Tuesday, February 5, 2013

Daily Crime Incidents For Feb 05, 2013


ಅಪಘಾತ ಪ್ರಕರಣ;

ಮಂಗಳೂರು ಗ್ರಾಮಾಂತರ ಠಾಣೆ;

  • ದಿನಾಂಕ 03.02.2013 ರಂದು ರಾತ್ರಿ 7:45 ಗಂಟೆ ವೆಳೆಗೆ ಆರೋಪಿತನು ಕೆ.ಎ 19 ಬಿ 3588ನೇ ಅಟೋ ಟೆಂಪೋವನ್ನು ಬೈತುಲರ್ಿ ಕಡೆಯಿಂದ ಮೇರ್ಲಪದವು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿದ ಚಲಾಯಿಸಿಕೊಂಡು ಹೋಗಿ ಮಂಗಳೂರು ತಾಲೂಕು ಕುಡುಪು ಗ್ರಾಮದ ಪಾಲ್ದನೆ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಪಿಯರ್ಾದಿದಾರರ ತಂದೆ ಮಾಕರ್್ ಡಿ ಪೌಲ್ ರವರಿಗೆ ಡಿಕ್ಕಿ ಹೊಡೆದಿದ್ದು ಮಾಕರ್್ ಡಿಪೌಲ್ರವರು ಹಣೆಯ ಬಲಬದಿಗೆ, ಬಲಕಣ್ಣಿಗೆ ಮತ್ತು ಬಲಕೈಗೆ, ತೀವ್ರ ಗಾಯವಾಗಿ ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಆರೋಪಿತನು ಅಪಘಾತತದ ಬಳಿಕ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸದೇ ಅಪಘಾತದ ಮಾಹಿತಿಯನ್ನು ಠಾಣೆಗೆ ತಿಳಿಸದೆ ವಾಹನ ಸಮೇತ ಪರಾರಿಯಾಗಿರುತ್ತಾನೆ ಎಂಬುದಾಗಿ ಮಾಕ್ರ್ಸ ಡಿ ಪೌಲ್ ಕುಡುಪು ಗ್ರಾಮಾ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 22/13 ಕಲಂ: 279. 338 ಐ.ಪಿ.ಸಿ ರಂತೆ ಪ್ರಕರಣ ಧಾಖಲಿಸಿ ತನಖೆ ಕೈಗೊಳ್ಳಲಾಗಿದೆ.


ಸಂಚಾರ ಪೂರ್ವ ಠಾಣೆ;


  • ದಿನಾಂಕ: 04-02-2013 ರಂದು ಸಮಯ ಬೆಳಿಗ್ಗೆ ಸುಮಾರು 09.30 ಗಂಟೆಗೆ ಕಾರು ನಂಬ್ರ ಏಂ-20 ಒ- 5855 ನ್ನು ಅದರ ಚಾಲಕರು ಅತ್ತಾವರ ಕಟ್ಟೆ ಕಡೆಯಿಂದ ಕೆಎಮ್ಸಿ ಆಸ್ಪತ್ರೆ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಮದುಸೂದನ್ ಡಿ ಕುಶೆ ಶಾಲೆಯ ಕ್ರಾಸ್ ರಸ್ತೆ ಬಳಿ ತಲುಪುವಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಿಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಬಲಕಾಲಿನ ಕೋಲು ಕಾಲಿನ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಉಂಟಾಗಿ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಕುಮಾರಿ ರಚನಾ ಜಿ. ಭಟ್ (14) ತಂದೆ : ಗಣೇಶ್ ಭಟ್, ವಾಸ: ಲುನಾರ್ ಎಲೆಕ್ಟಾನಿಕ್ಸ್ ಕೊಡಿಬೈಲು ಟಿಂಬರ್ ಬಿಲ್ಡಿಂಗ್ , ರಾ.ಹೆ-66, ಉಪ್ಪಳ, ಎನ್.ಪಿ.ಬಜಾರ್,  ಕಾಸರಗೋಡ್ ಜಿಲ್ಲೆ ರವರು ನೀಡಿದ  ದೂರಿನಂತೆ ಸಂಚಾರ ಪೂರ್ವ ಠಾಣೆ 26/2013 279 , 338 ಐ.ಪಿ.ಸಿ.ಕಾಯ್ದೆ ರಂತೆ ಪ್ರಕರಣ ಧಾಖಲಿಸಿ ತನಖೆ ಕೈಗೊಳ್ಳಲಾಗಿದೆ

.
ಹಲ್ಲೆ ನಡೆಸಿದ ಪ್ರಕರಣ:

ಮಂಗಳೂರು  ಪೂರ್ವ ಠಾಣೆ;


  • ದಿನಾಂಕ 04.02.2013 ರಂದು ಸುಮಾರು 08.30 ಗಂಟೆಗೆ ಫಿಯರ್ಾದಿದಾರರು ಕೆಲಸ ಮಾಡಿಕೊಂಡಿರುವ ಟ್ರಸ್ಟಿ ಉಪೇಂದ್ರ ನಾಯಕ್ರವರು ನಡೆಸಿಕೊಂಡಿರುವ ಮಂಗಳೂರು ನಗರದ ನಂತೂರಿನಲ್ಲಿರುವ 'ಖಜಚಿಛಟಚಿಣಠಟಿ ಅಜಟಿಣಡಿಜ' ಗೆ ಪಿಯರ್ಾದಿದಾರರು ಏಂ 19ಓ 781 ನೇ ವಾಹನದಲ್ಲಿ ಚಾಲಕ ಗಣೇಶ್, ಶಾರದಾ ಹಾಗೂ ಮೋಹಿಯವರೊಂದಿಗೆ ಬಂದ ಸಮಯ ಆಶ್ರಮದ ಪಕ್ಕದ ನಿವಾಸಿಗಳಾದ ರಾಬಟರ್್ ಮತ್ತು ಅವರ ಪತ್ನಿ ಹಾಗೂ ಇತರರು ಸೇರಿ ಸದ್ರಿಯವರು ಬಂದ ವಾಹನವನ್ನು ನೀವು ಮುಂದೆ ಹೋಗುವುದು ಬೇಡ ಎಂದು ತಡೆದು ನಿಲ್ಲಿಸಿ ಯಾವುದೇ ವಿಷಯ ಕೇಳದೆ ಪಿಯರ್ಾದಿದಾರರಲ್ಲಿ ಹಾಗೂ ಶಾರದಾ ಮತ್ತು ಮೋಹಿನಿಯವರಲ್ಲಿ ಜಗಳವಾಡಿ ಅವಾಚ್ಯ ಶಬ್ದಗಳಿಂದ ಬೈದು ಸದ್ರಿಯವರಿಗೆ ಕೈಯಿಂದ ಮುಖಕ್ಕೆ ಹಾಗೂ ಕೈಗಳಿಗೆ ಹಲ್ಲೆ ನಡೆಸಿರುತ್ತಾರೆ. ನಂತರ ರಾಬಟರ್್ರವರು ಅಲ್ಲೇ ಬಿದ್ದಿದ್ದ ಕಲ್ಲನ್ನು ಹೆಕ್ಕಿ ಪಿಯರ್ಾದಿದಾರರು ಬಂದಿದ್ದ ವಾಹನದ ಬಲಬದಿಯ ಗ್ಲಾಸನ್ನು ಮತ್ತು ಕನ್ನಡಿಯನ್ನು ಹುಡಿ ಮಾಡಿ, ಪಿಯರ್ಾದಿ ಹಾಗೂ ಇತರರನ್ನು ಉದ್ದೇಶಿಸಿ 'ಸೂಳೇ ಮಕ್ಕಳೇ, ನೀವು ಎಲ್ಲಿ ಮಲಗಲು ಹೋಗಿದ್ದೀರಿ' ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ  ಸುಮಾ (25) ಕುಂಜತ್ತೂರು ಮನೆ ಕಲಿಗೆ ಗ್ರಾಮ ಬಂಟ್ವಾಳ ತಾಲಕು ರವರು ನೀಡಿದ ದೂರಿನಂತೆ ಮಂಗಳೂರು  ಪೂರ್ವ ಠಾಣೆ 323 341 504  ಡಿ/ತಿ 34   ಐ,ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ  ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ದಕ್ಷಿಣ ಠಾಣೆ


  • ದಿನಾಂಕ 03-02-13 ರಂದು ಫಿರ್ಯಾದುದಾರರ ಅಣ್ಣ ಡಾ: ಜೋಸೆಫ್ ಎನ್ ಡಿಸೋಜಾ ರವರು ರಾತ್ರಿನ ಸುಮಾರು ಎರಡು ಗಂಟೆಯ ಒಳಗೆ ಎದೆ ನೋವು ಬಂದಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲು ಅಂಬ್ಯುಲೆನ್ಸ್ ಮುಖಾಂತರ ಕರೆದುಕೊಂಡು ಬಂದಿರುತ್ತಾರೆ. ಆದರೆ ದಾರಿ ಮದ್ಯೆ ಡಾ: ಜೋಸೆಫ್ ಎನ್ ಡಿಸೋಜಾ ರವರು ಮೃತ ಪಟ್ಟಿರುತ್ತಾರೆ. ಇವರು ಡಯಾಬಿಟಿಸ್ ಖಾಯಿಲೆಯಿಂದ ಬಳಲುತ್ತಿದ್ದು, ಈ ಮೊದಲು ಹೃದಯದ ಶಸ್ತ್ರ ಚಿಕಿತ್ಸೆಯಾಗಿರುತ್ತದೆ. ಆದುದರಿಂದ ಇವರು ಹೃದಯಾಘಾತದಿಂದ ಮೃತಪಟ್ಟಿರಬಹುದು. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಫಿಯರ್ಾದುದಾರರಾದ ವಿದ್ಯಾಸಾಗರ ಹೆಚ್.ಸಿ  898 ದಕ್ಷಿಣ ಪೊಲೀಸ್ ಠಾಣೆ ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ. 11/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಹುಡುಗಿ ಕಾಣೆ:

ಬಕರ್ೆ ಠಾಣೆ;


  • ದಿನಾಂಕ 04-02-2013 ರಂದು ಕುಮಾರಿ ಆಯಾನ್(15) ಎಂಬವಳು ಮಂಗಳೂರು ಬೆಸೆಂಟ್ ಶಾಲೆಗೆ ಹೋಗಿದ್ದು ಮದ್ಯಾಹ್ನ 12-00ಗಂಟೆಗೆ ಅವರ ತಾಯಿ ಶಾಲೆಗೆ ಬಂದಿರುವುದನ್ನು ಕಂಡು ಶಾಲೆಯಿಂದ   ಓಡಿ ಹೋಗಿ ಕಾಣೆಯಾಗಿರುತ್ತಾಳೆ. ಕಾಣೆಯಾದ ನನ್ನ ಮಗಳನ್ನು ಪತ್ತೆ ಮಾಡಬೇಕಾಗಿ ಎಂಬುದಾಗಿ  ಕೃಷ್ಣ ಕುಮಾರಿ(39) ಗಂಡ:ಸುಧಾಕರ್ ವಾಸ: ಡೋರ್ ನಂಬ್ರ 2-43/16    ಸನ್ನಿಧಿ ಕೆ.ಜಿ.ಕೆ ಬಳ್ಳಾಲ್ ರೋಡ್ ಪಂಜಿಮೊಗರು, ಮಂಗಳೂರು ರವರು ನೀಡಿದ ದೂರಿನಂತೆ ಬಕರ್ೆ ಠಾಣೆ ಅಪರಾದ ಕ್ರಮಾಂಕ 07/2013 ಕಲಂ ಹುಡುಗಿ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment