕಿಯ ಗ್ಲಾಸ್ ಗಳನ್ನು ಹಾಗೂ ಗೋಡೆಯ ಟೈಲ್ಸ್ ಗೆ ತಲವಾರಿನಿಂದ ಹೊಡೆದು ಜಖಂಗೊಳಿಸಿರುತ್ತಾರೆ. ಪಿರ್ಯಾದಿದಾರರು ಮತ್ತು ಮನೆಯವರು ಬೊಬ್ಬೆ ಹಾಕಿದಾಗ ಅಪಾದಿತರು ತುಕರಾಮನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂಬುದಾಗಿ ಮೋಹಿನಿ ಯವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆ 103/2013 ಕಲಂ 143, 147, 148, 447, 354, 323, 504, 506, 427 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment