Monday, February 18, 2013

Daily crime Incidents For Feb 18, 2013

ಹಲ್ಲೆ ಪ್ರಕರಣ:

ಕಾವೂರು ಠಾಣೆ;

  • ದಿನಾಂಕ 16-02-2013 ರಂದು ಬೈತುರ್ಲಿ ಎಂಬಲ್ಲಿ ಫಿರ್ಯಾಧುದಾರರದ ಶ್ರೀ ಯಶವಂತ ಹಾಗೂ ಮೋಟಾರು ಸೈಕಲ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳಲ್ಲಿ ನಡೆದ ಬಾಯಿ ಮಾತಿನ ಗಲಾಟೆಯ ಬಗ್ಗೆ ರಾಜಿಯಲ್ಲಿ ಇತ್ಯರ್ಥ ಮಾಡುವ ಬಗ್ಗೆ ಮೂಡುಶೆಡ್ಡೆ ತಾಲೂಕು ಪಂಚಾಯತ್ ಅಧ್ಯಕ್ಷರು ಮೂಡುಶೆಡ್ಡೆಗೆ ಈ ದಿನ ದಿನಾಂಕ 17-02-2013 ರಂದು ಸಂಜೆ 7-30 ಗಂಟೆಗೆ ಕರೆಯಿಸಿದ್ದು, ಈ ಸಮಯ 15 ಜನ ಮೇಲ್ಪಟ್ಟು ಆರೋಪಿಗಳು ಗಲಾಟೆ ಮಾಡುವ ಸಮಾನ ಉದ್ದೇಶದಿಂದ  ಅಕ್ರಮ ಕೂಟ ಸೇರಿ ಮಾರಕಾಯುಧಗಳಾದ ಮರದ ರೀಪು, ಕಲ್ಲು, ಹೆಲ್ಮೆಟ್  ಗಳಿಂದ ಫಿರ್ಯಾಧುದಾರರಿಗೆ, ಅವರ ತಮ್ಮ ಪ್ರೀತಂ ಮತ್ತು ಬಾಲಕೃಷ್ಣ ಎಂಬವರಿಗೆ ಹೊಡೆದು ಹಲ್ಲೆ ನಡೆಸಿ ಸಾದ ಗಾಯ  ಉಂಟು ಮಾಡಿದ್ದು, ಗಲಾಟೆ ಸಮಯ ಫಿರ್ಯಾಧುದಾರರ ಬಂಗಾರದ ಚೈನ್, ನಗದು ರೂ. 15,580/- ಇದ್ದ ಪರ್ಸ್ ಮತ್ತು ಫಿರ್ಯಾಧುದಾರರ ತಮ್ಮನಾದ ಪ್ರೀತಂ ಕಿಸೆಯಲ್ಲಿದ್ದ ರೂ. 2430/- ಕಳೆದು ಹೋಗಿರುತ್ತದೆ ಎಂಬುದಾಗಿ ಯಶವಂತ À (32) ವಾಸ: ಕುಲ ಶೇಖರ ಮಂಗಳೂರು ರವರು ನೀಡಿದ ದೂರಿನಂತೆ  ಕಾವೂರು ಠಾಣೆ ಅಪರಾದ ಕ್ರಮಾಂಕ 38/2013 ಕಲಂ: 143, 147, 148, 323, 324, 504 ಜೊತೆಗೆ  149 L¦¹ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ: 

ಪಣಂಬೂರು ಠಾಣೆ

  • ದಿನಾಂಕಃ 16-02-13 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿದಾರರು ಹಾಗೂ ಇತರ ಮೂರು ಮಂದಿ ಸ್ನೇಹಿತರಾದ ಅನಂತ ಗಣಪತಿಪವನ್ ಅಂದನೂರು ಹಾಗೂ ಆದರ್ಶ ಇವರೊಂದಿಗೆ ತಣ್ಣೀರುಬಾವಿ ಬೀಚ್ ನೋಡುವರೇ ಬಿಜೈಯಿಂದ ತಣ್ಣೀರುಬಾವಿಗೆ ಪಿರ್ಯಾದಿದಾರರ ಬಾಬ್ತು ಕಾರು KA-D1-MD-9335 ನೇ ಸ್ಕೋಡಾ ಫೆಬಿಯಾ ಕಾರಿನಲ್ಲಿ ಅನಂತ ಗಣಪತಿ ಚಾಲಕರಾಗಿ ಪ್ರಯಾಣಿಸುತ್ತಿದ್ದು,ದಿನಾಂಕಃ 17-02-13 ರಂದು 00-45 ಗಂಟೆಗೆ   ತಣ್ಣೀರುಬಾವಿ ಎನ್ ಎಂ ಪಿ ಟಿ ಗೆಸ್ಟ್ ಹೌಸ್ ದಾಟಿಜಿಎಂಆರ್ ಗೇಟ್ ಬಳಿ ತಲುಪುತ್ತಿದ್ದಂತೆ  ಸದ್ರಿ ಕಾರನ್ನು ಚಾಲಕರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದುದರಿಂದ ಚಾಲಕರ ಹತೋಟಿ ತಪ್ಪಿ ಕಾರು ರಸ್ತೆಯ ತೀರಾ ಬಲಬದಿಗೆ ಬಂದು ಪಲ್ಟಿ ಹೊಡೆದ ಪರಿಣಾಮ ಕಾರು ಒಮ್ಮೇಲೆ ರಸ್ತೆಯ ಬದಿಯ ಮಣ್ಣಿನ ಜಾಗಕ್ಕೆ ಮಗುಚಿ ಬಿತ್ತು.  ಇದರ ಪರಿಣಾಮ ಚಾಲಕನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಆದರ್ಶ ಎಂಬವರಿಗೆ ತಲೆಗೆ ತೀವ್ರ ತರದ ರಕ್ತಗಾಯ ಅಲ್ಲದೇ ಮೈಕೈಗೆ ತರಚಿದ ಗಾಯವಾಗಿರುತ್ತದೆ.  ಹಾಗೂ ಪವನ್ ಗೆ ಗುದ್ದಿದ ನೋವು ಉಂಟಾಗಿದ್ದುಚಾಲಕರಿಗೆ ಹಾಗೂ ಪಿರ್ಯಾದಿದಾರರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಾಳುಗಳನ್ನು ಎ. ಜೆ. ಆಸ್ಪತ್ರೆಗೆ ಕೊಂಡುಹೋಗಿದ್ದುಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬುದಾಗಿ ಅರುಣ್ ಜೋಸೆಫ್ತಂದೆಃ ಜೋಸೆಫ್ ವಾಸಃ ಕುರುವಿಳಂಗ್ ನಾಡ್, ಕೋಟ್ಟಯಂ, ಕೇರಳ ರವರು ನೀಡಿದ ದೂರಿನಂತೆ 23/2013 PÀ®AB 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸುರತ್ಕಲ್ ಠಾಣೆ;

  • ದಿನಾಂಕ:16-02-13 ರಂದು ಮದ್ಯಾಹ್ನ 12-00 ಗಂಟೆಗೆ ಕೇಶವ ಪೂಜಾರಿ ಎಂಬವರ ಮಗ ಸಂದೀಪ್ ಎಂಬಾತನು ಹೊರಗಡೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವನು ಸಂಜೆಯಾದರೂ ವಾಪಾಸು ಬಾರದೇ ಇದ್ದದರಿಂದ ಫಿರ್ಯಾದಿದಾರರು ಸಂದೀಪನ ಮೊಬೈಲ್ಗೆ ಕರೆ ಮಾಡಿದಾಗ, ಒಂದು ಸಾರಿ ಕರೆ ಮಾಡಿದಾಗ ಗುಡ್ಡೆಕೊಪ್ಲಕ್ಕೆ ಹೋಗಿ ಬರುವುದಾಗಿಯೂ ಮತ್ತೊಂದು ಸಾರಿ ಕರೆ ಮಾಡಿದಾಗ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿದ್ದು, ರಾತ್ರಿ 10-00 ಗಂಟೆಗೆ ಪುನಃ ಕರೆ ಮಾಡಿದಾಗ ಸಂದೀಪನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಬಳಿಕ ಆತನು ಮನೆಗಾಗಲೀ, ಫಿಯರ್ಾದಿದಾರರಿಗಾಗಲೀ ಫೋನ್ ಕೂಡ ಮಾಡದೇ, ಮನೆಗೂ ಬಾರದೇ ನಾಪತ್ತೆಯಾಗಿರುತ್ತಾನೆ ಎಂಬುದಾಗಿ ಕೇಶವ ಪೂಜಾರಿ (49) ತಂದೆ: ದಿ: ಜಾರಪ್ಪ ಪೂಜಾರಿ ವಾಸ: ಸದಾಶಿವ ನಗರ 1ನೇ ಕ್ರಾಸ್, ಸಿದ್ದಿ ವಿನಾಯಾಕ, ಸುರತ್ಕಲ್ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 40/2013 ಕಲಂ: ಹುಡುಗ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ಬಜಪೆ ಠಾಣೆ

  • ದಿನಾಂಕಃ 22/01/2013 ರಂದು ಬೆಳಿಗ್ಗೆ ಸುಮಾರು 09.30 ಗಂಟೆಗೆ ಮಂಗಳೂರು ತಾಲೂಕು ನಡುಗೋಡು ಗ್ರಾಮದ ಶೇಡಿಗುಳಿ ಎಂಬಲ್ಲಿರುವ ಶಂಭಾಶಿವ ರಾವ್ ಎಂಬವರ ಮನೆಯ ಅಡುಗೆ ಕೋಣೆಯಲ್ಲಿ ಯಾರೂ ಇಲ್ಲದ ಸಮಯ ಶ್ರೀಮತಿ ಜಯಂತಿ (60ವ) ಎಂಬವರು ಅಡುಗೆ ಕೆಲಸ ಮಾಡುತ್ತಿರುವಾಗ ಒಲೆಯ ಬೆಂಕಿಯು ಅವರು ಧರಿಸಿದ ಸೀರೆಗೆ ಆಕಸ್ಮಿಕವಾಗಿ ತಗುಲಿ ತೀವ್ರರೀತಿ ಸುಟ್ಟ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೆ ಈದಿನ ದಿನಾಂಕಃ 17/02/2013ರಂದು ಬೆಳಿಗ್ಗೆ ಸುಮಾರು 07.35ಗಂಟೆಗೆ ಮೃತಪಟ್ಟಿದ್ದಾಗಿದೆ ಎಂಬುದಾಗಿ ಶ್ರೀಶ ರಾವ್, ಪ್ರಾಯ 25 ವರ್ಷ, ತಂದೆ ಃ ಜಗನ್ನಾಥ್ ರಾವ್,  ಮನೆ ನಂಃ3-5/79,ಈಶಾನ ಮನೆ, ಕುಲಶೇಖರ ಅಂಚೆ, ಮರೋಳಿ ಗ್ರಾಮ,    ಮಂಗಳೂರು ತಾಲೂಕು. ರವರು ನೀಡಿದ ದೂರಿನಂತೆ ಬಜಪೆ ಠಾಣೆ ಯುಡಿ.ಆರ್. ನಂ   05/2013   ಕಲಂ: 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 


No comments:

Post a Comment