ಅಸ್ವಾಭಾವಿಕ ಮರಣ ಪ್ರಕರಣ
ಉರ್ವ ಠಾಣೆ
- ದಿನಾಂಕ: 23-05-2013 ರಂದು ಮಧ್ಯಾಹ್ನದ ವೇಳೆಯಲ್ಲಿ ಮಂಗಳೂರು ನಗರದ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಎದುರುಗಡೆ ಇರುವ ಪ್ರಶಾಂತ್ ವೈನ್ ಶಾಪ್ ಬಳಿಯಲ್ಲಿ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯು ಅಸ್ವಸ್ಥಗೊಂಡಂತೆ ಬಿದ್ದಿರುವುದನ್ನು ಪಿಯರ್ಾದಿದಾರರಾದ ನಿಶಿತ್(43) ತಂದೆ: ಜಗದೀಶ್, ಪ್ರಶಾಂತ್ ವೈನ್ ಶಾಪ್, ಕೆ ಎಸ್ ಆರ್ ಟಿ ಸಿ ಹತ್ತಿರ, ಬಿಜೈ (ಪೋಸ್ಟ್), ಮಂಗಳೂರು ರವರು ಹಾಗೂ ಅಲ್ಲಿದ್ದ ಇತರ ವ್ಯಕ್ತಿಗಳು ಕಂಡು ಆತನ ಬಳಿ ಹೋಗಿ ಪರೀಕ್ಷಿಸಿ ನೋಡಲಾಗಿ ಸದ್ರಿ ವ್ಯಕ್ತಿಯು ಮೃತಪಟ್ಟಿರುವುದು ಕಂಡು ಬಂದಿರುತ್ತದೆ ಎಂಬುದಾಗಿ ನಿಶಿತ್(43) ರವರು ನೀಡಿದ ದೂರಿನಂತೆ ಉರ್ವ ಪೊಲೀಸ್ ಠಾಣೆ ಯು.ಡಿ.ಆರ್.ನಂಬ್ರ. 11/2013 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪೂರ್ವ ಠಾಣೆ
- ದಿನಾಂಕ: 23-05-2013 ರಂದು ಪಿರ್ಯಾದಿದಾರರಾದ ಜಾಹ್ನವಿ ಪ್ರಾಯ (26) ತಂದೆ: ಸಿ.ಹೆಚ್.ನಾರಾಯಣ್ ರಾವ್, ವಾಸ: ರಾಧಕ್ಕ ಕಾಂಪೌಂಡ್, ಯೆಯ್ಯಾಡಿ, ಮಂಗಳೂರು ರವರು ಠಾಣೆಗೆ ಬಂದು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ಪಿರ್ಯಾದಿದಾರರು ದಿನಾಂಕ 23-05-2013 ರಂದು ಬೆಳಿಗ್ಗೆ ಸುಮಾರು 10.30 ಗಂಟೆಗೆ ಯೆಯ್ಯಾಡಿಯ ಮಧುವಣ್ ಬಾರ್ ಬದಿಯಲ್ಲಿರುವ ಕಟ್ಟಡದ ಫುಟ್ಪಾತ್ನಲ್ಲಿ ಯಾರೋ ಅಪರಿಚಿತ ಸುಮಾರು 40-45 ವರ್ಷ ಪ್ರಾಯದ ಗಂಡಸು ಮೃತಪಟ್ಟಿರುವುದನ್ನು ನೋಡಿರುವುದಾಗಿದೆ. ಸದ್ರಿ ಮೃತನು ಯೆಯ್ಯಾಡಿಯ ಪರಿಸರದಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಆತನ ಊರು ಮತ್ತು ವಿಳಾಸ ತಿಳಿದಿರುವುದಿಲ್ಲ. ರಾತ್ರಿ ಸಮಯದಲ್ಲಿ ಕುಡಿತದ ಅಮಲಿನಿಂದಲೋ ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟಂತೆ ಕಂಡು ಬರುತ್ತಿದ್ದು, ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸುವರೇ ಎಂಬುದಾಗಿ ಜಾಹ್ನವಿ ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಯು.ಡಿ.ಆರ್.ನಂಬ್ರ. 19/2013 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಾಹನ ಕಳವು ಪ್ರಕರಣ
ಪೂರ್ವ ಠಾಣೆ
- ದಿನಾಂಕ 16-05-2013ರಂದು ಮಧ್ಯಾಹ್ನ 16-30 ಗಂಟೆಯಿಂದ 18-30 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಮಂಗಳೂರು ನಸರ್ಿಂಗ್ ಹೋಂನ ಎದುರುಗಡೆ ಇರುವ ಹೋಂ ಪ್ಲಸ್ ಫನರ್ಿಚರ್ ಅಂಗಡಿಯ ಬಳಿ ಪಾಕರ್ಿಂಗ್ ಸ್ಥಳದಲ್ಲಿ ಪಾಕರ್್ ಮಾಡಿದ್ದ ಪಿರ್ಯಾದಿದಾರರಾದ ನವಾಜ್ ಅಹ್ಮದ್(33) ತಂದೆ: ದಿ|| ಜೆ. ಉಮ್ಮರ್, ವಾಸ: ನಸೀಮಾ ಮಂಜಿಲ್, ಜೆಪ್ಪು ಬಪ್ಪಲ್, ಕಂಕನಾಡಿ, ಮಂಗಳೂರು ರವರು ಆರ್. ಸಿ. ಮಾಲಕತ್ವದ 1997ನೇ ಮೊಡಲ್ನ ಕೆಂಪು ಬಣ್ಣದ ಅಂದಾಜು ರೂ 20000/- ಬೆಲೆ ಬಾಳುವ ಕೆಎ 19 ಜೆ 5343 ನೊಂದಣೆ ಸಂಖ್ಯೆಯ ಹೀರೋ ಹೊಂಡಾ ಸ್ಪ್ಲೆಂಡರ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನದ ಡ್ಯಾಶ್ ಬಾಕ್ಸ್ನಲ್ಲಿ ವಾಹನಕ್ಕೆ ಸಂಬಂಧಪಟ್ಟ ಆರ್.ಸಿ. ಜೆರಾಕ್ಸ್ ಪ್ರತಿ ಕೂಡ ಇರುತ್ತದೆ. ಕಳವಾದ ಬೈಕ್ನ್ನು ಕಳವಾದ ದಿನದಿಂದ ಈ ದಿನದವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಎಂಬುದಾಗಿ ನವಾಜ್ ಅಹ್ಮದ್ ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್ ಠಾಣಾ ಮೊ.ನಂಬ್ರ. 78/2013 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment