Thursday, February 14, 2013

Daily Crime Incidents for Feb 14, 2013


ಅಪಘಾತ ಪ್ರಕರಣ:

ಮಂಗಳೂರು ಗ್ರಾಮಾಂತರ ಠಾಣೆ;


  • ದಿನಾಂಕ 13.02.2013 ರಂದು 10:30 ಗಂಟೆಗೆ ಮಂಗಳೂರು ತಾಲೂಕು ಉಳಾಯಿಬೆಟ್ಟು ಗ್ರಾಮದ ಮಂಜುಗುಡ್ಡೆ ಎಂಬಲ್ಲಿ ಐಡಿಯಲ್ ಸೂಪರ್ ಬಜಾರ್ ಎದುರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿ ಕೆ.ಎ 19-ಇಸಿ-7608 ನೇ ಮೊಟಾರು ಸೈಕಲ್ ಚಾಲಕ ಸುರೇಶ್ ಎಂಬವರು ತನ್ನ ಬಾಬ್ತು ಮೋಟಾರು ಸೈಕಲ್ನ್ನು ಪೆರ್ಮಂಕಿ ಕಡೆಯಿಂದ ಪರಾರಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬದಿ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿಯರ್ಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿಯರ್ಾದಿದಾರರ ಎಡ ಕಾಲಿನ ಕೋಲು ಕಾಲಿಗೆ ಹಾಗೂ ಪಾದದ ಬಳಿಯ ಮಣಿಗಂಟಿಗೆ ತೀವ್ರ ಗಾಯವಾಗಿದ್ದು ನಗರದ ತೇಜಸ್ವೀನಿ ಆಸ್ಪತ್ರಗೆ ಒಳರೋಗಿಯಾಗಿ ದಾಖಲಿಸಿದ್ದಾಗಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಾದ ದೇವಪ್ಪ ಮೂಲ್ಯ ಅಂತರಕೋಡಿ ಮನೆ, ಉಳಾಯಿಬೆಟ್ಟು, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 279, 338 , ಐ.ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ;


  • ದಿನಾಂಕ 07-02-2013 ರಂದು ಸಂಜೆ 7:00 ಗಂಟೆಗೆ ಮಂಗಳೂರು ತಾಲೂಕು ಅಡ್ಯಾರು ಗ್ರಾಮದ ಅಡ್ಯಾರು ಕಟ್ಟೆ ಬಳಿ  ಪಿಯರ್ಾದಿದಾರರು  ರಸ್ತೆಬದಿಯಲ್ಲಿ ನಿಂತುಕೊಂಡಿದ್ದ ಸಮಯ ನಿಜಾಮುದ್ದೀನ್ ಎಂಬಾತನು ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಮಂಗಳೂರು ಕಡೆಯಿಂದ -ಫರಂಗಿಪೇಟೆ ಕಡೆಗೆ ಕೆ.ಎ 19- ಯು-3717 ನೇ ಹೊಂಡಾ ಆಕ್ಟೀವಾ ಸವಾರನು ಸದ್ರಿ ಆಕ್ಟೀವಾವನ್ನು  ಅತೀ ವೇಗ ಹಾಗೂ ಅಜಾರುಕತೆಯಿಂದ ಚಲಾಯಿಕೊಂಡು ಬಂದು ನಿಜಾಮುದ್ದಿನ್ಗೆ ಡಿಕ್ಕಿ ಹೊಡೆದ ಪರಿಣಾಮ ನಿಜಾಮುದ್ದಿನ್ ರಸ್ತೆ ಬಿದ್ದು, ಆತನ ಹಣೆಗೆ, ಕಣ್ಣಿಗೆ, ಬುಜಗಳಿಗೆ, ಎಡ ಕೈಗೆ, ತೊಡೆಗೆ ಗಂಭೀರ ಗಾಯವಾಗಿದ್ದು ಆತಟಿನ್ನು  ನಗರದ ಎ.ಜೆ ಆಸ್ಪತ್ರಗೆ ಒಳರೋಗಿಯಾಗಿ ದಾಖಲಿಸಿದ್ದಾಗಿರುತ್ತದೆ ಎಂಬುದಾಗಿ ಅಬ್ದುಲ್ ರಜಾಕ್ ವಾಸ: ಕುಂಜತ್ಬ್ಯೆಲ್  ಮಂಗಳೂರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 279, 338 , ಐ.ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ;

ದಕ್ಷಿಣ ಠಾಣ;ೆ 


  • ದಿನಾಂಕ 13-02-13 ರಂದು ಫಿರ್ಯಾದುದಾರರು ಹಾಗೂ ತನ್ನ ಸ್ನೇಹಿತ ಮಹಮ್ಮದ್ ಆಸೀಫ್ ಎಂಬವರ ಜೊತೆ ಎ.ಬಿ ಶೆಟ್ಟಿ, ಕೊಚ್ಚಿನ್ ಬೇಕರಿಯಲ್ಲಿ ಜ್ಯೂಸ್ ಕುಡಿದು. ನಂತರ ತನ್ನ ಮನೆಯಾದ ಉಳ್ಳಾಲಕ್ಕೆ ತನ್ನ ತಾಯಿಯ ಬಾಬ್ತು ತಂದಿದ್ದ ಮೋಟಾರು ಸೈಕಲ್ ಕೆಎ 19 ಇಡಿ 9826 ನೇದರಲ್ಲಿ ಹೊರಟರು. ಎಮ್ಮಕೆರೆ  ಲಕ್ಷ್ಮಿನಾರಾಯಣ ಕಲ್ಯಾಣ ಮಂಟಪದ ಬಳಿ ಒಂದು ರಿಟ್ಸ್ ಕಾರಿನಲ್ಲಿ ತಾನು ಪ್ರೀತಿಸುತ್ತಿರುವ ಹುಡುಗಿ ಫೌಝಿಯಾಳ ಅಣ್ಣ ಆದಿಲ್ ಎಂಬವನು ಬುರುತ್ತಿರುವುದನ್ನು ಕಂಡಿರುತ್ತಾರೆ. ಸಂಜೆ ಸುಮಾರು 6-30 ರ ವೇಳೆಗೆ ಮಂಕಿಸ್ಟ್ಯಾಂಡ್ ಮಾರ್ನಮಿಕಟ್ಟೆ ರಸ್ತೆ ಮಧ್ಯದಲ್ಲಿ ಆದಿಲ್ ತಾನು ಚಲಾಯಿಸುತ್ತಿದ್ದ ರಿಟ್ಸ್ ಕಾರನ್ನು ಫಿರ್ಯಾದುದಾರರ ಮೋಟಾರು ಸೈಕಲಿಗೆ ತಾಗಿಸಿ ನಿಲ್ಲಿಸಿದರು. ಆ ಸಮಯ ಫಿರ್ಯಾದುದಾರರು ಹಾಗೂ ಆತನ ಸ್ನೇಹಿತ ಮಹಮ್ಮದ್ ಆಸೀಫ್ ರವರು ಮೋಟಾರು ಸೈಕಲ್ನಿಂದ ಕೆಳಗೆ ಬಿದ್ದರು. ನಂತರ ಆದಿಲ್ ಹಾಗೂ ಆತನ ಇಬ್ಬರು ಸ್ನೇಹಿತರು ಕಾರಿನಲ್ಲಿ ಇಟ್ಟುಕೊಂಡಿದ್ದ ರೀಪರ್ಗಳಿಂದ ಫಿರ್ಯಾದುದಾರರಿಗೆ ಹಾಗೂ ಆತನ ಸ್ನೇಹಿತ ಮಹಮ್ಮದ್ ಆಸೀಫ್ರವರಿಗೆ ಹೊಡೆದು ರಕ್ತಗಾಯ ಉಂಟು ಮಾಡಿರುತ್ತಾರೆ. ಅಲ್ಲದೇ ಆದಿಲ್ನು ಫಿರ್ಯಾದುದಾರರನ್ನು ಉದ್ದೇಶಿಸಿ ನನ್ನ ತಂಗಿಯ ವಿಷಯಕ್ಕೆ ಬಂದರೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಫಯಾಜ್ (28), ತಮದೆ : ಮಹಮ್ಮದ್, ವಾಸ : ಫೌಝಿಲ್ ಕಾಟೇಜ್, ಮಂಚಿಲ, ಪೆರ್ಮನ್ನೂರು, ಉಳ್ಳಾಲ, ಮಂಗಳೂರು ರವರು ನೀಿಡಿದ ದೂರಿನಂತೆ ದಕ್ಷಿಣೆ ಠಾಣೆ ಅಪರಾದ ಕ್ರಮಾಂಕ 341, 324, 506 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಹೆಂಗಸು ಕಾಣೆ: 

ಕಾವೂರು ಠಾಣೆ;

  • ದಿನಾಂಕ 03-02-2013 ರಂದು ಬೆಳಿಗ್ಗೆ 6-00 ಗಂಟೆಗೆ ಪಿರ್ಯಾದಿದಾರರ ಹೆಂಡತಿಯಾದ ಮರಿಯಾ (25 ವರ್ಷ)ರವರು ತನ್ನ ತಂದೆಯಾದ ಎರಿಕ್ರವರೊಂದಿಗೆ ಹೋಗುವುದಾಗಿ ತಿಳಿಸಿ ಹೋದವರು ಮತ್ತೆ ಮನೆಗೆ ವಾಪಸ್ಸು ಆಗದೇ, ಎರಿಕ್ರ ಮೊಬೈಲ್ ಫೋನ್ಗೆ ಕರೆ ಮಾಡಿದಾಗ ಸ್ವೀಚ್ ಆಫ್ ಎಂದು ಬರುತ್ತಿದ್ದು, ಎರಿಕ್ ರವರ ಸ್ವಂತ ವಿಳಾಸವು ಇಲ್ಲದಿದ್ದು, ಈತನಕ ಹುಡುಕಾಡಿದ್ದು ಪತ್ತೆಯಾಗಿಲ್ಲ. ಪತ್ತೆ ಮಾಡಿಕೊಡಬೇಕು ಎಂಬುದಾಗಿ ರಮೇಶ್ (27 ವರ್ಷ, ತಂದೆ ದಿ.ಗೋಳಪ್ಪ. ವಾಸ ಉರುಂದಾಡಿ ಗುಡ್ಡೆ ಮಸೀದಿಯ ಬಳಿ, ಪಂಜಿಮೊಗೆರು, ಕೂಳೂರು, ಮಂಗಳೂರು ರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಕ್ರಮಾಂಕ 34/2013 ಕಲಂ ಹೆಂಗಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ;

ಬಜಪೆ ಠಾಣೆ ;


  • ದಿನಾಂಕ: 13-02-2013 ರಂದು ಫಿರ್ಯಾದಿದಾರರ ತಮ್ಮ ಪುಷ್ಪರಾಜ್ (27 ವರ್ಷ) ಎಂಬವರು ವಿಪರೀತ ಶರಾಬು ಸೇವಿಸುವ ಚಟ ಹೊಂದಿದವನಾಗಿದ್ದು, ಕೆಲಸಕ್ಕೂ ಹೋಗದೇ ವಿಪರೀತ ಮದ್ಯ ಸೇವಿಸಿ ಮನೆಯಲ್ಲೇ ಇರುತ್ತಿದ್ದು, ತನ್ನ ಮನೆಯಾದ ಮಂಗಳೂರು ತಾಲೂಕಿನ, ಪಡುಪೆರಾರ ಗ್ರಾಮದ ಕತ್ತಲ್ಸಾರ್ ಪಡಿಲ್ನ ಗೋಳಿ ಪಲ್ಕೆ ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಮಧ್ಯಾಹ್ನ 13-00 ಗಂಟೆಯಿಂದ 14-30 ಗಂಟೆಯ ಮಧ್ಯಾವಧಿಯಲ್ಲಿ ತನ್ನ ಕುಡಿತದ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ಸೀರೆಯಿಂದ ನೇಣು ಬಿಗಿದು ಪಕ್ಕಾಸಿನಲ್ಲಿ ನೇತಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂಬುದಾಗಿ  ಗೋಪಾಲ ಗೌಡ, ಪ್ರಾಯ: 28 ವರ್ಷ, ತಂದೆ: ದಿ: ವಾಸು ಗೌಡ, ವಾಸ: ಗೋಳಿ ಪಲ್ಕೆ ಮನೆ, ಕತ್ತಲ್ ಸಾರ್ ಪಡೀಲ್, ಪಡುಪೆರಾರ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 04/2013 ಯು.ಡಿ.ಅರ್ ಕಲಂ: 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment