ಸುಳಿಗೆ ಪ್ರಕರಣ
ದಕ್ಷಿಣ ಠಾಣೆ
- ದಿನಾಂಕ 19-05-2013 ರಂದು ಫಿಯರ್ಾದುದಾರರಾದ ಶ್ರೀಮತಿ ಉಮಾ ಎಸ್. ಮೆಂಡನ್ ರವರು ರಾತ್ರಿ ಊಟ ಮುಗಿಸಿ ತನ್ನ ಗಂಡನೊಂದಿಗೆ ನಗರದ ಮುಳಿಹಿತ್ಲು ಫೇರಿ ರೋಡ್ನಲ್ಲಿ ವಾಕಿಂಗ್ಗೆ ಹೋಗುತ್ತಿರುವಾಗ ರಾತ್ರಿ ಸುಮಾರು 9-30 ಗಂಟೆ ಸಮಯಕ್ಕೆ ನಗರದ ಮುಳಿಹಿತ್ಲು ನಲ್ಲಿರುವ ಪ್ರಕಾಶ್ ಗ್ಯಾರೇಜ್ ಬಳಿ ತಲುಪಿದಾಗ, ಸುಮಾರು 30 ರಿಂದ 32 ವರ್ಷ ಪ್ರಾಯದ ಎರಡು ಜನ ಅಪರಿಚಿತ ಯುವಕರು ಕಪ್ಪು ಬಣ್ಣದ ಮೋಟಾರು ಸೈಕಲ್ನಲ್ಲಿ ಬಂದು, ಒಮ್ಮೆಲೇ ಫಿಯರ್ಾದುದಾರರ ಕುತ್ತಿಗೆಗೆ ಕೈ ಹಾಕಿ, ಅವರ ಕುತ್ತಿಗೆಯಲ್ಲಿದ್ದ ಸುಮಾರು ರೂ 75,000-00 ಬೆಲೆ ಬಾಳುವ, 3ಳಿ ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು, ಮೋಟಾರು ಸೈಕಲ್ನಲ್ಲಿ ಪರಾರಿಯಾಗಿರುತ್ತಾರೆ ಎಂಬುದಾಗಿ ಶ್ರೀಮತಿ ಉಮಾ ಎಸ್. ಮೆಂಡನ್ ರವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣಾ ಅಕ್ರ 135/2013 ಕಲಂ 392 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಫಿಯರ್ಾದಿದಾರರಾದ ಜೆರೋಮ್ ಮೆನೇಜಸ್ ರವರ ಅಕ್ಕ ದುಲ್ಸಿನ್ ಫೆನರ್ಾಂಡಿಸ್ ರವರ ಮಗನಾದ ಪ್ರೀತಮ್ ಫೆನರ್ಾಂಡಿಸ್ ಪ್ರಾಯ 36 ವರ್ಷ ಎಂಬವರಿಗೆ ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದು, ಇವರು ದಿನಾಂಕ 18-05-2013 ರಂದು ಬೆಳಿಗ್ಗೆ ತನ್ನ ಮನೆಯಿಂದ ಹೊರಗಡೆ ಹೋಗಿದ್ದು, ದಿನಾಂಕ 19-05-2013 ರಂದು ಬೆಳಿಗ್ಗೆ 6-30 ಗಂಟೆಗೆ ಫಿಯರ್ಾದಿದಾರರಲ್ಲಿ ಅವರ ಅಕ್ಕ ತನ್ನ ಮಗ ಪ್ರೀತಮ್ ಫೆನರ್ಾಂಡಿಸ್ ಮನೆಯ ಪಕ್ಕಾಸಿಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಈತನು ಯಾವುದೋ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿ ಜೆರೋಮ್ ಮೆನೇಜಸ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್. ನಂ: 46/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
ಬಜಪೆ ಠಾಣೆ
- ದಿನಾಂಕ 18-5-13 ರಂದು ರಾತ್ರಿ ಸುಮಾರು 7-30 ಗಂಟೆಗೆ ಫಿರ್ಯಾದಿದಾರರಾದ ಮನ್ಸೂರು ಎಂಬವರು ಅಡ್ಯಾರು ಗ್ರಾಮದ ಕಾಂಜಿಲಕೋಡಿ ಬದ್ರುಲ್ ಹುದಾ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಮನೆಯ ಕಡೆಗೆ ಹೋಗುತ್ತಿದ್ದಾಗ ತನ್ನ ಹಿಂದಿನಿಂದ ಮೋಟಾರು ಸೈಕಲ್ ನಂಬ್ರ ಕೆಎ19ವಿ6674 ನೇದರಲ್ಲಿ ಬಂದ ಆರೋಪಿಗಳು ಫಿರ್ಯಾದಿದಾರರಿಗೆ ಢಿಕ್ಕಿ ಉಂಟು ಮಾಡಿದ ಪರಿಣಾಮ ಫಿರ್ಯಾದಿದಾರರು ಚರಂಡಿಗೆ ಬಿದ್ದು ಎದ್ದು ನಿಂತಾಗ ಆರೋಪಿಗಳ ಪೈಕಿ ಮಹಮ್ಮದ್ ಕುಂಞ ಆವ್ಯಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಅಲ್ಲಿಯೇ ಇದ್ದ ಮರದ ದೊಣ್ಣೆಯಿಂದ ಹೊಡೆದಿದ್ದು, ಆರೋಪಿ ಅಬ್ದುಲ್ ರಶೀದ್ ಎಂಬಾತನು ಫಿರ್ಯಾದಿಯ ಶಟರ್್ ಹರಿದುದಲ್ಲದೆ ಇನ್ನೋರ್ವ ಆರೋಪಿ ಇಷರ್ಾದ್ ಎಂಬಾತನು ಕಾಲಿನಿಂದ ತುಳಿದುದರ ಪರಿಣಾಮ ಫಿರ್ಯಾದಿದಾರರಿಗೆ ಗುದ್ದಿದ ಗಾಯಗಳಾಗಿರುವುದಾಗಿದೆ ಎಂಬುದಾಗಿ ಮನ್ಸೂರ್ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 149/2013 ಕಲಂ:323, 234, 504, 506 ಐಪಿಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ
- ದಿನಾಂಕ: 19-05-2013 ರಂದು ಸಮಯ ಸುಮಾರು 16.30 ಗಂಟೆಗೆೆ ಪಿರ್ಯಾದುದಾರರಾದ ಚಂದ್ರ (44)ತಂದೆ: ಈಶ್ವರ.ವಾಸ: ಕಂದಾವರ ಚಚರ್್ ಬಳಿ, ಗುರುಪುರ, ಕೈಕಂಬ, ಮಂಗಳೂರು ರವರು ಸ್ಕೂಟರ್ ನಂಬ್ರ ಏಂ-19 ಖ- 2458 ರಲ್ಲಿ ಗಣೇಶ್ನಾಯ್ಕ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ನಂತೂರು ಕಡೆಯಿಂದ ಬಲ್ಮಠ ಕಡೆಗೆ ಎಸ್ಸಿಎಸ್ ಆಸ್ಪತ್ರೆ ಮಾರ್ಗವಾಗಿ ಸವಾರಿ ಮಾಡಿಕೊಂಡು ಹೋಗುತ್ತಾ ಬಲ್ಮಠ ಸರ್ಕಲ್ ಬಳಿಯಿರುವ ಪ್ರಿಸ್ಟೀಜ್ ಹೋಟೆಲ್ ಎದುರು ತಲುಪುವಾಗ ಬಲ್ಮಠ ಸರ್ಕಲ್ ಕಡೆಯಿಂದ ನಂತೂರು ಕಡೆಗೆ ಪಿಕಪ್ ವಾಹನ ನಂಬ್ರ ಏಂ-19 ಂ- 6403 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರ್ಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಗಣೇಶ್ ನಾಯ್ಕ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಣೇಶ್ನಾಯ್ಕರವರ ತಲೆಗೆ ಗಂಭೀರ ಸ್ವರೂಪ ಗಾಯ ಉಂಟಾಗಿ ಮೃತಪಟ್ಟಿರುವುದಾಗಿದೆ. ಪಿರ್ಯಾದುದಾರರ ಬಲಕೈಗೆ ಗಾಯ ಹಾಗೂ ಬಲಭುಜಕ್ಕೆ ಮತ್ತು ಬಲಕಾಲಿಗೆ ತರಚಿದ ಗಾಯ ಉಂಟಾಗಿ ಸಕರ್ಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಚಂದ್ರ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 90/13 ಕಲಂ-279, 337, 304(ಂ) ಐಪಿಸಿ ಮತ್ತು ಅರ್ ಅರ್ ರೂಲ್ 2 ಮೋ.ವಾ ಕಾಯ್ದೆ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment