Friday, February 8, 2013

Daily Crime Incidents for Feb 08, 2013

ಕಿಡಿಗೇಡಿಗಳಿಂದ ಹಾನಿ ಪ್ರಕರಣ

ಕೊಣಾಜೆ ಠಾಣೆ


  • ಮಂಗಳೂರು ತಾಲೂಕು ಅಂಬ್ಲಮೊಗರು ಗ್ರಾಮದ ಎಲ್ಯಾರ್‌ಪದವು ಶಾಲೆಯ ಬಳಿ ಗೀತ ಎಂಬವಳ ಮನೆಯ ಬಳಿ ರಿಕ್ಷಾ ನಂಬ್ರ ಕೆಎ-19ಬಿ-6487ನ್ನು ದಿನಾಂಕ 06.02.2013 ರಂದು ರಾತ್ರಿ 9:30ಗಂಟೆಗೆ ಫಿರ್ಯಾದಿ ಸಂತೋಷ (47) ತಂದೆ:  ಬಾಬು ಮಣಿಯಾಣಿ, ವಾಸ: ಎಲ್ಯಾರ್‌ಪದವು ಅಂಬ್ಲಮೊಗರು ಗ್ರಾಮ ಮಂಗಳೂರು ರವರು ಪಾರ್ಕ್‌ ಮಾಡಿ ನಿಲ್ಲಿಸಿದ್ದು, ಸದ್ರಿ ರಿಕ್ಷಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಕೊಟ್ಟು ಹೋಗಿದ್ದು, ವಿಷಯ ತಿಳಿದು ಸದ್ರಿ ಪಾರ್ಕ್‌ ಮಾಡಿದ ಸ್ಥಳಕ್ಕೆ ಹೋಗಿ ನೋಡಿದಾಗ ರಿಕ್ಷಾ ಪೂರ್ತಿ ಸುಟ್ಟು ಹೋಗಿದ್ದು, ನೆರೆಕರೆಯವರ ಸಹಾಯದಿಂದ ನೀರು ಹಾಕಿ ಬೆಂಕಿಯನ್ನು ನಂದಿಸಲಾಗಿ ಇದರಿಂದ ಸುಮಾರು ರೂ.1,25.000/- ನಷ್ಟವಾಗಬಹುದು. ಕಿಡಿಗೇಡಿಗಳನ್ನು ಪತ್ತೆ ಮಾಡಿಕೊಡಬೇಕಾಗಿ ಹಾಗೂ ಸೂಕ್ತ ಕ್ರಮ ಕೈಳ್ಳಬೇಕಾಗಿ ಸಂತೋಷ್ ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಅ.ಕ್ರ. 15/2013 ಕಲಂ: 435 ಐ.ಪಿ.ಸಿ.   ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಅಪಘಾತ ಪ್ರಕರಣ

ಕೊಣಾಜೆ ಠಾಣೆ


  • ದಿನಾಂಕ 07.02.2013 ರಂದು ಬೆಳಿಗ್ಗೆ 08:30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು, ಅಂಬ್ಲಮೊಗರು ಗ್ರಾಮದ, ಪೊಯ್ಯಮಾರ್‌ ಎಂಬಲ್ಲಿ ಅಂಬ್ಲಮೊಗರು ಕಡೆಯಿಂದ ದೇರಳಕಟ್ಟೆ ಕಡೆಗೆ ಆರೋಪಿ ತನ್ನ ಬಾಬ್ತು ಆಟೋರಿಕ್ಷಾ ನಂಬ್ರ ಕೆಎ-19ಡಿ-5251ನೇಯದನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎಡಕೈಯಲ್ಲ ಮೊಬೈಲ್‌ನಲ್ಲಿ ಮಾತನಾಡುತ್ತಾ ರಸ್ತೆಯ ತೀರಾ ಎಡಕ್ಕೆ ಬಂದು ಶಿಲೆ ಕಂಬದ ಬೇಲಿಗೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿ ಪ್ರಮಾಣಿಸುತ್ತಿದ್ದ, ಬಿಲಾಲ್‌(11), ಕು.ನೆಫಿಸಾತುಲ್‌ ಅಜ್ಮಿಯಾ(9) ಮತ್ತು ಮೇಪೋಜ್‌(10) ಎಂಬ ಮಕ್ಕಳಿಗೆ ಮೈಕೈಗೆ ಅಲ್ಲಲ್ಲಿ ರಕ್ತಗಾಯವಾಗಿರುತ್ತದೆ. ಗಾಯಾಳು ಮಕ್ಕಳನ್ನು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಆರೋಪಿ ರಿಕ್ಷಾ ಚಾಲಕನು ತನ್ನ ರಿಕ್ಷಾವನ್ನು ಬಿಟ್ಟು ಪರಾರಿಯಾಗಿರುತ್ತಾನೆ ಎಂಬುದಾಗಿ ಮಹಮ್ಮದ್‌ ಶಾಫಿ (47), ತಂದೆ: ಶೌಕತ್‌ ಅಲಿ ವಾಸ: ಪೊಯ್ಯಮಾರ್, ಅಪ್ಸ ಮಂಜಿಲ್‌, ರೆಂಜಾಡಿ, ಬೆಳ್ಮ ಗ್ರಾಮ ಮಂಗಳೂರು ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಅ.ಕ್ರ. 16/2013 ಕಲಂ: 279, 337 ಐಪಿಸಿ ಮತ್ತು ಕಲಂ: 134(ಎ)&(ಬಿ), 187 ಐ.ಎಂ.ವಿ. ಆಕ್ಟ್‌ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸಂಚಾರ ಪೂರ್ವ ಠಾಣೆ

  • ದಿನಾಂಕ: 07-02-2013 ರಂದು ಸಮಯ ಮದ್ಯಾನ್ಹ ಸುಮಾರು 15.00 ಗಂಟೆಗೆ ಮೂರು ಚಕ್ರದ ರಿಕ್ಷಾ ಟೆಂಪೊ ನಂಬ್ರ ಏಂ-19 ಅ- 5048 ನ್ನು ಅದರ ಚಾಲಕರು ಅತ್ತಾವರ ಕಟ್ಟೆ ಕಡೆಯಿಂದ ಅತ್ತಾವರ ಬಾಬುಗುಡ್ಡ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಚಕ್ರಪಾಣಿ ದೇವಸ್ಥಾನದ ಬಳಿ ತಲುಪುವಾಗ ನಿರ್ಲಕ್ಷತನದಿಂದ ಏಕಾಏಕಿ ಬಲಕ್ಕೆ ಚಲಾಯಿಸಿದ ಪರಿಣಾಮ ಅತ್ತಾವರ ಕಟ್ಟೆ ಕಡೆಯಿಂದ ಅತ್ತಾವರ ಬಾಬುಗುಡ್ಡ ಕಡೆಗೆ ಉಮೇಶ್ ಕೋಲಾರ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಶ್ರೀನಾಥ್ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೊ,ಸೈಕಲ್ ನಂಬ್ರ  ಏಂ-06-ಇಐ-0026 ಕ್ಕೆ ಟೆಂಪೊ ಡಿಕ್ಕಿಯಾಗಿ ಉಮೇಶ್ ಕೋಲಾರ ಮತ್ತು ಶ್ರೀನಾಥರವರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಸಹಸವಾರ ಉಮೇಶ್ ಕೋಲಾರರವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಮತ್ತು ಸವಾರ ಶ್ರೀನಾಥರವರ ಮುಖಕ್ಕೆ ಗಂಭೀರ ಸ್ವರೂಪದ ಗಾಯ ಉಂಟಾಗಿ ಗಾಯಾಳುಗಳು ಡಾ|| ಅಂಬೇಡ್ಕರ್ ವೃತ್ತದ ಕೆಎಮ್ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ವಿಷ್ಣಪ್ಪ ಹಲಕೇರಿ (27)ತಂದೆ : ಶಿವಪ್ಪ ವಾಸ: ಬಾಬು ಗುಡ್ಡೆ, ಅತ್ತಾವರ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 28/2013 279 , 338 ಐ.ಪಿ.ಸಿ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.




No comments:

Post a Comment