Monday, May 6, 2013

Daily Crime crime Incidents For May 06, 2013


ಅಸ್ವಾಭಾವಿಕ ಮರಣ ಪ್ರಕರಣ

ಬಜ್ಪೆ ಠಾಣೆ


  • ಪಿಯರ್ಾದಿದಾರರಾದ ವಲೇರಿಯನ್ ಕುಟಿನ್ಹೋ ವಾಸ: ಬಜಪೆ  ಗ್ರಾಮ, ಮಂಗಳೂರು ತಾಲೂಕು ರವರ ತಮ್ಮ ಲಾರೆನ್ಸ್ ಕುಟಿನ್ಹೋ (42) ಎಂಬವರು ಮಾನಸಿಕ ಅಸ್ವಸ್ಥರಾಗಿದ್ದು ಅಲ್ಲದೇ ವಿಪರೀತ ಕುಡಿಯುವ ಚಟವುಳ್ಳವರಾಗಿದ್ದು, ದಿನಾಂಕ 04-05-2013 ರಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದವರು ಬೆಳಿಗ್ಗೆ ನೋಡುವಾಗ ಕಾಣೆಯಾಗಿದ್ದು, ನಂತರ ಹುಡುಕಾಡಿದಲ್ಲಿ ಈ ದಿನ ದಿನಾಂಕ 05-05-2013 ರಂದು ಬೆ.09.00 ಗಂಟೆ ಸಮಯಕ್ಕೆ ಸದಾನಂದ ಶೆಣೈ ಎಂಬವರ ಕಂಪೌಂಡುವಿನಲ್ಲಿರುವ ಗೇರು ಮರಕ್ಕೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಪಿಯರ್ಾದಿದಾರರು ನೀಡಿದ ದೂರಿನಂತೆ ಬಜಪೆ ಠಾಣಾ ಯುಡಿಆರ್ ನಂ: 19/2013 ಕಲಂ: 174 ಸಿಆರ್ಪಿಸಿ. ರಂತೆ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ

ಬಜ್ಪೆ ಠಾಣೆ


  • ದಿನಾಂಕ 05-05-2013 ರಂದು ಬೆಳಿಗ್ಗೆ 8.00ಗಂಟೆ ಸಮಯಕ್ಕೆ ಪಿಯರ್ಾದಿದಾರರಾದ ಅಬ್ದುಲ್ ಜಲೀಲ್ (31) ವಾಸ: ಅಡ್ಡೂರು, ಮಂಗಳೂರು. ಚುನಾವಣಾ ಮತ ಚಲಾಯಿಸಲು ಅಡ್ಡೂರು ಗ್ರಾಮದ ದ. ಕ. ಜಿ. ಪ ಶಾಲಾ ಬಳಿ ಬಂದಾಗ ಅಶ್ರಫ್ ಮತ್ತು ರಿಯಾಝ್ ಎಂಬವರು ಸೇರಿ ಮತ ಚಲಾಯಿಸಲು ಹೋಗುತ್ತಿದ್ದ ಸಾರ್ವಜನಿಕರಿಗೆ 'ಕಾಂಗ್ರೆಸ್ ಗೆ ಮತ ನೀಡಿ' ಎಂದು ಹೇಳುತ್ತಿರುವುದನ್ನು ಆಕ್ಷೇಪಿಸಿದಾಗ ಅಶ್ರಫ್ ಮತ್ತು ರಿಯಾಝ್ ಎಂಬವರು ಸೇರಿ ಕೈಯಿಂದ ಹೊಡೆದು ಕಾಲಿನಿಂದತುಳಿದುದಲ್ಲದೇ, ಅಶ್ರಫನು ಅಲ್ಲೇ ಇದ್ದ ಕಾಟು ಮರದ ಸೋಂಟೆಯಿಂದ ಪಿಯರ್ಾದಿದಾರರ ಎಡಕಾಲಿನ ಮೊಣಗಂಟಿಗೆ ಹಲ್ಲೆ ಮಾಡಿದ ಪರಿಣಾಮ ಪಿಯರ್ಾದಿದಾರರ ಹಣೆಗೆ , ಬಲ ಭುಜಕ್ಕೆ ಮತ್ತು ಎಡಕಾಲ ಮಣಿಗಂಟಿಗೆ ಗುದ್ದಿದ ಗಾಯವಾಗಿದ್ದು, ಎಸ್ ಸಿ ಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಪಿಯರ್ಾದಿದಾರರು ನೀಡಿದ ದೂರಿನಂತೆ ಬಜಪೆ ಪೊಲೀಸ್ ಠಾಣಾ ಅ. ಕ್ರ ನಂಬ್ರ 134/2013 ಕಲಂ: 323,324 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮನುಷ್ಯ ಕಾಣೆ

ಮಂಗಳೂರು ದಕ್ಷಿಣ ಠಾಣೆ 

  • ಫಿಯರ್ಾದುದಾರರಾದ ಶ್ರೀ ವಿಷ್ಣು ನಾರಾಯಣ ಮೊಗೇರ ಎಂಬವರು  ವಿಷ್ಣು ಪ್ರಸಾದ್ ಎಂಬ ಹೆಸರಿನ ಬೋಟಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಇದೇ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಈರಯ್ಯ ಕುಪ್ಪು ಮೊಗೇರ (62ರ್) ಎಂಬವರು ದಿನಾಂಕ 04-05-2013 ರಂದು ಸಂಜೆ  17-00 ಗಂಟೆಗೆ  ಮಂಗಳೂರು ದಕ್ಕೆಯಲ್ಲಿ ಇದ್ದವರು ಚಹಾ ಕುಡಿದು ಬರುತ್ತೇನೆಂದು ಫಿಯರ್ಾದುದಾರರಲ್ಲಿ ಹೇಳಿ ಹೋದವರು ತನ್ನ ಮನೆಯಾದ ಭಟ್ಕಳಕ್ಕೂ ಹೋಗದೆ ಬೋಟಿಗೂ ಕೆಲಸಕ್ಕೆ ಬಾರದೆ ಕಾಣೆಯಾಗಿರುತ್ತಾರೆ. ಆದುದರಿಂದ ಕಾಣೆಯಾದ ಈರಯ್ಯ ಕುಪ್ಪು ಮೊಗೇರ ರವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಫಿರ್ಯಾದಿಯ ಸಾರಾಂಶದಂತೆ ಮಂಗಳೂರು ದಕ್ಷಿಣ ಠಾಣೆ ಅಕ್ರ 126/13 ಕಲಂ ಗಂಡಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments:

Post a Comment