ಅಸ್ವಾಭಾವಿಕ ಮರಣ ಪ್ರಕರಣ:
ದಕ್ಷಿಣ ಠಾಣೆ;
- ದಿನಾಂಕ 17-05-13 ರಂದು ಫಿರ್ಯಾದುದಾರರ ಜೊತೆ ಕೆಲಸ ಮಾಡುವ ಲಚ್ಮಯ್ಯ ರವರು ರಾತ್ರಿ ಊಟ ಮಾಡಿ ಗುಡ್ಲಕ್ ಎಂಬ ಬೋಟಿನಲ್ಲಿಯೇ ಮಲಗಿದ್ದು, ರಾತ್ರಿ ಸುಮಾರು 11-30 ಗಂಟೆಗೆ ಯಾರೋ ನೀರಿಗೆ ಬಿದ್ದ ಶಬ್ದವಾದಾಗ ಫಿರ್ಯಾದುದಾರರು ಹಾಗೂ ಇತರರು ನೋಡಿದಲ್ಲಿ ತಮ್ಮ ಜೊತೆ ಮಲಗಿದ್ದ ಲಚ್ಮಯ್ಯ ರವರು ಕಂಡು ಬರಲಿಲ್ಲ. ಕೂಡಲೇ ಫಿರ್ಯಾದುದಾರರು ಹಾಗೂ ಇತರ ಇಬ್ಬರು ನೀರಿನಲ್ಲಿ ಮುಳುಗಿ ಹಿಡುಕಾಡಿದಲ್ಲಿ ಲಚ್ಮಯ್ಯ ರವರ ದೇಹ ನೀರಿನಲ್ಲಿ ಪತ್ತೆಯಾಗಿರುತ್ತದೆ. ಕೂಡಲೇ ಇವರನ್ನು ನೀರಿನಿಂದ ಮೇಲಕ್ಕೆ ಎತ್ತಿ ದಡಕ್ಕೆ ತಂದು ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆ ತಂದಲ್ಲಿ ಅಲ್ಲಿನ ವೈಧ್ಯರು ಪರೀಕ್ಷಿಸಿ ಲಚ್ಮಯ್ಯ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆದುದರಿಂದ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನೀಡಿದ ಲಿಖಿತ ಫಿರ್ಯಾಧಿಯ ಸಾರಾಂಶವಾಗಿದೆ ಎಂಬುದಾಗಿ ನಶಿವಾನಂದ, ಪ್ರಾಯ: 27 ವರ್ಷತಂದೆ: ನಾಗಪ್ಪವಾಸ: ಮಾರೈನ್ ಮನೆ, ಮಾಯಿನ್ ಕುರುವೆ ಅಂಚೆ, ಬೆಳ್ನಿ ಗ್ರಾಮ, ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್. ನಂ: 42/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ನೀರ್ಲಕ್ಷತನದಿಂದ ಗಾಯ;
ಬಜಪೆ ಠಾಣೆ;
- ಫಿರ್ಯಾದಿದಾರರು ತನ್ನ ಶಾಲಾ ರಜಾ ಸಮಯದಲ್ಲಿ ಆರೋಪಿತರ ಬಾಬ್ತು ಮಂಗಳೂರು ತಾಲೂಕು, ಬಡಗ ಎಕ್ಕಾರು ಗ್ರಾಮದ ಅರಸುಲೆ ಪದವು ಎಂಬಲ್ಲಿರುವ ಆರೋಪಿಗಳ ಬಾಬ್ತು ಶ್ರೀ ದುಗರ್ಾ ಇಂಡಸ್ಟ್ರೀಸ್ ಎಂಬ ಇಂಟರ್ ಲಾಕ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 14-05-2013 ರಂದು ಮಧ್ಯಾಹ್ನ 1-00 ಗಂಟೆ ಸಮಯಕ್ಕೆ ಮಿಕ್ಸಿಂಗ್ ಮೆಷಿನ್ ನಲ್ಲಿ ಕೆಲಸ ಮಾಡುತಿರುವ ಸಮಯ ಅದರ ತಗಡು ವಿರುದ್ಧ ದಿಕ್ಕಿನಲ್ಲಿ ತಿರುಗಿದಾಗ ಅದನ್ನು ಸರಿಪಡಿಸಲು ಫಿರ್ಯಾದಿದಾರರು ಬಲಕೈ ಹಾಕಿದಾಗ, ಸದ್ರಿ ಮೆಷಿನ್ ನ ಬ್ಲೇಡ್ ಬಲಕೈಯ ಮಧ್ಯದ ಮೂರು ಬೆರಳಿಗೆ ತಾಗಿ ಬೆರಳುಗಳ ತುದಿಯ ಭಾಗ ತುಂಡಾಗಿದ್ದು, ಇದಕ್ಕೆ ಹಾಲಿ ಪ್ಯಾಕ್ಟರಿಯ ಮಾಲಕರಾದ ಮಹೇಶ್ ಮತ್ತು ಮೆನೇಜರ್ ಜಯಶೀಲ ಕಾಂಚನ್ ಎಂಬವರ ಕೆಲಸದ ಬಗ್ಗೆ ಕಾಮರ್ಿಕರ ಸುರಕ್ಷತೆಯ ಬಗ್ಗೆ ಕೈಗೆ ಧರಿಸಲು ಗ್ಲೌಸ್ ಮತ್ತಿತರ ಸಾಮಾಗ್ರಿ ನೀಡದೇ ನಿಲಕ್ಷ್ಯ ವಹಿಸಿರುವುದೇ ಕಾರಣ ಎಂಬುದಾಗಿ ಜೋಯೆಲ್ ಫೆನರ್ಾಂಡಿಸ್, 18 ವರ್ಷ, ತಂದೆಃ ರೊನಾಲ್ಡ್ ಫೆನರ್ಾಂಡಿಸ್, ವಾಸ: ಮಚ್ಚಾರು ಕೋಡಿ ಮನೆ, ಬಡಗ ಎಕ್ಕಾರು ಗ್ರಾಮ, ನೀರುಡೆ ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 147/2013 ಕಲಂ: 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment