Wednesday, February 6, 2013

Daily Crime Incidents for Feb 06, 2013


ವಾಹನ ಕಳವು ಪ್ರಕರಣ

ದಕ್ಷಿಣ ಠಾಣೆ


  • ಫಿಯರ್ಾದುದಾರರಾದ ಶ್ರೀ ಮಿಥುನ್ ರವರು  ದಿನಾಂಕ 02-02-13 ರಂದು ರಾತ್ರಿ 10-30 ಗಂಟೆಗೆ ತನ್ನ ಬಾಬ್ತು ಮಾರುತಿ 800 ಕಾರು ನಂಬ್ರ ಕೆ.ಎ 19 ಎಂ 9231 ನ್ನು ತನ್ನ ಮನೆಯ ಪಕ್ಕದಲ್ಲಿಯೇ ರಸ್ತೆ ಬದಿ ರಾತ್ರಿ 10-30 ಗಂಟೆಗೆ ನಿಲ್ಲಿಸಿ ಮನೆಗೆ ಹೋಗಿರುತ್ತಾರೆ ನಂತರ ರಾತ್ರಿ 11-00 ಗಂಟೆಗೆ ನೋಡಿದಾಗ ಬಿಳಿ ಬಣ್ಣದ ಕಾರು ಅದೇ ಸ್ಥಳದಲ್ಲಿ ಇತ್ತು. ದಿನಾಂಕ 03-02-13 ರಂದು ಬೆಳಿಗ್ಗೆ 7-30 ಗಂಟೆಗೆ ಕಾರನ್ನು ಪಾಕರ್್ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ, ಫಿಯರ್ಾದುದಾರರು ಪಾಕರ್್ ಮಾಡಿದ್ದ ಮಾರುತಿ 800 ಅಲ್ಲಿರದೇ ಇದ್ದು, ಸದ್ರಿ ಮೋಟಾರು ಸೈಕಲ್ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮಾರುತಿ 800 ಕಾರಿನ ಅಂದಾಜು ಬೆಲೆ ರೂ 48,000/- ಆಗಬಹುದು ಎಂಬುದಾಗಿ ಮಿಥುನ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಮೊ.ನಂ. 35/13 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ


  • ದಿನಾಂಕ 05.02.2013 ರಂದು ಬೆಳಿಗ್ಗೆ 10-00 ಗಂಟೆ ವೇಳೆಗೆ ಆರೋಪಿ ಚಾಲಕ ಮಹಮ್ಮದ್ ಅಶ್ರಫ್ ಕೆ.ಎ 19 ಸಿ 27ನೇ ಜೈನ್ ಟ್ರಾವೆಲ್ಸ್ ಎಂಬ ಬಸ್ಸನ್ನು ಗುರುಪುರ ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಗಳೂರು ತಾಲೂಕು ಕುಡುಪು ಗ್ರಾಮದ  ಕುಡುಪು ಎಂಬಲ್ಲಿ ರಾ.ಹೆ 169 ರಲ್ಲಿ ಮಂಗಳೂರಿನಿಂದ ಮೂಡಬಿದ್ರೆ ಕಡೆಗೆ  ಹೋಗುತ್ತಿದ್ದ ಕೆಎ 19 ಡಿ 5311 ನೇ ಬಸ್ಸಿಗೆ ಡಿಕ್ಕಿ ಹೊಡೆದಿದ್ದು ಈ ಪರಿಣಾಮ ವಾಹನಗಳು ಜಖಂಗೊಂಡಿದ್ದಲ್ಲದೆ ಎರಡು ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಪಿಯರ್ಾದಿ ಸಾಗರ್ ಮತ್ತು ಇತರ ಪ್ರಯಾಣಿಕರಾದ ಸುಹಾನ್, ಜುನೈದ್, ಮಹಮ್ಮದ್ ಆಲಿ, ಶೋಭಾ, ಸ್ವಾತಿ, ತುಕಾರಾಮ ವನಿತಾ ಮತ್ತಿತರರಿಗೆ ತೀವ್ರ ಹಾಗೂ ಸಾಮಾನ್ಯ ತರದ ಗಾಯಗಳಾಗಿದ್ದು, ಗಾಯಾಳು ಎ.ಜೆ. ಆಸ್ಪತ್ರೆ, ತೇಜಸ್ವಿನಿ ಮತ್ತಿತರ ಆಸ್ಪತ್ರೆಗಳಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ಸಾಗರ್ ವಾಸ: ಗುರುಪುರ ಕೈಕಂಬ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಮೊ ನಂಬ್ರ 25/13 ಕಲಂ: 279.337 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 01.02.2013 ರಂದು ರಾತ್ರಿ 10-15 ಗಂಟೆ ವೇಳೆಗೆ ಪಿಯರ್ಾದಿದಾರರಾದ ಚಿತ್ತರಂಜನ್ ವಾಸ: ವಾಮಂಜೂರ್ ಮಂಗಳೂರು ರವರು ವಾಮಂಜೂರು ಪರಾರಿ ಎಂಬಲ್ಲಿಗೆ ತನ್ನ ಸ್ನೇಹಿತರೊಂದಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತ್ತಿದ್ದಾಗ ಮಂಗಳೂರು ಕಡೆಯಿಂದ ಬಸ್ಸ್ ನಂಬ್ರ ಕೆಎ 19 ಡಿ 6336ನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿಯರ್ಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ಎಡಭುಜದ ಎಲುಬು ಜಾರಿ ಗುದ್ದಿದ ಗಾಯವಾಗಿದ್ದು ಈ ಬಗ್ಗೆ ಎಸ್ಸಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬುದಾಗಿ ಚಿತ್ತರಂಜನ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಮೊ ನಂಬ್ರ 26/13 ಕಲಂ: 279.337 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸುರತ್ಕಲ್ ಠಾಣೆ


  • ಪಿರ್ಯಾದಿದಾರರಾದ ರಮೇಶ ಪೂಜಾರಿ ಎಂಬವರು ಅವರ ಮಗ ಸಂತೋಷ ಎಂಬವರ ಜೊತೆ ದಿನಾಂಕ 04-02-2013 ರಂದು ಸುರತ್ಕಲ್ ಗೆ ಹೋಗವರೇ ಕೆಎ 19 ಸಿ 1365 ನೇ ಆವೆ ಮರಿಯಾ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು,  ಚೊಕ್ಕಬೆಟ್ಟುನ ಪರಮೇಶ್ವರ ನಗರ ಕ್ರಾಸ್ ಎಂಬಲ್ಲಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ ಸದ್ರಿ ಬಸ್ಸ್ ನಿಂದ  ಪಿರ್ಯಾದಿದಾರರು ಹಾಗೂ ಅವರ ಮಗ ಸಂತೋಷನು ಇಳಿಯುತ್ತಿರುವಾಗ ಬೆಳಿಗ್ಗೆ ಸುಮಾರು  08-10 ಗಂಟೆಗೆ ಸದ್ರಿ ಬಸ್ಸಿನ ಚಾಲಕ ರಂಗನಾಥ್ ಎನ್ ರವರು ಸದ್ರಿ ಬಸ್ಸಿನ ನಿರ್ವಾಹಕ ಬಸ್ಸು ಮುಂದೆ ಹೋಗಲು  ಸೂಚನೇ ಯಾ ವಿಶಿಲ್ ಕೊಡುವ ಮೊದಲೇ ಮುಂದಕ್ಕೆ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಬಸ್ಸಿನಿಂದ ಇಳಿಯುತ್ತಿದ್ದ ಸಂತೋಷ್ ನು ಕೆಳಗೆ ಬಿದ್ದು ತಲೆಗೆ ಮತ್ತು ಕಿವಿಯ ಬಳಿ ಗಾಯವಾಗಿದ್ದು ಅವರನ್ನು ಸದ್ರಿ ಬಸ್ಸ್ ನ ಚಾಲಕನೊಂದಿಗೆ ಫಿರ್ಯಾಧಿದಾರರು  ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದ  ಗಾಯಳು ಸಂತೋಷನನ್ನು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಿದ್ದು, ಅಪಾದಿತ ಬಸ್ಸ್ ಚಾಲಕನ ಮೇಲೆ ಕಾನೂನು ಕ್ರಮ ಜರಗಿಸಬೇಕಾಗಿ ರಮೇಶ್ ಪೂಜಾರಿ ಯವರು ನೀಡಿದ ದೂರಿನಂತೆ ಸುರತ್ಕಲ್ ಠಾಣಾ ಅ.ಕ್ರ. 33/2013 PÀ®A: 279,337  ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಮನುಷ್ಯ ಕಾಣೆ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ


  • ದಿನಾಂಕ 01-01-2013 ರತಂದು ಬೆಳಿಗ್ಗೆ 10 ಗಂಟೆಗೆ ಪಿಯರ್ಾದಿದಾರರಾದ ಸುರೇಶ್ ತಂದೆ ಪಾಂಡುರಂಗಯ್ಯ ವಾಸ: ಆದರ್ಶನಗರ ಉರ್ವಸ್ಟೋರ್ ಮಂಗಳೂರು ರವರ ತಮ್ಮ ದೇವರಾಜ್ ಎಂಬವರು ಕಂಕನಾಡಿ ಗ್ರಾಮದ ಪಂಪ್ವೆಲ್ ಎಂಬಲ್ಲಿ ಶೀತಲ್ ಎಂಬ ಸೆಲೂನ್ನಲ್ಲಿ ಕೆಲಸ ಮಾಡುತ್ತಿದ್ದು, ಬಳಿಕ ಹೋಟೇಲ್ಗೆಂದು ಹೋದವನು ವಾಪಾಸು ಮನೆಗೂ ಬಾರದೆ ಅವನು ಕೆಲಸ ಮಾಡುವ ಸೆಲೂನಿಗು ಬಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಇಷ್ಟು ದಿನ ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗದೇ ಇದ್ದು ಪತ್ತೆ ಮಾಡಿಕೊಡಬೇಕಾಗಿ ಸುರೇಶ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಮೊ ನಂಬ್ರ 27/13 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮುಲ್ಕಿ ಠಾಣೆ


  • ಪಿರ್ಯಾದಿದಾರರಾದ ಯೋಗೀಶ್ ಆಚಾರ್ಯ  ತಂದೆ ಪುಟ್ಟಣ್ನ ಆಚಾರ್ಯ ಎಂ.ಸಿ.ಎಫ್ ಕ್ವಾಟ್ರಸ್ ನಂಬ್ರ ಸಿ-90, ಕುಂಜತ್‌ಬೈಲ್, ಮಂಗಳೂರು ರವರ ತಮ್ಮ ಗಿರೀಶ್ ಹೆಜಮಾಡಿ 38 ವರ್ಷ ಎಂಬವರು ಮುಲ್ಕಿ ಕೆನರಾ ಬ್ಯಾಂಕ್‌ನ ಉದ್ಯೋಗಿಯಾಗಿದ್ದು ಅವರು ದಿನಾಂಕ 04-02-2013 ರಂದು ತನ್ನ ಸ್ತಿಮಿತವನ್ನು ಕಳೆದುಕೊಂಡಂತಿದ್ದು ಮುಲ್ಕಿ ಬ್ಯಾಂಕ್‌ನಲ್ಲಿ ತನ್ನ ಮೇಲಾಧಿಕಾರಿಗಳಿಂದ ಅಸೌಖ್ಯದ ರಜೆಯಲ್ಲಿ ತೆರಳಲು ಅಪ್ಪಣೆ ಪಡೆದು  ಮದ್ಯಾಹ್ನ 1-00 ಗಂಟೆಗೆ ಬ್ಯಾಂಕ್‌ನಿಂದ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಮನೆಗೆ ಹೋಗದೆ ನಾಪತ್ತೆಯಾಗಿರುತ್ತಾರೆ. ಈವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೆ ಮೊಬೈಲ್‌ ಕೂಡಾ ಸ್ವಿಚ್ ಆಫ್ ಆಗಿರುತ್ತದೆ ಎಂಬುದಾಗಿ ಯೋಗೀಶ್ ಆಚಾರ್ಯ ರವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಅ.ಕ್ರ. 12/13 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


No comments:

Post a Comment